Racist Satire On Indians : ಅಮೆರಿಕದ ‘ಫಾಕ್ಸ್‌ಫರ್ಡ್ ಕಾಮಿಕ್ಸ್’ನಿಂದ ಭಾರತೀಯರ ಮೇಲೆ ವರ್ಣಭೇದದ ವ್ಯಂಗ್ಯಚಿತ್ರ ಪ್ರಸಾರ !

  • ಬಾಲ್ಟಿಮೋರ್‌ನಲ್ಲಿ (ಅಮೇರಿಕಾ) ದೋಣಿಯೊಂದು ಡಿಕ್ಕಿ ಹೊಡೆದು ಸೇತುವೆ ಕುಸಿದ ಪ್ರಕರಣ

  • ಸಾಮಾಜಿಕ ಜಾಲತಾಣಗಳ ಮೂಲಕ ಟೀಕೆ ಆರಂಭ

ವಾಷಿಂಗ್ಟನ್ (ಅಮೆರಿಕ) – ಕೆಲ ದಿನಗಳ ಹಿಂದೆ ಅಮೆರಿಕದ ಬಾಲ್ಟಿಮೋರ್ ನಲ್ಲಿ ‘ಡಾಲಿ’ ಹೆಸರಿನ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದ ಪರಿಣಾಮ ‘ಫ್ರಾನ್ಸಿಸ್ ಸ್ಕಾಟ್ ಕೀ’ ಸೇತುವೆ ಕುಸಿದು ಬಿದ್ದಿತ್ತು. ಈ ಅಪಘಾತದಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಬೋಟ್‌ನಲ್ಲಿದ್ದ ಭಾರತೀಯ ಸಿಬ್ಬಂದಿಯ ಜಾಗರೂಕತೆಯು ಅನೇಕ ಜೀವಗಳನ್ನು ಉಳಿಸಿದೆ. ಈ ಬಗ್ಗೆ ಅಮೇರಿಕಾದ ಅಧ್ಯಕ್ಷ ಜೋ ಬಿಡನ್ ಸೇರಿದಂತೆ ಅನೇಕ ಜನರು ಸಿಬ್ಬಂದಿಯನ್ನು ಹೊಗಳಿದರು; ಆದರೆ ಇದೀಗ ‘ಫಾಕ್ಸ್‌ಫರ್ಡ್ ಕಾಮಿಕ್ಸ್’ ಈ ಬಗ್ಗೆ ಜನಾಂಗೀಯ ವ್ಯಂಗ್ಯಚಿತ್ರ ಬಿಡಿಸುವ ಮೂಲಕ ಭಾರತೀಯರನ್ನು ಅವಮಾನಿಸಿದೆ. ಈ ವ್ಯಂಗ್ಯಚಿತ್ರದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗುತ್ತಿದೆ.

ವ್ಯಂಗ್ಯಚಿತ್ರದಲ್ಲಿ ಏನಿದೆ ?

ಈ ವ್ಯಂಗ್ಯಚಿತ್ರದಲ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಲುಂಗಿಯಲ್ಲಿ ಭಯಭೀತರಾದ ಪುರುಷರನ್ನು ತೋರಿಸಲಾಗಿದೆ. ‘ಡಾಲಿ ಹಡಗಿನಲ್ಲಿ ಅಂತಿಮ ಕ್ಷಣವನ್ನು ಚಿತ್ರಿಸುತ್ತದೆ’ ಎಂದು ತೋರಿಸಲಾಗಿದೆ. ಹಡಗು ನಡೆಸುವವರು ಹಳ್ಳಿಯ ಭಾರತೀಯರಾಗಿದ್ದೂ ಅವರೇ ಅಪಘಾತಕ್ಕೆ ಕಾರಣವೆಂದು ತೋರಿಸಲು ಪ್ರಯತ್ನಿಸಿದೆ.

 

ಸಂಪಾದಕೀಯ ನಿಲುವು

ವರ್ಣಭೇದವು ಅಮೇರಿಕಾದ ಸಮಾಜದಲ್ಲಿ ಎಷ್ಟು ಆಳವಾಗಿ ವ್ಯಾಪಿಸಿದೆ ಎಂಬುದನ್ನು ಇದು ತೋರಿಸುತ್ತದೆ. ವರ್ಣಭೇದದಿಂದ ಅಲ್ಲಿ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿದೆ ಮತ್ತು ಅದನ್ನು ಕಡಿಮೆ ಮಾಡುವ ಬದಲು, ಅಮೆರಿಕವು ಭಾರತದ ಆಂತರಿಕ ವ್ಯವಹಾರಗಳಿಗೆ ಮೂಗು ತುರಿಸುತ್ತದೆ ! ಅಮೆರಿಕಕ್ಕೆ ಅದರ ಸ್ಥಾನವನ್ನು ತೋರಿಸಲು ಭಾರತವು ಹೆಚ್ಚು ಆಕ್ರಮಣಕಾರಿಯಾಗಬೇಕು !