ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ ವತಿಯಿಂದ ಸಾರಿಗೆ ಸಚಿವ ಶ್ರೀ. ರಾಮಲಿಂಗಾ ರೆಡ್ಡಿಯವರಿಗೆ ಮನವಿ

ಬೆಂಗಳೂರು : ‘ಮೇಕ್ ಮೈ ಟ್ರಿಪ್’, ‘ರೆಡ್ ಬಸ್’, ‘ಗೋಯಿಬಿಬೋ’, ‘ಸವಾರಿ’, ‘ಇನ್ ಡ್ರೈವ್’, ‘ರ್ಯಾಪಿಡೋ’, ‘ಕ್ವಿಕ್ ರೈಡ್’, ‘ರ್ಯಾಪಿಡೋ’ ನಂತಹ ೧೮ ಖಾಸಗಿ ಪ್ರವಾಸಿ ಆಪ್‌ಗಳು ಕೇಂದ್ರ ಸರಕಾರದ ಅನುಮತಿ ಪಡೆಯದೆ ಅಗ್ರಿಗೇಟರ್‌ನ ವ್ಯವಹಾರ ನಡೆಸುತ್ತಿವೆ. ಅವುಗಳನ್ನು ಮುಚ್ಚುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ವತಿಯಿಂದ ಸಾರಿಗೆ ಸಚಿವರಾದ ಶ್ರೀ. ರಾಮಲಿಂಗಾ ರೆಡ್ಡಿ ಇವರಿಗೆ ಮಾರ್ಚ್ ೧೪ ರಂದು ಮನವಿ ನೀಡಲಾಯಿತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ, ಸಮಿತಿಯ ಶ್ರೀ. ಶಿವರಾಮ, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಡಾ. ಬಿ.ಎನ್. ಮಹೇಶ ಕುಮಾರ, ಕಾರ್ಮಿಕ ಪ್ರತಿಷ್ಠಾನದ ಶ್ರೀ. ಮಲ್ಲಿಕಾರ್ಜುನ, ನ್ಯಾಯವಾದಿ ಶಕುಂತಲಾ ಶೆಟ್ಟಿ, ಯುವ ಮುಖಂಡ ಶ್ರೀ. ವಿನಯ ಹಾಗೂ ಶ್ರೀ. ರಘುನಾಥ ನಾವಡ ಮತ್ತಿತರರು ಉಸ್ಥಿತರಿದ್ದರು.

ಈ ವೇಳೆ ಶ್ರೀ. ಮೋಹನ ಗೌಡ ಇವರು ಮಂಡಿಸಿದ ಅಂಶಗಳು
೧. ಸಮಿತಿಯ ಸುರಾಜ್ಯ ಅಭಿಯಾನದ ವತಿಯಿಂದ ಈಗಾಗಲೇ ಮಹಾರಾಷ್ಟ್ರದಲ್ಲಿ ಕಳೆದ ೪ ವರ್ಷಗಳಿಂದ ಬೆಂಬತ್ತುವಿಕೆ ಮಾಡಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಈ ಟ್ರಾವೆಲ್ ಆಪ್‌ಗಳು ಮತ್ತು ಟ್ರಾವೆಲ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕ ಆಂದೋಲನಗಳು ನಡೆಸಲಾಗಿದೆ ಮತ್ತು ದೂರುಗಳನ್ನು ನೀಡಲಾಗಿದೆ; ಅನಂತರ ಅಲ್ಲಿನ ಸರಕಾರ ಕೇವಲ ಅಪ್ಲಿಕೇಶನ್ ಅನ್ನು ಮುಚ್ಚುವ ಅಧಿಸೂಚನೆಯನ್ನು ನೀಡಿದೆ. ಕೋಟಿಗಟ್ಟಲೆ ಪ್ರಯಾಣಿಕರನ್ನು ಲೂಟಿ ಮಾಡುವ ಈ ಅಕ್ರಮ ಅಗ್ರಿಗೇಟರ್ ಆಪ್ ವಿರುದ್ಧ ಈ ಕ್ರಮ ಸಾಕಾಗುವುದಿಲ್ಲ.
೨. ರಾಜ್ಯದಲ್ಲಿ ಈ ಕಂಪನಿಗಳ ಭಾರಿ ಲೂಟಿಯ ಬಗ್ಗೆ ವಿಶೇಷ ಲೆಕ್ಕ ಪರಿಶೋಧನೆ ನಡೆಸಿ, ಈ ಕಂಪನಿ ಗಳಿಗೆ ಭಾರೀ ಆರ್ಥಿಕ ದಂಡ ವಿಧಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
೩. ‘ಮೋಟಾರು ವಾಹನ ಕಾಯಿದೆ ೧೯೮೮’ ರ ಸೆಕ್ಷನ್ ೯೩ (೧) ರ ನಿಬಂಧನೆಗಳ ಪ್ರಕಾರ, ಆಪ್ ಮತ್ತು ವೆಬ್‌ಸೈಟ್‌ಗಳ ಮೂಲಕ ಪ್ರಯಾಣಿಕರ ಸಾರಿಗೆ ವ್ಯವಹಾರವನ್ನು ನಡೆಸಲು ಕೇಂದ್ರ ಸರಕಾರದ ಮಾರ್ಗಸೂಚಿಗಳಿಗೆ ಒಳಪಟ್ಟಿರುವ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಅಗತ್ಯವಿದೆ; ಆದರೆ, ಈ ರೀತಿ ಮಾಡದೆ ವರ್ಷಗಳೇ ಅಕ್ರಮ ವ್ಯವಸಾಯ ನಡೆಯುತ್ತಿದೆ.
೪. ಮೂಲತಃ ಈ ಅಗ್ರಿಗೇಟರ್ ಅಪ್ಲಿಕೇಶನ್‌ಗಳು ರಾಜ್ಯದಲ್ಲಿ ಮಾತ್ರವಲ್ಲ; ದೇಶಾದ್ಯಂತ ವಂಚನೆ ಮಾಡಿವೆ. ಹೀಗಾಗಿ ದೇಶಾದ್ಯಂತ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.
೫. ಅಲ್ಲದೇ ಇದುವರೆಗೆ ಅಕ್ರಮವಾಗಿ ಎಷ್ಟು ರೂಪಾಯಿ ಸಂಗ್ರಹಿಸಲಾಗಿದೆ ? ಇದರಲ್ಲಿ ಇನ್ನು ಯಾರು ಭಾಗಿಯಾಗಿದ್ದಾರೆ ? ಇದು ‘ಮಹದೇವ್ ಬೆಟ್ಟಿಂಗ್ ಆಪ್’ನಂತಹ ದೊಡ್ಡ ಮಟ್ಟದ ಹಗರಣವೇ ? ಈ ಪ್ರಕರಣವನ್ನು ಸಿಬೈ ಹಾಗೂ ಜಾರಿ ನಿರ್ದೇಶನಾಲಯದಿಂದ (‘ಈ.ಡಿ.’ಯಿಂದ) ಆಳವಾಗಿ ತನಿಖೆಯನ್ನು ನಡೆಸಬೇಕು ನಡೆಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ಈ ವೇಳೆ ಆಗ್ರಹಿಸುತ್ತಿದ್ದೇವೆ.
ಸಾರಿಗೆ ಸಚಿವ ಶ್ರೀ. ರಾಮಲಿಂಗಾ ರೆಡ್ಡಿ ಇವರಿಗೆ ಮನವಿ ನೀಡುತ್ತಿರುವ (ಎಡದಿಂದ) ಶ್ರೀ. ಮೋಹನ ಗೌಡ, ಶ್ರೀ. ರಘುನಾಥ ನಾವುಡ, ನ್ಯಾಯವಾದಿ ಶಕುಂತಲಾ ಶೆಟ್ಟಿ, ಡಾ. ಬಿ.ಎನ್. ಮಹೇಶ ಕುಮಾರ್, ಶ್ರೀ. ವಿನಯ, ಶ್ರೀ. ಮಲ್ಲಿಕಾರ್ಜುನ್ ಮತ್ತು ಶ್ರೀ. ಶಿವರಾಮ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಪ್ರಕರಣಗಳಲ್ಲಿ ಸಮಾನ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಆಗ್ರಹ!
ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ಬಳಿಕ ಹುಸೇನ್ ಶೇಖ್ ಕ್ಷಮೆಯಾಚನೆ : Hussain Sheikh Apology
ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಆದೇಶ!
ಫಲಕ ಪ್ರಸಿದ್ಧಿಯ ಮಾಧ್ಯಮದಿಂದ ಕರ್ನಾಟಕ ರಾಜ್ಯದಲ್ಲಿ ನಡೆದ ಪರಿಣಾಮಕಾರಿ ಧರ್ಮಪ್ರಸಾರ !
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!