ಸಾಧಕರೇ, ಸೇವೆಗಳಿಗಾಗಿ ಕಡಿಮೆ ಸಾಧಕರಿದ್ದಾರೆ, ಎಂಬ ವಿಚಾರ ಮಾಡದೇ ‘ದೇವರು ನನ್ನನ್ನು ರೂಪಿಸಲು ದೊಡ್ಡ ಅವಕಾಶ ನೀಡಿದ್ದಾನೆ’, ಎಂಬ ವಿಚಾರ ಮಾಡಿ ಹೆಚ್ಚೆಚ್ಚು ಸೇವೆಗಳನ್ನು ಕಲಿತುಕೊಳ್ಳಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸನಾತನದ ಅಧ್ಯಾತ್ಮಿಕ ಮತ್ತು ಧರ್ಮ ಪ್ರಸಾರದ ಕಾರ್ಯವು ಸರ್ವತೋಮುಖವಾಗಿ ವಿಸ್ತರಿಸುತ್ತಿದೆ; ಆದರೆ ತಳಮಳದಿಂದ ಮತ್ತು ಸಮರ್ಪಿತ ಭಾವದಿಂದ ಕಾರ್ಯ ಮಾಡುವ ಸಾಧಕರ ಮತ್ತು ಕಾರ್ಯಕರ್ತರ ಸಂಖ್ಯೆಯು ಬೆರಳೆಣಿಕೆಯಷ್ಟಿದೆ. ಆದುದರಿಂದ ‘ಹೆಚ್ಚು ಸೇವೆಗಳು ಮತ್ತು ಸೇವಕರು ಕಡಿಮೆ, ಈ ರೀತಿ ಯಾವಾಗಲೂ ಇರುತ್ತದೆ. ಭಗವಂತನು ಮುಂದುಮುಂದಿನ ಹಂತದ ಸಾಧನೆಯನ್ನು ಕಲಿಸುತ್ತಿರುವುದರಿಂದ ಪ್ರತಿಯೊಂದು ಸೇವೆಯ ವ್ಯಾಪ್ತಿಯೂ ಬಹಳ ಹೆಚ್ಚಾಗಿದೆ ಮತ್ತು ಮುಂದೆ ಇನ್ನೂ ಹೆಚ್ಚಾಗಲಿದೆ.

ಸಾಧಕರು ತಮ್ಮಲ್ಲಿರುವ ಸೇವೆಯ ಕೌಶಲ್ಯ ಮತ್ತು ತಮ್ಮ ಕ್ಷಮತೆಯನ್ನು ಸಂಪೂರ್ಣವಾಗಿ ಬಳಸಿದರೆ ಭಗವಂತನ ಸಹಾಯ ಲಭಿಸಿ ಸೇವೆಯು ಹೆಚ್ಚು ವೇಗದಿಂದ ಆಗ ತೊಡಗುತ್ತದೆ. ಸಾಧಕರ ಆಧ್ಯಾತ್ಮಿಕ ಕ್ಷಮತೆ ಹೆಚ್ಚಾದರೆ ಕಡಿಮೆ ಸಾಧಕ ರಿದ್ದರೂ ಪರಿಣಾಮಕಾರಿ ಸೇವೆ ಮತ್ತು ಸಾಧನೆ ಯಾಗಿ ಫಲನಿಷ್ಪತ್ತಿ ಹೆಚ್ಚಾಗುತ್ತದೆ ! ಮುಂದೆ ನಮಗೆ ಹಿಂದೂ ರಾಷ್ಟ್ರವನ್ನು ಮುನ್ನಡೆಸಲು ಇರುವುದರಿಂದ ಈಶ್ವರನು ಸಾಧಕರಿಗೆ ಹೆಚ್ಚೆಚ್ಚು ಸೇವೆಯ ಅವಕಾಶ ನೀಡುತ್ತಿದ್ದಾನೆ. ಆದುದರಿಂದ ಸಾಧಕರು ‘ಸೇವೆಗಾಗಿ ಸಾಧಕರು ಕಡಿಮೆ ಇದ್ದಾರೆ, ಎಂಬ ವಿಚಾರವನ್ನು ಮಾಡದೇ ‘ದೇವರು ನನ್ನನ್ನು ರೂಪಿಸಲು ಈ ದೊಡ್ಡ ಅವಕಾಶವನ್ನು ನೀಡಿದ್ದಾನೆ, ಎಂಬ ವಿಚಾರ ಮಾಡಿ ಹೆಚ್ಚೆಚ್ಚು ಸೇವೆಯನ್ನು ಕಲಿತುಕೊಳ್ಳಬೇಕು !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೭.೨.೨೦೨೪)