‘ಮೆಕ್‌ ಭಾರತ ಗ್ರೆಟ್‌ ಅಗೆನ್‌’|

ಅಮೇರಿಕದ ೪೭ ನೇ ರಾಷ್ಟ್ರಾಧ್ಯಕ್ಷರೆಂದು ಡೊನಾಲ್ಡ್ ಟ್ರಂಪ್‌ ಇವರು ಪ್ರಮಾಣವಚನ ಸ್ವೀಕರಿಸಿದ ನಂತರ ಅನೇಕ ಆದೇಶಗಳನ್ನು ಹೊರಡಿಸಿದ್ದಾರೆ. ‘ಟ್ರಂಪ್‌ ಇವರು ಪ್ರಮಾಣವಚನ ಸ್ವೀಕರಿಸುವ ಮೊದಲೇ ೧೦೦ ಆದೇಶಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅವುಗಳಿಗೆ ಸಹಿ ಹಾಕಿ ಜಾರಿಗೆ ತರಲಿದ್ದಾರೆ’, ಎಂದು ಹೇಳಲಾಗಿತ್ತು. ವಾಸ್ತವದಲ್ಲಿಯೂ ಪ್ರಮಾಣವಚನ ವಿಧಿಯ ನಂತರ ಕೇವಲ ೬ ಗಂಟೆಗಳಲ್ಲಿಯೇ ಟ್ರಂಪ್‌ ಇವರು ಮಾಜಿ ರಾಷ್ಟ್ರಾಧ್ಯಕ್ಷ ಜೊ ಬಾಯಡೆನ್‌ ಇವರ ಕಾಲದ ೭೮ ಆದೇಶಗಳನ್ನು ರದ್ದುಪಡಿಸಿ ಹೊಸ ಆದೇಶಗಳನ್ನು ಹೊರಡಿಸಿದರು. ಇದರಲ್ಲಿ ಒಂದು ಆದೇಶವೆಂದರೆ ಅಮೇರಿಕಾ ಜಾಗತಿಕ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವುದು. ಟ್ರಂಪ್‌ ಇವರ ಹಿಂದಿನ ಆಡಳಿತದ ಅವಧಿಯಲ್ಲಿಯೂ ಅವರು ಇದೇ ನಿರ್ಧಾರವನ್ನು ತೆಗೆದುಕೊಂಡಿದ್ದರು; ಆದರೆ ಬಾಯಡೆನ್‌ ಸರಕಾರ ಅಧಿಕಾರಕ್ಕೆ ಬಂದಾಗ ಅದು ಅಮೇರಿಕವನ್ನು ಈ ಸಂಸ್ಥೆಗೆ ಪುನಃ ಸೇರಿಸಿ ಕೊಂಡಿತು. ಈಗ ಟ್ರಂಪ್‌ ಅಮೇರಿಕವನ್ನು ಪುನಃ ಇದರಿಂದ ಹೊರಗೆಳೆದಿದ್ದಾರೆ. ಈ ಉದಾಹರಣೆಯಿಂದ ಒಂದೇ ದೇಶದ ಎರಡು ಪಕ್ಷಗಳಲ್ಲಿ ಎರಡು ಅಭಿಪ್ರಾಯಗಳು ಕಾಣಿಸುತ್ತಿವೆ. ಇದರಿಂದ ಅಮೇರಿಕಾಗೆ ಯಾವ ಲಾಭವಾಗುತ್ತಿದೆ ಮತ್ತು ಹಾನಿಯಾಗುತ್ತಿದೆ ಎಂಬ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ಇದಲ್ಲದೇ ಟ್ರಂಪ್‌ ಇವರು ನೀಡಿದ ಇತರ ಕೆಲವು ಆದೇಶಗಳು ಸಂಪೂರ್ಣ ಅಮೇರಿಕಕ್ಕೆ ಅಲ್ಲದೇ ಜಗತ್ತಿನ ಮೇಲೂ ಅದರ ಪರಿಣಾಮ ಕಂಡು ಬರುತ್ತಿದೆ. ಟ್ರಂಪ್‌ ಇವರು ತಮ್ಮ ಒಟ್ಟಾರೆ ವ್ಯಕ್ತಿತ್ವಕ್ಕನುಸಾರ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.

ಟ್ರಂಪ್‌ ಇವರು ಈ ಮೊದಲೇ ಈ ರೀತಿಯ ನಿರ್ಣಯ ತೆಗೆದುಕೊಳ್ಳುವು ದಾಗಿ ಹೇಳಿದ್ದರು. ಮುಂದಿನ ೪ ವರ್ಷ ಅವರು ಅಮೇರಿಕದ ಅಧ್ಯಕ್ಷರಾಗಿರಲಿದ್ದಾರೆ. ಈ ಕಾಲದಲ್ಲಿ ‘ಮೆಕ್‌ ಅಮೇರಿಕಾ ಗ್ರೆಟ್‌ ಅಗೇನ್’ (ಅಮೇರಿಕವನ್ನು ಮತ್ತೊಮ್ಮೆ ಶ್ರೇಷ್ಠ ಮಾಡುವುದು) ಈ ಘೋಷಣೆಗನುಸಾರ ಅವರು ಕೆಲಸ ಮಾಡಲಿದ್ದಾರೆ. ಈ ಪ್ರಯತ್ನದಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗಬಲ್ಲರು ಎಂಬುದನ್ನು ಕಾಲವೇ ಹೇಳಬಲ್ಲದು; ಆದರೆ ಪ್ರಸ್ತುತ ಪರಿಸ್ಥಿತಿ ಯಲ್ಲಿ ಅವರಿಗೆ ವಿವಿಧ ಅಂತಾರಾಷ್ಟ್ರೀಯ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಎಂಬ ಶಂಕೆಯಿದೆÉ. ಅವರ ವಿಚಾರ ಒಂದೆಡೆ ಅಮೇರಿಕದ ಕೆಲವು ಗುಂಪುಗಳಿಗೆ ಲಾಭದಾಯಕವಾಗಿದ್ದರೂ, ಇನ್ನೊಂದೆಡೆ ಅವರಿಗೆ ಸಾಮಾಜಿಕ ಮತ್ತು ಜಾಗತಿಕ ಮಟ್ಟದಲ್ಲಿ ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗು ತ್ತದೆ. ಅಮೇರಿಕವು ಜಾಗತಿಕ ಬಲಿಷ್ಠ ರಾಷ್ಟ್ರವಾಗಿದ್ದರೂ ಅದು ಸದ್ಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಈ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯದಿದ್ದರೂ ಚೀನಾ ಅಮೇರಿಕದೆದುರು ದೊಡ್ಡ ಸವಾಲು ಸೃಷ್ಟಿಸಿದೆ. ಟ್ರಂಪ್‌ ಇವರ ಗಮನ ಇದೇ ದಿಶೆಯಲ್ಲಿದೆ; ಏಕೆಂದರೆ ಅವರು ಉದ್ಯಮಿಗಳು. ಬಡಕುಟುಂಬದಲ್ಲಿ ಜನಿಸಿದ ನಂತರ ಅವರ ತಂದೆಯವರ ಪರಿಶ್ರಮದಿಂದ ಅವರ ಕುಟುಂಬ ಶ್ರೀಮಂತವಾಯಿತು ಮತ್ತು ನಂತರ ಟ್ರಂಪ್‌ ಇವರು ಅವರ ಉದ್ಯೋಗವನ್ನು ವಿಸ್ತರಿಸಿದರು ಮತ್ತು ಇಂದು ಅವರು ಎರಡನೇ ಬಾರಿಗೆ ಅಧ್ಯಕ್ಷರಾದರು. ಟ್ರಂಪ್‌ ಇವರು ವ್ಯಾವಹಾರಿಕ ದೃಷ್ಟಿಯಿಂದ ಅಮೇರಿಕದ ಕಡೆಗೆ ನೋಡುತ್ತಿದ್ದಾರೆ. ಇದೇ ಉದ್ದೇಶದಿಂದ ಅವರು ‘ಗ್ರೀನಲ್ಯಾಂಡ್’ ಅನ್ನು ಅಮೇರಿಕಕ್ಕೆ ಜೋಡಿಸುವ ಪ್ರಸ್ತಾಪವನ್ನು ಮಾಡಿದ್ದಾರೆ ಮತ್ತು ಅದನ್ನು ಪೂರ್ಣಗೊಳಿಸಿದ ನಂತರವೇ ಅವರು ನಿಲ್ಲಿಸಲಿದ್ದಾರೆ, ಎಂಬುದು ಅವರ ಇಚ್ಛಾಶಕ್ತಿಯಿಂದ ಸ್ಪಷ್ಟವಾಗಿದೆ. ‘ಪನಾಮಾ ಕಾಲುವೆ’ಯನ್ನು ಅವರು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೇ, ಕೆನಡಾವನ್ನು ಅಮೇರಿಕದಲ್ಲಿ ವಿಲೀನಗೊಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಈ ಎಲ್ಲವುಗಳಿಗೆ ವಿರೋಧವಾಗುತ್ತಿದೆ. ಆದುದರಿಂದ ಅವರು ಎಷ್ಟರಮಟ್ಟಿಗೆ ಯಶಸ್ವಿಯಾಗುವರು ?, ಎಂಬುದನ್ನು ಹೇಳಲು ಸಾಧ್ಯವಿಲ್ಲ; ಆದರೆ ಟ್ರಂಪ್‌ ಇವರು ಯಾವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ, ಎಂಬುದು ಕಂಡು ಬರುತ್ತಿದೆ.

ಅಕ್ರಮ ವಲಸಿಗರ ಸಮಸ್ಯೆ !

ಟ್ರಂಪ್‌ ಇವರು ಅಮೇರಿಕದಿಂದ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವನ್ನು ನೀಡಿದ ನಂತರ ಅವರಿಗೆ ಅಮೇರಿಕ ಮತ್ತು ಜಗತ್ತಿನಿಂದಲೂ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಿರ್ಣಯ ಅಮೇರಿಕದ ಮೇಲೆ ಮತ್ತು ಇತರ ದೇಶಗಳ ಮೇಲೆ ದೊಡ್ಡ ಪ್ರಭಾವ ಬೀರಲಿದೆ. ಇವು ಆರ್ಥಿಕ, ಸಾಮಾಜಿಕ, ಅಂತರರಾಷ್ಟ್ರೀಯ ಮತ್ತು ಕಾನೂನು ಸ್ತರಗಳಲ್ಲಿ ಅನೇಕ ಸವಾಲುಗಳನ್ನು ಸೃಷ್ಟಿಸುವವು. ಈ ಕಾರ್ಯನೀತಿಯ ಪರಿಣಾಮಸ್ವರೂಪ ಕೆಲವು ಜನರಿಗೆ ಲಾಭವಾಗುವುದು ಮತ್ತು ಕೆಲವರಿಗೆ ಹಾನಿಯಾಗುವುದು. ಅನೇಕ ಅಕ್ರಮ ವಲಸಿಗರು ಅಮೇರಿಕದ ಕೃಷಿ, ಕಾಮಗಾರಿ, ಗೃಹಸುಧಾರಣೆ ಮತ್ತು ಇತರ
ಕಡಿಮೆ ವೇತನದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಒಂದು ವೇಳೆ ಈ ವಲಸಿಗರನ್ನು ದೇಶದಿಂದ ಗಡಿಪಾರು ಮಾಡಿದರೆ ಈ ಉದ್ಯೋಗಗಳಲ್ಲಿ ಕಾರ್ಯಶಕ್ತಿಯ ದೊಡ್ಡ ಕೊರತೆ ಉದ್ಭವಿಸ ಬಹುದು. ಇದರಿಂದ ಆ ಕ್ಷೇತ್ರಗಳಲ್ಲಿ ಹಣದುಬ್ಬರ ಹೆಚ್ಚಾಗಬಹುದು. ಅನೇಕ ಸ್ಥಳೀಯ ವ್ಯವಹಾರಗಳು ಮತ್ತು ಕೈಗಾರಿಕೆಗಳು ಅಕ್ರಮ ವಲಸಿಗ ಕಾರ್ಮಿಕರ ಮೇಲೆ ಅವಲಂಬಿಸಿವೆ. ಒಂದು ವೇಳೆ ಅವರನ್ನು ಕೆಲಸದಿಂದ ತೆಗೆದುಹಾಕಿದರೆ, ಕೆಲವು ಸಣ್ಣ ಉದ್ಯೋಗಗಳು ಮುಚ್ಚಬಹುದು ಅಥವಾ ಅವರಿಗೆ ಹೆಚ್ಚುವರಿ ಕಾರ್ಮಿಕರನ್ನು ಹುಡುಕಲು ಸವಾಲುಗಳನ್ನು ಎದುರಿಸಬೇಕಾಗ ಬಹುದು, ಇದರಿಂದ ಆರ್ಥಿಕ ಅಸ್ಥಿರತೆ ಉಂಟಾಗಬಹುದು. ಅಕ್ರಮ ವಲಸಿಗರು ಒಂದು ವೇಳೆ ಕಾರ್ಯನಿರತರಾಗಿದ್ದರೆ ಅವರು ತೆರಿಗೆ ಪಾವತಿಸುವಲ್ಲಿ, ಉತ್ಪಾದನೆ ಹೆಚ್ಚಿಸುವಲ್ಲಿ ಮತ್ತು ದೇಶದ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ಸ್ವಲ್ಪ ಮಟ್ಟಿಗೆ ಕೊಡುಗೆ ನೀಡಬಹುದು. ಈ ಕಾರ್ಮಿಕರ ಅನುಪಸ್ಥಿತಿಯು ಆರ್ಥಿಕತೆಯ ಮೇಲೆ ದೀರ್ಘಕಾಲದ ಪರಿಣಾಮ ಬೀರಬಹುದು. ಈ ಅಕ್ರಮ ವಲಸಿಗರಲ್ಲಿ ಭಾರತೀಯರ ಸಂಖ್ಯೆ ಗಣನೀಯವಾಗಿದೆ. ಆದುದರಿಂದ ಟ್ರಂಪ್‌ ಇವರ ಆದೇಶದ ಪರಿಣಾಮ ಭಾರತ ಮತ್ತು ಭಾರತೀಯರ ಮೇಲೂ ಆಗುತ್ತಿದೆ. ವಿದೇಶಿಯರಿಂದಾಗಿ ಮತ್ತು ವಿಶೇಷವಾಗಿ ಅಕ್ರಮವಾಗಿ ಬಂದವರಿಂದಾಗಿ ಅಮೇರಿಕನ್‌ ನಾಗರಿಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಟ್ರಂಪ್‌ ಇವರು ಹೇಳುತ್ತಾರೆ. ಇದು ಜಾಗತಿಕ ಸಮಸ್ಯೆಯಾಗಿದೆ. ಭಾರತದಲ್ಲಿಯೂ ವಿವಿಧ ರಾಜ್ಯಗಳಲ್ಲಿ ಇಂತಹ ವಿವಾದ ಕಂಡು ಬರುತ್ತಿದೆ. ಅಮೇರಿಕ ದಲ್ಲಿಯೂ ಇದೇ ಪರಿಸ್ಥಿತಿ ಇದೆ. ಈ ಸಮಸ್ಯೆಯಿಂದಾಗಿ ಟ್ರಂಪ್‌ ಇವರ ಘೋಷಣೆಗೆ ಎಷ್ಟು ಲಾಭ ಮತ್ತು ಎಷ್ಟು ಹಾನಿಯಾಗಲಿದೆ ಎಂದು ಕಾದು ನೋಡಬೇಕಾಗಿದೆ.

ಭಾರತ ಮತ್ತು ಅಮೇರಿಕ ಇವರ ನಡುವಿನ ಮೈತ್ರಿ !

ಟ್ರಂಪ್‌ ಇವರು ಪ್ರಮಾಣವಚನದ ವಿಧಿಯ ಒಂದು ದಿನ ಮೊದಲು ಜಗತ್ತಿನಲ್ಲಿ ಮೂರನೇ ಮಹಾಯುದ್ಧವಾಗಲು ಬಿಡುವುದಿಲ್ಲ, ಎಂಬ ಘೋಷಣೆ ಮಾಡಿದರು. ಟ್ರಂಪ್‌ ಇವರು ನೀಡಿದ ಎಚ್ಚರಿಕೆಯಿಂದಾಗಿಯೇ ಹಮಾಸ್‌-ಇಸ್ರೇಲ್‌ ಯುದ್ಧ ನಿಂತಿತು ಮತ್ತು ಅವರು ಉಕ್ರೇನ್‌-ರಷ್ಯಾ ಯುದ್ಧವನ್ನೂ ನಿಲ್ಲಿಸಲಿದ್ದಾರೆ, ಎಂದು ಹೇಳಿದ್ದಾರೆ. ಟ್ರಂಪ್‌ ಇವರು ಕಟ್ಟಾ ಉದ್ಯಮಿಗಳಿದ್ದಾರೆ; ಆದರೆ ಅವರು ರಾಜಕಾರಣಿಗಳಲ್ಲ. ಸ್ಪಷ್ಟವಕ್ತಾರ ಮತ್ತು ಪ್ರಾಮಾಣಿಕರಾಗಿರುವುದರಿಂದ ಯುದ್ಧದಿಂದ ಅಭಿವೃದ್ಧಿಯಾಗುವು ದಿಲ್ಲ ಮತ್ತು ಹಣದ ದುಂದುವೆಚ್ಚವಾಗುತ್ತದೆ, ಎಂದು ಅವರಿಗೆ ಗೊತ್ತಿರುವುದರಿಂದ ಅವರು ಆ ಕಡೆಗೆ ಅದೇ ದೃಷ್ಟಿಯಿಂದ ನೋಡುತ್ತಿದ್ದಾರೆ. ಅದರಲ್ಲಿಯೂ ಅವರು ಗಾಂಧಿವಾದಿಗಳಲ್ಲ ಮತ್ತು ಅಮೇರಿಕದ ಹಿತಾಸಕ್ತಿಯನ್ನು ಅರಿತಿರುವುದರಿಂದ ಕಠಿಣವಾಗಿರಬೇಕೆಂಬ ದೃಷ್ಟಿಯಿಂದಲೂ ಅವರು ವರ್ತಿಸುತ್ತಿದ್ದಾರೆ. ಮೆಕ್ಸಿಕೋದ ನುಸುಳುಕೋರರಿಂದಾಗಿ ಅಮೇರಿಕಕ್ಕೆ ಬಹಳ ಹಾನಿಯಾಗುತ್ತಿದೆ, ಎಂದು ಅವರ ಗಮನಕ್ಕೆ ಬಂದುದರಿಂದ ಅವರು ಹಿಂದಿನ ಆಡಳಿತಾವಧಿಯಲ್ಲಿ ಮೆಕ್ಸಿಕೊದ ಗಡಿಯಲ್ಲಿ ಗೋಡೆ ಕಟ್ಟಲು ಆರಂಭಿಸಿದ್ದರು. ಈಗ ಅವರು ಪ್ರತಿಯೊಬ್ಬ ನುಸುಳುಕೋರನನ್ನು ದೇಶದಿಂದ ಹೊರದಬ್ಬಲಿದ್ದಾರೆ. ಇದಕ್ಕಾಗಿ ಸೇನೆಯ ಸಹಾಯ ಪಡೆಯಲಿದ್ದಾರೆ. ಟ್ರಂಪ್‌ ಇವರ ಈ ನಿರ್ಣಯದಿಂದ ಭಾರತ ಸಹ ಕಲಿಯಬೇಕು. ಭಾರತದಲ್ಲಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರು ತುಂಬಿರುವಾಗ ಅವರನ್ನು ಗಡಿಪಾರು ಮಾಡುವ ಸಂದರ್ಭದಲ್ಲಿ ಭಾರತ ಅತ್ಯಂತ ನಿಷ್ಕ್ರಿಯವಾಗಿದೆ ಎಂದು ಕಂಡು ಬರುತ್ತದೆ. ಕೋಟ್ಯಂತರ ಜನರಲ್ಲಿ ಕೇವಲ ೫-೧೦ ಬಾಂಗ್ಲಾದೇಶಿಯರನ್ನು ಹಿಡಿದು ಮತ್ತು ಅದರಲ್ಲಿಯೂ ಒಬ್ಬಿಬ್ಬರನ್ನು ಹೊರದಬ್ಬಿದರೆ ಏನೂ ಸಾಧ್ಯವಾಗಲಾರದು, ಎಂಬುದನ್ನು ಗಮನದಲ್ಲಿಡಬೇಕು. ಟ್ರಂಪ್‌ ಇವರ ಮತ್ತು ಪ್ರಧಾನಿ ಮೋದಿಯವರ ನಡುವೆ ಬಹಳ ಒಳ್ಳೆಯ ಸಂಬಂಧವಿದೆ. ಕಳೆದ ಆಡಳಿತಾವಧಿಯಲ್ಲಿ ಅದು ಕಂಡು ಬಂದಿದೆ ಮತ್ತು ಈಗಲೂ ಅದು ಕಂಡು ಬರುತ್ತಿದೆ ಇದರ ಲಾಭ ಭಾರತಕ್ಕೆ ಮತ್ತು ಅಮೇರಿಕಕ್ಕೂ ಆಗಲಿದೆ. ಇದರಿಂದ ಕೇವಲ ಅಮೇರಿಕವನ್ನಷ್ಟೇ ಅಲ್ಲ ಆದರೆ ‘ಮೆಕ್‌ ಭಾರತ ಗ್ರೆಟ್‌ ಅಗೇನ್’ (ಭಾರತವನ್ನು ಪುನಃ ಶ್ರೇಷ್ಠ ಮಾಡೋಣ), ಎಂಬ ಧ್ಯೇಯವನ್ನು ನಾವೂ ಇಟ್ಟುಕೊಳ್ಳಬೇಕು.