ಬಾಲಿವುಡ್‌ಗೆ ಬೀಗ ಜಡಿಯಿರಿ !

ಚಲನಚಿತ್ರಗಳಲ್ಲಿ ಮಹಿಳೆಯರನ್ನು ‘ಐಟಮ್ ಎಂದು ತೋರಿಸಿದ್ದಕ್ಕಾಗಿ ಟೀಕಿಸಿದ ಚಲನಚಿತ್ರ ನಟ ಆಮೀರ ಖಾನ್ ಇವರು ತಾವು ಕೂಡ ಇಂತಹ ಕೃತಿಗಳನ್ನು ಬೆಂಬಲಿಸಿ ಅದರಲ್ಲಿ ತೊಡಗಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ತಡವಾಗಿಯಾದರೂ ಜಾಣತನದ ಅರಿವಾಗುವುದು, ಒಂದು ರೀತಿಯಲ್ಲಿ ಯೋಗ್ಯವೂ ಇರುತ್ತದೆ ಹಾಗೂ ಆಮೀರ ಖಾನ್ ಅದನ್ನು ಮಾಡಿದರು, ಎಂದು ಯಾರಿಗಾದರೂ ಅನಿಸಬಹುದು; ಆದರೆ ಇಲ್ಲಿಗೇ ನಿಲ್ಲಲು ಸಾಧ್ಯವಿಲ್ಲ, ಈ ವಿಷಯದಲ್ಲಿ ಚಳುವಳಿಯನ್ನು ಆರಂಭಿಸಬೇಕು. ಮಹಿಳೆಯರನ್ನು ಒಂದು ಭೋಗವಸ್ತು ಎಂದು ತಿಳಿಯುವ ಹಾಗೂ ಅವರನ್ನು ಹಾಗೆ ಚಲನಚಿತ್ರದಲ್ಲಿ ತೋರಿಸುವಂತಹ ವಿಕೃತಿ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಹರಡಿದೆ. ಅದನ್ನು ತಡೆಗಟ್ಟುವ ಪ್ರಯತ್ನವಾಗಬೇಕು. ಈ ಹಿಂದೆ ಹಿಂದಿ ಚಲನಚಿತ್ರರಂಗದಲ್ಲಿ (ಯಾವುದನ್ನು ‘ಹಾಲಿವುಡ್ನ ಅಂಧಾನುಕರಣೆಯಿಂದ ‘ಬಾಲಿ ವುಡ್ ಎನ್ನಲಾಗುತ್ತದೆಯೋ ಅಲ್ಲಿ) ‘ಮೀ ಟೂ (ಹಿಂದಿ
ಚಲನಚಿತ್ರರಂಗದಲ್ಲಿ ಕೆಲಸದ ಬದಲಿಗೆ ಲೈಂಗಿಕ ಶೋಷಣೆ ಯಾಗಿರುವ ನಟಿಯರು ಆರಂಭಿಸಿದ ಚಳುವಳಿ) ಎಂಬ ಹೆಸರಿನ ಚಳುವಳಿ ಆರಂಭವಾಗಿತ್ತು ಹಾಗೂ ಅದರಿಂದ ಸ್ವಲ್ಪ ಪ್ರಮಾಣದ ಪ್ರಭಾವ, ಒತ್ತಡ ನಿರ್ಮಾಣವಾಯಿತು; ಆದರೂ ಅದು ಪೂರ್ಣ ಯಶಸ್ವಿಯಾಯಿತು. ಅದರಿಂದ ಇಂತಹ ಘಟನೆಗಳು ಪೂರ್ಣ ನಿಂತಿತು ಎಂದು ಹೇಳಲಾಗದು. ಇಂತಹ ಚಳುವಳಿಯನ್ನು ಆರಂಭಿಸಬೇಕು ಹಾಗೂ ಅದಕ್ಕೆ ಸಮಾಜದಲ್ಲಿರುವ ಸಂಸ್ಕೃತಿಪ್ರೇಮಿ ವೀಕ್ಷಕರು ಸಹಾಯ ಮಾಡಬೇಕು.

ವ್ಯವಸಾಯದ ಮೂಲಕ ವಿಕೃತಿ !

ದಾದಾಸಾಹೇಬ ಫಾಲ್ಕೆ ಇವರು ೧೯೧೩ ರಲ್ಲಿ ಮೊಟ್ಟ ಮೊದಲಬಾರಿಗೆ ಭಾರತದಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದರು. ಅವರ ಮೊದಲ ಚಲನಚಿತ್ರದ ಹೆಸರು ‘ರಾಜಾ ಹರಿಶ್ಚಂದ್ರ ! ಅನಂತರ ಅನೇಕ ಚಲನಚಿತ್ರಗಳು ನಿರ್ಮಾಣವಾದವು. ಆಗ ಹೆಚ್ಚಿನ ಚಲನಚಿತ್ರಗಳು ಧಾರ್ಮಿಕ ಕಥೆಗಳನ್ನು ಆಧರಿಸಿರುತ್ತಿದ್ದವು. ವಿಶೇಷವೆಂದರೆ ಅದರಲ್ಲಿ ಮಹಿಳೆಯರ ಪಾತ್ರವನ್ನು ಪುರುಷರೇ ನಿಭಾಯಿಸುತ್ತಿದ್ದರು. ಮುಂದೆ ಕೆಲವೇ ವರ್ಷಗಳಲ್ಲಿ ಮಹಿಳೆಯರೂ ಚಲನಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ಆದರೆ ಅದರಲ್ಲಿಯೂ ಸೌಜನ್ಯತೆ ಇತ್ತು. ಕಾಲವು ಬದಲಾದಂತೆ ಸಮಾಜದ ಮಾನಸಿಕತೆಯೂ ಬದಲಾಗುತ್ತಾ ಹೋಯಿತು. ಸಮಾಜಕ್ಕೆ ಬೇಕೆಂದು ಮಹಿಳೆಯರನ್ನು ಅರೆನಗ್ನವಾಗಿ ತೋರಿಸುವ ಪಾಶ್ಚಾತ್ಯರ ಕೃತಿಯ ಅನುಕರಣೆ ಇಲ್ಲಿಯೂ ಆರಂಭವಾಯಿತು. ಇಂದಿನ ಸ್ಥಿತಿ ಹೇಗಿದೆಯೆಂದರೆ, ಚಲನಚಿತ್ರಗಳಲ್ಲಿ ನಟಿಯರು ಇಡೀ ದೇಹವನ್ನು ಮುಚ್ಚುವಂತಹ ಬಟ್ಟೆ ತೊಡುವುದನ್ನು ತಪ್ಪೆಂದು ಪರಿಗಣಿಸಲಾಗುತ್ತಿದೆ. ಮಹಿಳಾ ಪಾತ್ರಧಾರಿಗಳು ಸೀರೆಯಲ್ಲಿ ಕಾಣಿಸುವುದು ಅಪರೂಪವಾಗಿದೆ. ಕೆಲವು ಚಲನಚಿತ್ರಗಳಂತೂ ಅಶ್ಲೀಲತೆಯನ್ನೇ ತೋರಿಸುತ್ತವೆ ಹಾಗೂ ಅದರಲ್ಲಿ ನಗ್ನತೆಯನ್ನು ಬಿಟ್ಟು ಬೇರೇನೂ ಇರುವುದಿಲ್ಲ. ಇಂದು ದೈಹಿಕ ಸಂಬಂಧದ ಚಿತ್ರಣವನ್ನು ನೇರವಾಗಿ ತೋರಿಸುವಷ್ಟರ ಮಟ್ಟಿಗೆ ಹಿಂದಿ ಚಲನಚಿತ್ರರಂಗವು ತಲುಪಿದೆ. ಇದು ಪ್ರಗತಿಯೋ ಅವನತಿಯೋ ? ಎಂಬುದನ್ನು ಹೇಳುವ ಅವಶ್ಯಕತೆಯಿಲ್ಲ. ಸ್ಥಿತಿ ಹೀಗಿರುವಾಗ ಆಮೀರ ಖಾನ್ ಹೇಳಿರುವ ವಿಷಯ ತುಂಬಾ ಸೌಮ್ಯವಾಗಿದೆ ಎಂದೇ ಹೇಳಬೇಕಾಗುತ್ತದೆ. ‘ಜನರಿಗೆ ಬೇಕಾಗಿದ್ದರಿಂದಲೇ ನಾವು ತೋರಿಸುತ್ತೇವೆ, ಎಂದು ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಸಮರ್ಥನೆ ನೀಡುತ್ತಾರೆ. ಚಲನಚಿತ್ರ ನಿರ್ಮಾಣವೆಂಬುದು ಒಂದು ವ್ಯವಸಾಯವಾಗಿದೆ; ಚಲನಚಿತ್ರ ನಿರ್ಮಾಪಕನು ಅದರಿಂದ ಹಣ ಸಂಪಾದಿಸುವ ವಿಚಾರ ಮಾಡುತ್ತಾನೆ. ಅದಕ್ಕಾಗಿ ಅವನು ಸಮಾಜವನ್ನು ಚಲನಚಿತ್ರದ ಕಡೆಗೆ ಆಕರ್ಷಿಸಲು ಪ್ರಯತ್ನಿಸುತ್ತಾನೆ. ಅದರಿಂದ ‘ಸಮಾಜದ ಮೇಲೆ ಏನು ಪರಿಣಾಮವಾಗುತ್ತದೆ ಹಾಗೂ ಸಮಾಜವು ಯಾವ ದಿಕ್ಕಿಗೆ ಹೋಗುತ್ತಿದೆ ?, ಎಂಬುದಕ್ಕೂ ಅವನಿಗೂ ಏನೂ ಸಂಬಂಧವಿಲ್ಲದಂತಿರುತ್ತಾನೆ. ಇದರಲ್ಲಿ ಕೇವಲ ಅಶ್ಲೀಲತೆಯಷ್ಟೇ ಅಲ್ಲದೇ ಹಿಂಸಾಚಾರ, ಅನೈತಿಕತೆ, ಭ್ರಷ್ಟಾಚಾರ ಇತ್ಯಾದಿ ಅನೇಕ ವಿಷಯಗಳಿವೆ. ಸಂಪೂರ್ಣ ಚಲನಚಿತ್ರದಲ್ಲಿ ಇದನ್ನೇ ತೋರಿಸಿ ಕೊನೆಗೆ ಕೇವಲ ಸತ್ಯ ಹಾಗೂ ನೈತಿಕತೆಯ ವಿಜಯವಾಗುತ್ತದೆ, ಎಂದು ತೋರಿಸಿ ‘ನಾವು ಸಮಾಜಪ್ರಬೊಧನೆ ಮಾಡುತ್ತಿದ್ದೇವೆ, ಎನ್ನುತ್ತಾ ಜನರ ಕಣ್ಣಿಗೆ ಧೂಳೆರಚುವ ಪ್ರಯತ್ನ ಮಾಡಲಾಗುತ್ತದೆ.

ಮಹಿಳೆಯರನ್ನು ಗೌರವಿಸಲೇ ಬೇಕು !

ಚಲನಚಿತ್ರಗಳ ಮೂಲಕ ಅಲ್ಪಾವಧಿಯಲ್ಲಿ ಯಾವುದೇ ವಿಷಯವನ್ನು ಸಮಾಜಕ್ಕೆ ತಲುಪಿಸಬಹುದು ಹಾಗೂ ಅದರ ಪ್ರಭಾವ ಸಮಾಜದ ಮೇಲೆ ಅನೇಕ ವರ್ಷಗಳ ವರೆಗೆ ಇರಲು ಸಾಧ್ಯವಿದೆ. ಅಷ್ಟು ಮಾತ್ರವಲ್ಲ, ಅದರಿಂದ ಸಮಾಜದಲ್ಲಿ ದೊಡ್ಡ ಪರಿವರ್ತನೆಯೂ ಆಗಬಹುದು. ಕೆಲವೊಮ್ಮೆ ಅದು ತಾತ್ಕಾಲಿಕವಾಗಿರಬಹುದು ಅಥವಾ ದೀರ್ಘಕಾಲವೂ ಇರಬಹುದು.

ಇದರ ಉದಾಹರಣೆಯೆಂದರೆ ೧೯೭೫ ರಲ್ಲಿ ಪ್ರದರ್ಶನವಾದ ‘ಜಯ ಸಂತೋಷಿ ಮಾತಾ ಈ ಚಲನಚಿತ್ರ ! ಈ ಚಲನಚಿತ್ರಕ್ಕೆ ಶ್ರದ್ಧಾಳುಗಳಿಂದ ಅಪಾರ ಪ್ರೋತ್ಸಾಹ ಸಿಕ್ಕಿತು. ಅನಂತರ ಸಾವಿರಾರು ಜನರು ಸಂತೋಷಿಮಾತೆಯ ಭಕ್ತಿ ಮಾಡಲು ಆರಂಭಿಸಿದರು, ವ್ರತ ಮಾಡಲು ಆರಂಭಿಸಿದರು. ಮುಂಬಯಿ ಯಲ್ಲಿ ಸಂತೋಷಿಮಾತೆಯ ಮಂದಿರವನ್ನೂ ನಿರ್ಮಿಸಲಾಯಿತು. ಅಲ್ಲಿ ಪ್ರತಿ ಶುಕ್ರವಾರ ತುಂಬಾ ಜನದಟ್ಟಣೆ ಇರುತ್ತಿತ್ತು; ಆದರೆ ಆಧ್ಯಾತ್ಮಿಕ ದೃಷ್ಟಿಯಿಂದ ಅವಳು ಒಂದು ಕುಟುಂಬದ ಕುಲದೇವಿ ಆಗಿರುವುದರಿಂದ ಅವಳ ಸಾಧನೆಯಿಂದ ಇನ್ನಿತರರಿಗೆ ಸಾಕಷ್ಟು ಲಾಭವಾಗದ ಕಾರಣ ಸಮಾಜದಲ್ಲಿ ಈ ದೇವತೆಯ ಪ್ರಭಾವ ಕ್ರಮೇಣ ಕಡಿಮೆಯಾಯಿತು. ಅಂದರೆ ಸಮಾಜದ ಮುಂದೆ ಏನನ್ನು ಇಡಲಾಗುತ್ತದೆ ? ಹಾಗೂ ಸಮಾಜದ ಮೇಲೆ ಅದರ ಪ್ರಭಾವ ಹೇಗಾಗುತ್ತದೆ ? ಎಂಬುದು ಅರಿವಾಗುತ್ತದೆ. ಮಹಿಳೆಯರನ್ನು ಸಮಾಜದ ಮುಂದೆ ‘ಐಟಮ್ ಎಂದು ನಿರಂತರ ತೋರಿಸಿದರೆ ಸಂಪೂರ್ಣ ಸಮಾಜದ ಮೇಲೆ ಅದೇ ಸಂಸ್ಕಾರವಾಗುತ್ತದೆ ಹಾಗೂ ಸಮಾಜವೂ ಮಹಿಳೆಯರನ್ನು ಅದೇ ದೃಷ್ಟಿಯಿಂದ ನೋಡುತ್ತದೆ. ತದ್ವಿರುದ್ಧ ಮಹಿಳೆಯರನ್ನು ಭಾರತೀಯ ಸಂಸ್ಕೃತಿಗನುಸಾರ ದೇವಿಯ ಸ್ವರೂಪದಲ್ಲಿ ತೋರಿಸಿದರೆ, ಅವಳಿಗೆ ಹಾಗೆ ಗೌರವಿಸಿದರೆ, ಬೇರೆಯೇ ಪರಿಣಾಮವಾಗಬಹುದು; ಆದರೆ ಅಂತಹ ಚಲನಚಿತ್ರ ತಯಾರಿಸಿ ಅದನ್ನು ಸಮಾಜ ಸ್ವೀಕರಿಸದಿದ್ದರೆ, ನಿರ್ಮಾಪಕನಿಗೆ ದೊಡ್ಡ ಆರ್ಥಿಕ ಹಾನಿಯಾಗಬಹುದು, ಎನ್ನುವ ವಿಚಾರವಿರುತ್ತದೆ. ಹಾಗಾಗಿ ನಿರ್ಮಾಪಕರು ಅಂತಹ ಚಲನಚಿತ್ರಗಳನ್ನು ತಯಾರಿಸುವುದೇ ಇಲ್ಲ. ಇಂತಹ ಮಾನಸಿಕತೆಯಿದ್ದರೆ, ಅದು ತಪ್ಪೆಂದು ಹೇಳಬೇಕಾಗುತ್ತದೆ. ‘ಮದರ್ ಇಂಡಿಯಾದಂತಹ ಚಲನಚಿತ್ರಕ್ಕೆ ಅಪಾರ ಪ್ರೋತ್ಸಾಹ ಸಿಕ್ಕಿತ್ತು, ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಮಹಿಳೆಯರನ್ನು ಕೇಂದ್ರಸ್ಥಾನದಲ್ಲಿಟ್ಟು ತಯಾರಿಸಿದ ಅನೇಕ ಚಲನಚಿತ್ರಗಳಿಗೆ ಗೌರವ ಸಿಕ್ಕಿದೆ, ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸಮಾಜದ ಒಂದು ಸಮೂಹಕ್ಕೆ ‘ಐಟಮ್ ಸಾಂಗ್ ಇಷ್ಟವಾಗುತ್ತದೆ ಹಾಗೂ ಅದರ ಸಂಗೀತ ಇಷ್ಟವಾಗುತ್ತದೆ; ಆದ್ದರಿಂದ ಹಾಗೆ ಮಾಡಬೇಕು, ಎಂಬುದನ್ನು ಈ ಚಲನಚಿತ್ರರಂಗದ ಆಮೀರ ಖಾನ್ ಇವರಂತಹ ಕಲಾವಿದರು ವಿರೋಧಿಸಬೇಕು ಹಾಗೂ ಇಂತಹ ವಿಕೃತಿ ನಿಲ್ಲುವವರೆಗೆ ಚಳುವಳಿಯನ್ನು ಹಮ್ಮಿಕೊಳ್ಳಬೇಕು. ‘ಬಾಲಿವುಡ್ನಲ್ಲಿ ನೈತಿಕತೆ ಎಷ್ಟು ಉಳಿದಿದೆ ಅಥವಾ ಅದು ಸ್ವಲ್ಪವಾದರೂ ಉಳಿದಿದೆಯೆ ?, ಎಂಬುದರ ಬಗ್ಗೆ ವಿಚಾರ ಮಾಡಬೇಕು. ಬಾಲಿವುಡ್‌ಗಿಂತ ದಕ್ಷಿಣ ಭಾರತದ ಅಥವಾ ಕೆಲವು ಪ್ರಾದೇಶಿಕ ಭಾಷೆಯ ಪಾರಂಪರಿಕ ವಿಚಾರಗಳ ಚಲನಚಿತ್ರ ಹೆಚ್ಚು ಜನಪ್ರಿಯವಾಗುತ್ತಿವೆ, ಎಂಬುದರ ವಿಚಾರ ಮಾಡಬೇಕು, ಉದಾ. ಬಾಹುಬಲಿ, ಕಾಂತಾರಾ ಇತ್ಯಾದಿಗಳ ವಿಚಾರ ಮಾಡಬಹುದು. ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ಕೆಲಸ ಮಾಡುವವರು ಅವರ ಸಂಸ್ಕೃತಿಯ ಜತನ ಮಾಡುತ್ತಾರೆಂಬುದು ಕಾಣಿಸುತ್ತದೆ. ಮೂಲತಃ ‘ಬಾಲಿವುಡ್‌ಗೆ ಸಂಸ್ಕೃತಿಯೆಂಬುದೇ ಇಲ್ಲ, ಅಲ್ಲಿ ವಿಕೃತಿ ಮಾತ್ರ ಇದೆ, ಎಂದು ಹೇಳಿದರೆ ಅದನ್ನು ತಪ್ಪೆಂದು ಯಾರೂ ಹೇಳಲಿಕ್ಕಿಲ್ಲ. ಅಪವಾದಾತ್ಮಕವಾಗಿ ಒಳ್ಳೆಯ ವಿಚಾರ ಮಾಡುವವರೂ ಕೆಲವರಿದ್ದಾರೆ. ಉದಾ. ‘ಕಶ್ಮೀರ ಫೈಲ್ಸ್, ‘ದ ಕೇರಳ ಸ್ಟೋರಿ ಇತ್ಯಾದಿ ಚಲನಚಿತ್ರಗಳು ವಾಸ್ತವಿಕತೆಯನ್ನು ತೋರಿಸುವುದಾಗಿವೆ. ಇಂತಹವರಿಗೆ ‘ಬಾಲಿವುಡ್ನಲ್ಲಿನ ತಪ್ಪುಗಳು ಕಾಣಿಸುತ್ತವೆ ಹಾಗೂ ಅವರು ಅವುಗಳ ಮೇಲೆ ಪ್ರಹಾರ ಮಾಡಲು ಕೂಡ ಪ್ರಯತ್ನಿಸುತ್ತಾರೆ, ಆಗ ಈ ಜನರಿಗೆ ಬಹಿಷ್ಕಾರ ಹಾಕುವ ಪ್ರಯತ್ನ ನಡೆಯುತ್ತದೆ. ಇದೆಲ್ಲವನ್ನೂ ನೋಡುವಾಗ ಒಟ್ಟಾರೆ ಬಾಲಿವುಡ್‌ನ ಬಗ್ಗೆ ಚರ್ಚೆ ನಡೆಯಬೇಕು, ಈಗ ಯಾರಾದರೂ ಬಾಲಿವುಡ್‌ನ್ನೇ ಮುಚ್ಚಬೇಕೆಂದು ಹೇಳಿದರೆ ಅದು ಕೂಡ ಯೋಗ್ಯವೆಂದೇ ಹೇಳಬೇಕಾಗುತ್ತದೆ.