Krishna Janmabhoomi Case : ಹಿಂದೂಗಳಿಗೆ ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಕೃಷ್ಣಕೂಪದ ಪೂಜೆ ಮಾಡಲು ಅನುಮತಿ !

ಮಥುರಾ (ಉತ್ತರಪ್ರದೇಶ) – ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಈದ್ಗಾ ಮಸಿದಿಯ ಹತ್ತಿರದ ಕೃಷ್ಣಕೂಪ(ಬಾವಿಯ) ಪೂಜೆಯ ಮಾಡಲು ಹಿಂದೂಗಳಿಗೆ ಅನುಮತಿ ಸಿಕ್ಕಿದೆ. ಈ ಮಾಹಿತಿಯನ್ನು ಮುಖ್ಯ ಹಿಂದೂ ಪಕ್ಷದ ಪರವಾಗಿರುವ `ಶ್ರೀಕೃಷ್ಣಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ’ ನ ಅಧ್ಯಕ್ಷ ಮತ್ತು ಸಿದ್ಧಪೀಠ ಮಾತಾ ಶಾಕುಂಭರಿ ಪೀಠಾಧೀಶ್ವರ ಭೃಗುವಂಶಿ ಆಶುತೋಷ ಪಾಂಡೇಯ ಇವರು `ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡಿದರು.

ಮಾರ್ಚ 9 ರಂದು ಪಾಂಡೇಯ ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪತ್ರ ಬರೆದು, ಪರಂಪರೆಯಿಂದ ಬಂದ ಪದ್ಧತಿಯಲ್ಲಿ ಶೀತಲಾ ಅಷ್ಟಮಿಯ ದಿನದಂದು ಅಲ್ಲಿಯ ಕೃಷ್ಣಕೂಪದ ಪೂಜೆ ಮಾಡಲು ಹಿಂದೂ ಮಹಿಳೆಯರಿಗೆ ಅನುಮತಿ ಸಿಗಬೇಕು ಹಾಗೆಯೇ ಇಲ್ಲಿ ಮುಸಲ್ಮಾನರಿಂದ ಯಾವುದೇ ವಿರೋಧ ವ್ಯಕ್ತವಾಗಬಾರದಂತಹ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಹಿರಿಯ ಪೊಲೀಸ ಆಯುಕ್ತರಿಗೆ ಸಂಬಂಧಿಸಿದ ವಿಷಯವನ್ನು ಪರಿಶೀಲಿಸಿ ಕ್ರಮ ಕೈಕೊಳ್ಳುವಂತೆ ನಿರ್ದೇಶನ ನೀಡಿದರು. ಅದಕ್ಕೆ ಪೊಲೀಸ ಆಯುಕ್ತರು ಹಿಂದೂಗಳಿಗೆ ಪೂಜೆ ಮಾಡಲು ಸಾಧ್ಯವಾಗುವಂತೆ ವ್ಯವಸ್ಥೆಯನ್ನು ಮಾಡಿದ್ದು, ಪೂಜೆ ಮಾಡಲು ಅನುಮತಿ ನೀಡಿದೆ.