ಪಾರಂಪರಿಕ ಭಾರತೀಯ ಶಿಕ್ಷಣಪದ್ಧತಿಯ ಮಹತ್ವ!

೧. ಪ್ರಾಚೀನ ಭಾರತೀಯ ಶಿಕ್ಷಣದ ಉದ್ದೇಶ

ಶಿಕ್ಷಣದೆಡೆಗೆ ನೋಡುವ ನಮ್ಮ ಪ್ರಾಚೀನ ಋಷಿಮುನಿಗಳ ದೃಷ್ಟಿಕೋನವು ವಿದ್ಯಾರ್ಥಿಗಳಿಗೆ ಕೇವಲ ಹೊಟ್ಟೆಪಾಡಿಗಾಗಿ ನೀಡುವ ಶಿಕ್ಷಣವಾಗಿರಲಿಲ್ಲ; ಅದು ವ್ಯಕ್ತಿಗೆ ಜೀವನದಲ್ಲಿ ಉಪಯೋಗವಾಗ ಬೇಕು, ‘ಶಿಕ್ಷಣದಿಂದ ವ್ಯಕ್ತಿಯು ಭೌತಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಅಭಿವೃದ್ಧಿ ಮಾಡಿಕೊಳ್ಳುತ್ತ ಮುಂದೆ ಹೋಗಬೇಕು’, ಎಂಬುದಾಗಿತ್ತು. ಆದ್ದರಿಂದ ಹಿಂದಿನ ಕಾಲದಲ್ಲಿ ಬ್ರಹ್ಮಚರ್ಯವನ್ನು ಪಾಲಿಸುತ್ತ ೧೪ ವಿದ್ಯೆ ಮತ್ತು ೬೪ ಕಲೆಗಳಲ್ಲಿನ ಕೆಲವು ಶಿಕ್ಷಣಗಳನ್ನು ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿತ್ತು.

ಶ್ರೀ. ಅನಿಲ ಸಾಖರೆ

೨. ಬಾಯಿಪಾಠದಿಂದ ಸ್ಮರಣಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತಿತ್ತು !

ಪುನಃ ಪುನಃ ಹೇಳುವುದು ಅಥವಾ ಬಾಯಿಪಾಠ ಮಾಡುವುದು ಈ ಒಂದು ಪದ್ಧತಿ ನಮ್ಮ ಶಿಕ್ಷಣಪದ್ಧತಿಯಲ್ಲಿತ್ತು. ಇದರಲ್ಲಿ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸುಭಾಷಿತಗಳು, ವೇದ-ಉಪನಿಷತ್ತುಗಳ ಶ್ಲೋಕಗಳು, ಸ್ತೋತ್ರಗಳು ಅಥವಾ ಮಗ್ಗಿಗಳನ್ನು ಬಾಯಿಪಾಠ ಮಾಡಿಸಿಕೊಳ್ಳಲಾಗುತ್ತಿತ್ತು. ಈಗ ವಿದ್ಯಾರ್ಥಿಗಳು ಯಾವುದಕ್ಕೆ ‘ಟೇಬಲ್’ ಎನ್ನುತ್ತಾರೆ, ‘ಎರಡೊಂದಲೆ ಎರಡು’ ರಂತಹ ಮಗ್ಗಿಗಳನ್ನು ಪುನಃ ಪುನಃ ಹೇಳಿಸಿಕೊಳ್ಳಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳ ಏಕಾಗ್ರತೆ, ಸ್ಮರಣಶಕ್ತಿ ಒಳ್ಳೆಯ ರೀತಿಯಲ್ಲಿ ಹೆಚ್ಚಾಗುತ್ತಿತ್ತು. ಬುದ್ಧಿಯ, ಬುದ್ಧಿಶಕ್ತಿಯ ವಿಕಾಸ ಚೆನ್ನಾಗಿ ಆಗುತ್ತಿತ್ತು ಮತ್ತು ವ್ಯಾವಹಾರಿಕ ಜೀವನದಲ್ಲಿ ಇಂತಹ ವಿದ್ಯಾರ್ಥಿಗಳು ಮುಂದಿರುತ್ತಿದ್ದರು.

೩. ಬಸ್ಕಿ ತೆಗೆಯುವ ಶಿಕ್ಷೆಯು ಆರೋಗ್ಯದ ದೃಷ್ಟಿಯಲ್ಲಿಯೂ ಲಾಭದಾಯಕ

ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆಯನ್ನು ಕೊಡುವಾಗ ಕೈಯಿಂದ ಕಿವಿಗಳನ್ನು ಹಿಡಿದು ಬಸ್ಕಿ ತೆಗೆಯಲು ಹೇಳುತ್ತಿದ್ದರು. ಈಗಿನ ಹೊಸ ಅಭಿವೃದ್ಧಿಗೊಂಡಿರುವ ವಿಜ್ಞಾನವು, ನಮ್ಮ ಮೆದುಳಿನ ಹೆಚ್ಚಿನ ನರಗಳು ಮತ್ತು ಕೆಲವು ಸೂಕ್ಷ್ಮ ಬಿಂದುಗಳು ಕಿವಿಯ ಜಾಗದಲ್ಲಿವೆ ಎಂದು ಹೇಳುತ್ತದೆ. ಅವುಗಳನ್ನು ಒತ್ತುವುದರಿಂದ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಾಗಲು ಒಳ್ಳೆಯ ರೀತಿಯಿಂದ ಸಹಾಯವಾಗುತ್ತದೆ ಎಂದು ತೋರಿಸಿಕೊಟ್ಟಿದೆ.

೪. ಭಾರತೀಯ ಮೂಲದ ಜನರು ಪರಂಪರಾಗತ ಶಿಕ್ಷಣದಿಂದ ಜಗತ್ತಿನಾದ್ಯಂತ ಉಚ್ಚಪದವಿಯಲ್ಲಿ !

ಇಂದು ಕೆಲವು ದೊಡ್ಡ ದೊಡ್ಡ ಐ.ಎ.ಎಸ್‌., ಐ.ಪಿ.ಎಸ್. ಅಥವಾ ದೇಶ-ವಿದೇಶಗಳಲ್ಲಿನ ದೊಡ್ಡ ದೊಡ್ಡ ಕಂಪನಿಗಳಲ್ಲಿ ಉನ್ನತ ಅಧಿಕಾರಿಗಳು, ಆಡಳಿತ ಮಂಡಳದಲ್ಲಿ ಕೆಲಸ ಮಾಡುವ ವಿವಿಧ ಕಂಪನಿಗಳಲ್ಲಿರುವವರು ‘ಸೀಓ’ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ಇವರೆಲ್ಲರೂ ಭಾರತೀಯ ಮೂಲದವರಾಗಿದ್ದಾರೆ. ಈ ಪರಂಪರಾಗತ ಶಿಕ್ಷಣದ ಮಾಧ್ಯಮದಿಂದಲೇ ಶಿಕ್ಷಣವನ್ನು ಪಡೆದು ಈ ಎಲ್ಲ ಉನ್ನತ ವಿದ್ಯಾ ಭೂಷಿತರು ಮುಂದೆ ಹೋಗಿದ್ದಾರೆ.

೫. ‘ಡಿಜಿಟಲ್‌ ಬೋರ್ಡ’ನಿಂದಾಗಿ ಶಿಕ್ಷಕರು ಚರ್ಚೆ ಮಾಡುತ್ತ ಕಲಿಸುವ ಪದ್ಧತಿಯು ಬಂದಾಗಿದ್ದರಿಂದ ಕೃತಕ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಹೊರಹೊಮ್ಮುವುದು

ವಿದೇಶೀ ಸಹವಾಸದಿಂದ ನಮ್ಮ ಶಾಲೆ, ಮಹಾವಿದ್ಯಾಲಯಗಳಲ್ಲಿ ‘ಡಿಜಿಟಲ್‌ ಬೋರ್ಡ’ (ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಉಪಕರಣಗಳ) ಸಿದ್ಧಪಡಿಸಲಾಗುತ್ತಿದೆ. ಮಕ್ಕಳು ಮನೆಯಲ್ಲಿಯೇ ಇದ್ದು ಅದರ ಮೂಲಕ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮಕ್ಕಳ ಕೈಯಲ್ಲಿನ ನೋಟ್‌ಬುಕ್‌-ಪೆನ್ಸಿಲ್‌ ಹೋಗಿ ‘ಟ್ಯಾಬಲೆಟ್‌’, ‘ಲ್ಯಾಪ್‌ಟಾಪ್’ (ಸಂಚಾರಿಗಣಕಯಂತ್ರ) ಮತ್ತು ಸಂಚಾರವಾಣಿಗಳು ಬಂದವು. ಇದರಿಂದಾಗಿ ಮಕ್ಕಳ ಬುದ್ಧಿಶಕ್ತಿ ಮತ್ತು ಅವರ ಮೂಲಭೂತ ಕ್ಷಮತೆ, ಪ್ರೌಢಿಮೆ ಈ ಬೆಳವಣಿಗೆಯ ದೃಷ್ಟಿಯಲ್ಲಿ ಬಹಳಷ್ಟು ಹಾನಿಯಾಗುತ್ತಿದೆ.

ತರಗತಿಯಲ್ಲಿ ನಗುತ್ತ-ಆಡುತ್ತ, ಮೋಜು-ಮಸ್ತಿ ಮಾಡುತ್ತ ಕುಳಿತಿರುವ ವಿದ್ಯಾರ್ಥಿಗಳ ಎದುರಿಗೆ ವೇದಿಕೆಯಲ್ಲಿ ಕಪ್ಪು ಹಲಗೆಯ ಮೇಲೆ ಕೈಯಲ್ಲಿ ಸೀಮೆಸುಣ್ಣವನ್ನು ಹಿಡಿದು, ಮಾನವೀ ಭಾವಭಾವನೆಗಳೊಂದಿಗೆ ಅವರ ವಿಷಯವನ್ನು ವಿದ್ಯಾರ್ಥಿಗಳೊಂದಿಗೆ ಚರ್ಚೆಯನ್ನು ಮಾಡುತ್ತ ಕಲಿಸುವ ಶಿಕ್ಷಕರ ಈ ರೀತಿ ಯನ್ನು ಈ ಆಧುನಿಕ ಶಿಕ್ಷಣವು ಹಾಳು ಮಾಡಿತು ಮತ್ತು ಶಿಕ್ಷಕರ ಜಾಗದಲ್ಲಿ ಒಂದು ದೊಡ್ಡ ಬಿಳಿಬಣ್ಣದ ‘ಡಿಜಿಟಲ್‌ ಬೋರ್ಡ’ ವಿದ್ಯಾರ್ಥಿಗಳ ಮುಂದೆ ಬಂದಿತು. ಶಿಕ್ಷಣವನ್ನು ನೀಡುವಾಗ ಈ ‘ಡಿಜಿಟಲ್‌ ಬೋರ್ಡ’ ಇದು ಶಿಕ್ಷಕರಂತೆ ವಿಷಯಗಳಿಗೆ ಅನುಸರಿಸಿ ಭಾವಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ ಅಥವಾ ವಿದ್ಯಾರ್ಥಿಗಳಿಗೂ ಅವರ ಸಂದೇಹಗಳನ್ನು ಕೇಳುವ ಸೌಲಭ್ಯವಿಲ್ಲ. ಈ ಹಿಂದಿನ ವಿದ್ಯಾರ್ಥಿಗಳು ಶಿಕ್ಷಕರಲ್ಲಿ ಪ್ರತ್ಯಕ್ಷ ಸಂದೇಹಗಳನ್ನು ಕೇಳಿ ವಿಷಯವನ್ನು ತಿಳಿದುಕೊಳ್ಳುತ್ತಿದ್ದರು. ಈ ಪದ್ಧತಿಯಿಂದ ಈ ‘ಡಿಜಿಟಲ್‌ ಬೋರ್ಡ’ನೊಂದಿಗೆ ಚರ್ಚೆ ಮಾಡಲು ಬರುವುದಿಲ್ಲ.ಆದ್ದರಿಂದ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಸತ್ತ್ವಹೀನ, ಸಭ್ಯತೆ ಮತ್ತು ಸಮೂಹಜೀವನದ ಬಗ್ಗೆ ಉದಾಸೀನತೆ ಮೂಡುತ್ತದೆ. ಕಾರ್ಖಾನೆಯಿಂದ ರೂಪ, ರಸ, ಗಂಧ ವಿರಹಿತ ಉತ್ಪಾದನೆಗಳು ಹೊರಬೀಳುತ್ತವೆಯೋ, ಅದೇ ರೀತಿ ಶಾಲೆ-ಕಾಲೇಜುಗಳಿಂದ ಕೈಯಲ್ಲಿ ಪದವಿಯನ್ನು ಹಿಡಿದಿರುವ, ಒಂದು ನಡೆದಾಡುವ ‘ಉತ್ಪಾದನೆ’ಯು ಕೃತಕವಾಗಿ ಹೊರಹೊಮ್ಮುತ್ತಿದೆ.

೬. ಡಿಜಿಟಲ್‌ ಶಿಕ್ಷಣಪದ್ಧತಿಯ ಹಾನಿಯನ್ನು ಗುರುತಿಸಿ ಸಾಂಪ್ರದಾಯಿಕ ಶಿಕ್ಷಣಪದ್ಧತಿಯನ್ನು ಪ್ರಾರಂಭಿಸಿದ  ಸ್ವೀಡನ್‌ ದೇಶ !

ನಿಜ ಹೇಳಬೇಕಾದರೆ ಶಿಕ್ಷಣ ಕ್ಷೇತ್ರದಲ್ಲಿನ ವ್ಯಕ್ತಿಗಳು ಶಾಸ್ತ್ರೀಯ ದೃಷ್ಟಿಯಿಂದ ಅಧ್ಯಯನ ಮಾಡಿ ಯೋಗ್ಯ ಬದಲಾವಣೆಯನ್ನು ಮಾಡಬೇಕು; ಆದರೆ ‘ಯದ್‌ ‘ಸಾಹೇಬ’ ಉಕ್ತಮ್, ತತ್‌ ಪ್ರಮಾಣಮ್’ ಅಂದರೆ ‘ಪಾಶ್ಚಿಮಾತ್ಯದಿಂದ ಬಂದಿರುವುದೆಲ್ಲವೂ ಉತ್ತಮವಾಗಿದೆ ಎಂದು (ಒಳ್ಳೆಯದಿದೆ ಎಂದು) ನಮ್ಮ ಜನರ ಮಾನಸಿಕತೆಯಾಗಿದೆ. ಇದರಿಂದ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹುದೊಡ್ಡ ಹಾನಿಯಾಗುತ್ತಿದೆ. ಈ ದೃಷ್ಟಿಯಿಂದ ವಿಚಾರ ಮಾಡಿ ಸ್ವೀಡನ್‌ನ ಶಿಕ್ಷಣ ಕ್ಷೇತ್ರದ ತಜ್ಞರು ಈ ‘ಡಿಜಿಟಲ್’ ಶಿಕ್ಷಣಪದ್ಧತಿಯ ಆಳವಾದ ಅಧ್ಯಯನವನ್ನು ಮಾಡಿ ಅನಂತರ ಅದರ ಹಾನಿಯನ್ನು ಗುರುತಿಸಿದರು. ಆದ್ದರಿಂದ ಮಕ್ಕಳ ಒಟ್ಟಾರೆ ಶಾರೀರಿಕ, ಮಾನಸಿಕ ಮತ್ತು ಶೈಕ್ಷಣಿಕ ಬೆಳವಣಿಗೆಗಾಗಿ ಸ್ವೀಡನ್‌ ಈಗ ‘ಡಿಜಿಟಲ್‌ ಶಿಕ್ಷಣ’ದ  ಬದಲು ತೀರ ಶಿಶುವರ್ಗದಿಂದಲೇ (ಕೆ.ಜಿ) ವಿದ್ಯಾರ್ಥಿಗಳಿಗೆ ಕೈಯಲ್ಲಿ ನೋಟ್‌ಬುಕ್‌ ಕೊಟ್ಟು ಸಾಂಪ್ರದಾಯಿಕ ಶಿಕ್ಷಣವನ್ನು ನೀಡಲು ಆಯೋಜಿಸಿದೆ; ಇದರಿಂದ ವಿದ್ಯಾರ್ಥಿಗಳ ಮೂಲಭೂತ ಕ್ಷಮತೆ ಅಭಿವೃದ್ಧಿ ಹೊಂದುವುದು ಅಪೇಕ್ಷಿತವಾಗಿದೆ. ಇವೆಲ್ಲ ವಿಷಯಗಳ ವಿಚಾರ ಮಾಡಿ ಭಾರತೀಯರು ತಮ್ಮದೇ ಪರಂಪರೆಯಿಂದ ಬಂದ ಶಿಕ್ಷಣಪದ್ಧತಿಯನ್ನು ಕಾಯ್ದುಕೊಳ್ಳಬೇಕು.

– ಶ್ರೀ. ಅನಿಲ ದತ್ತಾತ್ರೇಯ ಸಾಖರೆ, ಕೊಪರಿ, ಮಹಾರಾಷ್ಟ್ರ.