`ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು `ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್ )’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ
`ಮಹಾಶಿವರಾತ್ರಿಯಂದು ರಾತ್ರಿಯ ೪ ಪ್ರಹರಗಳಲ್ಲಿ ೪ ಪೂಜೆಗಳನ್ನು ಮಾಡಬೇಕು, ಎಂಬ ವಿಧಾನವಿದೆ. ಅವುಗಳಿಗೆ `ಯಾಮಪೂಜೆ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ಯಾಮಪೂಜೆಯನ್ನು ಮಾಡುವಾಗ ಮೊದಲನೇ ಪ್ರಹರದಲ್ಲಿ `ಶ್ರೀಶಿವಾಯ ನಮಃ’ ಎಂಬ ನಾಮಜಪವನ್ನು ಮಾಡಬೇಕು. ಎರಡನೇ ಪ್ರಹರದಲ್ಲಿ `ಶ್ರೀಶಂಕರಾಯ ನಮಃ’ ಎಂದು ನಾಮಜಪ ಮಾಡಬೇಕು. ನಿಶಿಥಕಾಲದಲ್ಲಿ (ಟಿಪ್ಪಣೆ) `ಶ್ರೀಸಾಂಬಸದಾಶಿವಾಯ ನಮಃ’ ಎಂಬ ಜಪವನ್ನು ಮಾಡಬೇಕು. ಮೂರನೇ ಪ್ರಹರದಲ್ಲಿ `ಶ್ರೀಮಹೇಶ್ವರಾಯ ನಮಃ’ ಮತ್ತು ನಾಲ್ಕನೇ ಪ್ರಹರದಲ್ಲಿ `ಶ್ರೀರುದ್ರಾಯ ನಮಃ’ ಎಂಬ ನಾಮಜಪವನ್ನು ಮಾಡಿ ಸಮರ್ಪಣೆ ಮಾಡಬೇಕು.
೨೦೨೨ ರಲ್ಲಿ ಮಹಾಶಿವರಾತ್ರಿಯಂದು ಯಾಮಪೂಜೆಯ ಸಂದರ್ಭದಲ್ಲಿ `ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು `ಯು.ಎ.ಎಸ್.’ (ಈ ಉಪಕರಣದ ಮೂಲಕ ಒಂದು ಸಂಶೋಧನಾತ್ಮಕ ಪರೀಕ್ಷಣೆಯನ್ನು ಮಾಡಿತು. ಈ ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.
ಟಿಪ್ಪಣಿ – ನಿಶಿಥ : `ರಾತ್ರಿಯ ಒಟ್ಟು ಸಮಯವನ್ನು ಸಮಾನ ೧೫ ಭಾಗಗಳನ್ನು ಮಾಡಿದರೆ, ಆ ಪ್ರತಿಯೊಂದು ಭಾಗಕ್ಕೆ `ಮುಹೂರ್ತ’ ಎಂದು ಕರೆಯುತ್ತಾರೆ. ಅವುಗಳಲ್ಲಿನ ೮ ನೇಯ ಮುಹೂರ್ತಕ್ಕೆ `ನಿಶಿಥ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ನಿಶಿಥಕಾಲದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿರುತ್ತದೆ.’ (ಆಧಾರ : `ಸುಲಭ ಜ್ಯೋತಿಷ್ಯಶಾಸ್ತç’ ಗ್ರಂಥ)
೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ಮಹಾಶಿವರಾತ್ರಿಯಂದು ಪೂಜಕನು ಶಿವಲಿಂಗದ ಯಾಮಪೂಜೆಯನ್ನು ಮಾಡಿದನು. ಯಾಮ ಪೂಜೆಯ ಮೊದಲು ಮತ್ತು ಯಾಮ ಪೂಜೆಯ ನಂತರ `ಯು.ಎ.ಎಸ್.’ ಉಪಕರಣದಿಂದ ಶಿವಲಿಂಗದ ಪರೀಕ್ಷಣೆಯನ್ನು ಮಾಡಲಾಯಿತು. ಹಾಗೆಯೇ ಯಾಮಪೂಜೆ ಆರಂಭವಾಗುವ ಮೊದಲು ಮತ್ತು ಅದರ ನಂತರದ ಪ್ರತಿಯೊಂದು ಪ್ರಹರದ ಪೂಜೆಯ ನಂತರ ಶಿವಲಿಂಗದ ಪರೀಕ್ಷಣೆ ಮಾಡಲಾಯಿತು.
೧ ಅ. ಮಹಾಶಿವರಾತ್ರಿಯಂದು ಪೂಜಕನು ಯಾಮಪೂಜೆಯನ್ನು ಮಾಡಿದ ನಂತರ ಅದರಿಂದ ಅವನ ಮೇಲೆ ಮತ್ತು ಶಿವಲಿಂಗದ ಮೇಲೆ ಆದ ಸಕಾರಾತ್ಮಕ ಪರಿಣಾಮ : ಮೊದಲಿಗೆ (ಯಾಮಪೂಜೆಯ ಮೊದಲು) ಶಿವಲಿಂಗದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಈ ಎರಡೂ ಊರ್ಜೆಗಳು ಇದ್ದವು. ಪೂಜಕನು ೧ ನೇ ಮತ್ತು ೨ ನೇ ಪ್ರಹರದಲ್ಲಿ ಮಾಡಿದ ಪೂಜೆಯ ನಂತರ ಶಿವಲಿಂಗದಲ್ಲಿ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು. ನಿಶಿಥಕಾಲದಲ್ಲಿನ ಪೂಜೆಯ ನಂತರ ಶಿವಲಿಂಗದ ಸಕಾರಾತ್ಮಕ ಊರ್ಜೆ ಅತ್ಯಧಿಕವಾಯಿತು. ಪೂಜಕನು ೩ ನೇ ಪ್ರಹರದಲ್ಲಿ ಮಾಡಿದ ಪೂಜೆಯ ನಂತರ ಶಿವಲಿಂಗದಲ್ಲಿ ಅಲ್ಪಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು ಮತ್ತು ೪ ನೇ ಪ್ರಹರದ ಪೂಜೆಯ ನಂತರ ಅದು ಇಲ್ಲವಾಯಿತು. ೧ ರಿಂದ ೪ ನೇ ಪ್ರಹರದಲ್ಲಿ ಮಾಡಿದ ಪ್ರತಿಯೊಂದು ಪೂಜೆಯ ನಂತರ ಶಿವಲಿಂಗದ ಸಕಾರಾತ್ಮಕ ಊರ್ಜೆ ಉತ್ತರೋತ್ತರ ಹೆಚ್ಚಾಯಿತು.
ಮಹಾಶಿವರಾತ್ರಿಯ ದಿನ ಮಾಡಲಾದ ಶಿವಲಿಂಗದ ಯಾಮಪೂಜೆ
ಯಾಮಪೂಜೆಯ ಮೊದಲು ಪೂಜಕನಲ್ಲಿ ಬಹಳಷ್ಟು ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಮತ್ತು ಅಲ್ಪಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು. ಯಾಮಪೂಜೆಯ ನಂತರ ಪೂಜಕನಲ್ಲಿ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆಯಾಗಿ ಅವನ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು. ಇದು ಮುಂದಿನ ಪುಟದಲ್ಲಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.
೨. ಪರೀಕ್ಷಣೆಯ ನಿರೀಕ್ಷಣೆಗಳ ವಿಶ್ಲೇಷಣೆ
೨ ಅ. ಪೂಜಕನು ಯಾಮಪೂಜೆಯ ಪ್ರತಿಯೊಂದು ಪ್ರಹರದಲ್ಲಿ ಮಾಡಿದ ಭಾವಪೂರ್ಣ ಪೂಜೆಯಿಂದ ಶಿವನ ಆಯಾ ರೂಪದ ತತ್ತ್ವವು (ಚೈತನ್ಯ) ಶಿವಲಿಂಗದಲ್ಲಿ ಆಕರ್ಷಿತವಾಗಿ ವಾತಾವರಣದಲ್ಲಿ ಪ್ರಕ್ಷೇಪಿಸುವುದು : `ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಯಾವಾಗಲೂ ಒಟ್ಟಿಗೆ ಇರುತ್ತವೆ’, ಇದು ಅಧ್ಯಾತ್ಮದ ಒಂದು ತತ್ತ್ವವಾಗಿದೆ. ಆದ್ದರಿಂದ ದೇವತೆಯ ಹೆಸರು ಬಂದರೆ, ಆ ದೇವತೆಯ ಶಕ್ತಿ (ಚೈತನ್ಯ) ಅಲ್ಲಿ ಬರುತ್ತದೆ. ಆದ್ದರಿಂದ ಶಿವನ ಆಯಾ ರೂಪದ ಚೈತನ್ಯವು ಶಿವಲಿಂಗದಲ್ಲಿ ಆಕರ್ಷಿತವಾಗಿ ಅದು ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಟ್ಟಿತು. ಶಿವಲಿಂಗದಿಂದ ಪ್ರಕ್ಷೇಪಿಸಿದ ಚೈತನ್ಯಕ್ಕನುಸಾರ ಶಿವಲಿಂಗದಲ್ಲಿನ ಸಕಾರಾತ್ಮಕ ಊರ್ಜೆ ಆಯಾ ಪ್ರಮಾಣದಲ್ಲಿ ಹೆಚ್ಚಾಗಿರುವುದು ಪರೀಕ್ಷಣೆಯಿಂದ ಕಂಡುಬಂದಿತು. ವಿಶೇಷವೆಂದರೆ ನಿಶಿಥ ಕಾಲದಲ್ಲಿನ ಪೂಜೆಯ ನಂತರ ಶಿವಲಿಂಗದ ಸಕಾರಾತ್ಮಕ ಊರ್ಜೆ ಅತ್ಯಧಿಕವಾಯಿತು. ಇದರಿಂದ `ಮಹಾಶಿವರಾತ್ರಿಯಂದು ನಿಶಿಥ ಕಾಲದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿರುತ್ತದೆ’, ಎಂದು ಏಕೆ ಹೇಳಲಾಗಿದೆ ? ಎಂಬುದು ಗಮನಕ್ಕೆ ಬರುತ್ತದೆ. ಪೂಜಕನು ತನ್ನ ಭಾವಕ್ಕನುಸಾರ ಯಾಮಪೂಜೆಯ ಚೈತನ್ಯವನ್ನು ಪಡೆದಿದ್ದರಿಂದ ಅವನ ತೊಂದರೆದಾಯಕ ಸ್ಪಂದನಗಳ ಆವರಣ ತುಂಬಾ ಕಡಿಮೆಯಾಗಿ ಅವನ ಸಾತ್ತ್ವಿಕತೆ ಹೆಚ್ಚಾಯಿತು. ಇದರಿಂದ ಭಾವಪೂರ್ಣ ಪೂಜೆಯ ಮಹತ್ವವು ಗಮನಕ್ಕೆ ಬರುತ್ತದೆ.
೨ ಆ. ಶಿವಲಿಂಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬರುವುದರ ಕಾರಣಗಳು : ಶಿವಲಿಂಗದಲ್ಲಿ ಮೊದಲಿಗೆ ನಕಾರಾತ್ಮಕ ಊರ್ಜೆ ಸ್ವಲ್ಪ ಪ್ರಮಾಣದಲ್ಲಿ ಕಂಡುಬಂದಿತು. ೧ ನೇ ಮತ್ತು ೨ ನೇ ಪ್ರಹರದ ಪೂಜೆಯ ನಂತರ ಶಿವಲಿಂಗದ ನಕಾರಾತ್ಮಕ ಊರ್ಜೆ ಕಡಿಮೆಯಾಗುತ್ತಾ ಹೋಯಿತು ಮತ್ತು ನಿಶಿಥಕಾಲದಲ್ಲಿ ಅದು ಇಲ್ಲವಾಯಿತು. ಮೂರನೇ ಪ್ರಹರದ ಪೂಜೆಯ ನಂತರ ಶಿವಲಿಂಗದಲ್ಲಿ ಪುನಃ ಅಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ಕಂಡುಬಂದಿತು ಮತ್ತು ನಾಲ್ಕನೇ ಪ್ರಹರದ ಪೂಜೆಯ ನಂತರ ಅದು ಇಲ್ಲವಾಯಿತು. ಇದರ ಕಾರಣವೆಂದರೆ, ಶಿವಲಿಂಗದಲ್ಲಿ ಶಿವನ ಆಯಾ ರೂಪದ ಚೈತನ್ಯ ಆಕರ್ಷಿತವಾಗಿ ಅದರಿಂದ ವಾತಾವರಣದಲ್ಲಿ ಪ್ರಕ್ಷೇಪಿಸತೊಡಗಿತು. ಸೂರ್ಯಾಸ್ತದ ನಂತರ ಕಾಲವು ಕೆಟ್ಟ ಶಕ್ತಿಗಳಿಗೆ ಅನುಕೂಲವಾಗುತ್ತಾ ಹೋಗುತ್ತದೆ. ಪ್ರತಿಯೊಂದು ಪ್ರಹರದಲ್ಲಿ ಮಾಡಿದ ಪೂಜೆಯಿಂದ ಶಿವನ ಆಯಾ ರೂಪದಲ್ಲಿನ ಚೈತನ್ಯ ಪ್ರಕ್ಷೇಪಿಸುತ್ತಿರುವುದರಿಂದ ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳೊಂದಿಗೆ ಒಂದು ರೀತಿಯಲ್ಲಿ ಸೂಕ್ಷ್ಮದ ಯುದ್ಧ ಪ್ರಾರಂಭವಾಯಿತು. ಈ ಸೂಕ್ಷ್ಮದ ಯುದ್ಧದ ತಾತ್ಕಾಲಿಕ ಪರಿಣಾಮವೆಂದು ಶಿವಲಿಂಗದ ಸುತ್ತಲೂ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಸ್ಪಂದನಗಳು ಕಂಡುಬಂದವು. ಶಿವಲಿಂಗದಿಂದ ಪ್ರಕ್ಷೇಪಿತ ಚೈತನ್ಯದಿಂದ ವಾತಾವರಣದ ತೊಂದರೆದಾಯಕ ಸ್ಪಂದನಗಳು ಕಡಿಮೆ ಅಥವಾ ಇಲ್ಲವಾಗಿ ವಾತಾವರಣವು ಚೈತನ್ಯಮಯವಾಯಿತು.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೧.೨೦೨೩)
ವಿ-ಅಂಚೆ : [email protected]
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |