ಸನಾತನದ ೭೫ ನೇ ಸಮಷ್ಟಿ ಸಂತರಾದ ಪೂ. ರಮಾನಂದ ಗೌಡ ಇವರು ‘ಸಾಧನಾವೃದ್ಧಿ ಮತ್ತು ಸಾಧಕ ನಿರ್ಮಿತಿ’ ಈ ವಿಷಯದ ಸತ್ಸಂಗದ ಸಂಹಿತೆಯನ್ನು ತಯಾರಿಸಲು ಮಾಡಿದ ಮಾರ್ಗದರ್ಶನ

ಪೂ. ರಮಾನಂದ ಗೌಡ

‘ಸನಾತನ ಸಂಸ್ಥೆಯ ಮೂಲ ಉದ್ದೇಶ ಸಾಧಕರ ಆಧ್ಯಾತ್ಮಿಕ ಉನ್ನತಿ.’ ಆದುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ, ಆಠವಲೆ ಇವರ ಕೃಪೆಯಿಂದ ಈ ವರ್ಷ ಸಾಧಕರಿಗೆ ‘ಸಾಧನಾವೃದ್ಧಿ ಮತ್ತು ಸಾಧಕ ನಿರ್ಮಿತಿ’ ಈ ಧ್ಯೇಯವನ್ನು ನೀಡಲಾಗಿದೆ. ಈ ಧ್ಯೇಯವನ್ನು ಸಾಧಿಸಲು ಕರ್ನಾಟಕದ ಸನಾತನದ ೭೫ ನೇ ಸಮಷ್ಟಿ ಸಂತ ಮತ್ತು ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಜಿಜ್ಞಾಸುಗಳ ಬೌದ್ಧಿಕ ಕ್ಷಮತೆಗನುಸಾರ ಸತ್ಸಂಗ ತೆಗೆದುಕೊಳ್ಳಲು ಸಂಹಿತೆಯನ್ನು ತಯಾರಿಸಲು ನಿರ್ಧರಿಸಿದರು. ಸಂಹಿತೆಯನ್ನು ತಯಾರಿಸಲು ಅವರು ನಮಗೆ ಮಾರ್ಗದರ್ಶನ ಮಾಡಿದರು ಮತ್ತು ನಮ್ಮಿಂದ ವ್ಯಾಪಕ ಚಿಂತನೆಯನ್ನೂ ಮಾಡಿಸಿಕೊಂಡರು. ಅವರು ನಮಗೆ ಮಾಡಿದ ಮಾರ್ಗದರ್ಶನ ಮತ್ತು ಅದರಿಂದ ಕಲಿಯಲು ಸಿಕ್ಕಿದ ಅಂಶಗಳನ್ನು ಇಲ್ಲಿ ನೀಡಲಾಗಿದೆ.

೧. ಸಂಹಿತೆಯನ್ನು ತಯಾರಿಸಲು ಮಾಡಿದ ಮಾರ್ಗದರ್ಶನ

೧ ಅ. ಸಂಹಿತೆಯನ್ನು ತಯಾರಿಸುವಾಗ ಕೃತಿಯ ಸ್ತರದಲ್ಲಿ ಗಮನದಲ್ಲಿಡಬೇಕಾದ ಅಂಶಗಳು

೧. ಯಾರೂ ನಿಮ್ಮನ್ನು ಬೆಂಬೆತ್ತದಂತೆ ಸೇವೆಯನ್ನು ಮಾಡಬೇಕು.

೨. ಸೇವೆಯ ವರದಿಯನ್ನು ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಕೊಡಬೇಕು. ಸೇವೆಯನ್ನು ಸಮಯಮಿತಿಯನ್ನು ಹಾಕಿ ಅದರಲ್ಲಿ ಪೂರ್ಣಗೊಳಿಸಬೇಕು.

೩. ಸೇವೆಯಲ್ಲಿನ ಅಡಚಣೆಗಳನ್ನು ಕೇಳಿಕೊಳ್ಳಬೇಕು. ಸೇವೆಯ ಕಾರ್ಯಪದ್ಧತಿ ಮತ್ತು ಧೋರಣೆಯನ್ನು ನಿಶ್ಚಿತ ಮಾಡಿಕೊಳ್ಳಬೇಕು.

೪. ಉತ್ತಮ ಸಮನ್ವಯವನ್ನು ಮಾಡಿ ಸಂಘಭಾವದಿಂದ ಸೇವೆಯನ್ನು ಮಾಡಬೇಕು.

೧ ಆ. ಸಂಹಿತೆಯ ಭಾಷೆಯ ಸಂದರ್ಭದಲ್ಲಿ ಹೇಳಿದ ಅಂಶಗಳು

೧. ಸಂಹಿತೆಯಲ್ಲಿ ಬರುವ ಕ್ಲಿಷ್ಟಕರ ಶಬ್ದಗಳ ಅರ್ಥವನ್ನು ಹೇಳಬೇಕು. ವಿಷಯ  ಸ್ಪಷ್ಟವಾಗಲು  ಯೋಗ್ಯ ಉದಾಹರಣೆ  ಮತ್ತು ಕಥೆಗಳನ್ನು ಅದರಲ್ಲಿ ಸೇರಿಸಿಕೊಳ್ಳಬೇಕು.

೨. ಸಂಹಿತೆಯು ಶುದ್ಧ, ಸರಳ ಭಾಷೆಯಲ್ಲಿ ಮತ್ತು ಯೋಗ್ಯ ಉದಾಹರಣೆಗಳೊಂದಿಗೆ ಇರಬೇಕು. ಹಾಗೆಯೇ ಸಮಾಜದಲ್ಲಿನ ಜಿಜ್ಞಾಸುಗಳನ್ನು ಒಳ್ಳೆಯ ಸಾಧಕರನ್ನಾಗಿಸುವ ದೃಷ್ಟಿಯಿಂದ ಮಾರ್ಗದರ್ಶಕವಾಗಿರಬೇಕು.

೧ ಇ. ಎಲ್ಲ ಸ್ತರದಲ್ಲಿನ ಜಿಜ್ಞಾಸುಗಳಿಗೆ ಉಪಯುಕ್ತವಾಗುವ ಸಂಹಿತೆಯನ್ನು ತಯಾರಿಸಬೇಕು.

೧. ಸತ್ಸಂಗಕ್ಕೆ ಬರುವ ಜಿಜ್ಞಾಸುಗಳ ಅಭ್ಯಾಸ ಮಾಡಿ ಸಂಹಿವ್ ಯನ್ನು ತಯಾರಿಸಬೇಕು. ಅದರಿಂದ ಸತ್ಸಂಗಕ್ಕೆ ಬರುವ ಜಿಜ್ಞಾಸುಗಳಿಗೆ ಜವಾಬ್ದಾರಿ ತೆಗೆದುಕೊಂಡು ಸೇವೆಯನ್ನು ಮಾಡಲು ದಿಶೆ ಸಿಗಬೇಕು.

೨. ಸಂಹಿತೆಯು ಸಮಾಜದಲ್ಲಿನ ವಕೀಲರು, ಉದ್ಯಮಿಗಳು, ವೈದ್ಯರು, ಶಿಕ್ಷಕರು, ಇಂಜಿನಿಯರ್, ಸಾಧಕರ ಕುಟುಂಬದವರು ಮತ್ತು ಧರ್ಮಪ್ರೇಮಿ ಇಂತಹ ಬೇರೆಬೇರೆ  ವ್ಯಕ್ತಿಗಳಿಗಾಗಿ ಅವರಿಗೆ ಅವರ ಸ್ತರದಲ್ಲಿ ಸುಲಭವಾಗಿ ಅರ್ಥವಾಗುವಂತಿರಬೇಕು ಮತ್ತು ಸತ್ಸಂಗ ತೆಗೆದುಕೊಳ್ಳುವವರಿಗೂ ಅಭ್ಯಾಸ ಮಾಡಿ ವಿಷಯವನ್ನು ಸರಳವಾಗಿ ಮಂಡಿಸುವಂತಹ ಸಂಹಿತೆ ಇರಬೇಕು.

೩. ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಜಿಜ್ಞಾಸುಗಳಿಗೆ ಬೇರೆ ಬೇರೆ ಪ್ರವಚನಗಳನ್ನು ತಯಾರಿಸಬೇಕು.

೧ ಈ. ಸಂಹಿತೆಯು ಸಾಧಕರಿಗೆ ಪ್ರವಚನವನ್ನು ತೆಗೆದುಕೊಳ್ಳಲು ಸಹಾಯಕವಾಗಿರಬೇಕು

೧. ಸಮಾಜದಲ್ಲಿನ ಪ್ರತಿಯೊಂದು ಜೀವಕ್ಕೆ ಹಬ್ಬಗಳ ಉದ್ದೇಶ, ಅವುಗಳಲ್ಲಿನ ಧಾರ್ಮಿಕ ಆಚರಣೆ ಮತ್ತು ಹಬ್ಬಗಳ ಅಧ್ಯಾತ್ಮಿಕ ಮಹತ್ವ ಇವುಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಸಾಧಕರಿಗೆ ಪ್ರವಚನ ತೆಗೆದುಕೊಳ್ಳಲು ಸಹಾಯವಾಗುವಂತಹ ಸಂಹಿತೆ ಇರಬೇಕು.

೨. ಧರ್ಮ, ಧಾರ್ಮಿಕ ಆಚರಣೆ ಮತ್ತು ಆಚಾರಧರ್ಮ ಮುಂತಾದ ವಿಷಯಗಳ ಬಗ್ಗೆ ಕೇಳಬಹುದಾದಂತಹ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸಂಹಿತೆಯ ಉಪಯೋಗ ಆಗಬೇಕು.

೧ ಉ. ಸಂಹಿತೆಯನ್ನು ತಯಾರಿಸುವ ಸೇವೆಯನ್ನು ಮಾಡುವಾಗ ಸಾಧನೆಯ ದೃಷ್ಟಿಯಿಂದ ಪ್ರಯತ್ನಿಸಬೇಕು

೧ ಉ ೧. ಭಾವದ ಸ್ತರದಲ್ಲಿ

ಅ. ನಮ್ಮ ಭಾವಕ್ಕನುಸಾರ ಸಂಹಿತೆಯಲ್ಲಿ ಭಾವ ಮತ್ತು ಚೈತನ್ಯ ಬರುತ್ತದೆ’ ಈ ಜವಾಬ್ದಾರಿಯ ಅರಿವಿಟ್ಟುಕೊಂಡು ಸಾಧಕರು ಹೆಚ್ಚೆಚ್ಚು ಶ್ರದ್ಧೆ, ಕೃತಜ್ಞತೆಯಭಾವ ಮತ್ತು ಶರಣಾಗತಭಾವವನ್ನು ಇಟ್ಟುಕೊಂಡು ಸೇವೆಯನ್ನು ಮಾಡಬೇಕು.

ಆ. ಸಾಧಕರ ಬುದ್ಧಿಯನ್ನು ಶುದ್ಧ ಮಾಡಲು ಗುರುಗಳು ಈ ಸೇವೆಯನ್ನು ನೀಡಿದ್ದಾರೆ, ಈ ಅರಿವು ಸತತವಾಗಿ ಇರಬೇಕು. ಈಶ್ವರನ ಸಹಾಯ ಪಡೆದು ಮತ್ತು ಸತತ ಅನುಸಂಧಾನದಲ್ಲಿದ್ದು ಸೇವೆಯನ್ನು ಮಾಡಬೇಕು. ಗುರುಗಳ ಚೈತನ್ಯದ ಲಾಭ ಪಡೆದು ತಮ್ಮನ್ನು ಸೇವೆಯಲ್ಲಿ  ಸಮರ್ಪಿಸಿಕೊಳ್ಳಬೇಕು.

ಇ. ಸಂಹಿತೆಯನ್ನು ಓದುವಾಗ ಅದರಲ್ಲಿನ ಸ್ಪಂದನಗಳ ಅಭ್ಯಾಸ ಮಾಡಬೇಕು. ಸಂಹಿತೆಯನ್ನು ಓದಿದ ಮೇಲೆ ಭಾವಜಾಗೃತಿ ಆಗುವ ವರೆಗೆ ಅದರಲ್ಲಿ ಸುಧಾರಣೆಗಳನ್ನು ಮಾಡಬೇಕು.

೧ ಉ. ಸ್ವಭಾವದೋಷಗಳ ಅಭ್ಯಾಸ ಮಾಡುವುದು

೧. ಸೇವೆಯನ್ನು ಮಾಡುವಾಗ ಆಜ್ಞಾಪಾಲನೆ ಆಗುತ್ತಿದೆಯಲ್ಲ ? ಎಂಬುದನ್ನು ಅಂತರ್ಮುಖರಾಗಿ ಅಭ್ಯಾಸ ಮಾಡಬೇಕು.

೨. ಸತತ ತಮ್ಮಲ್ಲಿ ಕಡಿಮೆತನ ತೆಗೆದುಕೊಂಡು ಇತರರಿಂದ ಕಲಿಯುತ್ತಿರಬೇಕು. ಆದರೆ ಕೀಳರಿಮೆ ಇರಬಾರದು.

೩. ಇತರರ ಸ್ವಭಾವದೋಷಗಳನ್ನು ನೋಡುವುದಕ್ಕಿಂತ ‘ಇತರರಲ್ಲಿರುವ ಯಾವ ಗುಣ ನನ್ನಲ್ಲಿ ಕಡಿಮೆ ಇದೆ’ ಇದನ್ನು ಅಭ್ಯಾಸ ಮಾಡಬೇಕು.

೪. ಸೇವೆಯನ್ನು ಮಾಡುವಾಗ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನವನ್ನು ಮಾಡಬೇಕು.

೫. ಸೇವೆಯನ್ನು ಮಾಡುವಾಗ ತಮ್ಮಲ್ಲಿ ಸಾಧಕತ್ವ ನಿರ್ಮಾಣ ವಾಗಲು ಪ್ರಯತ್ನ ಮಾಡಬೇಕು.

೨. ಸೇವೆಯ ಚಿಂತನೆ ಮಾಡುವಾಗ ಕಲಿಯಲು ಸಿಕ್ಕಿದ ಅಂಶಗಳು

ಅ. ಗುರುಗಳ ಸಂಕಲ್ಪಶಕ್ತಿಯ ಲಾಭಪಡೆದು ತತ್ಪರತೆಯಿಂದ ಸೇವೆಯ ಚಿಂತನೆಯಾಗಬೇಕು.

ಆ. ಸೇವೆಯನ್ನು ಇನ್ನು ಒಳ್ಳೆಯ ರೀತಿಯಿಂದ ಮಾಡಲು ಇತರರನ್ನು ಕೇಳಿಕೊಂಡು ಅದರಲ್ಲಿ ಬದಲಾವಣೆ ಮಾಡಬೇಕು.

ಇ. ಹೊಸ ಸಂಕಲ್ಪನೆ ಬಂದಾಗ ಆ ಸೇವೆಯ ಕಾರ್ಯಪದ್ಧತಿ ಮತ್ತು ಧೋರಣೆ ಇದರ ಬಗ್ಗೆ ಚಿಂತನೆ ಮಾಡಿ ಗುರುಗಳಿಗೆ ಅಪೇಕ್ಷಿತ ರೀತಿಯಲ್ಲಿ ಸೇವೆಯನ್ನು ಮಾಡಬೇಕು.

ಈ. ಯಾವ ಸಾಧಕನಲ್ಲಿ ಯಾವ ಕೌಶಲ್ಯವಿದೆ ಮತ್ತು ಗುರು ಕಾರ್ಯದಲ್ಲಿ ಅದನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ? ಇದರ ಅಭ್ಯಾಸ ಮಾಡಬೇಕು.

ಉ. ಸಾಧಕರಿಗೆ ಅವರ ಸ್ವಭಾವದೋಷ ಮತ್ತು ಅಹಂ ಇವುಗಳ ಅರಿವು ಮಾಡಿಕೊಟ್ಟು ಅವರನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡಬೇಕು.

ಪೂ. ಅಣ್ಣನವರ ಸಂಕಲ್ಪದಿಂದ ನಮಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಗುರುಚರಣಗಳಲ್ಲಿ ಸಮರ್ಪಣೆ ಮಾಡುತ್ತಿದ್ದೇವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಿಗೆ ಅಪೇಕ್ಷಿತ ಸೇವೆ ನಮ್ಮೆಲ್ಲರಿಂದ ಆಗಬೇಕು ಮತ್ತು ನಮ್ಮನ್ನು ಅವರ ಚರಣಗಳಲ್ಲಿ ಸಮರ್ಪಿಸಿಕೊಳ್ಳಬೇಕು, ಇದೇ ಅವರ ಪಾವನ ಚರಣಗಳಲ್ಲಿ ಪ್ರಾರ್ಥನೆ. ಈ ಲೇಖನವನ್ನು ನಮ್ಮಿಂದ ಬರೆಸಿಕೊಂಡಿದ್ದಕ್ಕಾಗಿ ಗುರುಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತ ಪಡಿಸುತ್ತೇವೆ.

– ಸೌ. ಲಕ್ಷ್ಮೀ ಪೈ (ಆಧ್ಯಾತ್ಮಿಕ ಮಟ್ಟ ಶೇ.೬೩) ಮಂಗಳೂರು, ಸೌ. ದೀಪಾ ತಿಲಕ, ಬೆಂಗಳೂರು, ಆಧುನಿಕ ವೈದೆಯ್ (ಸೌ) ವತ್ಸಲಾ ಕಾಶಿ, ಬೆಂಗಳೂರು, ಶ್ರೀ. ಶ್ರೀಕಾಂತ ಚೌಧರಿ, ಬೆಂಗಳೂರು,

ಸೌ. ಶಾರದಾ ಯೋಗೀಶ, ಕುಣಿಗಲ್. (೮.೧೧.೨೦೨೩)

ಸಂಹಿತೆಯನ್ನು ತಯಾರಿಸುವಾಗ ಕಲಿಯಲು ಸಿಕ್ಕಿದ ಅಂಶಗಳು

೧. ಪೂ. ಅಣ್ಣ ಇವರ ಸಂಕಲ್ಪಶಕ್ತಿ ಅನುಭವಿಸಲು ಸಿಕ್ಕಿತು : ಪೂ. ಅಣ್ಣನವರು ಸಂಹಿತೆಯ ಬಗ್ಗೆ ಮಾರ್ಗದರ್ಶನ ಮಾಡಿದ ಮೇಲೆ ನಾವು ಗುರುಚರಣಗಳಿಗೆ ಶರಣಾಗಿ ಸೇವೆಯನ್ನು ಮಾಡಲು ಆರಂಭಿಸಿದೆವು. ಸೇವೆಯನ್ನು ಮಾಡುತ್ತಿರುವಾಗ ನಮಗೆ ವಿಷಯ ತಾನಾಗಿಯೇ ಹೊಳೆಯುತ್ತಾ ಹೋಯಿತು. ಆಗ ನಮಗೆ ಗುರುಗಳ ಸಂಕಲ್ಪ ಶಕ್ತಿ ಅನುಭವಿಸಲು ಸಿಕ್ಕಿತು. ಪೂ. ಅಣ್ಣನವರ ತಳಮಳದಿಂದ ಸಂಹಿತೆಯನ್ನು ತಯಾರಿಸಲು ಸಾಧ್ಯವಾಯಿತು.

೨. ಪೂ. ಅಣ್ಣನವರಿಗೆ ಸಂಹಿತೆಯ ರೂಪುರೇಖೆಯನ್ನು ತೋರಿಸಿದಾಗ ಅವರು ಗುರುಗಳ ಬಗ್ಗೆ ಭಾವ ನಿರ್ಮಾಣ ಆಗುವ ಅಂಶಗಳನ್ನು ತೆಗೆದುಕೊಳ್ಳಲು ಹೇಳಿದರು. ಸನಾತನ ನಿರ್ಮಿತ ಗ್ರಂಥಗಳಿಂದ ಸಂದರ್ಭಗಳನ್ನು ತೆಗೆದುಕೊಂಡೆವು.

೩. ಪೂ. ಅಣ್ಣನವರು ನಮಗೆ ಜಿಜ್ಞಾಸುಗಳು ‘ಪ್ರತ್ಯಕ್ಷ ಕೃತಿಗಳನ್ನು ಹೇಗೆ ಮಾಡಬೇಕು ?’ ಈ ವಿಷಯದ ಅಂಶಗಳನ್ನು ಸಂಹಿತೆ ಯಲ್ಲಿ ತೆಗೆದುಕೊಳ್ಳಲು ಹೇಳಿದರು. ಉದಾ.: ವಸ್ತುವಿನ ಆಕಾರ ದಲ್ಲಿ ಬದಲಾವಣೆ ಮಾಡಿದ ನಂತರ ವಸ್ತುವಿನ ಸ್ಪಂದನಗಳು ಬದಲಾಗುವುದು.

– ಸೌ. ಲಕ್ಷ್ಮೀ ಪೈ (ಆಧ್ಯಾತ್ಮಿಕ ಮಟ್ಟ ಶೇ. ೬೩) ಮಂಗಳೂರು, ಸೌ. ದೀಪಾ ತಿಲಕ, ಬೆಂಗಳೂರು, ಆಧುನಿಕ ವೈದ್ಯೆ ವತ್ಸಲಾ ಕಾಶಿ, ಬೆಂಗಳೂರು, ಶ್ರೀ. ಶ್ರೀಕಾಂತ ಚೌಧರಿ, ಬೆಂಗಳೂರು, ಸೌ. ಶಾರದಾ ಯೋಗಿಶ, ಕುಣಿಗಲ್. (೮.೧೧.೨೦೨೩)