ಭಾರತೀಯ ವ್ಯಾಯಾಮ ಪದ್ಧತಿಯೇ ಉತ್ತಮ !

ಸದ್ಯ ‘ಫಿಟ್ನೆಸ್ ಬಗ್ಗೆ (ಆರೋಗ್ಯದ ಬಗ್ಗೆ) ಜಾಗರೂಕವಾಗಿರುವ ಯುವಜನರ ಸಂಖ್ಯೆ ಬಹಳಷ್ಟು ಪ್ರಮಾಣದಲ್ಲಿದೆ. ಅದರಲ್ಲಿನ ಕೆಲವರ ಪ್ರತಿಕ್ರಿಯೆಗಳನ್ನು ತಿಳಿದುಕೊಂಡಾಗ ‘ಸಿಕ್ಸ ಪ್ಯಾಕ್ನ (ಗಟ್ಟಿಮುಟ್ಟಾದ ಮುರಿಗೆ ಬೀಳುವ ದೇಹರಚನೆಯ) ಬಗ್ಗೆ ಅವರಲ್ಲಿ ಪ್ರಚಂಡ ಪ್ರಮಾಣದಲ್ಲಿ ‘ಕ್ರೇಝ್ (ಅತ್ಯುತ್ಸಾಹ) ಕಂಡುಬಂದಿತು. ನಟ ಹೃತಿಕ್ ರೋಶನ್, ವಿದ್‌ಯುತ್ ಜಾಮವಾಲ ಮತ್ತು ಸಂಗ್ರಾಮ ಚೌಗುಲೆ (Body builders) ಇವರಂತೆ ನಮ್ಮ ರಟ್ಟೆಗಳು ಗಟ್ಟಿಮುಟ್ಟಾಗಿರಬೇಕು, ಕೈಗಳನ್ನು ಮಡಚಿದರೆ ರಟ್ಟೆಗಳು ಉಬ್ಬಬೇಕು ಎಂದು ಅವರಿಗೆ ಅನಿಸುತ್ತದೆ. ಅದಕ್ಕಾಗಿ ಜಿಮ್‌ಗೆ (ಆಧುನಿಕ ವ್ಯಾಯಾಮಶಾಲೆ) ಹೋಗುವುದು ಮತ್ತು ‘ಸಿಕ್ಸ ಪ್ಯಾಕ್ನ ಮಾಯಾವಿ ಕನಸುಗಳನ್ನು ಕಾಣುವುದು, ಇದು ಇಂದಿನ ಯುವಕ ಪೀಳಿಗೆಯ ಹೊಸ ಹವ್ಯಾಸವಾಗಿದೆ. ಶಾರೀರಿಕ ಸೌಂದರ್ಯ ಇರುವುದು ಆಕರ್ಷಕ ವ್ಯಕ್ತಿತ್ವದ ಒಂದು ಭಾಗವಾಗಿದೆ; ಆದರೆ ಅದು ಅವಿಭಾಜ್ಯ ಅಂಗವಲ್ಲ.

ಆಧುನಿಕ ಜಿಮ್ ಮತ್ತು ಅಲ್ಲಿ ಮಾಡಲಾಗುವ ವ್ಯಾಯಾಮಗಳ ತುಲನಾತ್ಮಕ ಅಧ್ಯಯನವನ್ನು ಮಾಡಿದರೆ, ಅವುಗಳಲ್ಲಿ ಅನೇಕ ಲಾಭ ಹಾಗೂ ಹಾನಿಗಳಿವೆ; ಆದರೆ ಸಮತೋಲಿತ ಜೀವನ (ರೋಗಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು) ಮತ್ತು ಯೋಗ್ಯ ವ್ಯಾಯಾಮ ಇವುಗಳೊಂದಿಗೆ ಪರಿಪೂರ್ಣ ಆಹಾರ ವನ್ನು ಸೇವಿಸಿದರೆ ಮಾತ್ರ ನಾವು ಜಿಮ್‌ನ ಲಾಭವನ್ನು ಪಡೆದುಕೊಳ್ಳಬಹುದು, ಇದರಲ್ಲಿ ಯಾವ ಸಂದೇಹವೂ ಇಲ್ಲ.

೧. ಆಯುರ್ವೇದದ ದೃಷ್ಟಿಕೋನ

ಮಾನವನ ಶರೀರವು ರಸ, ರಕ್ತ, ಮಾಂಸ, ಮೇದ (ಕೊಬ್ಬು), ಅಸ್ಥೀ (ಮೂಳೆ), ಮಜ್ಜೆ ಮತ್ತು ಶುಕ್ರ ಈ ೭ ಧಾತುಗಳಿಂದ ತಯಾರಾಗಿದೆ. ರಸದಿಂದ ರಕ್ತ, ರಕ್ತದಿಂದ ಮಾಂಸ, ಮಾಂಸದಿಂದ ಮೇದ (ಕೊಬ್ಬು), ಮೇದದಿಂದ (ಕೊಬ್ಬಿನಿಂದ) ಮೂಳೆ, ಈ ರೀತಿ ಒಂದೊಂದು ಧಾತುವನ್ನು ಅದರ ಮೊದಲಿನ ಧಾತುವು ಪೋಷಿಸುತ್ತದೆ. ನಾವು ಗಮನಿಸಿ ನೋಡಿದರೆ, ಆಧುನಿಕ ವ್ಯಾಯಾಮ ಪದ್ಧತಿಯಿಂದ ಕೇವಲ ಮಾಂಸ ಧಾತುವನ್ನು ಮಾತ್ರ ಗಟ್ಟಿಮುಟ್ಟಾಗಿ ಮಾಡುವುದರ ಕಡೆಗೆ ಗಮನವಿರುತ್ತದೆ.

ದೇಹದ ಒಳಗಿನ ಅವಯವಗಳಿಗೆ ಆವರಣವೆಂದು ಮತ್ತು ವಿಭಾಗಗಳೆಂದು ಶರೀರದಲ್ಲಿ ಕೊಬ್ಬಿನ ಪ್ರಮಾಣ ಸರಿಯಾಗಿ ಇರುವುದು ಅಪೇಕ್ಷಿತವಿದೆ. ಆದ್ದರಿಂದ ಮೂಲದಲ್ಲಿ ‘ಝಿರೋ ಫ್ಯಾಟ್ (ಕೊಬ್ಬುಮುಕ್ತ) ಈ ಸಂಕಲ್ಪನೆಯೇ ಅಯೋಗ್ಯವಾಗಿದೆ. ಒಂದೇ ಧಾತು (ಮಾಂಸ)ವನ್ನು ಹೆಚ್ಚಿಸುವ ದೃಷ್ಟಿಯಿಂದ ಹೆಚ್ಚು ಪ್ರಯತ್ನವಾಗುತ್ತಿದ್ದರೆ ಮತ್ತು ಕೇವಲ ಮಾಂಸವಷ್ಟೇ ಗಟ್ಟಿಮುಟ್ಟಾಗಿ ಕಾಣಿಸಬೇಕೆಂದು ವ್ಯಾಯಾಮ ಆಗುತ್ತಿದ್ದರೆ, ಮಾಂಸದ ಮುಂದಿನ ಧಾತುಗಳು ದುರ್ಬಲವಾಗುತ್ತವೆ. ಆದ್ದರಿಂದ ಮೂಳೆಗಳ ನೋವು, ಶುಕ್ರಧಾತು ಮತ್ತು ಸಂತಾನೋತ್ಪತ್ತಿಗೆ ಸಂಬಂಧಪಟ್ಟ ಕಾಯಿಲೆಗಳು ವ್ಯಕ್ತಿಯಲ್ಲಿ ತೀವ್ರವಾಗಿ ವ್ಯಕ್ತವಾಗುತ್ತವೆ, ಎಂಬುದು ಕಂಡುಬರುತ್ತದೆ; ಇದರಿಂದ ಮುಂದೆ ಗಂಭೀರ ಪರಿಣಾಮವನ್ನು ಭೋಗಿಸಬೇಕಾಗಬಹುದು.

‘ಸೂರ್ಯನಮಸ್ಕಾರ ಇದು ಪರಿಪೂರ್ಣ ವ್ಯಾಯಾಮ !

ವ್ಯಾಯಾಮ ಶಾಲೆಯಲ್ಲಿ (ಗರಡಿ ಮನೆಯಲ್ಲಿ) ಪೈಲವಾನರು ಮಾಡುವ ವ್ಯಾಯಾಮ ಮತ್ತು ಅವರ ಆಹಾರದ ಅಧ್ಯಯನ ಮಾಡಿದರೆ, ಭಾರತೀಯ ವ್ಯಾಯಾಮ ಪದ್ಧತಿಯು ಅತ್ಯಂತ ಆದರ್ಶವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ನನ್ನ ಸಂಪರ್ಕದಲ್ಲಿರುವ ಜಿಮ್ ಮತ್ತು ವ್ಯಾಯಾಮ ಶಾಲೆಗೆ ಹೋಗುವ ಹುಡುಗರಲ್ಲಿ ಅನೇಕ ವ್ಯತ್ಯಾಸಗಳು ಕಂಡುಬರುತ್ತವೆ. ವ್ಯಾಯಾಮಶಾಲೆಯಲ್ಲಿ ನಿಯಮಿತವಾಗಿ ಹೋಗುವ ಹುಡುಗರು ಹೆಚ್ಚು ಉತ್ಸಾಹಿ ಮತ್ತು ನಿರೋಗಿ ಆಗಿರುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಹೇಳಿದ ‘ಸೂರ್ಯನಮಸ್ಕಾರ, ಇದು ಪರಿಪೂರ್ಣ ವ್ಯಾಯಾಮವಾಗಿದೆ. ಶಾಸ್ತ್ರೋಕ್ತ ಸೂರ್ಯ ನಮಸ್ಕಾರದಿಂದ ಯಾವುದೇ ಉಪಕರಣಗಳನ್ನು ಬಳಸದೇ ದೈಹಿಕ ಸೌಂದರ್ಯ ಉಳಿಯುತ್ತದೆ. ಆದ್ದರಿಂದ ಜಿಮ್‌ನಲ್ಲಿ ವ್ಯಾಯಾಮವನ್ನು ಮಾಡುತ್ತಿದ್ದರೆ, ಅದು ಅತೀ ಹೆಚ್ಚು ಒತ್ತಡವನ್ನು ತೆಗೆದುಕೊಂಡು ಮಾಡಬೇಡಿರಿ. ‘ಶರೀರಕ್ಕೆ ಎಷ್ಟು ಮುರಿಗೆ ಬೀಳುತ್ತವೆ, ಎಂಬುದ ಕ್ಕಿಂತ ಆರೋಗ್ಯ ಸ್ಥಿರವಾಗಿದೆಯೇ ? ಎಂಬುದರ ಅಧ್ಯಯನವನ್ನು ಮಾಡಿರಿ. ನಿಯಮಿತ ವ್ಯಾಯಾಮವನ್ನು ಮಾಡುವವರು ನಿತ್ಯದ ಆಹಾರದಲ್ಲಿಯೂ ಸರಿಯಾದ ಸಮತೋಲನವನ್ನಿಟ್ಟರೆ ಖಂಡಿತ ಲಾಭವಾಗುವುದು. ಆದ್ದರಿಂದ ಭಾರತೀಯ ವ್ಯಾಯಾಮ ಪದ್ಧತಿಯು ಉತ್ತಮವಾಗಿದೆ.

– ಡಾ. ಭೊಸಕರ, ನ್ಯಾಚರೊಥೆರಪಿಸ್ಟ್, ನ್ಯೂಟ್ರಿಶಿಯನಿಸ್ಟ್ ಆಂಡ್ ಡೈಜೆಶನ್

(ಆಧಾರ : ಸಾಮಾಜಿಕ ಜಾಲತಾಣ)