೧. ಪೂ. ರಮಾನಂದಾಣ್ಣ ಇವರೊಂದಿಗೆ ಪ್ರತಿಯೊಂದು ಪ್ರವಾಸದಲ್ಲಿರುವಾಗ ‘ತಪ್ಪಿಲ್ಲದಂತೆ ಗುರುಸೇವೆ ಮಾಡುವುದು ಮತ್ತು ಗುರುಪ್ರಾಪ್ತಿ ಮಾಡಿಕೊಳ್ಳುವುದು’, ಎಂಬ ಧ್ಯೇಯವನ್ನು ಇಟ್ಟುಕೊಳ್ಳುವುದು.
‘ಪೂ. ರಮಾನಂದಾಣ್ಣರೊಂದಿಗೆ ಪ್ರತಿಯೊಂದು ಪ್ರವಾಸದಲ್ಲಿ ನನಗೆ ಒಂದು ಧ್ಯೇಯಪ್ರಾಪ್ತಿಯಾಗಿದೆ. ಅದರಂತೆ ನಾನು ಸಂತರ ಮಾರ್ಗದರ್ಶನಕ್ಕನುಗುಣವಾಗಿ ಜನವರಿ ೨೦೨೩ ರಲ್ಲಿ ಮೊದಲ ಪ್ರವಾಸಕ್ಕೆ ಹೋದೆನು. ಆಗ ನನಗೆ ‘ತಪ್ಪಿಲ್ಲದಂತೆ ಗುರುಸೇವೆ ಮಾಡುವುದು ಮತ್ತು ಗುರುಪ್ರಾಪ್ತಿ ಮಾಡಿಕೊಳ್ಳುವುದು’, ಎಂಬ ಧ್ಯೇಯ ಸಿಕ್ಕಿತು.
೨. ಕಲಿಯಲು ಸಿಕ್ಕಿದ ಅಂಶಗಳು
ನಾನು ಮೊದಲ ಬಾರಿಗೆ ಧರ್ಮಸಭೆಯಲ್ಲಿ ೫ ದಿನ ಪೂರ್ಣ ವೇಳೆ ಸೇವೆಯಲ್ಲಿ ಸಹಭಾಗಿಯಾಗಿದ್ದೆನು. ಈ ೫ ದಿನಗಳಲ್ಲಿ ನಾನು ನಿರೀಕ್ಷಣೆ ಮಾಡುವುದು, ‘ಇತರರ ಮೇಲೆ ಅವಲಂಬಿಸಿರದೇ ಸ್ವತಃ ಸೇವೆ ಮಾಡುವುದು’ ಈ ಭಾವ ನಿರ್ಮಾಣವಾಗುವುದು, ಸೇವೆಗೆ ಭಾವವನ್ನು ಜೋಡಿಸುವ ಪ್ರಯತ್ನ ಮಾಡುವುದು, ಸೇವಾಭಾವ ನಿರ್ಮಾಣವಾಗುವುದು ಮತ್ತು ಸಮರ್ಪಣಾಭಾವ ನಿರ್ಮಾಣವಾಗಿ, ಭಾವಜಾಗೃತಿಯಾಗುವುದು ಈ ವಿಷಯಗಳನ್ನು ಕಲಿತೆನು ಮತ್ತು ಅನುಭವಿಸಿದೆನು. ಈ ರೀತಿ ಸೇವೆಯ ಮಾಧ್ಯಮದಿಂದ ನನಗೆ ಪ್ರಗತಿ ಹೊಂದುವ ಮಾರ್ಗ ಸಿಕ್ಕಿತು.
೩. ಪೂ.ರಮಾನಂದಾಣ್ಣನವರ ಒಡನಾಟದಲ್ಲಿ ಗಮನಕ್ಕೆ ಬಂದಂತಹ ಅಂಶಗಳು ಮತ್ತು ಬಂದಂತಹ ಅನುಭವ
ಅ. ಪೂ. ರಮಾನಂದಾಣ್ಣನವರ ಒಡನಾಟದಲ್ಲಿ ನನಗೆ ಗುರುದೇವರ ಪ್ರೀತಿ ಅನುಭವಿಸಲು ಸಿಕ್ಕಿತು.
ಆ. ಪೂ. ರಮಾನಂದಾಣ್ಣರೊಂದಿಗೆ ಮೊಬೈಲ್ ಮೂಲಕ ಯಾವಾಗಲಾದರೊಮ್ಮೆ ನನ್ನ ಸಂಭಾಣೆಯಾಗುತ್ತದೆ. ಆ ಸಮಯದಲ್ಲಿ ನನ್ನ ಮೇಲಿನ ಆವರಣ ದೂರವಾಗುತ್ತಿರುವಂತೆ ನನಗೆ ಅನುಭವವಾಗುತ್ತದೆ ಮತ್ತು ನನ್ನ ನಕಾರಾತ್ಮಕ ವಿಚಾರಗಳು ತಕ್ಷಣವೇ ಕಡಿಮೆಯಾಗುತ್ತವೆ.
ಇ. ಪೂ. ರಮಾನಂದಾಣ್ಣನವರ ಮೊದಲ ಪ್ರತ್ಯಕ್ಷ ಮಾರ್ಗದರ್ಶನದ ಸಮಯದಲ್ಲಿ ನಾನು ಅಂತರ್ಮುಖನಾಗಿದ್ದೆನು.
ಈ. ಅವರ ಮಾರ್ಗದರ್ಶನದಿಂದ ‘ಕೇವಲ ಒಂದೇ ತಿಂಗಳಿನಲ್ಲಿ ನಿಯಮಿತವಾಗಿ ಸೇವೆಗೆ ಹೋಗಬೇಕು’, ಎಂದು ನನಗೆ ಅನಿಸಿತು ಮತ್ತು ನಾನು ನನ್ನ ಖಾಸಗಿ ವೈದ್ಯಕೀಯ ಉದ್ಯೋಗದ ಅವಧಿಯನ್ನು ೮ ಗಂಟೆಯಿಂದ ೪ ಗಂಟೆಗೆ ಸೀಮಿತಗೊಳಿಸಿದೆನು. ಇದರಿಂದ ನನಗೆ ವ್ಯವಹಾರವನ್ನು ಮಾಡಿ ಇತರ ಸಮಯದಲ್ಲಿ ಪ್ರಸಾರ ಸೇವೆಯನ್ನು ಮಾಡುವ ಭಾಗ್ಯ ಸಿಕ್ಕಿತು.
೪. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದರ್ಭದಲ್ಲಿ ಬಂದಂತಹ ಅನುಭೂತಿಗಳು
ಅ. ಪ್ರವಾಸದಲ್ಲಿ ಒಂದು ದಿನ ನಾನು ಸಂತರ ಕೋಣೆ ಪ್ರವಶಿಸಿದಾಗ ಅಕಸ್ಮಾತ್ ನನಗೆ ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ) ‘ಶುಭ್ರ ಬಿಳಿಯ ನಿಲುವಂಗಿ ಮತ್ತು ಪೈಜಾಮಾ’ ಧರಿಸಿದ ವಿರಾಟ ರೂಪ ಕಾಣಿಸಿತು.
ಆ. ಪ್ರತಿಯೊಂದು ಸೇವೆಯಲ್ಲಿ ಎಲ್ಲಿಯಾದರೂ, ಯಾರ ಮೂಲಕವಾದರೂ ಗುರುದೇವರ ಅಸ್ತಿತ್ವ ನನಗೆ ಅನುಭವಿಸಲು ಸಿಗುತ್ತಿತ್ತು. ನನಗೆ ಸೂಕ್ಷ್ಮದಿಂದ ನಿರಂತರವಾಗಿ ಗುರುದೇವರ ಮಾರ್ಗದರ್ಶನವೂ ಸಿಗುತ್ತಿತ್ತು.
೫. ನಾನು ಆಶ್ರಮಕ್ಕೆ ಬಂದ ನಂತರ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಇವುಗಳ ಮೇಲೆ ಗಮನಹರಿಸುವುದು ಮತ್ತು ಸೂಕ್ಷ್ಮ ಸ್ತರದಲ್ಲಿ ಪ್ರಯತ್ನಿಸುವುದು’, ಎಂಬ ಧ್ಯೇಯವನ್ನು ಇಟ್ಟುಕೊಂಡೆನು.
ನನಗೆ ಪೂ. ರಮಾನಂದಾಣ್ಣನವರೊಂದಿಗೆ ನಿಯಮಿತವಾಗಿ ಪ್ರವಾಸಕ್ಕೆ ಹೋಗುವ ಅವಕಾಶ ಸಿಗುತ್ತದೆ. ನನಗೆ ಸತತವಾಗಿ ಅವರ ಮಾರ್ಗದರ್ಶನವೂ ಸಿಗುತ್ತಿರುತ್ತದೆ. ಅದಕ್ಕಾಗಿ ನಾನು ಗುರುದೇವರ ಚರಣಗಳಿಗೆ ಕೋಟಿಶಃ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.’
– ಡಾ. ಪ್ರಣವ ಮಲ್ಯಾ, ಮಂಗಳೂರು (೨೮.೫.೨೦೨೩)