ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಬ್ಯಾಂಕಾಕ್ ನಲ್ಲಿ ಸಕಾರಾತ್ಮಕ ಸ್ಪಂದನಗಳ ಮಹತ್ವದ ಕುರಿತು ಸಂಶೋಧನೆ ಮಂಡನೆ !
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈ ಶೋಧಪ್ರಬಂಧದ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ !
ಫೋಂಡಾ (ಗೋವಾ) – ‘ಸಾತ್ತ್ವಿಕ ಪ್ರವೃತ್ತಿಯ ಜನರು ಸಕಾರಾತ್ಮಕ ಸೂಕ್ಷ್ಮ ಸ್ಪಂದನಗಳನ್ನು ನಿರ್ಮಿಸುತ್ತಾರೆ, ಉತ್ತಮ ಗುಣಮಟ್ಟದ ವಿಚಾರ ಮಾಡುತ್ತಾರೆ ಮತ್ತು ಆನಂದ, ಸ್ಥಿರತೆ ಮತ್ತು ಶಾಂತಿಯ ಅನುಭವ ಪಡೆಯುತ್ತಾರೆ. ತದ್ವಿರುದ್ಧ ತಾಮಸಿಕ ಪ್ರವೃತ್ತಿಯ ಜನರ ವ್ಯಕ್ತಿತ್ವದಲ್ಲಿ ದೋಷ ಹೆಚ್ಚಿರುತ್ತದೆ ಮತ್ತು ಅವರ ಮನಸ್ಸಿನಲ್ಲಿ ಕಡಿಮೆ ಗುಣಮಟ್ಟದ ವಿಚಾರಗಳಿರುತ್ತವೆ. ಇದರಿಂದ ಅವರಲ್ಲಿ ನಕಾರಾತ್ಮಕ ಸೂಕ್ಷ್ಮ ಸ್ಪಂದನಗಳು ಮತ್ತು ಒತ್ತಡ ನಿರ್ಮಾಣವಾಗುತ್ತದೆ, ಎಂದು ‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯ’ದ ಶ್ರೀ. ಶಾನ್ ಕ್ಲಾರ್ಕ್ ಇವರು (ಆಧ್ಯಾತ್ಮಿಕ ಮಟ್ಟ ಶೇ. ೬೭) ಪ್ರತಿಪಾದಿಸಿದರು. ಇತ್ತೀಚಿಗೆ ಬ್ಯಾಂಕಾಕ್, ಥೈಲ್ಯಾಂಡ್ ನಲ್ಲಿ ನಡೆದ ‘ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆನ್ ಹ್ಯಾಪಿನೆಸ್ ಅಂಡ್ ವೆಲ್ ಬೀಯಿಂಗ್ (ICHW ೨೦೨೪)’ ನ ಪರಿಷತ್ತಿನಲ್ಲಿ ಶ್ರೀ. ಕ್ಲಾರ್ಕ್ ಇವರು ಮಾತನಾಡುತ್ತಿದ್ದರು.
ಶ್ರೀ. ಕ್ಲಾರ್ಕ್ ಇವರು ‘ಸೂಕ್ಷ್ಮ ಸಕಾರಾತ್ಮಕ ಸ್ಪಂದನಗಳು ಆನಂದವನ್ನು ಹೇಗೆ ನೀಡುತ್ತವೆ’ ಈ ಶೋಧಪ್ರಬಂಧ ಮಂಡಿಸಿದರು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಯವರು ಈ ಶೋಧ ಪ್ರಬಂಧದ ಲೇಖಕರಾಗಿದ್ದು ಶ್ರೀ. ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ .
ಶ್ರೀ. ಶಾನ್ ಕ್ಲಾರ್ಕ್‌ರು ಸೂಕ್ಷ್ಮ ಸ್ಪಂದನಗಳು ವ್ಯಕ್ತಿಯ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪ್ರಭಾವ ಹೇಗೆ ಬೀರುತ್ತವೆ, ಇದರ ಅಧ್ಯಯನದ ಕೆಲವು ಪರೀಕ್ಷೆಗಳನ್ನು ಪ್ರಸ್ತುತಪಡಿಸಿದರು.
೧. ಮೊದಲ ಪರೀಕ್ಷೆಯಲ್ಲಿ, ವ್ಯಕ್ತಿಯು ಮದ್ಯ ಸೇವನೆ ಮಾಡಿದ ನಂತರ ‘ಯುನಿವರ್ಸಲ್ ಔರಾ ಸ್ಕ್ಯಾನರ್’ ಮೂಲಕ ತೆಗೆದುಕೊಂಡ ಪರೀಕ್ಷಣೆಯಲ್ಲಿ ಗಮನಕ್ಕೆ ಬಂದ ಅಂಶವೆಂದರೆ, ಅವರಲ್ಲಿನ ನಕಾರಾತ್ಮಕತೆ ಹೆಚ್ಚಾಗಿ ಸಕಾರಾತ್ಮಕತೆ ಕೇವಲ ೫ ನಿಮಿಷದಲ್ಲಿ ಸಂಪೂರ್ಣವಾಗಿ ನಾಶವಾಗಿದೆ. ತದ್ವಿರುದ್ಧ ಎಳನೀರಿನಂತಹ ಸಾತ್ತ್ವಿಕ ಪೇಯ ಕುಡಿದ ನಂತರ ವ್ಯಕ್ತಿಯ ಪ್ರಭಾವಲಯದ ಮೇಲೆ ತಕ್ಷಣ ಸಕಾರಾತ್ಮಕ ಪರಿಣಾಮವಾಯಿತು.
೨. ಎರಡನೇ ಪರೀಕ್ಷೆಯಲ್ಲಿ ‘ರೋಗಪೀಡಿತ ಅವಯವದಿಂದ ನಕಾರಾತ್ಮಕ ಸ್ಪಂದನಗಳು ಹೇಗೆ ಪ್ರಕ್ಷೇಪಿತವಾಗುತ್ತವೆ, ಎಂದು ತಿಳಿದು ಬಂತು. ಬಾಲ್ಯದಿಂದಲೇ ಚರ್ಮರೋಗ (ಇಛಿಞೆಮ್ಚಿ) ಪೀಡಿತ ವ್ಯಕ್ತಿಯ ಮುಖದಿಂದ ಪ್ರಕ್ಷೇಪಿತವಾಗುವ ನಕಾರಾತ್ಮಕ ಪ್ರಭಾವಲಯ ಕೇವಲ ಆಧ್ಯಾತ್ಮಿಕ ಉಪಚಾರ ಮಾಡಿದ ನಂತರ ಹೇಗೆ ಗಣನೀಯವಾಗಿ ಕಡಿಮೆ ಆಯಿತು, ಎಂದು ಸಹ ಅವರು ಈ ಪರೀಕ್ಷೆಯಲ್ಲಿ ಸ್ಪಷ್ಟಪಡಿಸಿದರು.
೩. ಮೂರನೇ ಪರೀಕ್ಷೆಯಲ್ಲಿ, ೨೨ ಕ್ಯಾರೆಟ್ ಚಿನ್ನದಿಂದ ತಯಾರಿಸಿದ ೨ ಬೇರೆ ಬೇರೆ ಕುಸರಿ(ಡಿಸೈನ್)ಯ ಆಭರಣದಿಂದ ಸೂಕ್ಷ್ಮ ಸ್ಪಂದನದ ದೃಷ್ಟಿಯಿಂದ ತುಲನೆ ಮಾಡಿದರು. ಎರಡು ಸರಗಳು ಚಿನ್ನದ್ದೇ ಆಗಿದ್ದರೂ, ಸಾತ್ತ್ವಿಕ ಕುಸರಿ ಇರುವ ಚಿನ್ನದ ಸರದಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತದೆ, ತದ್ವಿರುದ್ಧ ತಾಮಸಿಕ ಕುಸರಿಯ ಸರದಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ, ಹೀಗೆ ಕಂಡು ಬಂತು.
೪. ಶ್ರೀ. ಕ್ಲಾರ್ಕ್ ಇವರು ಮುಂದೆ ಸ್ಪಷ್ಟಪಡಿಸುತ್ತಾ, ‘ಹೆವಿ ಮೆಟಲ್’ನಂತಹ ಸಂಗೀತ ಕೇಳುವುದು ಮತ್ತು ಹಾರರ್ ಚಲನಚಿತ್ರ ನೋಡುವುದು ಈ ರೀತಿಯ ಮನೋರಂಜನೆಯಲ್ಲಿ ಮುಳುಗಿರುವ ವ್ಯಕ್ತಿಯ ಪ್ರಭಾವಲಯದ ಸಕಾರಾತ್ಮಕತೆ ಸಂಪೂರ್ಣವಾಗಿ ನಾಶವಾಗಬಹುದು ಹಾಗೂ ಕಪ್ಪು ಬಣ್ಣ ಅತೀ ತಾಮಸಿಕವಾಗಿರುವುದರಿಂದ ಕಪ್ಪು ಬಟ್ಟೆ ಧರಿಸಿ ದರೆ ನಕಾರಾತ್ಮಕತೆ ಹೆಚ್ಚು ಪ್ರಮಾಣದಲ್ಲಿ ಸೆಳೆಯಲ್ಪಡುತ್ತದೆ ಎಂದರು.
೫. ಈ ಎಲ್ಲಾ ಪರೀಕ್ಷೆಯ ನಿರೀಕ್ಷಣೆಯಿಂದ ಶ್ರೀ. ಕ್ಲಾರ್ಕ್ ಇವರು ನಿಷ್ಕರ್ಷ ಮಂಡಿಸುತ್ತಾ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ, ನಾಮಜಪ ಮಾಡುವುದು ಮತ್ತು ಆಧ್ಯಾತ್ಮಿಕ ಸ್ತರದ ಉಪಾಯ ಪದ್ಧತಿ, ಉದಾಹರಣೆಗೆ, ಉಪ್ಪು ನೀರಿನಲ್ಲಿ ೧೫ ನಿಮಿಷ ಕಾಲು ಇಟ್ಟು ಉಪಾಯ ಮಾಡುವುದು, ಇಂತಹ ಕೃತಿಗಳು ವ್ಯಕ್ತಿಯ ಪ್ರಭಾವಲಯದಲ್ಲಿನ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ ಮತ್ತು ಮನಸ್ಸಿನಲ್ಲಿ ಒಳ್ಳೆಯ ಗುಣಮಟ್ಟದ ವಿಚಾರ ಬರುವುದಕ್ಕೆ ಅತ್ಯಂತ ಪ್ರಭಾವಿ ಮಾರ್ಗವಾಗಿದೆ ಎಂದರು.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮಾರ್ಗಕ್ರಮಣ ಅಕ್ಟೋಬರ್ ೨೦೧೬ ರಿಂದ ಫೆಬ್ರವರಿ ೨೦೨೪ ಈ ಕಾಲಾವಧಿಯಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ೨೦ ರಾಷ್ಟ್ರೀಯ ಮತ್ತು ೯೩ ಅಂತಾರಾಷ್ಟ್ರೀಯ, ಹೀಗೆ ಒಟ್ಟು ೧೧೩ ವೈಜ್ಞಾನಿಕ ಪರಿಷತ್ತುಗಳಲ್ಲಿ ಶೋಧ ಪ್ರಬಂಧಗಳನ್ನು ಮಂಡಿಸಲಾಗಿದೆ. ಇದರಲ್ಲಿ ೧೪ ಅಂತಾರಾಷ್ಟ್ರೀಯ ಪರಿಷತ್ತಿನಲ್ಲಿ ‘ಸರ್ವೋತ್ಕೃಷ್ಟ ಪ್ರಸ್ತುತೀಕರಣ’ ಪ್ರಶಸ್ತಿ ಪಡೆದಿದೆ. |
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |