‘ಬಿ.ಎ.ಪಿ.ಎಸ್. ಹಿಂದೂ ದೇವಾಲಯ’ದ ಸ್ಥಳದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಇವರ ಉಪಸ್ಥಿತಿ

ಅಬುಧಾಬಿಯಲ್ಲಿ ‘ಬಿ.ಎ.ಪಿ.ಎಸ್. ಹಿಂದೂ ದೇವಾಲಯ’ದಿಂದ ಕಾರ್ಯಕ್ರಮದ ಆಯೋಜನೆ !

(ಹಾರ್ಮನಿ ಎಂದರೆ ಏಕತೆ)

ಅಬುಧಾಬಿ – ಇಲ್ಲಿಯ ಮರುಭೂಮಿಯಲ್ಲಿ ನಿರ್ಮಿಸಲಾದ ಹಾಗೂ ಪಶ್ಚಿಮ ಏಷ್ಯಾದ ಅತಿದೊಡ್ಡ ಹಿಂದೂ ದೇವಾಲಯವನ್ನು ‘ಬಿ.ಎ.ಪಿ.ಎಸ್. ಹಿಂದೂ ದೇವಾಲಯ’ವನ್ನು ಫೆಬ್ರವರಿ 14 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಫೆಬ್ರವರಿ 15ರಂದು ದೇವಸ್ಥಾನದ ವತಿಯಿಂದ ಆಯೋಜಿಸಿದ್ದ ‘ಹಾರ್ಮನಿ’ ಕಾರ್ಯಕ್ರಮಕ್ಕೆ ಸನಾತನ ಸಂಸ್ಥೆಯ ವತಿಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಇವರು ಉಪಸ್ಥಿತರಿದ್ದರು. ಈ ದೇವಾಲಯವು ಮಾರ್ಚ್ 1, 2024 ರಿಂದ ದರ್ಶನಕ್ಕಾಗಿ ತೆರೆಯಲ್ಪಡುತ್ತದೆ.

ಶ್ರೀರಾಮ ಮತ್ತು ಸೀತೆಯ ದರ್ಶನ ಪಡೆಯುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್

 

‘B.A.P.S. ಮಂದಿರಾ’ದಲ್ಲಿನ ರಾಧಾಕೃಷ್ಣ ದೇವಸ್ಥಾನ

 

‘B.A.P.S. ಮಂದಿರಾ’ದಲ್ಲಿನ ಭಗವಾನ್ ಜಗನ್ನಾಥ

 

ಶಂಕರ ಪಾರ್ವತಿ ದೇವಸ್ಥಾನದ ದರ್ಶನ ಪಡೆಯುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್

ಸನಾತನ ಸಂಸ್ಥೆಯ 3 ಗುರುಗಳ ಹೆಸರಿನಲ್ಲಿ ದೇವಾಲಯದ ನಿರ್ಮಾಣಕ್ಕೆ 3 ಇಟ್ಟಿಗೆ ಕೊಡುಗೆ !

ದೇವಸ್ಥಾನ ನಿರ್ಮಾಣಕ್ಕೆ ಸನಾತನ ಸಂಸ್ಥೆಯ 3 ಗುರುಗಳ ಹೆಸರಿನಲ್ಲಿ ನೀಡಿದ ಇಟ್ಟಿಗೆಗಳಿಗೆ ಪೂಜೆ ಸಲ್ಲಿಸುತ್ತಿರುವಾಗ ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ್

ಜುಲೈ 2022 ರಲ್ಲಿ, ಶ್ರೀ ಚಿತ್‌ಶಕ್ತಿ (ಸೌ) ಅಂಜಲಿ ಗಾಡಗಿಳ್ ಇವರು ಸಂಶೋಧನಾ ನಿಮಿತ್ತ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಭೇಟಿ ನೀಡಿದ್ದರು. ಜುಲೈ 27, 2022 ರಂದು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಅವರು ‘ಬಿ.ಎ.ಪಿ.ಎಸ್. ಹಿಂದೂ ದೇವಾಲಯ’ಕ್ಕೆ ಭೇಟಿ ನೀಡಿ ಅದರ ನಿರ್ಮಾಣವನ್ನು ಪರಿಶೀಲಿಸಿದರು. ಆ ಸಮಯದಲ್ಲಿ ಅವರು ಸನಾತನ ಸಂಸ್ಥೆಯ 3 ಗುರುಗಳ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಹೆಸರಿನಲ್ಲಿ) ದೇವಾಲಯದ ನಿರ್ಮಾಣಕ್ಕಾಗಿ 3 ಇಟ್ಟಿಗೆಗಳ ಪೂಜೆ ಮಾಡಿ ಅರ್ಪಿಸಿದರು. ‘ಬಿ.ಎ.ಪಿ.ಎಸ್. ದೇವಸ್ಥಾನ’ದ ಅಧಿಕಾರಿ ಶ್ರೀ. ರವೀಂದ್ರ ಕದಂ ಅವರು ಇಟ್ಟಿಗೆ ಪೂಜೆಯ ಸಿದ್ಧತೆ ಮಾಡಿದ್ದರು ಮತ್ತು ಅವರು ದೇವಾಲಯದ ವಿವರಗಳು ಮತ್ತು ವೈಶಿಷ್ಟ್ಯಗಳನ್ನು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಅವರಿಗೆ ತಿಳಿಸಿದ್ದರು.

‘ಬಿ.ಎ.ಪಿ.ಎಸ್. ಹಿಂದೂ ದೇವಾಲಯ’ದ ಸ್ಥಳದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಇವರ ಉಪಸ್ಥಿತಿ

‘ಬಿ.ಎ.ಪಿ.ಎಸ್. ದೇವಸ್ಥಾನ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಧಿಕೃತ ಆಮಂತ್ರಣ

ದೇವಸ್ಥಾನದ ಪದಾಧಿಕಾರಿ ಶ್ರೀ. ರವೀಂದ್ರ ಕದಂ ಅವರು ಅಕ್ಟೋಬರ್ 2023 ರಲ್ಲಿ ದೇವಸ್ಥಾನದ ವತಿಯಿಂದ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಅವರಿಗೆ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರಲು ಆಹ್ವಾನವನ್ನು ಕಳುಹಿಸಿದ್ದರು.

‘B.A.P.S. ಮಂದಿರಾ’ದಲ್ಲಿನ ಪ.ಪೂ. ಫ್ರಮುಖ ಸ್ವಾಮಿ ಮಹಾರಾಜನ ವಿಗ್ರಹ

‘B.A.P.S. ಮಂದಿರಾ’ದಲ್ಲಿನ ಮನಮೋಹಕ ದೃಶ್ಯಗಳು

ದೇವಾಲಯದ ವೈಶಿಷ್ಟ್ಯಗಳು

‘ಬಿ.ಎ.ಪಿ.ಎಸ್. ಹಿಂದೂ ದೇವಾಲಯ’ವು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೊದಲ ಹಿಂದೂ ದೇವಾಲಯವಾಗಿದೆ ಮತ್ತು ಈ ಭವ್ಯವಾದ ದೇವಾಲಯವನ್ನು ಒಟ್ಟು 27 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಗೋಡೆಗಳಲ್ಲಿ ರಾಮಾಯಣ, ಶಿವ ಪುರಾಣ ಮತ್ತು ಜಗನ್ನಾಥನ ರಥೋತ್ಸವದ ಚಿತ್ರಗಳಿವೆ. ಇದಲ್ಲದೇ ದೇವಸ್ಥಾನದ ಬಳಿ ಗಂಗಾ ಘಾಟ್ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಗಂಗಾ-ಯಮುನಾ ಮತ್ತು ಸರಸ್ವತಿಯ ಸಂಗಮವನ್ನು ಸಹ ಚಿತ್ರಿಸಲಾಗಿದೆ. ಇದರೊಂದಿಗೆ ಈ ದೇವಾಲಯವು ಭಗವಾನ್ ಶ್ರೀ ಅಕ್ಷರ ಪುರುಷೋತ್ತಮ, ಭಗವಾನ್ ರಾಧಾ-ಕೃಷ್ಣ, ಭಗವಾನ್ ಶ್ರೀ ರಾಮ-ಸೀತಾ, ಭಗವಾನ್ ಶಿವ-ಪಾರ್ವತಿ, ಭಗವಾನ್ ಜಗನ್ನಾಥ, ಭಗವಾನ್ ಶ್ರೀನಿವಾಸ-ಪದ್ಮಾವತಿ ದೇವಿ ಮತ್ತು ಭಗವಾನ್ ಅಯ್ಯಪ್ಪ ಸ್ವಾಮಿಯ ದೇವಾಲಯಗಳು ಇವೆ.

ದೇವಸ್ಥಾನದಲ್ಲಿ ಸ್ಥಾಪಿಸಲಾದ ಪರಬ್ರಹ್ಮ ಪುರುಷೋತ್ತಮ ಭಗವಾನ್ ಶ್ರೀ ಸ್ವಾಮಿನಾರಾಯಣ ಮತ್ತು ಅಕ್ಷರಬ್ರಹ್ಮ ಶ್ರೀ ಗುಣಾತೀತಾನಂದ ಸ್ವಾಮಿಗಳ ವಿಗ್ರಹಗಳು

 

ಭಗವಾನ ಶ್ರೀ ಸ್ವಾಮಿನಾರಾಯಣ ದೇವರ ಮೂರ್ತಿಗೆ ಜಲಾಭಿಷೇಕ ಮಾಡುತ್ತಿರುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್

ದೇವಸ್ಥಾನದ ಉದ್ಘಾಟನೆ ನಿಮಿತ್ತ ಫೆಬ್ರವರಿ 15ರಂದು ದೇವಸ್ಥಾನದ ವತಿಯಿಂದ ‘ಹಾರ್ಮನಿ’ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವಸ್ಥಾನದ ಮುಖ್ಯಸ್ಥ ಮಹಂತ ಸ್ವಾಮಿ ಮಹಾರಾಜರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಸಹಿತ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಯಹೂದಿ, ಸಿಖ್ ಸೇರಿದಂತೆ ವಿವಿಧ ಪಂಗಡಗಳ ಗುರುಗಳು ಹಾಗೂ ಅವರ ಶಿಷ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವ್ಯಾಟಿಕನ್ ಸಿಟಿ ಚರ್ಚ್‌ನ ವಿಶೇಷ ಪ್ರತಿನಿಧಿ, ಇಸ್ರೇಲ್‌ನ ಯಹೂದಿ ಧರ್ಮದ ವಿಶೇಷ ಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಹರಿದ್ವಾರದ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರ ವೈಯಕ್ತಿಕ ಸಲಹೆಗಾರರು ಕಾರ್ಯಕ್ರಮವನ್ನು ಸೂತ್ರಸಂಚಾಲನೆಯನ್ನು ಮಾಡಿದರು. ಸ್ವಾಮಿ ಬ್ರಹ್ಮವಿಹಾರಿದಾಸ ಮಹಾರಾಜರು ಸ್ವಾಗತ ಭಾಷಣ ಮಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಸಹ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿಶೇಷ ಆಹ್ವಾನಿತರೆಲ್ಲರೂ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಅವರಿಗೆ ದೇವಸ್ಥಾನದ ಸೇವಾಧಾರಿ ಸೌ. ಶೀತಲ ಟಂಕ ಇವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪದಾಧಿಕಾರಿ ಶ್ರೀ. ರವೀಂದ್ರ ಕದಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಚಿತ್ರೀಕರಣ ಮಾಡಿದ ಸಾಧಕ ಶ್ರೀ. ಸ್ನೇಹಲ್ ರಾವುತ್ ಮತ್ತು ಶ್ರೀ. ವಿನಾಯಕ ಶಾನಭಾಗ ವಿಶೇಷ ಪಾಸ್ ನೀಡಿ ಸಹಕರಿಸಿದರು.