ಉತ್ತರಪ್ರದೇಶದಲ್ಲಿ ಅಕ್ರಮವಾಗಿ ಹಲಾಲ್ ಪ್ರಮಾಣಪತ್ರ ನೀಡಿ ಹಣ ಕೀಳುತ್ತಿದ್ದ ‘ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ’ದ ಅಧ್ಯಕ್ಷ ಮೌಲಾನಾ ಹಬೀಬ್ ಪಟೇಲ್, ಉಪಾಧ್ಯಕ್ಷ ಮೌಲಾನಾ ಮುಯಿದ್ಶಿರ್ ಸಪ್ದಿಹಾ, ಪ್ರಧಾನ ಕಾರ್ಯದರ್ಶಿ ಮುಫ್ತಿ ತಾಹಿರ್ ಜಾಕಿರ್ ಮತ್ತು ಕೋಶಾಧ್ಯಕ್ಷ ಮುಹಮ್ಮದ್ ಖಾನ್ ಅವರನ್ನು ಉತ್ತರಪ್ರದೇಶ ಪೊಲೀಸರು ಮುಂಬೈಯಲ್ಲಿ ಬಂಧಿಸಿದ್ದಾರೆ.
Maulana Mahmood Asad Madani, President of the Jamiat Ulema-e-Hind & Halal Foundation of India, is being interrogated by the #UttarPradesh Police regarding the distribution of #Halal certificates
Madani however has requested for time to adequately answer the questions put forth… pic.twitter.com/6kGAbLx4lL
— Sanatan Prabhat (@SanatanPrabhat) February 22, 2024
೨. ಇಂತಹ ಸುದ್ದಿ ಜಾಲತಾಣಗಳ ಮೇಲೆ ಕ್ರಮ ಕೈಗೊಳ್ಳಿರಿ !
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅನಧಿಕೃತ ಮದರಸಾವನ್ನು ಕೆಡವಲು ಹೋದ ಆಡಳಿತ ಮತ್ತು ಪೊಲೀಸರ ಮೇಲೆ ಮತಾಂಧರು ನಡೆಸಿದ ದಾಳಿಗೆ ಆಡಳಿತ ಮತ್ತು ರಾಜ್ಯ ಸರಕಾರವೇ ಕಾರಣ ಎಂದು ನಿರ್ಧರಿಸಿ ‘ದಿ ವೈರ್’ ಸುದ್ದಿವಾಹಿನಿ ಮತಾಂಧರನ್ನು ನಿರಪರಾಧಿ ಎಂದಿದೆ.
೩. ಬಂಗಾಲದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ತನ್ನಿ !
ಬಂಗಾಲ ರಾಜ್ಯದ ಸಂದೇಶಖಾಲಿಯಲ್ಲಿ ನಡೆಯುತ್ತಿರುವುದು ಆತಂಕ ಕಾರಿಯಾಗಿದೆ. ಬಂದೂಕು ತೋರಿಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನ್ನು ಮಾಧ್ಯಮಗಳು ತೋರಿಸಿವೆ. ಇದು ದುಃಖಕರವಾಗಿದೆ, ಎಂದು ಕೋಲಕಾತಾ ಉಚ್ಚ ನ್ಯಾಯಾಲಯ ಹೇಳಿದೆ.
೪. ಇದುವೇ ಕಾನೂನುಬಾಹಿರ ಚರ್ಚ್ ನ ನಿಜವಾದ ಸ್ವರೂಪ !
ರಂಗಾರೆಡ್ಡಿ (ತೆಲಂಗಾಣ) ಜಿಲ್ಲೆಯ ಜನವಾಡಾ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದ ವೇಳೆ ಮೆಥಾಡಿಸ್ಟ ಚರ್ಚನ ಜನರು ವಿರೋಧಪಡಿಸಿ ಗ್ರಾಮಸ್ಥರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅದಕ್ಕೆ ಗ್ರಾಮಸ್ಥರು ಚರ್ಚ್‌ನಲ್ಲಿ ದಾಂಧಲೆ ನಡೆಸಿ ಪ್ರತಿಕ್ರಿಯಿಸಿದರು.
೫. ಭಾರತದಲ್ಲಿ ಹಿಂದೂಗಳು ಮತ್ತು ಅವರ ಹಬ್ಬಗಳು ಅಸುರಕ್ಷಿತ !
ಫೆಬ್ರವರಿ ೧೫ ರಂದು ಬಿಹಾರದ ದರ್ಭಾಂಗ ಮತ್ತು ಸೀತಾಮಢಿಯಲ್ಲಿ ಮತಾಂಧ ಮುಸಲ್ಮಾನರು ಶ್ರೀ ಸರಸ್ವತಿದೇವಿಯ ವಿಗ್ರಹದ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಇದರ ಒಂದು ಸ್ಥಳದಲ್ಲಿ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಲಾಯಿತು.
೬. ಜೂಜಿಗೆ ದೊರಕುವ ಬೆಂಬಲವು ಸಮಾಜವನ್ನು ಅವನತಿಗೆ ಕೊಂಡೊಯ್ಯುತ್ತದೆ !
ಪ್ರಸ್ತುತ ಭಾರತದಲ್ಲಿ ೭ ಕೋಟಿಗೂ ಹೆಚ್ಚು ಜನರು ರಮ್ಮಿ ಆಡಲು ‘ರಮ್ಮಿ ಸರ್ಕಲ್ ಯಾಪ್’ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ಆನ್‌ಲೈನ್ ಆಟವನ್ನು ಸರ್ವೋಚ್ಚ ನ್ಯಾಯಾಲಯ ‘ಕೌಶಲ್ಯದ ಆಟ’ ಎಂದು ಮನ್ನಣೆ ನೀಡಿದೆ.
೭. ಇಡೀ ದೇಶದಲ್ಲೇ ಹಿಜಾಬನ್ನು ನಿಷೇಧಿಸಿ !
ಜೋಧಪುರ(ರಾಜಸ್ಥಾನ) ಇಲ್ಲಿನ ೧೦ ಕ್ಕೂ ಹೆಚ್ಚು ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಹಿಜಾಬ್ ಧರಿಸಲು ಅನುಮತಿ ನಿರಾಕರಿಸಿದ್ದರಿಂದ ನಗರಸೇವಕ ಮುಝಫ್ಫರ ಖಲಿಫಾ ಇವರು ‘ಸರಕಾರ ಇಂದು ಇದೆ, ನಾಳೆ ಹೋಗಬಹುದು; ಆದರೆ ಶಿಕ್ಷಕರಿಗೆ ಇಲ್ಲಿಯೇ ಉಳಿಯಬೇಕಾಗುತ್ತದೆ’, ಎಂದು ಬೆದರಿಕೆಯೊಡ್ಡಿದ್ದಾರೆ.