ಸಿಸಿಟಿವಿ ದೃಶ್ಯಾವಳಿಯಿಂದ ಆರೋಪಿಗೆ ೨೫-೩೦ ವರ್ಷ ಎಂದು ಸ್ಪಷ್ಟ !
ಬೆಂಗಳೂರು – ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ ರಂದು ಮಧ್ಯಾಹ್ನ ನಡೆದ ಬಾಂಬ್ ಸ್ಫೋಟದ ಆರೋಪಿಯನ್ನು ಸಿಸಿಟಿವಿ ದೃಶ್ಯಗಳಿಂದ ಗುರುತಿಸಲಾಗಿದೆ. ಮುಖ ಸ್ಪಷ್ಟವಾಗಿಲ್ಲ; ಆದರೆ ಕೃತಕಬುದ್ಧಿಮತ್ತೆಯ ಸಹಾಯದಿಂದ ಪೊಲೀಸರು ಆರೋಪಿಗಳ ಪತ್ತೆಗೆ ಯತ್ನಿಸುತ್ತಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಅವರ ಮುಖವನ್ನು ‘ಫೇಶಿಯಲ್ ರೆಕಗ್ನಿಷನ್ ಸಿಸ್ಟಂ’ಗೆ ಹೊಂದಾಣಿಕೆ ಮಾಡಲಾಗುತ್ತಿದೆ. ಈ ಮೂಲಕ ಪತ್ತೆ ಹಚ್ಚಲಾಗುವುದು. ಮುಖ ಗುರುತಿಸುವಿಕೆ ವ್ಯವಸ್ಥೆಯು ಸಿಸ್ಟಂ ಹೊಂದಿರುವ ದೊಡ್ಡ ’ಡೇಟಾಬೇಸ್’ನಲ್ಲಿ ಮುಖಗಳೊಂದಿಗೆ ಅಸ್ಪಷ್ಟ ಮುಖವನ್ನು ಹೊಂದಿಸುವ ಮೂಲಕ ಮೂಲವನ್ನು ಗುರುತಿಸಲು ಪ್ರಯತ್ನಿಸುತ್ತದೆ, ಎಂದು ಹೇಳಿದ್ದಾರೆ.
“ಸಿಸಿಟಿವಿ”ಯಿಂದ ಘಟನೆ ಬೆಳಕಿಗೆ !
ಆರೋಪಿಗೆ ೨೫ ರಿಂದ ೩೦ ವರ್ಷ ವಯಸ್ಸಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಕೆಫೆಯ ಬಳಿ ಬಸ್‌ನಿಂದ ಇಳಿದು ೧೧:೩೦ ರ ಸುಮಾರಿಗೆ ಕೆಫೆಗೆ ಪ್ರವೇಶಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ. ರವೆ ಇಡ್ಲಿಗಳನ್ನು ಆರ್ಡರ್ ಮಾಡಿ ಕೌಂಟರ್ ನಲ್ಲಿ ಹಣ ಕೊಟ್ಟು ಟೋಕನ್ ತೆಗೆದುಕೊಳ್ಳುತ್ತಾನೆ. ಇದರ ನಂತರ, ಹನ್ನೆರಡು ಹದಿನೈದಕ್ಕೆ, ಅವನು ಕಸದ ಪೆಟ್ಟಿಗೆಯಲ್ಲಿ ಚೀಲವನ್ನು ಬಿಸಾಡಿ ಹೊರಡುತ್ತಾನೆ. ಒಂದು ಗಂಟೆಯ ನಂತರ, ಅದೇ ಬ್ಯಾಗ್‌ನಲ್ಲಿ ಟೈಮರ್ ಬಳಸಿ ಸ್ಫೋಟ ಆಗಿರುವುದು ಗಮನಕ್ಕೆ ಬಂದಿದೆ.
ಸಂಪಾದಕೀಯತನಿಖೆಯನ್ನು ತೀವ್ರಗೊಳಿಸಲು ತನಿಖಾ ವ್ಯವಸ್ಥೆಗಳು ಕೃತಕ ಬುದ್ಧಿಮತ್ತೆಯನ್ನು ಬಳಸುವಂತೆಯೇ, ಜಿಹಾದಿ ಭಯೋತ್ಪಾದಕರು ದಾಳಿಗಳನ್ನು ನಡೆಸಲು ಇದನ್ನು ಬಳಸಬಹುದು ಎಂಬುದನ್ನು ಗಮನಿಸಬೇಕು. ಆದ್ದರಿಂದ, ಜಿಹಾದಿ ಸಿದ್ಧಾಂತವನ್ನು ನಾಶ ಮಾಡಲು ಪ್ರಯತ್ನಗಳು ನಡೆಯಬೇಕು !
|