ಓಹಾಯೋ (ಅಮೆರಿಕಾ) ಇಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ವಿದ್ಯಾರ್ಥಿಯ ಶವವಾಗಿ ಪತ್ತೆ !

ಭಾರತದಲ್ಲಿದ್ದ ತಂದೆ ಬಳಿ 1 ಲಕ್ಷ ರೂಪಾಯಿ ಹಪ್ತಾ ಕೇಳಿದ್ದರು, ಹಣವನ್ನು ಕೊಡದಿದ್ದರೆ ಮಗನ ಮೂತ್ರಪಿಂಡ ಮಾರಾಟ ಮಾಡುವುದಾಗಿ ಬೆದರಿಕೆ !

ಕೊಲಂಬಸ (ಅಮೇರಿಕಾ) – ಅಮೇರಿಕೆಯ ಓಹಾಯೊ ರಾಜ್ಯದಲ್ಲಿರುವ ಕ್ಲೀವ್‌ಲ್ಯಾಂಡ್‌ನಲ್ಲಿ ಮೊಹಮ್ಮದ ಅಬ್ದುಲ ಅರಾಫತ ಹೆಸರಿನ 25 ವರ್ಷದ ಭಾರತೀಯ ವಿದ್ಯಾರ್ಥಿಯು ಸಾವನ್ನಪ್ಪಿದ್ದಾನೆ. ಅವನು ಭಾಗ್ಯನಗರದ ನಿವಾಸಿಯಾಗಿದ್ದು, ಕಳೆದ 3 ವಾರಗಳಿಂದ ನಾಪತ್ತೆಯಾಗಿದ್ದನು. ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಮಾಹಿತಿ ಪ್ರಕಾರ, ಅಬ್ದುಲ್ ಅವನನ್ನು ಮಾದಕ ಪದಾರ್ಥ ಮಾರಾಟಗಾರರು ಅಪಹರಿಸಿದ್ದರು. ಭಾರತದಲ್ಲಿ ವಾಸಿಸುತ್ತಿದ್ದ ಅವರ ತಂದೆಯ ಬಳಿಗೂ ಅಪಹರಣಕಾರರು ಸುಮಾರು 1 ಲಕ್ಷ ರೂಪಾಯಿ ಹಫ್ತಾ ಕೇಳಿದ್ದರು. ‘ಹಣ ಕೊಡದಿದ್ದರೆ ಅಥವಾ ಪೊಲೀಸರಿಗೆ ತಿಳಿಸಿದರೆ, ಅಬ್ದುಲ್ಲನ ಮೂತ್ರಪಿಂಡವನ್ನು ಮಾರುತ್ತೇವೆ’, ಎಂಬ ಬೆದರಿಕೆಯನ್ನು ಅವರು ಹಾಕಿದ್ದರು. ಕಳೆದ ಕೆಲವು ಕಾಲಾವಧಿಯಲ್ಲಿ ಅಮೇರಿಕಾದಲ್ಲಿ ಭಾರತೀಯರನ್ನು ಹತ್ಯೆ ಮಾಡಿರುವ ಇದು 11 ನೇಯ ಘಟನೆಯಾಗಿದೆ.

ಘಟನೆಯ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತನ್ನ ದುಃಖವನ್ನು ವ್ಯಕ್ತಪಡಿಸಿದ್ದು, ‘ಈ ದುಃಖದ ಸಂದರ್ಭದಲ್ಲಿ ನಾವು ಅವರ ಕುಟುಂಬದೊಂದಿಗೆ ಇದ್ದೇವೆ. ಅಬ್ದುಲ್ ಸಾವಿನ ಪ್ರಕರಣದ ಬಗ್ಗೆ ಅಧಿಕಾರಿಗಳೊಂದಿಗೆ ವಿಚಾರಣೆ ನಡೆಸುತ್ತಿದ್ದೇವೆ. ಶವವನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದೆ.

ಸಂಪಾದಕೀಯ ನಿಲುವು

ಅಮೇರಿಕಾ ಭಾರತೀಯರಿಗೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಇದರಿಂದ ಭಾರತೀಯ ಸಂಸ್ಥೆಯು ‘ಅಮೇರಿಕಾ ಧಾರ್ಮಿಕ ಮತ್ತು ಆನುವಂಶಿಕ ಸ್ವಾತಂತ್ರ್ಯದ ದೃಷ್ಟಿಯಿಂದ ಅಪಾಯಕಾರಿ ದೇಶವಾಗಿದೆ’ ಎಂಬ ವರದಿಯನ್ನು ತಯಾರಿಸಿ ಜಗತ್ತಿನಾದ್ಯಂತ ಪ್ರಸಾರ ಮಾಡಬೇಕು !