Insulting of Hindu Gods: ಮೇ ೩, ೨೦೨೩ ರಂದು ಕಥಿತ ಸಾಮೂಹಿಕ ಬಲಾತ್ಕಾರ ಆಗಿರುವ ಕ್ರೈಸ್ತ ಕುಕಿ ಮಹಿಳೆಯನ್ನು ಬೆತ್ತಲಾಗಿ ಸೀತಾಮಾತೆಯ ರೂಪದಲ್ಲಿ ತೋರಿಸಲಾಯಿತು !

  • ಮೇ 3, 2023 ರಂದು ತಥಾಕಥಿತ ಸಾಮೂಹಿಕ ಅತ್ಯಾಚಾರವಾದ ಕ್ರೈಸ್ತ ಕುಕಿ ಮಹಿಳೆ ಬೆಲ್ತಲೆ ಆಗಿರುವುದನ್ನು ಸೀತೆಯ ರೂಪದಲ್ಲಿ ತೋರಿಸಲಾಯಿತು

  • ಮಣಿಪುರದಲ್ಲಿನ ಹಿಂದುತ್ವನಿಷ್ಠರಲ್ಲಿ ಆಕ್ರೋಶದ ಅಲೆ !

(ದಯವಿಟ್ಟು ಗಮನಿಸಿ ಈ ಚಿತ್ರವನ್ನು ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಅಲ್ಲ, ಆದರೆ ಹಿಂದೂ ದೇವತೆಗಳನ್ನು ಹೇಗೆ ಅವಮಾನಿಸಲಾಗಿದೆ ಎಂಬುದನ್ನು ತೋರಿಸಲು.)

ಇಂಫಾಲ (ಮಣಿಪುರ) – ರಾಜ್ಯದಲ್ಲಿನ ಕಾಂಗಪೋಕಪಿ ಇಲ್ಲಿ ವಾಸಿಸುವ ಕಾಂಗ್ರೆಸ್ಸಿ ನಾಯಕ ಲಾಮಥಿನಥಾಂಗ ಹಾವುಕಿಪ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಮುಂಬರುವ ಮಣಿಪುರ ಪ್ರವಾಸದ ಬಗ್ಗೆ ‘ಎಕ್ಸ್’ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ಪ್ರಧಾನಮಂತ್ರಿ ಮತ್ತು ಗೃಹ ಸಚಿವ ಅಮಿತ ಶಾಹ ಇವರನ್ನು ಅನುಕ್ರಮವಾಗಿ ಶ್ರೀ ರಾಮ ಮತ್ತು ಲಕ್ಷ್ಮಣರ ರೂಪದಲ್ಲಿ ತೋರಿಸಿದ್ದಾರೆ.

ಇಬ್ಬರ ಮಧ್ಯ ಬೆತ್ತಲಾಗಿ ಸೀತಾಮಾತೆಯನ್ನು ತೋರಿಸಿದ್ದಾರೆ ಮತ್ತು ಆಕೆಯ ತಲೆಯ ಮೇಲೆ ‘ಮಣಿಪುರ’ ಎಂದು ಬರೆದಿದ್ದಾರೆ. ಇದರಿಂದ ಹಾವುಕಿಪನು ಮೇ ೩, ೨೦೨೩ ರಂದು ಕ್ರೈಸ್ತ ಕುಕಿ ಮಹಿಳೆಯ ಮೇಲೆ ಕೆಲವು ಹಿಂದುಗಳು ನಡೆಸಿರುವ ಕಥಿತ ಸಾಮೂಹಿಕ ಬಲಾತ್ಕಾರದ ನೆನಪು ಮಾಡಿಕೊಟ್ಟಿದ್ದಾರೆ.

ಈ ಪ್ರಕರಣದಲ್ಲಿ ರಾಜ್ಯದಲ್ಲಿನ ಹಿಂದುಗಳಲ್ಲಿ ಆಕ್ರೋಶದ ಅಲೆ ಎದ್ದಿದ್ದು ಅವರು ಹಾವುಕಿಪರನನ್ನು ವಿರೋಧಿಸುತ್ತಿದ್ದಾರೆ. ಹಿಂದೂಗಳ ವಿರೋಧ ಹೆಚ್ಚುತ್ತಿರುವುದರಿಂದ ಹಿಂದುದ್ವೇಷಿ ಹಾವುಕಿಪ ಆ ಪೋಸ್ಟ್ ಅನ್ನು ತೆಗೆದುಹಾಕಿದ್ದಾರೆ. ಇಂಫಾಲನ ಹಿಂದುತ್ವನಿಷ್ಠರು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು, ಅವರು, ಪ್ರಸ್ತುತ ವ್ಯಕ್ತಿಯು ಯಾವಾಗಲೂ ಹಿಂದೂ ಮತ್ತು ಅವರ ದೇವತೆಯ ವಿರುದ್ಧ ಲೇಖನ ಬರೆಯುತ್ತಾನೆ. ಇದರ ಜೊತೆಗೆ ಹಿಂದೂ ಮೈತೆಯಿ ಜನಾಂಗವನ್ನು ಕೂಡ ಗುರಿ ಮಾಡುತ್ತಾನೆ. ಕ್ರೈಸ್ತ ಕುಕಿ ಮತ್ತು ಹಿಂದೂ ಮೈತೆಯಿ ಇವರಲ್ಲಿ ಬಿರುಕು ನಿರ್ಮಾಣ ಮಾಡುವುದಕ್ಕಾಗಿ ಈ ವ್ಯಕ್ತಿ ಕಾರ್ಯನಿರತವಾಗಿರುತ್ತಾನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಾವುಕಿಪ ಅಥವಾ ಅವರಂತಹ ಇದರ ಹಿಂದುದ್ವೇಷಿ ಕಾಂಗ್ರೆಸ್ಸಿ ಇಸ್ಲಾಂ ಅಥವಾ ಕ್ರೈಸ್ತ ಜನಾಂಗದ ಧಾರ್ಮಿಕ ಭಾವನೆಗೆ ಎಂದೂ ಧಕ್ಕೆ ತಂದಿಲ್ಲ. ಹಿಂದುಗಳಲ್ಲಿನ ಅತಿಯಾದ ಸಹಿಷ್ಣುತೆಯ ದುರುಪಯೋಗ ಮಾಡಿಕೊಳ್ಳತ್ತಿದ್ದರೆ, ಹಿಂದೂಗಳು ಏನು ಮಾಡಬೇಕು ? ಎಂದು ಈಗ ಹಿಂದೂಗಳಿಗೆ ಪ್ರಶ್ನೆ ಕಾಡುತ್ತಿದೆ !

ಇದು ಆಚಾರಸಂಹಿತೆಯ ಭಂಗ ಅಲ್ಲವೇ ? ಚುನಾವಣೆ ಆಯೋಗ ಇದ್ದು ಹಾವುಕಿಪನ ವಿರುದ್ಧ ಕ್ರಮ ಕೈಗೊಳ್ಳುವುದೇ ?