|
ದಿನಾಜಪುರ (ಬಾಂಗ್ಲಾದೇಶ) – ಇಲ್ಲಿಯ ಕಾಹರುಲ್ ಉಪಜಿಲ್ಲೆಯಲ್ಲಿನ ಪುರಾತನ ಕಾಂತಜ್ಜ ಹಿಂದೂ ದೇವಸ್ಥಾನದ ಮೇಲೆ ಮುಸಲ್ಮಾನರು ವಶಕ್ಕೆ ಪಡೆದು ದೇವಸ್ಥಾನದ ಜಾಗದಲ್ಲಿ ಮಸೀದಿ ಕಟ್ಟುತ್ತಿದ್ದಾರೆ. ಈ ಕಾಮಗಾರಿಯನ್ನು ಇಲ್ಲಿಯ ಮುಸಲ್ಮಾನ ಸಂಸದ ಮಹಮ್ಮದ್ ಝಕಾರಿಯ ಝಕ ಇವರು ಆರಂಭಿಸಿದ್ದಾರೆ. ಸ್ಥಳೀಯ ಹಿಂದುಗಳು ದೇವಸ್ಥಾನ ವಶಕ್ಕೆ ಪಡೆದಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಗುಂಪಿನಿಂದ ಒಮ್ಮತದಿಂದ ಪ್ರಧಾನಮಂತ್ರಿ ಶೇಖ ಹಸಿನಾ ಇವರ ಬಳಿ ಹಸ್ತಕ್ಷೇಪಕ್ಕೆ ಒತ್ತಾಯಿಸಿದ್ದಾರೆ. ಇಲ್ಲಿಯ ನಿವಾಸಿ ರಣಜಿತ ಕುಮಾರ್ ಇವರು, ದೇವಸ್ಥಾನದ ಒಟ್ಟು ಜಾಗ ೬೨.೪೬ ಎಕರೆ ಇದೆ. ಈ ಜಾಗದ ಬಗ್ಗೆ ವಿವಿಧ ಸರಕಾರಿ ಇಲಾಖೆಯಲ್ಲಿ ನೋಂದಣಿ ಇದೆ ಎಂದು ಹೇಳಿದ್ದಾರೆ.
೧. ಬಾಂಗ್ಲಾದೇಶದಲ್ಲಿನ ಹಿಂದೂ, ಬೌದ್ಧ ಮತ್ತು ಕ್ರೈಸ್ತ ಯೂನಿಟ್ ಕೌನ್ಸಿಲ್ ನಿಂದ ದೇವಸ್ಥಾನದ ಜಾಗದ ಮೇಲಿನ ಅಕ್ರಮ ಅಧಿಕಾರ ಮತ್ತು ಮಸೀದಿಯ ಕಾಮಗಾರಿಯ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ. ಅವರು ಈ ಸ್ಥಳವನ್ನು ‘ಪುರಾತತ್ವ ಮತ್ತು ಐತಿಹಾಸಿಕ ಸ್ಥಳ’ ಎಂದು ವರ್ಣಿಸಿದ್ದಾರೆ. ಸಂಸದ ಝಕೆರಿಯ ಇವರಲ್ಲದೆ ಈ ಪ್ರದೇಶದ ಉಪಯುಕ್ತ ಶಕೀಲ್ ಅಹಮದ್ ಇವರ ಮೇಲೆ ಕೂಡ ಷಡ್ಯಂತ್ರದಲ್ಲಿ ಸಹಭಾಗಿ ಇರುವುದೆಂದು ಹಿಂದುಗಳು ಆರೋಪಿಸಿದ್ದಾರೆ.
Bangladesh: Islamists lay foundation of mosque on the land of historic Kantajew temple, had previously tried to encroach upon Chrandranath Mandirhttps://t.co/jKRkH4Ox2V
— OpIndia.com (@OpIndia_com) March 24, 2024
ಸಂಪಾದಕೀಯ ನಿಲುವುಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿನ ಹಿಂದೂ ಮತ್ತು ಅವರ ಧಾರ್ಮಿಕ ಸ್ಥಳಗಳ ರಕ್ಷಣೆ ಮಾಡುವುದು ಭಾರತದ ಹೊಣೆಯಾಗಿದೆ; ಈ ದೃಷ್ಟಿಯಿಂದ ಸರಕಾರವು ಈಗಲಾದರೂ ನಿರ್ಣಯ ತೆಗೆದುಕೊಳ್ಳಬೇಕೆಂದು ಹಿಂದೂಗಳ ಬೇಡಿಕೆ ಆಗಿದೆ ! |