ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಘೋರ ಅಜ್ಞಾನಿಗಳು !

‘ಯಾರು ಹಿಂದೂ ಧರ್ಮವನ್ನು ಟೀಕಿಸು ತ್ತಾರೆಯೋ ಅವರಷ್ಟು ಅಜ್ಞಾನಿಗಳು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ !’

ಭಗವಂತ ಮತ್ತು ಮಾನವನಲ್ಲಿನ ವ್ಯತ್ಯಾಸ !

‘ಭಗವಂತನು ಭೂಮಿ, ನೀರು, ಗಾಳಿ ಇತ್ಯಾದಿ ಎಲ್ಲವನ್ನೂ ಉಚಿತವಾಗಿ ನೀಡುತ್ತಾನೆ; ಆದರೆ ಮಾನವನು ಮಾತ್ರ ಪ್ರತಿಯೊಂದು ಸಂಗತಿಯನ್ನೂ ಮಾರುತ್ತಾನೆ !’

ಪ್ರಾರಬ್ಧಕ್ಕೆ ‘ಸಾಧನೆ’ಯು ಏಕೈಕ ಪರಿಹಾರ !

ಯಾರಿಗಾದರೂ ಸಹಾಯ ಮಾಡುವಾಗ, ಅವರ ಪ್ರಮುಖ ಸಮಸ್ಯೆಗಳು ಪ್ರಾರಬ್ಧದಿಂದಲೇ ಉಂಟಾಗಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸಾಧನೆ ಮಾಡುವಂತೆಯೂ ತಿಳಿಸಬೇಕು.

ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ !

‘ವ್ಯವಹಾರದಲ್ಲಿ ಹೆಚ್ಚು-ಹೆಚ್ಚು ಹಣ ಗಳಿಸುವುದಿರುತ್ತದೆ, ಆದರೆ ಸಾಧನೆ ಯಲ್ಲಿ ಸರ್ವಸ್ವದ ತ್ಯಾಗ ಮಾಡುವುದಿರುತ್ತದೆ; ಆದ್ದರಿಂದ ವ್ಯವಹಾರದಲ್ಲಿ ಜನರು ದುಃಖಿತರಾಗಿರುತ್ತಾರೆ, ಆದರೆ ಸಾಧಕರು ಆನಂದಿತರಾಗಿರುತ್ತಾರೆ.’

‘ಸನಾತನ ಪ್ರಭಾತ’ ಪತ್ರಿಕೆಯ ಅದ್ವಿತೀಯತೆ !

‘ಇತರ ವರ್ತಮಾನಪತ್ರಿಕೆಗಳಲ್ಲಿ ಮಕ್ಕಳ ಜನ್ಮದಿನದಂದು ಜಾಹೀರಾತಿ ಗಾಗಿ ಹಣ ಪಡೆದು ಛಾಯಾಚಿತ್ರಗಳನ್ನು ಮುದ್ರಿಸುತ್ತಾರೆ, ಆದರೆ ‘ಸನಾತನ ಪ್ರಭಾತ’ದಲ್ಲಿ ಗುಣವಂತ ಮಕ್ಕಳ ಛಾಯಾಚಿತ್ರಗಳೊಂದಿಗೆ ಅವರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳನ್ನೂ ಪ್ರಕಟಿಸಲಾಗುತ್ತದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ