Punjab Ex Dy CM Attacked: ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ ಸಿಂಗ್ ಬಾದಲ್ ಅವರ ಕೊಲೆಗೆ ಯತ್ನ

ಸ್ವರ್ಣ ಮಂದಿರದ ಪ್ರವೇಶದ್ವಾರದಲ್ಲಿ ಬಾದಲ್ ಮೇಲೆ ಖಲಿಸ್ತಾನಿ ಭಯೋತ್ಪಾದಕನಿಂದ ಗುಂಡಿನ ದಾಳಿ ಯತ್ನ

ಅಮೃತಸರ (ಪಂಜಾಬ) – ಇಲ್ಲಿನ ಸ್ವರ್ಣ ಮಂದಿರದಲ್ಲಿ ಸಿಖ್ಕರ ಧಾರ್ಮಿಕ ಸಂಸ್ಥೆ ಶ್ರೀ ಅಕಾಲ ತಃಖ್ತ ಸಾಹಿಬ್ ನೀಡಿದ  ಶಿಕ್ಷೆಯನ್ನು ಅನುಭವಿಸುತ್ತಿದ್ದ ಶಿರೋಮಣಿ ಅಕಾಲಿ ದಳ ಪಕ್ಷದ ಅಧ್ಯಕ್ಷ ಮತ್ತು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ ಸಿಂಗ್ ಬಾದಲ್ ಅವರ ಮೇಲೆ ಸಿಖ್ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದನು. ಈ ಘಟನೆಯ ವಿಡಿಯೋ ಕೂಡ ಬೆಳಕಿಗೆ ಬಂದಿದೆ. ಬಾದಲ್ ಅವರು ಇಲ್ಲಿ ಪ್ರವೇಶದ್ವಾರದಲ್ಲಿ ಕುಳಿತಿದ್ದ ಸಂದರ್ಭದಲ್ಲಿ, ಅಲ್ಲಿಗೆ ಬಂದ ವ್ಯಕ್ತಿಯು ತನ್ನ ಬಳಿ ಇಟ್ಟುಕೊಂಡಿದ್ದ ಪಿಸ್ತೂಲ್ ಅನ್ನು ಹೊರತೆಗೆದು ಗುಂಡಿನ ದಾಳಿ ನಡೆಸಲು ಪ್ರಯತ್ನಿಸಿದಾಗ, ಬಾದಲ್ ಅವರೊಂದಿಗೆ ಇದ್ದವರು ಇದನ್ನು ನೋಡಿದರು ಮತ್ತು ಆ ವ್ಯಕ್ತಿಯನ್ನು ತಡೆದರು. ಈ ಪರಿಣಾಮವಾಗಿ ಪಿಸ್ತೂಲ್‌ನಿಂದ ಹೊರಟ ಗುಂಡಿ ಗೋಡೆಗೆ ತಾಗಿದೆ. ನಂತರ ಆ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಮತ್ತೊಂದು ಗುಂಡು ಗಾಳಿಯಲ್ಲಿ ಹಾರಿತು. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವನ ಹೆಸರು ನಾರಾಯಣ ಸಿಂಗ್ ಚೌರಾ ಎಂದು ತಿಳಿದು ಬಂದಿದೆ. ಅವನು ಖಲಿಸ್ತಾನಿ ಭಯೋತ್ಪಾದಕನಾಗಿದ್ದು, ಅವನು ಈ ಮುಂಚೆ ಪಾಕಿಸ್ತಾನಕ್ಕೆ ಹೋಗಿ ರಕ್ತಪಾತ ನಡೆಸಲು ತರಬೇತಿ ಪಡೆದು ಕೊಂಡಿದ್ದನೆಂದು ತಿಳಿದುಬಂದಿದೆ. ಈತನ ಮೇಲೆ ಈ ಹಿಂದೆ ಅಕ್ರಮ ಕೃತ್ಯ ಪ್ರತಿಬಂಧಕ ಕಾಯ್ದೆ (ಯು.ಎ.ಪಿ.ಎ. ಅಡಿಯಲ್ಲಿ) ಅನೇಕ ಬಾರಿ ಅಪರಾಧ ದಾಖಲಾಗಿದೆ. ಅದೇ ರೀತಿ ಖಲಿಸ್ತಾನಿ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿ ಆಗಿದ್ದನೆಂದು ಚೌರಾನನ್ನು ಬಂಧಿಸಲಾಗಿತ್ತು.

1. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಚೌರಾ 1984 ರಲ್ಲಿ ಪಾಕಿಸ್ತಾನಕ್ಕೆ ಹೊರಟು ಹೋಗಿದ್ದನು. ಅಲ್ಲಿಂದ ಅವನು ಭಯೋತ್ಪಾದಕ ಕೃತ್ಯಗಳಿಗಾಗಿ ಪಂಜಾಬ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದನು. ಪಾಕಿಸ್ತಾನದಲ್ಲಿದ್ದಾಗ ಅವನು ಗನಿಮಿ ಕಾವಾಗೆ ಸಂಬಂಧಿಸಿದಂತೆ ಮತ್ತು ದೇಶವಿರೋಧಿ ಪುಸ್ತಕಗಳನ್ನು ಬರೆದನು. 1990ರ ದಶಕದ ಮಧ್ಯದಲ್ಲಿ ಅವನು ಭಾರತಕ್ಕೆ ಮರಳಿ ಬಂದ ನಂತರವೂ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗವಹಿಸುತ್ತಿದ್ದನು.

2. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬೆಅಂತ್ ಸಿಂಗ್ ಅವರ ಹಂತಕರಿಗೆ 2003-2004 ರಲ್ಲಿ ಚಂಡಿಗಢದ ಬುರೈಲ್ ಜೈಲಿನಲ್ಲಿ ಮೊಬೈಲ್ ಹಾಗೂ ಇತರ ಕಾನೂನುಬಾಹಿರ ಸಾಮಗ್ರಿಗಳನ್ನು ಪೂರೈಸಿರುವ ಆರೋಪ ಆತನ ಮೇಲಿದೆ. ನಂತರ ಚೌರಾ 2022 ರಲ್ಲಿ ಜಾಮೀನು ಮೇರೆಗೆ ಬಿಡುಗಡೆಯಾದನು. ಅವನ ಮೇಲೆ ಅಮೃತಸರ, ರೋಪರ, ತರನ ತಾರನ ಸೇರಿದಂತೆ ಹಲವು ಜಿಲ್ಲೆಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ. (‘ಇಷ್ಟು ಗಂಭೀರ ದೇಶವಿರೋಧಿ ಕೃತ್ಯಗಳು ಅವನ ಮೇಲೆ ಇದ್ದರೂ ಅವನಿಗೆ ಇಲ್ಲಿಯವರೆಗೆ ಗಲ್ಲು ಶಿಕ್ಷೆ ಏಕೆ ನೀಡಿಲ್ಲ ?’, ಎಂದು ಪ್ರಶ್ನೆ ಮೂಡುತ್ತದೆ. ಇದರಿಂದ ಭಾರತದಲ್ಲಿ ದೇಶವಿರೋಧಿ ಕೃತ್ಯಗಳನ್ನು ಮಾಡುವವರಿಗೆ ಶಿಕ್ಷೆಯಾಗುವುದಿಲ್ಲ ಮತ್ತು ಅವನು ಇನ್ನು ಹೆಚ್ಚಿನ ಕೃತ್ಯಗಳನ್ನು ನಡೆಸಬಹುದು ಎನ್ನುವ ಚಿತ್ರಣ ಜಗತ್ತಿನಲ್ಲಿ ನಿರ್ಮಾಣವಾಗುತ್ತದೆ. ಇದು ಲಜ್ಜಾಸ್ಪದವಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

  • ಪಂಜಾಬ್‌ನಲ್ಲಿ ಆಮ್ ಆದಮಿ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ನಂತರ ಖಲಿಸ್ತಾನಿ ಬೆಂಬಲಿಗರು ಮತ್ತು ಭಯೋತ್ಪಾದಕರ ಕೃತ್ಯಗಳಲ್ಲಿ ವೃದ್ಧಿ ಕಂಡು ಬಂದಿದೆ. ಸಿಖ್ಕರ ಪವಿತ್ರ ಸ್ಥಳವಾದ ಸ್ವರ್ಣ ಮಂದಿರದಲ್ಲಿ ಹಾಡುಹಗಲೇ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳ ಹತ್ಯೆಗೆ ಯತ್ನಿಸಿರುವುದು ಕಾನೂನು ಮತ್ತು ಸುವ್ಯವಸ್ಥೆ ಮೂರಾಬಟ್ಟೆ ಆಗಿರುವುದು ಗಮನಕ್ಕೆ ಬರುತ್ತದೆ !
  • 1984 ರಲ್ಲಿ ಸ್ವರ್ಣ ಮಂದಿರದಲ್ಲಿನ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ನಡೆಸಲಾದ ಸೇನಾ ಕಾರ್ಯಾಚರಣೆಯನ್ನೂ ಈಗಲೂ ವಿರೋಧಿಸುತ್ತಿರುವ ಸಿಖ್ಖರಿಗೆ ಇದೇ ಸ್ವರ್ಣ ಮಂದಿರದಲ್ಲಿ ಬಾದಲ್ ಅವರ ಹತ್ಯೆಗೆ ಖಲಿಸ್ತಾನಿ ಯತ್ನಿಸಿರುವುದು ಒಪ್ಪಿಗೆಯೇ ? ಅಥವಾ ಅವರ ದೃಷ್ಟಿಯಲ್ಲಿ, ಖಲಿಸ್ತಾನಿಗಳು ಮಾಡುವ ಎಲ್ಲಾ ಕೃತ್ಯಗಳು ಸರಿಯಾಗಿದೆ ಮತ್ತು ಅವರ ವಿರುದ್ಧ  ಪೋಲೀಸರು ಮತ್ತು ಸೇನೆ ಕ್ರಮ ಕೈಗೊಳ್ಳುವುದು ತಪ್ಪು ಎಂದು ಅನಿಸುತ್ತದೆಯೇ ?