ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ

ಬೆಂಗಳೂರು : ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ದೇವಸ್ಥಾನದ ಪರಿಸರದಲ್ಲಿ ಯಾವುದೇ ಕಾರಣಕ್ಕೂ ಹಿಂದೂಯೇತರರಿಗೆ, ನಾಸ್ತಿಕರಿಗೆ ಅಂಗಡಿ ಮುಂಗಟ್ಟು ಹಾಕಲು ಅವಕಾಶ ನಿರಾಕರಿಸಿ ‘ಧಾರ್ಮಿಕದತ್ತಿ ಅಧಿನಿಯಮ ಕಾಯಿದೆಯ ಕಲಂ ೧೯೯೭’ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ವತಿಯಿಂದ ಜಿಲ್ಲಾಧಿಕಾರಿ ಶ್ರೀ. ಕೆ.ಎ. ದಯಾನಂದ ಇವರಿಗೆ ಮನವಿ ನೀಡಲಾಯಿತು, ಈ ವೇಳೆ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ, ನ್ಯಾಯವಾದಿ ಪ್ರಸನ್ನ ಡಿ.ಪಿ, ಶ್ರೀ. ರಾಘವೇಂದ್ರಾಚಾರ್, ಶ್ರೀ. ಶ್ಯಾಮಸುಂದರ್, ಆರ್ಚಕರಾದ ಶ್ರೀ. ಎಮ್. ಭಾಗ್ವತ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನೀಲೇಶ್ವರ ಬಿ.ಎಂ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಶ್ರೀ. ಮೋಹನ ಗೌಡ ಮುಂದಿನಂತೆ ಹೇಳಿದರು
೧. ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಎಲ್ಲಾ ದೇವಸ್ಥಾನಗಳ ವಾರ್ಷಿಕ ಜಾತ್ರೆಯು ಪ್ರಾರಂಭವಾಗುತ್ತಿದೆ. ಉದಾ : ಬೆಂಗಳೂರು ಕರಗ, ಬನ್ನೇರುಘಟ್ಟ ರಸ್ತೆಯಲ್ಲಿ ಚಂಪಕ ರಾಮ ದೇವಸ್ಥಾನ ಜಾತ್ರೆಯು ಪ್ರಾರಂಭವಾಗುತ್ತದೆ. ಈ ವಾರ್ಷಿಕ ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತದೆ. ಇದರ ದುರುಪಯೋಗವನ್ನು ಪಡೆಯಲು ಅನ್ಯಸಮುದಾಯದವರು, ದೇವರ ಮೇಲೆ ನಂಬಿಕೆ ಇಲ್ಲದ ನಾಸ್ತಿಕರು ದೇವಸ್ಥಾನದ ಪ್ರಾಂಗಣ, ಪರಿಸರದಲ್ಲಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವ್ಯಾಪಾರ ಮಾಡುವುದು ಗಮನಕ್ಕೆ ಬರುತ್ತದೆ. ಇದರಿಂದ ದೇವಸ್ಥಾನದ ಸಾತ್ತ್ವಿಕ ವಾತಾವರಣವು ಹಾಳಾಗುತ್ತದೆ.
೨. ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕದತ್ತಿ ಅಧಿನಿಯಮ ೧೯೯೭’ ರ ಕಾಯಿದೆಯ ಕಲಂ ೨೯(೮), (೧೨) ರ ಪ್ರಕಾರ ‘ಹಿಂದೂ ದೇವಸ್ಥಾನದ ಸಮೀಪದ ಜಮೀನು, ಕಟ್ಟಡ, ನಿವೇಶನಗಳು ಸೇರಿ ಯಾವುದೇ ಸ್ವತ್ತನ್ನು ಹಿಂದೂಯೇತರರಿಗೆ ನೀಡಬಾರದು’ ಎಂದು ಸ್ಪಷ್ಟವಾಗಿ ಉಲ್ಲೇಖವಿದೆ.
೩. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಹಿಂದೂ ದೇವಸ್ಥಾನಗಳ ಜಾಗವನ್ನು ಅಕ್ರಮವಾಗಿ ಕಬಳಿಸಿ, ಅಲ್ಲಿ ಹಿಂದೂಯೇತರರು ಪಾವಿತ್ರ್ಯಕ್ಕೆ ಧಕ್ಕೆ ತರುವ ಅಂಗಡಿಯನ್ನು ಹಾಕಿರುವುದು ಅನೇಕ ಕಡೆಗಳಲ್ಲಿ ಗಮನಕ್ಕೆ ಬಂದಿದೆ, ಇಲಾಖೆಯ ಅಧಿಕಾರಿಗಳು ದೇವಸ್ಥಾನಗಳ ಜಾಗದ ಸಂರಕ್ಷಣೆ ಬಗ್ಗೆ ಯಾವುದೇ ಕ್ರಮ ಜರುಗಿಸದಿರುವುದು ಅಧಿಕಾರಿಗಳ ಬೇಜವ್ದಾರಿಯನ್ನು ಎತ್ತಿ ತೋರಿಸುತ್ತದೆ. ಈಗಲಾದರೂ ಇಲಾಖೆಯು ಎಚ್ಚೆತ್ತುಕೊಂಡು ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬರುವ ದೇವಸ್ಥಾನಗಳ ಜಾಗದಲ್ಲಿ ಕಾಯಿದೆಗೆ ವಿರುದ್ಧವಾಗಿ ಹಿಂದೂಯೇತರರು ಅಂಗಡಿಯನ್ನು ಹಾಕಿದ್ದರೆ, ಕೂಡಲೇ ತೆರವುಗೊಳಿಸಬೇಕು
೪. ತಾತ್ಕಾಲಿಕ ಗುತ್ತಿಗೆಯನ್ನು ಹಿಂದೂಯೇತರರಿಗೆ ನೀಡಬಾರದು, ಅಷ್ಟೇ ಅಲ್ಲದೇ ಹಿಂದೂ ದೇವಸ್ಥಾನಗಳ ವಾರ್ಷಿಕ ಜಾತ್ರೆಯಲ್ಲಿ ಹಿಂದೂಯೇತರರು, ಹಿಂದೂ ಧಾರ್ಮಿಕ ನಂಬಿಕೆಯನ್ನು ಗೌರವಿಸದವರಿಗೆ ಅಂಗಡಿಯನ್ನು ಹಾಕಲು ಅವಕಾಶ ನೀಡದಂತೆ ವಿಶೇಷ ಆದೇಶ ಹೊರಡಿಸಬೇಕು’.
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !