ವಿವಾಹ ಭೋಜನದಲ್ಲಿನ ಮಿತವ್ಯಯ !

‘ವಾಟ್ಸ್ಅಪ್’ನಲ್ಲಿ ಹರಿದಾಡುತ್ತಿರುವ ಒಂದು ‘ಪೋಸ್ಟ’ನಲ್ಲಿ ಜೈನ ಹಾಗೂ ಅಗ್ರವಾಲ ಸಮಾಜವು ಒಂದು ನಿರ್ಧಾರ ಕೈಗೊಂಡಿರುವುದು ಇತ್ತಿಚೆಗೆ ಬೆಳಕಿಗೆ ಬಂದಿದೆ. ಈ ನಿರ್ಧಾರದ ಪ್ರಕಾರ ಮದುವೆ ಊಟದಲ್ಲಿ ಕೇಲವ 7 ಪದಾರ್ಥಗಳು ಇಡಬೇಕು. ಅದಕ್ಕಿಂತ ಹೆಚ್ಚು ಪದಾರ್ಥ ಇಟ್ಟರೇ ವಧು-ವರರ ತಲೆಯ ಮೇಲೆ ಅಕ್ಷತೆ ಹಾಕಬಹುದು; ಆದರೆ ಊಟ ಮಾಡುವಂತಿಲ್ಲ. ಆರ್ಥಿಕವಾಗಿ ತುಂಬಾ ಶ್ರೀಮಂತರಾಗಿರುವ ಸಮಾಜವು ಈ ರೀತಿಯ ನಿರ್ಧಾರ ಕೈಗೊಳ್ಳುವುದು ಎಲ್ಲರಿಗೂ ವಿಚಾರ ಮಾಡುವಂತೆ ಆಗಿದೆ. ಪ್ರಸ್ತುತ ಮದುವೆಯ ಊಟದಲ್ಲಿ ಹೆಚ್ಚೆಚ್ಚು ಪದಾರ್ಥಗಳನ್ನು ಇಡುವಂತಹ ಸ್ಪರ್ಧೆಯೇ ನಡೆಯುತ್ತಿದೆ. ಇಂತಹ ವಾತಾವರಣದಲ್ಲಿ ತೆಗೆದುಕೊಂಡಿರುವ ನಿರ್ಧಾರವು ಒಪ್ಪುವಂತಹದ್ದು ಅದಕ್ಕಾಗಿ ಸ್ವಾಗತರ್ಹವಾಗಿದೆ !

ಮದುವೆಗೆ ಬಂದಿದ್ದ ನೆಂಟರಿಗಾಗಿ ಈ ಪದಾರ್ಥ ಇಲ್ಲ ಎಂಬುದು ಇರುವುದಿಲ್ಲ. ದುಬಾರಿ ಮದುವೆಯ ಸಭಾರ್ಗಹದಲ್ಲಿ ಇದು ಹೆಚ್ಚು ಇರುತ್ತದೆ. ಕ್ಷಮತೆಗನುಸಾರ ಹೆಚ್ಚು-ಕಡಿಮೆ ಇರುತ್ತದೆ; ಆದರೆ ಸಧ್ಯ ಎಷ್ಟು ಪದಾರ್ಥ ಇರುತ್ತದೆ ಎಂದರೆ ತಿನ್ನುವವರಿಗೂ ಏನು ತಿನ್ನಬೇಕು ಏನು ತಿನ್ನವುದು ಬೇಡ ಎಂಬ ಪ್ರಶ್ನೆ ನಿರ್ಮಾಣವಾಗುತ್ತದೆ. ಊಟ ಮಾಡುವಮೊದಲೇ ಇಷ್ಟೊಂದು ತಿಂದರೆ ಊಟ ಹೇಗೆ ಮಾಡಬೇಕು ? ಎಂದೂ ಸಹ ಅನಿಸುತ್ತದೆ. ವಿವಿಧ ಪ್ರಕಾರದ ತಂಪು ಪಾನಿಯಗಳು, ಅನೇಕ ವಿಧದ ‘ಸ್ಟಾರ್ಟರ್'(ಊಟ ಮಾಡುವಮೊದಲು ಕೊಡಲಾಗುವ ಸ್ವಲ್ಪ ಪ್ರಮಾಣದ ಆಹಾರ), ಇದು ಮದುವೆ ಸಭಾಗೃಹದಲ್ಲಿ ಕೈಗೆ ಕೊಡಲಾಗುತ್ತದೆ. ಬೆಳಗಿನ ತಿಂಡಿ ಇದಕ್ಕಿಂತ ಹೆಚ್ಚು ಇರುತ್ತದೆ. ಕೆಲವರು ಬೇರೆ ಬೇರೆ ಹಣ್ಣುಗಳು, ಪಾನೀಯಗಳು ಹೀಗೂ ಇಡಲಾಗುತ್ತದೆ. ಊಟದಲ್ಲಿ ಸೂಪ್, ವಿವಿಧ ರೀತಿಯ ಸಲಾಡ್ ಹಾಗೂ ಪಲ್ಯ, ಚಪಾತಿ, ಪರಾಠಾ, ಚೈನಿಸ್ ಪದಾರ್ಥ, ಅನೇಕ ಸಿಹಿ ಪದಾರ್ಥಗಳು, ಬೇರೆ ಬೇರೆ ಪ್ರಕಾರದ ಐಸ್‌ಕ್ರೀಮ್ ಹಾಗೂ ಕೇಕ್ ಇತ್ಯಾದಿ ಪಾಶ್ಚಿಮಾತ್ಯ ಪದಾರ್ಥಗಳನ್ನೂ ಇಡಲಾಗುತ್ತದೆ. ಒಂದು ಕಡೆ ಪಂಕ್ತಿ ಇದ್ದರೆ ಮತ್ತೊಂದು ಕಡೆ ‘ಬಫೆ’ (ತಾವೇ ಬಡಿಸಿಕೊಂಡು ನಿಂತು ಸೇವಿಸುವುದು) ಇರುತ್ತದೆ. ತಮ್ಮ ಶ್ರೀಮಂತಿಕೆಯನ್ನು ತೋರಿಸಲೆಂದೇ ದೊಡ್ಡ ದೊಡ್ಡ ಊಟದ ತಟ್ಟೆ ಇರುತ್ತದೆ. ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರ ವ್ಯರ್ಥವಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಹೆಚ್ಚು ಪದಾರ್ಥ ಉಳಿಯುವುದು ಅಥವಾ ಊಟದ ಎಲೆಯಲ್ಲಿ ವಿಪರೀತ ಹಾಕುವುದು ಇದು ಪದಾರ್ಥದಿಂದಾಗಿ ಪ್ರಮಾಣ ಹೆಚ್ಚಾಗುತ್ತದೆ. ನಾವು ಅನ್ನವನ್ನು ‘ಪೂರ್ಣಬ್ರಹ್ಮ’ ಎಂದು ನಂಬುತ್ತೇವೆ. ಅನ್ನಪೂರ್ಣೆ ದೇವಿಯ ಆಶಿರ್ವಾದದಿಂದಾಗಿ ಮನುಷ್ಯನು ಆರೋಗ್ಯವಂತ ಜೀವನ ನಡೆಸಲು ಬೇಕಾಗುವ ಶಕ್ತಿ, ಚೈತನ್ಯಗಳು ಈ ಅನ್ನದಿಂದ ಸಿಗುತ್ತಿರುತ್ತದೆ. ಯೋಗ್ಯ ಆಹಾರದಿಂದ ಹೇಗೆ ಪೌಷ್ಠಿಕ ತತ್ತ್ವ ಸಿಗುತ್ತದೆ, ಅದರಂತೆ ಅಯೋಗ್ಯ ಆಹಾರದಿಂದ ಶರೀರದ ಹಾನಿಯೋ ಆಗುತ್ತದೆ. ದೀರ್ಘಾಯುಷ್ಯದ ವ್ಯಕ್ತಿಯು ಯೋಗ್ಯ ಆಹಾರ ಸೇವಿಸುವವರಾಗಿರುತ್ತಾರೆ, ಇದು ನಮಗೆ ಗಮನಕ್ಕೆ ಬರುತ್ತದೆ. ಸಮಾಜದಲ್ಲಿ ಇಂದಿಗೂ ಸಹ ಒಂದು ಹೊತ್ತಿನ ಆಹಾರದ ವರ್ಗ ಇದೆ. ಹಿಂದೂ ಧರ್ಮಾನುಸಾರ ಅನ್ನದಾನವು ಶ್ರೇಷ್ಟದಾನವಾಗಿದೆ. ಇದರ ಬಗ್ಗೆ ವಿಚಾರ ಮಾಡಿ ಯೋಗ್ಯ ಪ್ರಕಾರದ ಅನ್ನ ದಾನ ಮಾಡಿದರೇ ಯಜಮಾನ ಮತ್ತು ನೆಂಟರು ಇಬ್ಬರಿಗೂ ಶಾರೀರಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಲಾಭವಾಗುತ್ತದೆ. ಆದ್ದರಿಂದ ನಮ್ಮಬಳಿ ಇರುವ ಲಕ್ಷ್ಮೀಸ್ವರೂಪದ ಆಸ್ತಿಯನ್ನು ಯೋಗ್ಯವಾಗಿ ಉಪಯೋಗಿಸಿ ಗೌರವಿಸಬೇಕು. – ಸೌ. ಸ್ನೇಹಾ ರೂಪೇಶ ತಾಮ್ಹನಕರ, ರತ್ನಾಗಿರಿ