ಹಿಂದೂ ಜನಜಾಗೃತಿ ಸಮಿತಿಯ ನಿರಂತರ ಬೆಂಬೆತ್ತುವಿಕೆಗೆ ದೊರೆತ ದೊಡ್ಡ ಯಶಸ್ಸು!
ಸೋಲಾಪುರದ ಸರಕಾರಿ ಮಹಿಳಾ ‘ಐಟಿಐ’ನಲ್ಲಿನ ‘ಆಡಳಿತಾತ್ಮಕ ಜಿಹಾದ್’ ಪ್ರಕರಣ

ಮುಂಬಯಿ, ಜುಲೈ ೩ (ವಾರ್ತೆ) – ಸೋಲಾಪುರದ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (‘ಐಟಿಐ’ನಲ್ಲಿ) ಸುಮಾರು ೧೫೦ ಹಿಂದೂ ವಿದ್ಯಾರ್ಥಿನಿಯರು ಮತ್ತು ೯ ಹಿಂದೂ ಸಿಬ್ಬಂದಿಗಳಿಗೆ ಆಡಳಿತಾತ್ಮಕ ಜಿಹಾದ್ ಮತ್ತು ಸಾಂಸ್ಥಿಕ ದೌರ್ಜನ್ಯದ ಮೂಲಕ ಮಾನಸಿಕ, ದೈಹಿಕ, ಆರ್ಥಿಕ ಹಾಗೂ ಧಾರ್ಮಿಕ ಕಿರುಕುಳ ನೀಡಲಾಗುತ್ತಿದೆ. ಈ ಪ್ರಕರಣದ ಕುರಿತು ವಿಶೇಷ ತನಿಖಾ ದಳದ (‘ಎಸ್.ಐ.ಟಿ.’) ಮೂಲಕ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆಯ ವಿಧಾನ ಪರಿಷತ್ ಶಾಸಕಿ ಹಾಗೂ ಮುಖ್ಯ ಸಚೇತಕಿ (ಚೀಫ್ ವಿಪ್) ಪ್ರೊ. ಡಾ. ಮನೀಷಾ ಕಾಯಂದೆ ಅವರು ಮುಖ್ಯಮಂತ್ರಿ ಹಾಗೂ ಗೃಹಸಚಿವ ದೇವೇಂದ್ರ ಫಡ್ನವೀಸ್ ಅವರಲ್ಲಿ ಒತ್ತಾಯಿಸಿದ್ದಾರೆ.
Big win for @HinduJagrutiOrg's follow-up efforts!
Maharashtra CM has intervened in the "Administrative Jihad" case at the Government Women's ITI in Solapur, ordering an immediate investigation and strict action. pic.twitter.com/yQa4iL1E5d
— Sanatan Prabhat (@SanatanPrabhat) July 4, 2026
ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೋಲಾಪುರ ಪೊಲೀಸ್ ಕಮಿಷನರ್‌ಗೆ ಆದೇಶ ನೀಡಿದ್ದಾರೆ.

ಈ ಇಡೀ ಪ್ರಕರಣದ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಸತತವಾಗಿ ಬೆಂಬೆತ್ತಿ ಪ್ರಯತ್ನ ನಡೆಸಿತ್ತು. ಸಮಿತಿಯು ಲಭ್ಯವಿರುವ ಪುರಾವೆಗಳು, ಸಂತ್ರಸ್ತ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿಯ ದೂರುಗಳು ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಪ್ರೊ. ಡಾ. ಮನೀಷಾ ಕಾಯಂದೆ ಅವರಿಗೆ ವಿವರವಾದ ಮನವಿಯನ್ನು ಸಲ್ಲಿಸಿತ್ತು.
ಪ್ರೊ. ಡಾ. ಮನೀಷಾ ಕಾಯಂದೆ ಅವರು ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ವಿವರವಾದ ಮನವಿ ಪತ್ರವನ್ನು ಸಲ್ಲಿಸಿದರು. ಸರಕಾರಿ ಮಹಿಳಾ ಐಟಿಐನ ಮುಸ್ಲಿಂ ಗ್ರೂಪ್ ಇನ್ಸ್ಟ್ರಕ್ಟರ್ (ಗಟನಿರ್ದೇಶಕರು) ಶ್ರೀಮತಿ ರಮೇಜಾ ಕಂಪ್ಲಿ ಅವರ ಕಾರ್ಯವೈಖರಿಯಿಂದಾಗಿ ಸಂಸ್ಥೆಯಲ್ಲಿ ಕಲಿಯುತ್ತಿರುವ ೧೫೦ ಹಿಂದೂ ವಿದ್ಯಾರ್ಥಿನಿಯರು ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ೯ ಹಿಂದೂ ಸಿಬ್ಬಂದಿಗಳಿಗೆ ಸಾಂಸ್ಥಿಕ ಮತ್ತು ಆಡಳಿತಾತ್ಮಕವಾಗಿ ಮಾನಸಿಕ, ದೈಹಿಕ, ಆರ್ಥಿಕ ಹಾಗೂ ಧಾರ್ಮಿಕ ಕಿರುಕುಳ ನೀಡಲಾಗುತ್ತಿದೆ ಎಂದು ಈ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಅವರಿಗೆ ವಿವಿಧ ರೀತಿಯಲ್ಲಿ ತೊಂದರೆ ನೀಡಿ ಸಂಸ್ಥೆಯಿಂದ ಹೊರಹೋಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದೂ ಆರೋಪಿಸಲಾಗಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !