Bhojshala Survey : ಧಾರ (ಮಧ್ಯಪ್ರದೇಶ)ನ ಭೋಜಶಾಲೆಯ ವೈಜ್ಞಾನಿಕ ಸಮೀಕ್ಷೆ ಇಂದಿನಿಂದ ಆರಂಭ !

ಎಪ್ರಿಲ್ 29 ರ ವರಗೆ ಸಮೀಕ್ಷೆಯ ವರದಿ ಸಲ್ಲಿಕೆ !

ಧಾರ (ಮಧ್ಯಪ್ರದೇಶ) – ಇಲ್ಲಿಯ ಭೋಜಶಾಲೆಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಸಲು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಇಂದೂರು ವಿಭಾಗೀಯಪೀಠವು ಆದೇಶ ನೀಡಿದೆ. ಇದರ ಹಿನ್ನೆಲೆಯಲ್ಲಿ ಇಂದು, ಮಾರ್ಚ್ ೨೨ ರಿಂದ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ ತಂಡ ಭೋಜಶಾಲೆಯ ಸಮೀಕ್ಷೆ ಆರಂಭಿಸಲಿದೆ. ಸಮೀಕ್ಷೆಯ ಕೆಲಸ ನಿಲ್ಲಬಾರದು ಅದಕ್ಕಾಗಿ ಪುರಾತತ್ವ ಇಲಾಖೆಯಿಂದ ಧಾರ ಆಡಳಿತ ಮತ್ತು ಪೊಲೀಸ ಅಧಿಕಾರಿ ಇವರಿಗೆ ಸಮೀಕ್ಷೆಯ ಮೊದಲು ಸಾಕಷ್ಟು ರಕ್ಷಣೆ ನೀಡಲು ಹೇಳಿದ್ದಾರೆ. ಹಿಂದೂ ಸಂಘಟನೆಯ ಅಭಿಪ್ರಾಯದ ಪ್ರಕಾರ, ಭೋಜಶಾಲೆಯಲ್ಲಿರುವ ಕಮಲ ಮೌಲಾನ ಮಸೀದಿ ಇದು ಶ್ರೀ ಸರಸ್ವತಿ ದೇವಿಯ ಮಂದಿರ ಇತ್ತು. ರಾಜಾ ಭೋಜರು ೧೦೩೪ ರಲ್ಲಿ ಈ ಭೋಜಶಾಲೆಯನ್ನು ಸಂಸ್ಕೃತ ಅಧ್ಯಯನಕ್ಕಾಗಿ ಕಟ್ಟಿದ್ದರು. ನಂತರ ಮೊಘಲರು ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿ ಮಸೀದಿ ಕಟ್ಟಿದರು.

೧. ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿ (ಪೂ.) ಹರಿಶಂಕರ ಜೈನ್ ಇವರ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ಇಂದ ಭೋಜಶಾಲೆಯ ವೈಜ್ಞಾನಿಕ ಸಮೀಕ್ಷೆಗಾಗಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಅದರ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಇಂದೂರ ವಿಭಾಗೀಯಪೀಠದಿಂದ ವೈಜ್ಞಾನಿಕ ಸಮೀಕ್ಷೆ ನಡೆಸುವ ಆದೇಶ ನೀಡಿತ್ತು.

೨. ನ್ಯಾಯಾಲಯವು ತನ್ನ ಆದೇಶದಲ್ಲಿ, ‘ಕಾರ್ಬನ್ ಡೇಟಿಂಗ್ ‘ ಪದ್ಧತಿಯಿಂದ ಪರಿಸರದ ಸವಿಸ್ತಾರವಾಗಿ ವೈಜ್ಞಾನಿಕ ಪರಿಶೀಲನೆ ನಡೆಸಬೇಕು, ಅದರಿಂದ ಭೂಮಿಯ ಮೇಲಿನ ಮತ್ತು ಕೆಳಗಿನ ಎರಡು ಸಂರಚನೆ ಎಷ್ಟು ಹಳೆಯದಾಗಿದೆ ಮತ್ತು ಅವು ಎಷ್ಟು ಪುರಾತನವಾಗಿವೆ ಇದನ್ನು ನಿಶ್ಚಯಿಸಬಹುದು.
ಹಾಗೂ ಎರಡು ಪಕ್ಷದ ಇಬ್ಬರು ಪ್ರತಿನಿಧಿಯ ಉಪಸ್ಥಿತಿಯಲ್ಲಿ ಸಮೀಕ್ಷೆಯ ಕಾರ್ಯಾಚರಣೆ ನಡೆಯಬೇಕು ಮತ್ತು ಅದರ ಚಿತ್ರೀಕರಣ ನಡೆಸಬೇಕು, ಎಂದೂ ಕೂಡ ನ್ಯಾಯಾಲಯವು ಹೇಳಿದೆ. ಈಗ ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ ೨೯ ರಂದು ನಡೆಯುವುದು ಅದರ ಮೊದಲು ಸಮೀಕ್ಷೆಯ ವರದಿ ಪ್ರಸ್ತುತಪಡಿಸಲು ನ್ಯಾಯಾಲಯ ಆದೇಶ ನೀಡಿದೆ.

ಭೋಜ ಶಾಲೆಯ ಇತಿಹಾಸ

೧. ಒಂದು ಸಾವಿರ ವರ್ಷಗಳ ಹಿಂದೆ ಧಾರ ಇಲ್ಲಿ ಪರಮಾರ ವಂಶದ ರಾಜ್ಯವಿತ್ತು. ರಾಜಾ ಭೋಜರು ೧೦೦೦ ರಿಂದ ೧೦೫೫ ವರೆಗೆ ರಾಜ್ಯ ಆಳಿದರು. ರಾಜಾ ಭೋಜ ಇವರು ಶ್ರೀ ಸರಸ್ವತಿ ದೇವಿಯ ಪರಮ ಭಕ್ತರಾಗಿದ್ದರು. ಅವರು ೧೦೩೪ ರಲ್ಲಿ ಇಲ್ಲಿ ಒಂದು ಮಹಾವಿದ್ಯಾಲಯ ಸ್ಥಾಪನೆ ಮಾಡಿದರು, ನಂತರ ಅದು ‘ಭೋಜಶಾಳಾ’ ಎಂದು ಗುರುತಿಸಲಾಯಿತು. ಹಿಂದುಗಳು ಕೂಡ ಇದನ್ನು ಸರಸ್ವತಿಯ ದೇವಸ್ಥಾನ ಎಂದೇ ನಂಬಿದ್ದಾರೆ.

೨. ೧೩೦೫ ರಲ್ಲಿ ಅಲ್ಲಾಉದ್ದಿನ್ ಖಿಲ್ಜಿಯು ಭೋಜ ಶಾಲೆಯನ್ನು ಧ್ವಂಸಗೊಳಿಸಿ ೧೪೦೧ ರಲ್ಲಿ ದಿಲಾವರ ಖಾನ್ ಘೋರಿ ಇವನು ಭೋಜಶಾಲೆಯ ಒಂದು ಭಾಗದಲ್ಲಿ ಮಸೀದಿ ಕಟ್ಟಿದನು. ೧೫೧೪ ರಲ್ಲಿ ಮಹಮೂದ್ ಶಹಾ ಖಿಲ್ಜಿಯು ಇನ್ನೊಂದು ಭಾಗದಲ್ಲಿ ಕೂಡ ಮಸೀದಿ ಕಟ್ಟಿದನು.

೩. ೧೮೭೫ ರಲ್ಲಿ ಇಲ್ಲಿ ಉತ್ಖನನ ನಡೆಯಿತು. ಈ ಉತ್ಖನನದಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿ ದೊರೆಯಿತು. ಮೇಜರ್ ಕಿನಕೆಡ್ ಎಂಬ ಬ್ರಿಟಿಷ್ ನು ಈ ಮೂರ್ತಿಯನ್ನು ಲಂಡನ್ ಗೆ ತೆಗೆದುಕೊಂಡು ಹೋದನು. ಈಗ ಈ ಮೂರ್ತಿ ಲಂಡನ್‌ನ ಸಂಗ್ರಹಾಲಯದಲ್ಲಿ ಇದೆ. ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಅರ್ಜಿಯಲ್ಲಿ ಈ ಮೂರ್ತಿ ಲಂಡನ ನಿಂದ ಭಾರತಕ್ಕೆ ಮತ್ತೆ ವಾಪಸ್ ತರಲು ಮನವಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಯಾವ ಸ್ಥಳದಲ್ಲಿ ಮುಸಲ್ಮಾನ ದಾಳಿಕೋರರು ಹಿಂದೂಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ಕಟ್ಟಿದ್ದಾರೆ, ಆ ಎಲ್ಲಾ ಜಾಗಗಳ ವೈಜ್ಞಾನಿಕ ಸಮೀಕ್ಷೆ ನಡೆಸಲು ಕೇಂದ್ರ ಸರಕಾರವೇ ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !