ಕೊಲಕಾತಾ ಉಚ್ಚ ನ್ಯಾಯಾಲಯದಿಂದ ತೃಣಮೂಲ ಕಾಂಗ್ರೆಸ್ಸಿಗೆ ಛೀಮಾರಿ
ಕೊಲಕಾತಾ (ಬಂಗಾಲ) – ಸಂದೇಶಖಾಲಿ ಪ್ರಕರಣದಲ್ಲಿ ಶೇಕಡ ಒಂದರಷ್ಟು ಸತ್ಯವಾಗಿದ್ದರೂ ಅದು ಲಜ್ಜಾಸ್ಪದವಾಗಿದೆ. ಇದಕ್ಕೆ ಸಂಪೂರ್ಣ ಸರಕಾರ ಮತ್ತು ಅಧಿಕಾರದಲ್ಲಿರುವವರು ನೂರಕ್ಕೆ ನೂರರಷ್ಟು ನೈತಿಕ ದೃಷ್ಟಿಯಿಂದ ಹೊಣೆಗಾರರಾಗಿದ್ದಾರೆ. ಇದು ಜನರ ಸುರಕ್ಷೆಯ ಪ್ರಶ್ನೆಯಾಗಿದೆ, ಎಂದು ಕೊಲಕಾತಾ ಉಚ್ಚ ನ್ಯಾಯಾಲಯವು ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ಛೀಮಾರಿ ಹಾಕಿದೆ. ಸಂದೇಶಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ಸಿನ ನಾಯಕ ಶೇಖ ಶಹಜಹಾನ್ ಇವನು ಸ್ಥಳೀಯ ಹಿಂದೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಇಲ್ಲಿಯ ಹಿಂದುಗಳ ಭೂಮಿಯನ್ನು ಕಬಳಿಸಿರುವ ಬಗ್ಗೆ ಆರೋಪವಿದೆ. ಈ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ. ಅದರ ಮೇಲಿನ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಸರಕಾರಕ್ಕೆ ಛೀಮಾರಿ ಹಾಕಿದೆ.
‘Shameful on the Government’s part if there is even 1% truth in the #Sandeshkhali case.’
– #CalcuttaHighCourt
slams #TrinamoolCongress#MamataBanerjee #TMC#Sandeshkhalihorrorstory pic.twitter.com/drDZxHnfPh— Sanatan Prabhat (@SanatanPrabhat) April 4, 2024