ಹೋಮದ ಹೊಗೆಯಿಂದ ರೋಗಾಣುಗಳಿಂದ ಉಂಟಾಗುವ ಕಾಯಿಲೆಗಳ ಮೇಲೆ ಆಗುವ ಪರಿಣಾಮದ ಬಗ್ಗೆ ಸಂಶೋಧನೆ !

ಹವನ ಸಾಮಗ್ರಿಗಳಿಗಾಗಿ ಪೇಟೆಂಟ್ ಪಡೆದ ಅಜ್ಮೇರ (ರಾಜಸ್ಥಾನದ) ಕಾಲೇಜು

ಅಜಮೇರ (ರಾಜಸ್ಥಾನ) – ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ‘`ಹವನ’ಗಳ ಬಗ್ಗೆ ಸಂಶೋಧನೆ ನಡೆಸಿದ್ದು ಹವನಕ್ಕೆ ಸಂಬಂಧಿಸಿದ ಸಾಮಗ್ರಿಗಳಿಗಾಗಿ ಪೇಟೆಂಟ್ ತೆಗೆದುಕೊಂಡಿದೆ. ಅಜ್ಮೇರನ ಜವಾಹರಲಾಲ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದಿಂದ ‘ಹವನದ ಔಷಧೀಯ ಹೊಗೆಯಿಂದ ವಿಷಾಣುಗಳ ಮೇಲಾಗುವ ಪರಿಣಾಮ’ ಈ ವಿಷಯದ ಬಗ್ಗೆ ಮೊದಲ ಬಾರಿಗೆ ಸಂಶೋಧನೆ ನಡೆಸಲಾಯಿತು. ಈ ವಿಭಾಗದ ಮುಖ್ಯಸ್ಥರಾಗಿರುವ ಡಾ. ವಿಜಯಲತಾ ರಸ್ತೋಗಿಯವರು ಮಾತನಾಡಿ, ಹವನ ಸಾಮಗ್ರಿ ಮತ್ತು ಔಷಧಿಗಳ ಪೇಟೆಂಟ್ ಪಡೆದುಕೊಳ್ಳಲಾಗಿದೆ. ಬ್ಯಾಕ್ಟೀರಿಯಾದಿಂದ ಉದ್ಭವಿಸುವ ರೋಗಗಳನ್ನು ದೂರಗೊಳಿಸಲು `ಹವನ’ ಪ್ರಭಾವಿಯಾಗಿದೆ. ಈಗ ಇದರ ಬಗ್ಗೆ ಸವಿಸ್ತಾರ ಸಂಶೋಧನೆ ನಡೆಯಲಿದೆ.

1. ‘ಹವನ’ದ ಹೊಗೆ ಮತ್ತು ವಾಸನೆ ಬ್ಯಾಕ್ಟೀರಿಯಾದಿಂದಾಗುವ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹವನ ಸಾಮಗ್ರಿ ಮತ್ತು ಔಷಧಿಯ ಸಹಾಯದಿಂದ ಮಾಡುವ ಹವನದಿಂದ ಅಕ್ಕಪಕ್ಕದ ವಾತಾವರಣದಲ್ಲಿರುವ ಬ್ಯಾಕ್ಟೀರಿಯಾ ನಷ್ಟಗೊಳ್ಳುತ್ತವೆ. ಅದರೊಂದಿಗೆ ನಮ್ಮ ರೋಗಪ್ರತಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂದು ಹವನ’ದ ಮೇಲೆ ನಡೆದ ಸಂಶೋಧನೆಯಲ್ಲಿ ಬಹಿರಂಗವಾಗಿದೆ.

2. ಯಜ್ಞೋಪಚಾರವು ಭಾರತದ ಅತ್ಯಂತ ಪ್ರಾಚೀನ ಒಂದು ವೈದ್ಯಕೀಯ ಪದ್ಧತಿಯಾಗಿದ್ದು, ವೇದಗಳಲ್ಲಿಯೂ ಅದರ ಬಗ್ಗೆ ವಿವರಣೆ ಕಂಡು ಬಂದಿದೆ. ಇದು ಸೂಕ್ಷ್ಮ ರೂಪದಲ್ಲಿ ಕಾರ್ಯ ಮಾಡುತ್ತದೆ. ಅದರ ಔಷಧಿಗಳು ದೇಹದೊಳಗೆ ಪ್ರವೇಶಿಸಿದ ನಂತರ, ಅದು ಹೆಚ್ಚು ಪರಿಣಾಮ ಬೀರುತ್ತದೆ. ವಿಶೇಷ ಮಂತ್ರಗಳಳು ಹಾಗೂ ಔಷಧೀಯ ಸಾಮಗ್ರಿಗಳೊಂದಿಗೆ ಹವನವನ್ನು ಮಾಡಿದಾಗ, ಹವನದ ಹೊಗೆಯು ನಮ್ಮ ರಂಧ್ರಗಳು, ಬಾಯಿ ಮತ್ತು ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ಲಾಭವಾಗಿ ರೋಗಗಳಿಂದ ಮುಕ್ತಿ ಸಿಗುತ್ತದೆ.

3. ಟಿಬೆಟ್‌ನಲ್ಲಿ ಇಂದಿಗೂ ಸಹ ಶೀತ, ಮೈಗ್ರೇನ್, ತಲೆನೋವು, ಅಪಸ್ಮಾರ, ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ನಿವಾರಣೆಗೆ ಔಷಧೀಯ ಗಿಡಗಳ ಹೊಗೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಯಜ್ಞದ ಹೊಗೆಯಿಂದ ಮನೆಯ ವಾತಾವರಣವು ಶುದ್ಧವಾಗುತ್ತದೆ ಮತ್ತು ಸೊಳ್ಳೆಗಳು ಮಾತ್ರವಲ್ಲದೇ ಗಾಳಿಯಲ್ಲಿ ಹರಡುವ ಶೇ. 90 ರಷ್ಟು ಜಂತುಗಳು ನಾಶವಾಗುತ್ತವೆ. ಇಂದಿಗೂ ಸಹ ಪ್ರಾಚೀನ ತೀರ್ಥಕ್ಷೇತ್ರಗಳಲ್ಲಿರುವ ಅನೇಕ ಆಶ್ರಮಗಳಲ್ಲಿ ಪ್ರತಿದಿನ ಯಜ್ಞ ನಡೆಸಲಾಗುತ್ತದೆ.

ಸಂಪಾದಕೀಯ ನಿಲುವು

ಪ್ರಾಚೀನ ಕಾಲದಲ್ಲಿನ ಋಷಿ- ಮುನಿಗಳು ಈ ವಿಷಯದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಈಗ ಭಾರತದಲ್ಲಿಯೂ ಕೂಡ ಇದರ ಸಂಶೋಧನೆ ನಡೆಯುತ್ತಿರುವುದು ಉತ್ತಮ ವಿಷಯವಾಗಿದೆ. ಸರಕಾರವು ಕೂಡ ಇಂತಹ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವುದು ಆವಶ್ಯಕವಾಗಿದೆ.