ಶಿವಮೊಗ್ಗದ ಕು. ಮೋನಿಕಾ ಆರ್. (೧೮ ವರ್ಷ) ಇವರಿಗೆ ಗೋವಾದ ಸನಾತನದ ರಾಮನಾಥಿ ಆಶ್ರಮಕ್ಕೆ ಬಂದ ನಂತರ ಅರಿವಾದ ಅಂಶಗಳು

ಗೋವಾದ ಸನಾತನದ ಚೈತನ್ಯಮಯ ರಾಮನಾಥಿ ಆಶ್ರಮ

ಕು. ಮೊನಿಕಾ ಆರ್.

‘ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ) ಕೃಪೆಯಿಂದ ನನಗೆ, ಗೋವಾದ ಸನಾತನದ ರಾಮನಾಥಿ ಆಶ್ರಮಕ್ಕೆ ಹೋಗುವ ಅವಕಾಶ ಸಿಕ್ಕಿತು. ಇದರಿಂದ ನನಗೆ ತುಂಬಾ ಆನಂದ ವಾಯಿತು. ನನಗೆ ‘ನಾನು ಗುರುದೇವರು ಇರುವ ಸ್ಥಳಕ್ಕೆ ಹೋಗು ತ್ತಿದ್ದೇನೆ. ಗುರುದೇವರೊಂದಿಗೆ ಮಾತನಾಡಲಿದ್ದೇನೆ’, ಎಂದು ಅನಿಸು ತ್ತಿತ್ತು. ಆಶ್ರಮದಲ್ಲಿ ನನಗೆ ಸಂತರನ್ನು ನೋಡುವ ಭಾಗ್ಯ ಸಿಕ್ಕಿತು.

೧. ರಾತ್ರಿ ನಿದ್ರೆ ಬರದಿರುವುದರಿಂದ ಗುರುದೇವರಿಗೆ ಈ ಮೊದಲು ಎಂದೂ ಮಾಡಿರದ ಪ್ರಾರ್ಥನೆಯಾಗುವುದು

‘ನಾನು ರಾಮನಾಥಿ ಆಶ್ರಮಕ್ಕೆ ಹೋದಾಗ ರಾತ್ರಿ ಮಲಗಿದ್ದಾಗ ಮುಂಜಾನೆ ೪ ಗಂಟೆಗೆ ನನಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಆಗ ನಾನು ಗುರುಚರಣಗಳಲ್ಲಿ ಪ್ರಾರ್ಥನೆ ಮಾಡಿದೆ. ‘ಹೇಗಾದರೂ ಮಾಡಿ ನನಗೆ ನಿದ್ರೆ ಬರಲಿ’, ಆದರೂ ನಿದ್ರೆ ಬರುತ್ತಿರಲಿಲ್ಲ. ಆಗ ‘ಗುರುದೇವಾ, ನಾನು ನಿಮ್ಮ ಚರಣ ಗಳ ಮೇಲೆ ಮಲಗುತ್ತಿದ್ದೇನೆ. ನನ್ನನ್ನು ಮಲಗಿಸಿ’, ಎಂದು ಪ್ರಾರ್ಥಿಸಿದೆ. ಆಗ ಸೂಕ್ಷ್ಮದಿಂದ ಗುರುದೇವರು ಬಂದು ನನ್ನನ್ನು ಅವರ ಚರಣಗಳಲ್ಲಿ ಕರೆದುಕೊಂಡರು. ಅವರು ನನ್ನ ತಲೆಯ ಮೇಲೆ ಕೈ ಇಟ್ಟು ನನ್ನನ್ನು ಮಲಗಿಸಿದರು. ಬೆಳಗ್ಗೆ ಎದ್ದ ನಂತರ ನನಗೆ ತುಂಬಾ ಆನಂದವಾಯಿತು. ನಾನು ನಿನ್ನೆ ರಾತ್ರಿ ಕರೆದ ರೀತಿ ನಾನು ನನ್ನ ಗುರುದೇವರನ್ನು ಯಾವತ್ತೂ ಕರೆದಿರಲಿಲ್ಲ.

೨. ಸಂತರನ್ನು ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಇವರನ್ನು ನೋಡಿ ಆನಂದವಾಗುವುದು

ಆಶ್ರಮಕ್ಕೆ ಹೋದ ನಂತರ ಸಂತರನ್ನು ನೋಡಿ ನನಗೆ ತುಂಬಾ ಆನಂದವಾಯಿತು. ಸದ್ಗುರು ಡಾ. ಮುಕುಲ ಗಾಡಗೀಳ ಇವರು ನಮಗೆ ಪ್ರಯೋಗಗಳನ್ನು ಮಾಡಿ ತೋರಿಸಿದರು. ಅವರನ್ನು ನೋಡಿ ನನಗೆ ತುಂಬಾ ಆನಂದವಾಯಿತು.

೩. ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ೨೦೨೩ ರ ಸಮಯದಲ್ಲಿ ಸೇವೆ ನಿಮಿತ್ತ ಅನೇಕ ಸಂತರು, ಸದ್ಗುರುಗಳು ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ದರ್ಶನವಾಗಿದ್ದರಿಂದ ಭಾವಜಾಗೃತಿಯಾಗಿ ಆನಂದವಾಗುವುದು

ನಾನು ರಾಮನಾಥಿ ಆಶ್ರಮಕ್ಕೆ ಬಂದ ನಂತರ ನನಗೆ ಗುರುಗಳ ಕೃಪೆಯಿಂದ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ೨೦೨೩’ ರ ಸಮಯದಲ್ಲಿ ಅತಿಥಿಗಳ ಸೇವೆಯನ್ನು ಮಾಡುವ ಸೇವೆ ಸಿಕ್ಕಿತು. ಆ ೮ ದಿನಗಳಲ್ಲಿ (೧೬ ರಿಂದ ೨೨.೬.೨೦೨೩) ನನಗೆ ಅನೇಕ ಸಂತರು, ಸದ್ಗುರುಗಳು ಹಾಗೆಯೇ ಪೂ. ರಮಾನಂದ ಗೌಡ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದರ್ಶನವಾಗುತ್ತಿತ್ತು. ಆಗ ನನಗೆ ತುಂಬಾ ಭಾವಜಾಗೃತಿಯಾಗಿ ಆನಂದವಾಗುತ್ತಿತ್ತು.

೪. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಕು. ಮೊನಿಕಾಳ ಕಡೆಗೆ ನೋಡಿ ನಗುತ್ತ ಕೈ ಅಲುಗಾಡಿಸಿದ ನಂತರ ಅವಳ ಭಾವಜಾಗೃತಿಯಾಗುವುದು

ನಾನು ಅತಿಥಿಗಳ ಸೇವೆಯನ್ನು ಮುಗಿಸಿ ಆಸನದ ಮೇಲೆ ಕುಳಿತು ಕೊಂಡಿದ್ದೆ. ಆಗ ಸಾಕ್ಷಾತ್‌ ಲಕ್ಷ್ಮಿಸ್ವರೂಪವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ನನ್ನನ್ನು ನೋಡಿ ನಗುತ್ತ ಕೈ ಅಲುಗಾಡಿಸಿದರು. ಆಗ ಭಾವಜಾಗೃತಿಯಾಗಿ ನನಗೆ ತುಂಬಾ ಆನಂದವಾಯಿತು. ‘ಅವರೊಂದಿಗೆ ಮಾತನಾಡಬೇಕು’, ಎಂದು ಅನಿಸುತ್ತಿತ್ತು.

೫. ಪೂ. ರಮಾನಂದ ಗೌಡ ಇವರೊಂದಿಗೆ ಮಾತನಾಡಿದಾಗ ನನಗೆ ತುಂಬಾ ಆನಂದವಾಯಿತು.

೬. ರಾಮನಾಥಿ ಆಶ್ರಮಕ್ಕೆ ಬಂದ ನಂತರ ನಾಮಜಪ ತುಂಬಾ ಚೆನ್ನಾಗಿ ಆಗಿ ‘ನನ್ನ ಪ್ರಾರಬ್ಧ ನಾಶವಾಗುತ್ತಿದೆ’, ಎಂದು ಅನಿಸುವುದು

ರಾಮನಾಥಿ ಆಶ್ರಮಕ್ಕೆ ಬಂದ ನಂತರ ನನ್ನಿಂದ ನಾಮಜಪ ತುಂಬಾ ಚೆನ್ನಾಗಿ ಮತ್ತು ಏಕಾಗ್ರತೆಯಿಂದ ಆಗುತ್ತಿತ್ತು. ‘ನನ್ನ ಮೇಲಿನ ತೊಂದರೆದಾಯಕ ಆವರಣ ಮತ್ತು ನನ್ನ ಪ್ರಾರಬ್ಧ ನಾಶವಾಗುತ್ತಿದೆ’, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬರುತ್ತಿತ್ತು.

೭. ಆಶ್ರಮದಲ್ಲಿ ಬರುವ ಮೊದಲು ಸ್ವಲ್ಪ ನಡೆದರೂ ನೋಯುತ್ತಿದ್ದ ನನ್ನ ಕಾಲುಗಳು ಆಶ್ರಮಕ್ಕೆ ಬಂದ ನಂತರ ನೋಯಲೇ ಇಲ್ಲ

ಆಶ್ರಮಕ್ಕೆ ಬರುವ ಮೊದಲು ಸ್ವಲ್ಪ ನಡೆದರೂ ನನ್ನ ಕಾಲುಗಳು ತುಂಬಾ ನೋಯುತ್ತಿದ್ದವು. ಗುರುದೇವರ ಆಶ್ರಮಕ್ಕೆ ಬಂದನಂತರ ನನ್ನ ಕಾಲು ನೋವು ಕಡಿಮೆ ಆಗಿ ನನಗೆ ಯಾವುದೇ ಅಡಚಣೆಗಳು ಬರಲಿಲ್ಲ.

೮. ಆಶ್ರಮಕ್ಕೆ ಬಂದ ನಂತರ ನನಗೆ ‘ನನ್ನ ಮೇಲೆ ಗುರುದೇವರ ಕೃಪೆ ಇದೆ’, ಎಂದು ಅನಿಸಿತು.

‘ಗುರುದೇವಾ, ನಾನು ಇನ್ನುಮುಂದೆ ನನ್ನಲ್ಲಿರುವ ಆಲಸ್ಯ ಮತ್ತು ಎಲ್ಲ ಸ್ವಭಾವದೋಷಗಳನ್ನು ಬಿಟ್ಟು ವ್ಯಷ್ಟಿ ಸಾಧನೆಗೆ ಗಮನ ಕೊಡುವೆನು. ಗುರುದೇವಾ, ನನಗೆ ರಾಮನಾಥಿ ಆಶ್ರಮಕ್ಕೆ ಬರುವ ಅವಕಾಶವನ್ನು ನೀಡಿದ್ದಕ್ಕಾಗಿ ಕೋಟಿ ಕೋಟಿ ಕೃತಜ್ಞತೆಗಳು !’

– ಕು. ಮೊನಿಕಾ ಆರ್‌., ಶಿವಮೊಗ್ಗ (೨೫.೫.೨೦೨೩)