ಭಾರತ ಅಜೇಯವಾಗಲಿ !

ನಮ್ಮ ದೇಶ ಭಾರತವು ಪ್ರತಿಯೊಂದು ಕ್ಷೇತ್ರದಲ್ಲಿ ಉತ್ತರೋತ್ತರ ಪ್ರಗತಿ ಮಾಡಿಕೊಳ್ಳುತ್ತಿದ್ದು ಅದರಲ್ಲಿ ಅದು ಯಶಸ್ವಿಯೂ ಆಗುತ್ತಿದೆ. ಎಲ್ಲ ಕ್ಷೇತ್ರಗಳ ಜೊತೆಗೆ ರಕ್ಷಣಾ ಕ್ಷೇತ್ರವೂ ಹಿಂದೆ ಉಳಿದಿಲ್ಲ. ರಕ್ಷಣಾ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆ ಅತ್ಯಂತ ಶ್ಲಾಘನೀಯವಾಗಿದೆ. ಇದರಲ್ಲಿಯೇ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ಕಾನಪುರ (ಉತ್ತರಪ್ರದೇಶ) ದಲ್ಲಿ ಶಸ್ತ್ರಾಸ್ತ್ರಗಳ ದೊಡ್ಡ ಕಾರ್ಖಾನೆಯನ್ನು ಸ್ಥಾಪಿಸಿದೆ. ಇದು ದಕ್ಷಿಣ ಏಷ್ಯಾದ ಅತ್ಯಂತ ದೊಡ್ಡ ರಕ್ಷಣಾ ಕಾರ್ಖಾನೆಯಾಗಿದೆ. ಈ ಕಾರ್ಖಾನೆಯ ಮಾಧ್ಯಮದಿಂದ ಭಾರತದ ಭದ್ರತೆಯ ವಿಷಯದಲ್ಲಿ ಎಲ್ಲ ಆವಶ್ಯಕತೆಗಳ ಪೂರೈಕೆ ಆಗಲಿದೆ. ಅದರೊಂದಿಗೆ ನಾವು ಜಾಗತಿಕ ಸ್ತರದ ರಕ್ಷಣೆಯ ಬೇಡಿಕೆಯನ್ನೂ ಪೂರೈಸಲಿದ್ದೇವೆ. ಇಲ್ಲಿ ಕ್ಷಿಪಣಿಗಳನ್ನೂ ತಯಾರಿಸಲಾಗುವುದು. ಒಂದು ಕಾರ್ಖಾನೆಯಿಂದ ಭಾರತಕ್ಕೆ ಜಾಗತಿಕ ಸ್ತರದಲ್ಲಿ ಮಹತ್ವಪೂರ್ಣ ಸ್ಥಾನ ಲಭಿಸಲಿದೆ, ಇದು ನಿಶ್ಚಿತ ! ರಕ್ಷಣಾವಲಯದಲ್ಲಿನ ಈ ಬೆಳವಣಿಗೆಯು ಭಾರತದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಲಿದೆ ಮತ್ತು ಶತ್ರುರಾಷ್ಟ್ರಗಳೂ ಅಂಜುವರು !

ಕಾರ್ಖಾನೆಯ ಉದ್ಘಾಟನೆ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಪಾಕಿಸ್ತಾನದ ತಜ್ಞರು ಇದರಿಂದ ಭಯಭೀತರಾಗಿದ್ದಾರೆ. ‘ಭಾರತ ಈಗ ಏನು ಮಾಡಲಿದೆ’ ಎಂಬುದರ ಭರವಸೆ ಇಲ್ಲ’, ಎಂದು ಅವರು ಹೆದರಿದ್ದಾರೆ. ಪಾಕಿಸ್ತಾನದ ಸದ್ಯದ ಸ್ಥಿತಿ ಸಂಪೂರ್ಣ ಜಗತ್ತಿಗೆ ಗೊತ್ತಿದೆ. ಅಲ್ಲಿನ ಹಣದುಬ್ಬರ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬಡತನವೂ ಬಹಳಷ್ಟು ಹೆಚ್ಚಾಗಿದೆ. ಬಹಳಷ್ಟು ಜನರಿಗೆ ತಿನ್ನಲು-ಕುಡಿಯಲು ಸಿಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ತನ್ನ ನಾಗರಿಕರ ತೊಳಲಾಟವನ್ನು ಪರಿಹರಿಸುವುದರ ಬದಲು ಪಾಕಿಸ್ತಾನದ ಕಣ್ಣು ಮಾತ್ರ ಭಾರತದ ಶಸ್ತ್ರಸಾಮಗ್ರಿಗಳ ಮೇಲಿದೆ. ಪಾಕ್‌ ಮೊದಲು ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು; ಏಕೆಂದರೆ ಯಶಸ್ಸಿನ ಉತ್ತುಂಗದತ್ತ ಮಾರ್ಗಕ್ರಮಿಸುತ್ತಿರುವ ಭಾರತವು ಪಾಕ್‌ನ ಕೈಗೆ ಎಂದಿಗೂ ಸಿಗುವುದಿಲ್ಲ, ಎಂದು ಪಾಕ್‌ ಗಮನದಲ್ಲಿಡಬೇಕು.

ಭಾರತವು ಯುದ್ಧಕ್ಕೆ ಸಿದ್ಧವಾಗಿರುವುದು, ಇದು ಕಾಲದ ಆವಶ್ಯಕತೆಯಾಗಿದೆ; ಏಕೆಂದರೆ ಭಾರತದ ಭೂಮಿಯನ್ನು ಕಬಳಿಸುವ ಅವಕಾಶಕ್ಕಾಗಿ ಪಾಕ್‌ ಮತ್ತು ಚೀನಾದಂತಹ ಶತ್ರು ದೇಶಗಳು ದಾರಿ ಕಾಯುತ್ತಿವೆ. ಅದರಲ್ಲಿಯೂ ಭಾರತವು ಚೀನಾ ವನ್ನು ಎದುರಿಸಬೇಕಾದರೆ, ಶಸ್ತ್ರ ಉತ್ಪಾದನಾ ಕ್ಷೇತ್ರದಲ್ಲಿ ಬಹಳಷ್ಟು ಕಾರ್ಯಸಾಧನೆ ಮಾಡಬೇಕಾಗುತ್ತದೆ. ಯುದ್ಧತಯಾರಿಯ ವಿಷಯದಲ್ಲಿ ೧೦ ವರ್ಷಗಳ ಹಿಂದೆ ಪರಿಸ್ಥಿತಿ ಬೇರೆಯಾಗಿತ್ತು. ಈಗ ಅದು ಬದಲಾಗುತ್ತಿದೆ. ಈಗ ಈ ಕಾರ್ಖಾನೆಗಳ ಮಾಧ್ಯಮದಿಂದ ಸೇನಾದಳಕ್ಕೆ ಇನ್ನಷ್ಟು ಪ್ರೇರಣೆ ಸಿಗುವುದು ಮತ್ತು ಸೈನಿಕರು ಎಲ್ಲ ಶಕ್ತಿಯೊಂದಿಗೆ ಶತ್ರುಗಳನ್ನು ಎದುರಿಸಲು ಸಮರ್ಥರಾಗುತ್ತಾರೆ. ಇದು ಭಾರತದ ಉಜ್ವಲ ಭವಿಷ್ಯವಾಗಿರಲಿದೆ; ಆದರೆ ಶತ್ರುರಾಷ್ಟ್ರ ಪಾಕ್‌ಗೆ ಮಾತ್ರ ಅದು ಸೋಲಾಗುವುದು. ‘ಯದ್ಧವು ಬೇಡವಾಗಿದ್ದರೂ, ಯುದ್ಧ ಸಿದ್ಧತೆಯಿರಲೇ ಬೇಕು’, ಎಂದು ಹೇಳಲಾಗುತ್ತದೆ. ಭಾರತವನ್ನು ಎಲ್ಲ ಕಡೆಗಳಿಂದ ಮುತ್ತಿಗೆ ಹಾಕುತ್ತಿರುವ ಶತ್ರುರಾಷ್ಟ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತವು ಯುದ್ಧದ ತಯಾರಿಯಲ್ಲಿರುವುದು ಕ್ರಮಪ್ರಾಪ್ತವಾಗಿದೆ. ಈ ಎಲ್ಲ ಹಿನ್ನೆಲೆಯನ್ನು ನೋಡಿದರೆ ಕಾನಪುರದಲ್ಲಿ ಸ್ಥಾಪಿಸಲಾದ ಕಾರ್ಖಾನೆಯು ಭಾರತವನ್ನು ಬಲಿಷ್ಠಗೊಳಿಸಿ ಸ್ವಾವಲಂಬನೆಯ ಉತ್ತುಂಗಕ್ಕೆ ಕೊಂಡೊಯ್ಯುವುದು ನಿಶ್ಚಿತ !

ಕಾಂಗ್ರೆಸ್‌ನ ಷಡ್ಯಂತ್ರ !

ಕಳೆದ ೫೪ ವರ್ಷಗಳ ಕಾಲ ಕಾಂಗ್ರೆಸ್‌ ಭಾರತವನ್ನು ಆಳಿತು; ಆದರೆ ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸಲಿಲ್ಲ, ಅಥವಾ ನಾಗರಿಕರನ್ನು ಬಲಿಷ್ಠರನ್ನಾಗಿ ಮಾಡಲಿಲ್ಲ. ಆದುದರಿಂದ ಹೇಡಿತನವೇ ಎಲ್ಲೆಡೆ ಬೆಳೆಯುತ್ತಾ ಹೋಯಿತು. ಪರಿಣಾಮವಾಗಿ ಶಸ್ತ್ರಗಳನ್ನು ಬಳಸುವುದು ದೂರದ ಮಾತಾಯಿತು. ಇದ್ದ ಅಲ್ಪಸ್ವಲ್ಪ ಶಸ್ತ್ರಗಳೂ ಬಳಕೆಯಾಗದೇ ಧೂಳು ತಿನ್ನುತ್ತಾ ಬಿದ್ದಿದ್ದವು. ಎಂದಾದರೂ ಆವಶ್ಯಕತೆ ಅನಿಸಿದರೆ, ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಶಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗದೇ ಇದ್ದುದರಲ್ಲಿಯೇ ತೃಪ್ತಿ ಪಡಲಾಗುತ್ತಿತ್ತು. ಅಂದರೆ ಈ ಸಮಾಧಾನ ತೋರಿಕೆಯದ್ದಾಗಿತ್ತು; ಆದರೆ ಇದರ ಹಿಂದೆ ಕಾಂಗ್ರೆಸ್‌ನ ಷಡ್ಯಂತ್ರ ಬೇರೆಯೇ ಆಗಿತ್ತು. ಶಸ್ತ್ರಗಳ ಉತ್ಪಾದನೆಯ ದೃಷ್ಟಿಯಿಂದ ವಿಚಾರ ಮಾಡಿದ್ದಿದ್ದರೆ, ಶತ್ರುರಾಷ್ಟ್ರ ಗಳೊಂದಿಗೆ ಒಪ್ಪಂದ ಸಾಧ್ಯವಾಗುತ್ತಿರಲಿಲ್ಲ. ಭಯೋತ್ಪಾದಕರಿಗಾಗಿ ರತ್ನಗಂಬಳಿಯನ್ನು ಹಾಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನದಲ್ಲಿಟ್ಟು ಕೂಲಂಕುಷವಾದ ಚರ್ಚೆಯ ನಂತರ ಕಾಂಗ್ರೆಸ್‌ ತನ್ನ ಅಧಿಕಾರದ ನೆಲೆಯಿಂದ ‘ಶಸ್ತ್ರ’ ಈ ಪರಿಕಲ್ಪನೆಯನ್ನೇ ಒದ್ದೋಡಿಸಿತು ಮತ್ತು ತನ್ನ ಸ್ವೇಚ್ಛಾಚಾರವನ್ನು ಮುಂದುವರೆಸಿತು. ಶಸ್ತ್ರಗಳಿಲ್ಲದ ಮನುಷ್ಯನಲ್ಲಿ ತೇಜ, ಬಲ, ಧೈರ್ಯ ಎಲ್ಲಿಂದ ಬರುವುದು ? ‘ಶಸ್ತ್ರ’ದ ಪರಿಕಲ್ಪನೆಯನ್ನು ಹಿಂಸೆಗೆ ಜೋಡಿಸಿ ಅವುಗಳನ್ನು ಇಟ್ಟುಕೊಳ್ಳುವುದು, ಅವುಗಳನ್ನು ಬಳಸುವುದು ಎಂದರೆ ಹಿಂಸೆಯನ್ನು ಸಮರ್ಥಿಸಿದಂತೆ ಆಗುತ್ತದೆ’, ಎಂದು ಹೇಳುತ್ತಾ ಮಹಾತ್ಮರು (?) ಅಹಿಂಸೆಯ ಡೋಸ್‌ನ್ನೇ ಭಾರತೀಯರಿಗೆ ಕುಡಿಸಿದರು. ಇದರಿಂದ ಹಿಂದೂ ನಿಸ್ತೇಜ ಮತ್ತು ದುರ್ಬಲರಾದರು. ಸ್ವಧರ್ಮ, ರಾಷ್ಟ್ರ ಇವುಗಳ ಮೇಲಾಗುವ ಆಘಾತಗಳ ಬಗ್ಗೆಯೂ ಅವರಿಗೆ ಏನೂ ಅನಿಸಲಿಲ್ಲ. ಕಾಂಗ್ರೆಸ್‌ನ ಈ ಷಡ್ಯಂತ್ರ ದುರದೃಷ್ಟವಶಾತ್‌ ಯಶಸ್ವಿಯಾಯಿತು. ಸ್ವಾತಂತ್ರ್ಯದ ನಂತರವೂ ಭಾರತದ ಏಳಿಗೆಯಾಗದಿರಲು ಕಾಂಗ್ರೆಸ್‌ ಪಕ್ಷವೇ ಸಂಪೂರ್ಣ ಹೊಣೆಯಾಗಿದೆ. ಈಗ ಈ ಕಾಂಗ್ರೆಸ್‌ನ ಅಳಿದುಳಿದ ರಾಜಕೀಯ ಅಸ್ತಿತ್ವವನ್ನೂ ಮುಂಬರುವ ಚುನಾವಣೆಯ ಮಾಧ್ಯಮದಿಂದ ಅಳಿಸಿ ಹಾಕುವ ಸಮಯ ಬಂದಿದೆ.

ಇತ್ತೀಚೆಗಷ್ಟೇ ಕರ್ನಾಟಕದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ ಇವರು, ”ಪಾಕಿಸ್ತಾನವು ಭಾಜಪಕ್ಕಷ್ಟೇ ಶತ್ರುರಾಷ್ಟ್ರವಾಗಿದೆ; ಆದರೆ ನಮಗಲ್ಲ’’, ಎಂದು ಹೇಳಿದರು. ಇದರಿಂದಲೇ ಕಾಂಗ್ರೆಸ್‌ಗೆ ಪಾಕ್‌ ಬಗ್ಗೆ ಎಷ್ಟು ಅಕ್ಕರೆ ಇದೆ ? ಎಂದು ಮತ್ತೊಮ್ಮೆ ಬಹಿರಂಗ ವಾಗುತ್ತದೆ. ಈ ಸ್ನೇಹಿತನ ಎಲ್ಲ ಆಸೆಆಕಾಂಕ್ಷೆಗಳನ್ನು ಕಾಂಗ್ರೆಸ್‌ ಇಲ್ಲಿಯವರೆಗೆ ಪೂರೈಸಿದೆ; ಆದರೆ ಇನ್ನು ಮುಂದೆ ಇದರ ಪುನರಾವರ್ತನೆಯಾಗÀದು ! ಏಕೆಂದರೆ ದೇಶವು ಎಚ್ಚರಗೊಂಡಿದೆ.

ಕಳೆದ ಕೆಲವು ದಶಕಗಳಲ್ಲಿ ಚೀನಾದಂತಹ ಕೆಲವು ಬಲಿಷ್ಠ ದೇಶಗಳು ತಮ್ಮ ಸೈನಿಕರ ಸಾಮರ್ಥ್ಯದ ಕಿರುನೋಟವನ್ನು ತೋರಿಸುತ್ತಿದ್ದವು, ದೊಡ್ಡದಾಗಿ ಶಕ್ತಿಪ್ರದರ್ಶನ ಮಾಡುತ್ತಿದ್ದವು; ಆದರೆ ಅದರಲ್ಲಿ ಭಾರತ ದೇಶವು ಬಹಳ ಹಿಂದಿತ್ತು. ‘ಭಾರತ ಯುದ್ಧಸನ್ನದ್ಧವಾಗಿದೆ’, ಎಂದು ತೋರಿಸಲಾಗುತ್ತಿತ್ತು; ಆದರೆ ವಾಸ್ತವ ಚಿತ್ರಣ ತದ್ವಿರುದ್ಧವಾಗಿರುತ್ತಿತ್ತು. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಕಾಲಕಾಲಕ್ಕೆ ಸೇನೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದರು. ಇದರೊಂದಿಗೆ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಪ್ರಬಲ ಘೋಷಣೆಯ ಮೂಲಕ ಮಹತ್ವದ ಹೆಜ್ಜೆಯನ್ನು ಇಟ್ಟರು. ಈ ಸ್ವಾವಲಂಬನೆಯ ಮಾರ್ಗದಲ್ಲಿ ಆಗುತ್ತಿರುವ ಮಹತ್ತರ ಪ್ರಗತಿಯನ್ನು ಈಗ ನಾವು ನೋಡುತ್ತಲೇ ಇದ್ದೇವೆ ! ಡಾ. ಅಬ್ದುಲ್‌ ಕಲಾಮ್‌ ಇವರಿಗೆ ಅಪೇಕ್ಷಿತವಿದ್ದಂತಹ ಭಾರತವು ಈಗ ಸಿದ್ಧವಾಗುತ್ತಿದೆ. ಇದು ಆಹ್ಲಾದಕರವಾಗಿದೆ.

ವಿಜಯಶ್ರೀಯನ್ನು ಎಳೆದು ತರಬೇಕಾಗುವುದು !

ಜಗತ್ತಿನಲ್ಲಿ ಶಸ್ತ್ರಾಸ್ತ್ರ ಸಾಮಾಗ್ರಿಗಳನ್ನು ಉತ್ಪಾದಿಸುವ ಮಹತ್ವದ ೧೫ ಕಾರ್ಖಾನೆಗಳಲ್ಲಿ ೬ ಕಾರ್ಖಾನೆಗಳು ಚೀನಾಗೆ ಸಂಬಂಧಪಟ್ಟಿವೆ. ಚೀನಾವು, ‘೨೦೩೫ ರ ಒಳಗೆ ನಮ್ಮ ಸೇನೆ ‘ಅತ್ಯಂತ ಶಕ್ತಿಶಾಲಿ ಸೇನೆ’ ಎಂದು ಹೆಸರುವಾಸಿಯಾಗುವುದು’ ಎಂದು ಅದು ಬಹಿರಂಗವಾಗಿಯೇ ಜಗತ್ತಿಗೆ ಬೆದರಿಕೆ ನೀಡಿದೆ. ಒಂದು ವೇಳೆ ಚೀನಾ ಇದರಲ್ಲಿ ಯಶಸ್ವಿಯಾದರೆ ಸಂಪೂರ್ಣ ಜಗತ್ತಿಗೆ ಇದು ಅಪಾಯದ ಗಂಟೆಯಾಗಿರಲಿದೆ. ಇದರಿಂದಾಗಿ ಭಾರತವು ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಭಾರತೀಯ ಸೇನೆಯನ್ನು ಆದಷ್ಟ್ಟು ಬೇಗ ಆಧುನಿಕೀಕರಣಗೊಳಿಸುವುದು ಹೇಗೆ ? ಎಂಬುದಕ್ಕಾಗಿ ಪ್ರಯತ್ನಿಸಬೇಕು. ಭಾರತದ ಇತಿಹಾಸ ವಿಜಯದ್ದಾಗಿದೆ. ಭಾರತವು ಯಾವಾಗಲೂ ವಿಜಯಶ್ರೀಯನ್ನು ಎಳೆದು ತಂದಿದೆ. ಆದುದರಿಂದ ‘ಅತ್ಯಂತ ಶಕ್ತಿಶಾಲಿ ಸೇನೆ’ ಯಾಗಿರುವ ಭಾರತವು ವಿಜಯಶ್ರೀಯನ್ನೂ ಸೆಳೆಯುವುದು ಈಗ ಅಪೇಕ್ಷಿತವಿದೆ. ಭಾರತದ ಭೂಮಿ ಆಧ್ಯಾತ್ಮಿಕವಾಗಿರುವುದರ ಜೊತೆಗೆ ಯುದ್ಧಭೂಮಿಯೂ ಆಗಿದೆ. ಆದುದರಿಂದ ಈ ಯುದ್ಧಭೂಮಿಯಲ್ಲಿ ರಕ್ಷಣಾತ್ಮಕ ದೃಷ್ಟಿಯಿಂದಲೂ ಭಾರತದ ಮಹತ್ವವೂ ಅಷ್ಟೇ ಇದೆ. ಒಂದಾನೊಂದು ಕಾಲದಲ್ಲಿ ನಾವು ಕೆಲವೇ ಶಸ್ತ್ರಗಳಿಂದ ಹೋರಾಡುತ್ತಿದ್ದೆವು. ಈಗ ನಮ್ಮ ಬಳಿ ಶಸ್ತ್ರಗಳ ಸುಸಜ್ಜಿತ ಕಾರ್ಖಾನೆಗಳಿವೆ. ಇದು ಕಡಿಮೆ ಕಾಲಾವಧಿಯಲ್ಲಿ ಭಾರತವು ಸಾಧಿಸಿದ ಯಶಸ್ಸೇ ಆಗಿದೆ. ಈ ಯಶಸ್ಸನ್ನು ಇದೇ ರೀತಿ ಸಂಪಾದಿಸುತ್ತಾ ಭಾರತ ಅಜೇಯವಾಗಲಿ, ಇದೇ ನಮ್ಮ ಅಪೇಕ್ಷೆಯಾಗಿದೆ !