ಇಂದಿರಾಗಾಂಧಿ ಶ್ರೀಲಂಕಾಗೆ ಭಾರತದ ‘ಕಚ್ಚತೀವು’ ದ್ವೀಪ ಉಡುಗೊರೆಯಾಗಿ ನೀಡಿದ್ದರು ! – ಪ್ರಧಾನಿ ಮೋದಿ

  • ಪ್ರಧಾನಿ ಮೋದಿಯವರ ಗಂಭೀರ ಆರೋಪ

  • ತಮಿಳುನಾಡು ಮತ್ತು ಶ್ರೀಲಂಕಾ ನಡುವೆ ಇದೆ ಈ ದ್ವೀಪ !

ನವ ದೆಹಲಿ – ಶ್ರೀಲಂಕಾಕ್ಕೆ ಕಚ್ಚಥಿವು ಎಂಬ ದ್ವೀಪವನ್ನು ಕಾಂಗ್ರೆಸ್ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 31 ರಂದು ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ನ ಈ ಕೃತ್ಯದಿಂದ ಪ್ರತಿಯೊಬ್ಬ ಭಾರತೀಯನಲ್ಲಿಯೂ ಕ್ರೋಧ ತುಂಬಿದೆ ಎಂದರು. ಕಾಂಗ್ರೆಸ್ ಅನ್ನು ನಂಬಲು ಸಾಧ್ಯವಿಲ್ಲ. ಇಂತಹ ಕೃತ್ಯಗಳಿಂದಾಗಿ ಕಳೆದ 75 ವರ್ಷಗಳಲ್ಲಿ ಭಾರತದ ಏಕತೆ ಮತ್ತು ಸಮಗ್ರತೆಯನ್ನು ದುರ್ಬಲಗೊಂಡಿದೆ. 1974ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಈ ದ್ವೀಪವನ್ನು ಶ್ರೀಲಂಕಾಕ್ಕೆ ನೀಡಿದ್ದರು. ಕಚ್ಚಥಿವು ಕುರಿತ ಮಾಹಿತಿ ಹಕ್ಕು ವರದಿಯನ್ನು ಉಲ್ಲೇಖಿಸಿ ಪ್ರಧಾನಿ ಈ ಹೇಳಿಕೆ ನೀಡಿದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಮಾಹಿತಿ ಹಕ್ಕಿನಡಿ ಈ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಆಗಸ್ಟ್ 10, 2023 ರಂದು ಪ್ರಧಾನಿ ಮೋದಿ ಅವರು ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಂಬಂಧಿಸಿದಂತೆ ಕಚ್ಚಥಿವು ಕುರಿತು ಹೇಳಿಕೆ ನೀಡಿದ್ದರು.

ಮಾಹಿತಿ ಹಕ್ಕು ವರದಿಯಲ್ಲಿ ಮಾಹಿತಿ !

ಈ ವರದಿಯ ಪ್ರಕಾರ:

1. 1974 ರಲ್ಲಿ, ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಮತ್ತು ಶ್ರೀಲಂಕಾ ಅಧ್ಯಕ್ಷ ಶ್ರೀಮಾವೋ ಬಂಡಾರನಾಯಕೆ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರ ಅಡಿಯಲ್ಲಿ ಕಚ್ಚಥಿವು ದ್ವೀಪವನ್ನು ಔಪಚಾರಿಕವಾಗಿ ಶ್ರೀಲಂಕಾಕ್ಕೆ ಹಸ್ತಾಂತರಿಸಲಾಯಿತು. ತಮಿಳುನಾಡಿನಲ್ಲಿ ಲೋಕಸಭೆ ಪ್ರಚಾರದ ವೇಳೆ ಇಂದಿರಾಗಾಂಧಿ ಈ ಒಪ್ಪಂದ ಮಾಡಿಕೊಂಡಿದ್ದರು.

2. 1974 ರಲ್ಲಿ ಎರಡು ದೇಶಗಳ ನಡುವೆ ಎರಡು ಸಭೆಗಳು ನಡೆದವು. ಮೊದಲ ಸಭೆ ಜೂನ್ 26, 1974 ರಂದು ಕೊಲಂಬೊದಲ್ಲಿ ನಡೆದರೆ, ಎರಡನೇ ಸಭೆಯು ಜೂನ್ 28, 1974 ರಂದು ದೆಹಲಿಯಲ್ಲಿ ನಡೆಯಿತು. ಎರಡೂ ಸಭೆಗಳಲ್ಲಿ ಈ ದ್ವೀಪವನ್ನು ಶ್ರೀಲಂಕಾಕ್ಕೆ ನೀಡಲು ಒಪ್ಪಿಗೆ ನೀಡಲಾಯಿತು.

3. ಒಪ್ಪಂದದಲ್ಲಿ ಕೆಲವು ಷರತ್ತುಗಳನ್ನು ಹಾಕಲಾಗಿತ್ತು. ಭಾರತೀಯ ಮೀನುಗಾರರು ತಮ್ಮ ಬಲೆಗಳನ್ನು ಒಣಗಿಸಲು ಈ ದ್ವೀಪಕ್ಕೆ ಹೋಗಬಹುದು ಎಂಬುದು ಒಂದು ಷರತ್ತು. ಇದರೊಂದಿಗೆ, ದ್ವೀಪದಲ್ಲಿ ನಿರ್ಮಿಸಲಾದ ಚರ್ಚ್‌ಗಳಿಗೆ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ನೀಡಲಾಗುವುದು.

ಪ್ರಧಾನಿ ಅವರ ಹೇಳಿಕೆ ಆಧಾರ ರಹಿತ ! – ಕಾಂಗ್ರೆಸ್

ಈ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಮಾತನಾಡಿ, ಯಾವುದೇ ಆಧಾರವಿಲ್ಲದೆ ಹೇಳಿಕೆ ನೀಡುವುದು ಪ್ರಧಾನಿಯ ಮುಖ್ಯ ಸಮಸ್ಯೆಯಾಗಿದೆ. 9 ವರ್ಷಗಳಿಂದ ಪ್ರಧಾನಿ ಏನು ಮಾಡುತ್ತಿದ್ದರು? ತಮಿಳುನಾಡು ಚುನಾವಣೆ ನಡೆಯುತ್ತಿರುವುದರಿಂದ ಮತ್ತು ಅಲ್ಲಿ ಬಿಜೆಪಿ ಭರದಿಂದ ಪ್ರಚಾರ ನಡೆಸುತ್ತಿದೆ ಎಂದು ಎಲ್ಲಾ ಸಮೀಕ್ಷೆಗಳು ಹೇಳಿರುವುದರಿಂದ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಗೆ ಯಾವುದೇ ಪಶ್ಚಾತ್ತಾಪವಿಲ್ಲ ! – ಕೇಂದ್ರ ಗೃಹ ಸಚಿವ

ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡಿ, ಕಾಂಗ್ರೆಸ್ ಕಚ್ಚಥಿವು ದ್ವೀಪವನ್ನು ಕೈಬಿಟ್ಟಿದೆ ಮತ್ತು ಅದರ ಬಗ್ಗೆಅವರಿಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಟೀಕಿಸಿದರು. ಕೆಲವೊಮ್ಮೆ ಕಾಂಗ್ರೆಸ್ ಸಂಸದರು ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡುತ್ತಾರೆ, ಕೆಲವೊಮ್ಮೆ ಅವರು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅವಮಾನಿಸುತ್ತಾರೆ. ಇದು ಭಾರತದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಶಾ ಹೇಳಿದರು.

ಕಚ್ಚಥಿವು ದ್ವೀಪ ಎಲ್ಲಿದೆ ?

ತಮಿಳುನಾಡಿನ ರಾಮೇಶ್ವರಂನಿಂದ 19 ಕಿ.ಮೀ ದೂರದಲ್ಲಿ ಕಚ್ಚಥಿವು 285 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ದ್ವೀಪವು ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದ ಮಧ್ಯದಲ್ಲಿದೆ. 14 ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಈ ದ್ವೀಪವು ರೂಪುಗೊಂಡಿತು. ಇದು ರಾಮೇಶ್ವರಂನಿಂದ ಸರಿಸುಮಾರು 19 ಕಿಲೋಮೀಟರ್ ಮತ್ತು ಶ್ರೀಲಂಕಾದ ಜಾಫ್ನಾ ಜಿಲ್ಲೆಯಿಂದ ಸುಮಾರು 16 ಕಿಲೋಮೀಟರ್ ದೂರದಲ್ಲಿದೆ.

ದ್ವೀಪದ ಇತಿಹಾಸ !

285 ಎಕರೆಗಳಲ್ಲಿ ಹರಡಿರುವ ಈ ದ್ವೀಪವು 17ನೇ ಶತಮಾನದಲ್ಲಿ ಮಧುರೈನ ರಾಜ ರಾಮನಾದನ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿತ್ತು. ನಂತರ, ಬ್ರಿಟಿಷರ ಆಳ್ವಿಕೆಯಲ್ಲಿ, ಈ ದ್ವೀಪವು ‘ಮದ್ರಾಸ್ ಪ್ರೆಸಿಡೆನ್ಸಿ’ ಯ ಅಡಿಯಲ್ಲಿತ್ತು. 1947 ರಲ್ಲಿ ಭಾರತವು ಸ್ವತಂತ್ರವಾದಾಗ, ಸರಕಾರಿ ದಾಖಲೆಗಳಲ್ಲಿ ಈ ದ್ವೀಪವನ್ನು ಭಾರತದ ಭಾಗವೆಂದು ಘೋಷಿಸಲಾಯಿತು; ಆದರೆ ಶ್ರೀಲಂಕಾ ಮೊದಲಿನಿಂದಲೂ ಈ ದ್ವೀಪ ತನ್ನದೆಂದು ಹೇಳಿಕೊಂಡಿದೆ.

ಸಂಪಾದಕೀಯ ನಿಲುವು

ಇಂತಹ ಆಯಕಟ್ಟಿನ ಪ್ರಮುಖ ದ್ವೀಪವನ್ನು ನೆರೆಯ ದೇಶಕ್ಕೆ ಉಡುಗೊರೆಯಾಗಿ ನೀಡಿದ ದೇಶವಿರೋಧಿ ಕಾಂಗ್ರೆಸ್ ! ಕೇಂದ್ರ ಸರಕಾರದ ಚೀನಾ ನೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿಯು ಅವರ ಅಜ್ಜಿ ಮಾಡಿದ ಈ ತಪ್ಪಿನ ಬಗ್ಗೆ ಉತ್ತರಿಸಬೇಕು!

ಮಾಲ್ಡೀವ್ಸ್ ಅನ್ನು ಚೀನಾದ ಡ್ರ್ಯಾಗನ್ ನುಂಗಿ ಹಾಕುತ್ತಿದೆ. ಶ್ರೀಲಂಕಾದ ಹಂಬಂಟೋಟಾ ಬಂದರು ಇರಲಿ, ಪಾಕಿಸ್ತಾನದ ಗ್ವಾದರ್ ಬಂದರು ಇರಲಿ, ಎಲ್ಲ ಕಡೆಗಳಿಂದ ಭಾರತವನ್ನು ಸುತ್ತುವರೆಯಲು ಚೀನಾ ಕುತಂತ್ರ ರೂಪಿಸಿದೆ. ಹೀಗಿರುವಾಗ ಭಾರತ ಮಾಲ್ಡೀವ್ಸ್ ಜೊತೆಗೆ ಕಚ್ಚಥಿವು ದ್ವೀಪವನ್ನು ವಶಪಡಿಸಿಕೊಳ್ಳುವುದು ಆವಶ್ಯಕವಾಗಿದೆ !