ಶೇಖ್ ಷಹಜಹಾನ ಬಂಧಿಸಿರಿ! – ಕೋಲಕಾತಾ ಉಚ್ಚ ನ್ಯಾಯಾಲಯದ ಆದೇಶ 

ಬಂಗಾಳದ ಸಂದೇಶಖಾಲಿಯಲ್ಲಿ ಹಿಂದೂ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಪ್ರಕರಣ! 

ಕೋಲಕಾತಾ (ಬಂಗಾಳ) – ಕೋಲಕಾತಾ ಉಚ್ಚ ನ್ಯಾಯಾಲಯವು ಸಂದೇಶಖಾಲಿಯ ಹಿಂದೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿಯಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಶೇಖ ಷಹಜಹಾನನನ್ನು ಬಂಧಿಸುವಂತೆ ಆದೇಶಿಸಿದೆ. ಕಳೆದ ಹಲವು ದಿನಗಳಿಂದ ಶೇಖನು ಕಣ್ಮರೆಯಾಗಿದ್ದಾನೆ.

1. ಶೇಖ ಷಹಜಹಾನ ಮೇಲೆ ಪೊಲೀಸರು ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? . ಅವನನ್ನು ಬಂಧನ ನಿರ್ಬಂಧಿಸಲಾಗಿದೆಯೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ .ಶೇಖ ಷಹಜಹಾನ ವಿರುದ್ಧ ದೂರನ್ನು ದಾಖಲಾಗಿದ್ದು, ಅವನು ಪ್ರಮುಖ ಆರೋಪಿಯಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಅವನನ್ನು ತಕ್ಷಣವೇ ಬಂಧಿಸಬೇಕು ಎಂದು ಹೇಳಿದೆ.

2. ‘ಸಂದೇಶಖಾಲಿ ಪ್ರಕರಣದ ತನಿಖೆಗೆ ಉಚ್ಚ ನ್ಯಾಯಾಲಯವು ಸ್ವತಂತ್ರ ಸಮಿತಿ ರಚಿಸಬೇಕು’ ಎಂದು ಅರ್ಜಿದಾರರೊಬ್ಬರು ನ್ಯಾಯಾಲಯದಲ್ಲಿ ಆಗ್ರಹಿಸಿದ್ದಾರೆ. ಈ ಬೇಡಿಕೆಗೆ ನ್ಯಾಯಾಲಯವು, ‘ನಾವು ಇದನ್ನು ಮಾಡಿದರೆ, ರಾಜ್ಯ ಸರಕಾರ, ಪೊಲೀಸರು, ಸಿಬಿಐ ಮತ್ತು ಇಡಿ ನ್ಯಾಯಾಲಯದಲ್ಲಿ ಹಾಜರಾಗಬೇಕಾಗುತ್ತದೆ.ಎಂದು ಹೇಳಿತು.

3. ಈ ಪ್ರಕರಣದಲ್ಲಿ ಶೇಖ ಷಹಜಹಾನ ಮತ್ತು ಅವರ ಇಬ್ಬರು ಸಹಚರರಾದ ಶಿಬು ಹಾಜರಾ ಮತ್ತು ಉತ್ತಮ ಸರದಾರ ಈ ಇಬ್ಬರ ಮೇಲೆ ಮಹಿಳೆಯರ ಮೇಲಿನ ಸಾಮೂಹಿಕ ಬಲಾತ್ಕಾರ ಮಾಡಿರುವ ಆರೋಪವಿದೆ. ಈ ಪ್ರಕರಣದಲ್ಲಿ ಶಿಬು ಹಾಜರಾ, ಉತ್ತಮ ಸರದಾರ ಸೇರಿದಂತೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕನ ಮನೆಯ ಮೇಲೆ ದಾಳಿ

 ಸಂದೇಶಖಾಲಿಯಲ್ಲಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಾಯಕ ಶಂಕರ ಸರದಾರ ಅವರ ಮನೆಯ ಮೇಲೆ ಸ್ಥಳೀಯ ಹಿಂದೂ ಮಹಿಳೆಯರು ದಾಳಿ ಮಾಡಿ, ಮನೆಯನ್ನು ಧ್ವಂಸಗೊಳಿಸಿದ್ದಾರೆ. ಹಾಗೆಯೇ ಈ ಮೊದಲು ತೃಣಮೂಲ ನಾಯಕ ಅಜಿತ ಮೈತಿಗೆ ಚಪ್ಪಲಿಯಿಂದ ಥಳಿಸಿದ್ದರು.

ಸಂಪಾದಕೀಯ ನಿಲುವು

ಉಚ್ಚ ನ್ಯಾಯಾಲಯಕ್ಕೆ ಇಂತಹ ಆದೇಶ ನೀಡಬೇಕಾಗುತ್ತಿರುವುದನ್ನು ನೋಡಿದರೆ, ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿ ಗಮನಕ್ಕೆ ಬರುತ್ತದೆ. ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಪರಿಸ್ಥಿತಿಯನ್ನು ಸುಧಾರಿಸುವುದು ಇದರ ಮೇಲಿನ ಒಂದೇ ಉಪಾಯವಾಗಿದೆ.