ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆ (Aliments related to menses) ಹೋಮಿಯೋಪಥಿ ಔಷಧಿಗಳ ಮಾಹಿತಿ

ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೨೦)

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯ ದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯ ದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆಯನ್ನು ಹೇಗೆ ಮಾಡಬಹುದು ? ಹೋಮಿಯೋಪಥಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.

ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳಿಗೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ಅದರ ಅಂತರ್ಗತ ೨೫/೨೬ ರಿಂದ ನಾವು ‘ಋತುಸ್ರಾವಕ್ಕೆ ಸಂಬಂಧಿಸಿದ ಸಮಸ್ಯೆ’ಗಳಿಗೆ ಔಷಧಿಗಳ ಮಾಹಿತಿಯನ್ನು ನೀಡುತ್ತಿದ್ದೇವೆ. ೨೫/೨೮ ರಲ್ಲಿ ಇದರ ಅಂತರ್ಗತ ‘ಋತುಸ್ರಾವದ ಮೊದಲು ಇರುವ ಸಮಸ್ಯೆಗಳು, ಋತುಸ್ರಾವ ನಡೆದಿರುವಾಗ ಇರುವ ಸಮಸ್ಯೆಗಳು ಮತ್ತು ಋತುಸ್ರಾವದ ಮೊದಲು ಅಥವಾ ಎರಡು ಸರದಿಗಳ ನಡುವಿನ ಕಾಲಾವಧಿಯಲ್ಲಿ ಮಹಿಳೆಯರ ಹೊಟ್ಟೆಯಲ್ಲಿ ನೋವಾಗುವುದು’, ಈ ಬಗ್ಗೆ ಮಾಹಿತಿಯನ್ನು ಓದಿದೆವು. ಇಂದು ಅದರ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !

ಹಿಂದಿನ ಸಂಚಿಕೆ ಓದಲು : https://sanatanprabhat.org/kannada/111698.html

ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. (ಸೌ.) ಸಂಗೀತಾ ಭರಮಗುಡೆ.

ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳನ್ನು ಮಹಿಳೆಯರು ಎದುರಿಸಬೇಕಾಗುತ್ತದೆ. ಇದರಲ್ಲಿನ ಕೆಲವು ಮುಖ್ಯ ಸಮಸ್ಯೆಗಳ ಚಿಕಿತ್ಸೆಯ ಸಂದರ್ಭದಲ್ಲಿನ ಮಾಹಿತಿಯನ್ನು ಮುಂದೆ ಕೊಡಲಾಗಿದೆ. ಯಾವ ವೈಶಿಷ್ಟ್ಯಪೂರ್ಣ ಲಕ್ಷಣಗಳಿದ್ದರೆ, ಆ ಔಷಧಿಗಳನ್ನು ತೆಗೆದುಕೊಳ್ಳಬೇಕು, ಎಂಬುದನ್ನು ಔಷಧಿಗಳ ಹೆಸರುಗಳ ಮುಂದೆ ಕೊಡಲಾಗಿದೆ.

೫. ಋತುಸ್ರಾವವು ಹೆಚ್ಚಿರುವುದು (Menorrhagia)

ಕೆಲವು ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಮತ್ತು ಹೆಚ್ಚು ದಿನ ಯೋನಿಮಾರ್ಗದಿಂದ ರಕ್ತ ಸ್ರಾವವಾಗುತ್ತದೆ. ೭ ದಿನಗಳಿಗಿಂತ ಹೆಚ್ಚು ಮತ್ತು ನಿತ್ಯದ ತುಲನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುವುದಕ್ಕೆ, ‘ಋತುಸ್ರಾವ ಹೆಚ್ಚಿರುವುದು’, ಎನ್ನುತ್ತಾರೆ. ಋತುಸ್ರಾವವು ಹೆಚ್ಚಾಗುತ್ತಿದ್ದರೆ ನಿರ್ಜಲೀಕರಣವನ್ನು (ಆಎಹ್ಥಿಜಡಿಚಿಣೈಒಟಿ) ತಡೆ ಗಟ್ಟಲು ‘ಜಲಸಂಜೀವನಿ’ (ಓರಲ್‌ ರಿಹೈಡ್ರೇಶನ್‌ ಸೊಲ್ಯುಶನ್‌ (ಓ.ಆರ್‌.ಎಸ್‌.) ಕೊಡಬೇಕು.) ಜಲಸಂಜೀವನಿ, ಇದು ನೀರು ಮತ್ತು ‘ಇಲೆಕ್ಟ್ರೊಲೈಟ್’ ಇವುಗಳ ಮಿಶ್ರಣವಾಗಿರುತ್ತದೆ. ಮಾರುಕಟ್ಟೆಯಲ್ಲಿ (ಓ.ಆರ್‌.ಎಸ್‌.)ನ ಸಿದ್ಧ ಪಾಕೀಟ್‌ಗಳು ಸಿಗುತ್ತವೆ; ಆದರೆ ಅವು ಸಿಗದಿದ್ದರೆ ಕುದಿಸಿ ಆರಿಸಿದ ೧ ಲೀಟರ್‌ ನೀರಿನಲ್ಲಿ ೬ ಚಮಚ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪು ಸೇರಿಸಿ ನಾವು ‘ಜಲಸಂಜೀವನಿ’ ದ್ರಾವಣವನ್ನು ತಯಾರಿಸಬಹುದು. ಹೆಚ್ಚು ರಕ್ತಸ್ರಾವವಾದುದರಿಂದ (ಪಂಡುರೋಗ) (anaemia) ಆಗಿ ಆಯಾಸವಾಗಬಹುದು. ಇಂತಹ ಸಮಯದಲ್ಲಿ ರಕ್ತವನ್ನು ಹೆಚ್ಚಿಸಲು ಕಬ್ಬಿಣಾಂಶ ಮಾತ್ರೆಗಳನ್ನು (iron tablets) ತೆಗೆದುಕೊಳ್ಳುವುದು ಆವಶ್ಯಕವಾಗಿರುತ್ತದೆ.

೫ ಅ. ಬೊರ್ಯಕ್ಸ್ (Borax)

೫ ಅ ೧. ಋತುಸ್ರಾವವು (ಮುಟ್ಟು) ಅಪೇಕ್ಷಿತ ಸಮಯಕ್ಕಿಂತ ಬಹಳ ಮೊದಲೇ ಆರಂಭವಾಗುವುದು ಮತ್ತು ಅದರ ಪ್ರಮಾಣ ಬಹಳ ಹೆಚ್ಚಿರುವುದು

೫ ಅ ೨. ಋತುಸ್ರಾವದಲ್ಲಿ ಹೊಟ್ಟೆನೋವಾಗಿ ಹೊಟ್ಟೆ ತೊಳೆಸುವುದು

೫ ಆ. ಕಲ್ಕೇರಿಯಾ ಕಾರ್ಬೊನಿಕಮ್‌ (Calcarea Carbonium)

೫ ಆ ೧. ಋತುಸ್ರಾವವು ಅಪೇಕ್ಷಿತ ಸಮಯದ ಬಹಳ ಮೊದಲೇ ಆರಂಭವಾಗುವುದು, ರಕ್ತಸ್ರಾವದ ಪ್ರಮಾಣ ಬಹಳ ಹೆಚ್ಚಿರುವುದು ಮತ್ತು ರಕ್ತಸ್ರಾವವು ಅನೇಕ ದಿನ ಮುಂದುವರಿಯುವುದು

೫ ಆ ೨. ರೋಗಿಯು ಸ್ಥೂಲ (ದಪ್ಪ); ಆದರೆ ನಿಸ್ತೇಜ (pale) ಇರುವುದು

೫ ಆ ೩. ಕಾಲುಗಳು ತಣ್ಣಗೆ ಮತ್ತು ಹಸಿ ಆಗುವುದು

೫ ಇ. ಎಲೋ ಸೊಕೊಟ್ರಿನಾ (Aloe Socotrina)

೫ ಇ ೧. ಋತುಸ್ರಾವವು ಅಪೇಕ್ಷಿತ ಸಮಯಕ್ಕಿಂತ ಬಹಳ ಮೊದಲೇ ಆರಂಭವಾಗುವುದು, ರಕ್ತಸ್ರಾವದ ಪ್ರಮಾಣ ಬಹಳ ಹೆಚ್ಚಿರುವುದು ಮತ್ತು ಸ್ರಾವ ಅನೇಕ ದಿನ ಮುಂದುವರಿಯುವುದು

೫ ಇ ೨. ಪ್ರಸೂತಿಯ ಸಮಯದಲ್ಲಿ ಆಗುವಂತೆ ಕೆಳಗಿನ ದಿಶೆ ಯಲ್ಲಿ ನೂಕಿದಂತೆ ಹೊಟ್ಟೆನೋವು ಆರಂಭವಾಗಿ ಗರ್ಭಾಶಯವು ಯೋನಿಮಾರ್ಗದಿಂದ ಹೊರಗೆ ಬರುವುದು

೫ ಇ ೩. ಮಲವಿಸರ್ಜನೆಗೆ ತುರ್ತಾಗಿ ಹೋಗಬೇಕಾಗುವುದು

೫ ಈ. ಫೆರಮ್‌ ಮೆಟ್ಯಾಲಿಕಮ್‌ (Ferrum Metalicum) :

ಇತರ ಯಾವುದೇ ಲಕ್ಷಣಗಳಿಲ್ಲದೇ ಕೇವಲ ಋತುಸ್ರಾವದ ಪ್ರಮಾಣ ಹೆಚ್ಚಿರುವುದು

೫ ಉ. ಹ್ಯಮ್ಯಾಮೆಲಿಸ್‌ (Hamamelis)

೫ ಉ ೧. ಋತುಸ್ರಾವವು ಹೆಚ್ಚಿರುವುದು

೫ ಉ ೨. ಋತುಸ್ರಾವದ ಬಣ್ಣ ಗಾಢ ಆಗಿರುವುದು

೫ ಉ ೩. ವಿಶೇಷವಾಗಿ ಜೊತೆಗೆ ಅಂಡಾಶಯಗಳಲ್ಲಿ ವೇದನೆ ಯಾಗುವುದು (Pain in ovarie)

೫ ಊ. ಚೈನಾ ಆಫಿಸಿನ್ಯಲಿಸ್‌ (China Officials) : ಋತುಸ್ರಾವ ಹೆಚ್ಚಾಗುವುದು, ಸ್ರಾವದಲ್ಲಿ ಕಪ್ಪು ಗಂಟುಗಳಿರುವುದು

೫ ಎ. ಕ್ರೊಕಸ್‌ ಸಟಾಯವ್ಹಸ್‌ (Crocus  Sativu) : ಋತು ಸ್ರಾವವು ಕಪ್ಪು, ದಪ್ಪ, ಜಿಗಣೆಯಂತಿರುವುದು

೫ ಏ. ಥ್ಯಲ್ಯಪ್ಸಿ ಬರ್ಸಾ ಪಾಸ್ಟೋರಿಸ್‌ (Thlapsi Bursa Pastori)

೫ ಏ ೧. ಋತುಸ್ರಾವ ಬಹಳ ಹೆಚ್ಚು ಆಗುವುದು

೫ ಏ ೨. ಗಂಟುಗಳು ಬಿದ್ದು ಮತ್ತು ಹೊಟ್ಟೆ ನೋವಾಗುವುದು

೫ ಏ ೩. ಎರಡು ಮುಟ್ಟಿನ ನಡುವಿನ ಅವಧಿಯಲ್ಲಿ ಅಶಕ್ತತೆ ತುಂಬಿ ಬರದಿರುವುದು

೫ ಐ. ಕ್ಯಮೊಮಿಲ್ಲಾ (Chamomilla)

೫ ಐ. ೧. ಮನಸ್ಸಿನಲ್ಲಿನ ಸಿಟ್ಟಿನಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಋತು ಸ್ರಾವವಾಗುವುದು, ಅದರೊಂದಿಗೆ ಬಹಳ ಕಿರಿಕಿರಿಯಾಗುವುದು

೫ ಐ ೨. ಸ್ರಾವವು ಗಂಟುಯುಕ್ತ ಮತ್ತು ಕಪ್ಪು ಬಣ್ಣದ್ದಾಗಿರುವುದು

೫ ಒ. ಸಿಕೆಲ್‌ ಕ್ಯಾರನ್ಯುಟಮ್‌ (Secular Cornutum)

೫ ಒ ೧. ಋತುಸ್ರಾವವು ಗಾಢ, ರಕ್ತ ಮತ್ತು ಕೀವು ಮಿಶ್ರಿತ, ಹಾಗೆಯೇ ತೆಳುವಾಗಿರುವುದು

೫ ಒ ೨. ಮಹಿಳಾ ರೋಗಿಯು ‘ಸಪೂರ ಮತ್ತು ಒಣಗಿದಂತೆ’ (thin and cachectic) ಇರುವುದು

೫ ಓ. ಮ್ಯಾಗ್ನೇಶಿಯಮ್‌ ಕಾರ್ಬೊನಿಕಮ್‌ (Magnesium  Carbonium)

೫ ಓ ೧. ಋತುಸ್ರಾವ ಬಹಳ ಹೆಚ್ಚು ಮತ್ತು ಮುಖ್ಯವಾಗಿ ರಾತ್ರಿಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿರುವುದು

೫ ಔ. ಸಬಿನಾ ಆಫಿಸಿನ್ಯಲಿಸ್‌ ( Sabina officinalis)

೫ ಔ ೧. ಋತುಸ್ರಾವವು ಗಾಢ ಕೆಂಪು ಬಣ್ಣದ, ಬಹಳ ಮತ್ತು ನಡುನಡುವೆ ಆಗುವುದು

೫ ಔ ೨. ನಡೆದಾಗ ಅಥವಾ ನಿಂತಾಗ ಸ್ರಾವವು ಹೆಚ್ಚಾಗುವುದು

೫ ಅಂ. ಇಪಿಕ್ಯಾಕುಆನ್ಹಾ (Ipecacuanha)

೫ ಅಂ ೧. ಋತುಸ್ರಾವವು ಬಹಳಷ್ಟು ಪ್ರಮಾಣದಲ್ಲಿ ಮತ್ತು ಗಾಢ ಕೆಂಪು ಬಣ್ಣದ್ದು ಇರುವುದು

೫ ಅಂ ೨. ಈ ಲಕ್ಷಣಗಳೊಂದಿಗೆ ಹೊಟ್ಟೆ ತೊಳೆಸಿದಂತೆ ಆಗುವುದು ಅಥವಾ ಆಗದಿರುವುದು

೫ ಕ. ನೈಟ್ರಿಕಮ್‌ ಯಸಿಡಮ್‌ (Nitricum Acidum )

೫ ಕ ೧. ಗರ್ಭಪಾತದ ನಂತರ ಅಥವಾ ಋತುಸ್ರಾವದ ಸಮಯದಲ್ಲಿ ಹೊಟ್ಟೆನೋವು ಆರಂಭವಾಗಿ ಬಹಳಷ್ಟು ಪ್ರಮಾಣದಲ್ಲಿ ರಕ್ತಸ್ರಾವವಾಗುವುದು

೫ ಕ ೨. ರಜೋನಿವೃತ್ತಿಯ (Menopause) ಕಾಲದಲ್ಲಿ ಕಿಬ್ಬೊಟ್ಟೆಯಲ್ಲಿ ಕೆಳಗೆ ಎಳೆದಂತೆ ವೇದನೆಗಳಾಗಿ ಬೆನ್ನು, ಹಾಗೆಯೇ ತೊಡೆಗಳಲ್ಲಿ ವೇದನೆಗಳು ಆಗುವುದು

೫ ಕ ೩. ಕುದುರೆಯ ಮೂತ್ರದಂತೆ ಮೂತ್ರಕ್ಕೆ ದುರ್ಗಂಧ ಬರುವುದು

೫ ಕ ೪. ನಡುರಾತ್ರಿಯ ನಂತರ ಅಸ್ವಸ್ಥತೆ ಆಗುವುದು

೫ ಕ ೫. ಹೊಟ್ಟೆನೋವು ಆರಂಭವಾಗಿ (cramps) ಕೆಳಗೆ ಎಳೆದಂತೆ ವೇದನೆಗಳು ಆಗುವುದು, ಅನಂತರ ತಕ್ಷಣ ಸ್ರಾವವಾಗುವುದು

೫ ಕ ೬. ಹಸಿರು ಬಣ್ಣದ ಉರಿಉರಿಯಾಗುವ ಬಿಳಿಸೆರಗು ಮೈಮೇಲೆ ಹೋಗುವುದು (Discharge per vagina) ಇದಕ್ಕೆ ಕನ್ನಡದಲ್ಲಿ ‘ಮೈಮೇಲೆ ಹೋಗುವುದು’, ಎನ್ನುತ್ತಾರೆ, ಉದಾ. ಋತುಸ್ರಾವದ ಸಮಯದಲ್ಲಿ ಬಹಳ ರಕ್ತಸ್ರಾವವಾಗುತ್ತಿದ್ದರೆ ಮೈಮೇಲೆ ಬಹಳ ಹೋಗುತ್ತಿದೆ’, ಎಂದು ಹೇಳುತ್ತಾರೆ. ಬಿಳಿ ಸೆರಗು, ಅಂದರೆ (white discharge per vagina)

೫ ಖ. ಆರ್ಸೆನಿಕಮ್‌ ಆಲ್ಬಮ್‌ (Arsenicum Album)

೫ ಖ ೧. ಋತುಸ್ರಾವವು ಬಹಳ ಸಮಯದಿಂದ ಹೆಚ್ಚಿರುವುದು

೫ ಖ ೨. ತೆಳು, ಉರಿಉರಿಯಾಗುವ ಬಿಳಿಸೆರಗು ಹೋಗುವುದು

೫ ಗ. ಎಂಬ್ರಾ ಗ್ರಿಸಿಯಾ ( Ambra Grisea) : ಋತುಸ್ರಾವದ ನಂತರವೂ ಸಣ್ಣ ಸಣ್ಣ ಕಾರಣಗಳಿಂದಾಗಿಯೂ ರಕ್ತಸ್ರಾವವಾಗುವುದು

೫ ಘ. ಯುಸಿಲ್ಯಾಗೊ ಮೆಡಿಸ್‌ (Ustilago Maydis) : ಋತು ಸ್ರಾವದ ಸಮಯದಲ್ಲಿ ಬಹಳ ರಕ್ತಸ್ರಾವವಾಗುವುದು; ಅದಕ್ಕೂ ಮೊದಲು ಮತ್ತು ಅನಂತರ ‘ಸಾಮಾನ್ಯ ರಕ್ತಸ್ರಾವ’ (ಟಿಒಟಿ-ಮೆಟಿಸ್ಣಡಿಉಚಿಟ ಬ್ಟಓಜ) ಆಗುವುದು

(ಮುಂದುವರಿಯುವುದು)

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಉಪಾಯ !’

ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ  ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು  ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಿ ಇಡಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು.