ಸನಾತನ ಸಂಸ್ಥೆಯ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇರುವರು ಎಲ್ಲೆಡೆ ಸದಾ !

ಗುರುದೇವರೇ ತಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

ಈ ಪೃಥ್ವಿಯ ಮೇಲೆ ಕಳೆದು ಹೋದ ಜೀವಿಗಳಲ್ಲಿ ನಾವೂ ಒಬ್ಬರಾಗಿದ್ದೆವು. ನಾವು ಇಂತಹ ಮಾಯಾ ಜಗತ್ತಿನಲ್ಲಿ ಆನಂದದ ಹುಡುಕಾಟದಲ್ಲಿದ್ದೆವು. ಪ್ರತಿಯೊಬ್ಬ ವ್ಯಕ್ತಿಯು ಆನಂದದ ಹುಡುಕಾಟದಲ್ಲಿ ಇರುತ್ತಾನೆ, ಆದರೆ ‘ಆನಂದದ ಮೂಲವು ಯಾವುದರಲ್ಲಿದೆ ? ಇದರ ಅರಿವನ್ನು ಗುರುದೇವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸನಾತನ ಸಂಸ್ಥೆಯ ಮಾಧ್ಯಮದಿಂದ ತಿಳಿಸಿದ್ದಾರೆ. ಆರಂಭದಲ್ಲಿ ಸತ್ಸಂಗ, ಅಭ್ಯಾಸವರ್ಗ, ಸಾರ್ವಜನಿಕ ಪ್ರವಚನದ ಮೂಲಕ ನೀವು ಸಾಧಕರಿಗೆ ಮನುಷ್ಯ ಜೀವನದ ಉದ್ದೇಶದ ಅರಿವನ್ನು ಮೂಡಿಸಿದಿರಿ. ನಂತರ ಅವರು ಈಶ್ವರಪ್ರಾಪ್ತಿ ಅಥವಾ ಆನಂದ ಪ್ರಾಪ್ತಿಯತ್ತ ಮುನ್ನಡೆಯತೊಡಗಿದರು. ಅಧ್ಯಾತ್ಮವನ್ನು ಸಮಾಜದವರೆಗೆ ತಲುಪಿಸಲು ಸನಾತನ ಸಂಸ್ಥೆಯ ಮುಖಾಂತರ ಅವರು ಕಾರ್ಯವನ್ನು ಮಾಡಿದರು. ಸಮರ್ಥ ರಾಮದಾಸ ಸ್ವಾಮಿಯವರು ಹೇಳುವಂತೆ, ‘ನನಗೆ ಏನೇನು  ತಿಳಿದಿದೆಯೋ ಅದನ್ನು ಇತರರಿಗೆ ತಿಳಿಸಬೇಕು ಎಂಬ ವಚನಕ್ಕನುಸಾರ ಸಮಾಜಕ್ಕೆ ಅಧ್ಯಾತ್ಮಶಾಸ್ತ್ರವನ್ನು  ತಿಳಿಸುವ ಸಲುವಾಗಿ ಸಾಧಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸತ್ಸಂಗಗಳನ್ನು ಪ್ರಾರಂಭಿಸಿದರು ಜೊತೆಗೆ ಪ್ರವಚನಗಳನ್ನು ತೆಗೆದುಕೊಂಡರು. ಅದರೊಂದಿಗೆ ‘ಸನಾತನ ಪ್ರಭಾತ ವಾರ್ತಾಪತ್ರಿಕೆ, ಅಧ್ಯಾತ್ಮ, ಧರ್ಮ, ರಾಷ್ಟ್ರ ಮೊದಲಾದ ವಿಷಯಗಳ ಕುರಿತು ಸಾವಿರಾರು ಪುಸ್ತಕಗಳ ರಚನೆ, ಸನಾತನ ಆಶ್ರಮ ಇತ್ಯಾದಿಗಳ ಮೂಲಕ ಸನಾತನ ಸಂಸ್ಥೆಯ ಅಧ್ಯಾತ್ಮ ಪ್ರಸಾರದ ಕಾರ್ಯ ಆರಂಭವಾಯಿತು. ಅಧ್ಯಾತ್ಮ ಪ್ರಸಾರದ ಈ ಕಾರ್ಯವು ಈಗ ಎಷ್ಟು ವ್ಯಾಪಕವಾಗಿದೆಯೆಂದರೆ, ಅದರ ಬಗ್ಗೆ ತಿಳಿದ ನಂತರ, ಅನೇಕ ಸಂತರು, “ಇಂತಹ ಕಾರ್ಯವನ್ನು ಕೇವಲ ಅವತಾರೀ ಜೀವವೇ ಮಾಡಬಲ್ಲದು ಎಂದು ಉದ್ಗರಿಸಿದ್ದಾರೆ. ತದನಂತರ ಜೀವ ನಾಡಿಪಟ್ಟಿಯ ಮಾಧ್ಯಮದಿಂದ ಮಹರ್ಷಿಗಳು ತಮ್ಮ ಅವತಾರತ್ವದ ಕುರಿತು ಸಾಧಕರಿಗೆ ಅರಿವನ್ನು ಮೂಡಿಸಿದರು.

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರೇ, ನೀವು ಸಾಧಕರಿಗೆ ಈಶ್ವರೀ ರಾಜ್ಯದ ಸ್ಥಾಪನೆ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಗುರಿಯನ್ನು ನೀಡಿದಿರಿ. ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ, ನಾಮಜಪ, ಸತ್ಸಂಗ, ಸತ್ಸೇವೆ, ತ್ಯಾಗ, ಪ್ರೀತಿ ಇವುಗಳ ಆಧಾರದಲ್ಲಿ ಮೂಡಿ ಬಂದ  ‘ಗುರುಕೃಪಾಯೋಗವನ್ನು ಸಾಧಕರು ಸಮಾಜದ ಜಿಜ್ಞಾಸುಗಳ ತನಕ ತಲುಪಿಸಿದರು. ಸನಾತನ ಸಂಸ್ಥೆ ಎಂಬ ಹೆಸರು ಈಗ ಎಷ್ಟು ಮಹತ್ವವನ್ನು ಪಡೆ ಕೊಂಡಿದೆಯೆಂದರೆ ‘ಸನಾತನದ ಸಾಧಕರು ಎಂದ ತಕ್ಷಣ ಸಮಾಜದ ಜನರು ಅವರನ್ನು ಗೌರವದಿಂದ ಕಾಣುತ್ತಾರೆ. ಸಾಧಕರ ವ್ಯವಹಾರ ಹಾಗೂ ಅವರ ಚಲನವಲನವನ್ನು ನೋಡಿ ಸಮಾಜವು ಸನಾತನದ ಸಾಧಕರನ್ನು ಗುರುತಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರೇ ಈ ಪವಾಡವು ನಿಮ್ಮದಾಗಿದೆ !  ಸನಾತನ ಸಂಸ್ಥೆಯನ್ನು ಸ್ಥಾಪಿಸಿ ನೀವು ನಮ್ಮ ಮೇಲೆ ಅಪಾರ ಕೃಪೆಯನ್ನು ತೋರಿದ್ದೀರಿ. ನಿಮಗೆ ಅಪೇಕ್ಷಿತವಾದ ರೀತಿಯಲ್ಲಿ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ಏಕೈಕ ತಳಮಳವು ನಮ್ಮಲ್ಲಿರಲಿ. ಈ ಘೋರ ಕಲಿಯುಗದಲ್ಲಿ ನಾವು ಸನಾತನ ಸಂಸ್ಥೆಯ ಸಂಪರ್ಕಕ್ಕೆ ಬಂದೆವು ಮತ್ತು ನಮಗೆ ಸಾಧನೆಯನ್ನು ಮಾಡುವ  ಸದ್ಬುದ್ಧಿ ಬಂದಿರುವುದು ಇದು ನಮ್ಮ ಮೇಲೆ ನಿಮ್ಮ ಕೃಪೆಯೇ ಆಗಿದೆ. ಅದಕ್ಕಾಗಿ ಕೃತಜ್ಷತೆಗಳು ‘ಸನಾತನ ಸಂಸ್ಥೆಯು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಒಂದು ರೂಪವಾಗಿದೆ. ‘ಹೆಚ್ಚು ಹೆಚ್ಚು ಜಿಜ್ಞಾಸುಗಳು ಸನಾತನ ಸಂಸ್ಥೆಯೊಂದಿಗೆ ಜೋಡಣೆಯಾಗಲಿ ಮತ್ತು ಅವರ ಸಾಧನೆಗೆ ಪ್ರೇರಣೆ ಸಿಗಲಿ ಎಂದು ಭಗವಾನ್ ಶ್ರೀಕೃಷ್ಣ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಪ್ರಾರ್ಥನೆ !

ಸನಾತನ ಸಂಸ್ಥೆಯ ಎಲ್ಲಾ ಸದ್ಗುರುಗಳು, ಸಂತರು ಮತ್ತು ಸಾಧಕರಿಂದ ಕೃತಜ್ಞತಾಪೂರ್ವಕ ಅರ್ಪಣೆ.