ಫೆಬ್ರವರಿ ೧೪ ರಂದು ಅಬೂ ಧಾಬಿಯಲ್ಲಿ ‘ಬಿ.ಎ.ಪಿ.ಎಸ್. ಹಿಂದೂ ದೇವಸ್ಥಾನ’ದ ಉದ್ಘಾಟನೆಯಾಗುತ್ತಿದೆ.
ಸಂಯುಕ್ತ ಅರಬ ಅಮಿರಾತ (ಯುಎಈ’) ಅಬೂಧಾಬಿಯ ಮರುಭೂಮಿಯ ನಡುವೆ ದೊಡ್ಡ ಒಂದು ‘ಬಿ.ಎ.ಪಿ.ಎಸ್. (ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣಸಂಸ್ಥೆ) ಹಿಂದೂ ದೇವಸ್ಥಾನ’ವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನ ಪಶ್ಚಿಮ ಏಷ್ಯಾದಲ್ಲಿನ ಅತೀ ದೊಡ್ಡ ದೇವಸ್ಥಾನವಾಗಿದೆ. ‘ಬಿ.ಎ.ಪಿ.ಎಸ್. ಹಿಂದೂ ದೇವಸ್ಥಾನ’ದ ಉದ್ಘಾಟನೆ ಇಂದು (೧೪ ಫೆಬ್ರವರಿ ೨೦೨೪) ನೆರವೇರಿದ್ದೂ ಈ ಕಾರ್ಯಕ್ರಮಕ್ಕಾಗಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಬೂಧಾಬಿಗೆ ತಲಪಿದ್ದಾರೆ. ಪ್ರಧಾನಮಂತ್ರಿ ಮೋದಿ ಫೆಬ್ರವರಿ ೧೩ ರಂದು ಅಬೂಧಾಬಿಯ ಶೇಖ್ ಜಾಯದ ಸ್ಟೇಡಿಯಮ್‌ನಲ್ಲಿ ‘ಅಹಲಾನ ಮೋದಿ (ಹೆಲೋ ಮೋದಿ)’ ಈ ಕಾರ್ಯಕ್ರಮದ ಮೂಲಕ ಭಾರತೀಯರೊಂದಿಗೆ ಸಂವಾದ ಮಾಡುವರು. ಅನಂತರ ಅವರು ಫೆಬ್ರವರಿ ೧೪ ರಂದು ದೇವಸ್ಥಾನದ ಸಮೀಪವಿರುವ ಒಂದು ಕಾರ್ಯಕ್ರಮದಲ್ಲಿಯೂ ಉಪಸ್ಥಿತರಾಗುವರು. ಅಬೂ ಧಾಬಿಯಲ್ಲಿನ ‘ಬಿ.ಎ.ಪಿ.ಎಸ್. ಹಿಂದೂ ದೇವಸ್ಥಾನ’ದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಾ ಬಂದಿದೆ. ಈ ದೇವಸ್ಥಾನದ ವೈಶಿಷ್ಟ್ಯಗಳನ್ನು ಈ ಲೇಖನದ ಮೂಲಕ ಕೊಡುತ್ತಿದ್ದೇವೆ.
೧. ದೇವಸ್ಥಾನಕ್ಕೆ ಸಂಬಂಧಿಸಿದ ಮಾಹಿತಿ
ಅ. ‘ಬಿ.ಎ.ಪಿ.ಎಸ್. ಹಿಂದೂ ದೇವಸ್ಥಾನವು ಯುಎಇಯಲ್ಲಿನ ಮೊದಲ ಹಿಂದೂ ದೇವಸ್ಥಾನವಾಗಿದೆ.
ಆ. ಅಬೂಧಾಬಿಯ ಕ್ರೌನ್ ಪ್ರಿನ್ಸ್ (ರಾಜಕುಮಾರ) ಶೇಖ್ ಮಹಮ್ಮದ ಬಿನ್ ಝಾಯೇದ ಅಲ್‌ನಾಹಯಾನ ಇವರು ೨೦೧೫ ರಲ್ಲಿ ಪ್ರಧಾನಮಂತ್ರಿ ಮೋದಿಯವರ ಪ್ರವಾಸದ ಸಮಯದಲ್ಲಿ ದೇವಸ್ಥಾನದ ನಿರ್ಮಾಣಕ್ಕಾಗಿ ೧೩.೫ ಎಕರೆ ಭೂಮಿ ದಾನ ಮಾಡಿದ್ದರು. ೨೦೧೭ ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭಹಸ್ತಗಳಿಂದ ದೇವಸ್ಥಾನದ ಅಡಿಪಾಯ ಹಾಕಲಾಗಿತ್ತು. ಯುಎಇ ಸರಕಾರ ಜನವರಿ ೨೦೧೯ ರಲ್ಲಿ ಈ ದೇವಸ್ಥಾನಕ್ಕಾಗಿ ಇನ್ನೂ ೧೩.೫ ಎಕರೆ ಭೂಮಿಯನ್ನು ದಾನ ಮಾಡಿತು. ಈ ರೀತಿ ಒಟ್ಟು ೧೭ ಎಕರೆ ಭೂಮಿಯಲ್ಲಿ ಈ ಭವ್ಯ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ.
ಇ. ಈ ದೇವಸ್ಥಾನದ ವಠಾರದಲ್ಲಿ ಅಭ್ಯಾಸ ಕೇಂದ್ರ, ಪ್ರಾರ್ಥನಾ ಸಭಾಗೃಹ ಮತ್ತು ಶಿಕ್ಷಣ ಕೇಂದ್ರಗಳಿವೆ.
ಈ. ಈ ದೇವಸ್ಥಾನದ ಗೋಡೆಗಳ ಮೇಲೆ ರಾಮಾಯಣ, ಶಿವ ಪುರಾಣ ಹಾಗೂ ಭಗವಾನ ಜಗನ್ನಾಥನ ರಥಯಾತ್ರೆಯ ಚಿತ್ರಗಳನ್ನು ಚಿತ್ರಿಸಲಾಗಿದೆ. ಅದಲ್ಲದೆ ದೇವಸ್ಥಾನದ ಸಮೀಪ ಒಂದು ಗಂಗಾ ಘಾಟ್ ತಯಾರಿಸಲಾಗಿದೆ. ಗಂಗಾ-ಯಮುನಾ ಮತ್ತು ಸರಸ್ವತಿಯ ಸಂಗಮವನ್ನೂ ಈ ದೇವಸ್ಥಾನದಲ್ಲಿ ತೋರಿಸಲಾಗಿದೆ.
ಉ. ದೇವಸ್ಥಾನದ ಅಡಿಪಾಯದಲ್ಲಿ ೧೦೦ ‘ಸೆನ್ಸರ್ಸ್’ ಅಳವಡಿಸಲಾಗಿದೆ. ಈ ಸೆನ್ಸರ್ ಭೂಕಂಪದ ಸಂಭವ ಹಾಗೂ ತಾಪಮಾನದ ಬದಲಾವಣೆಯನ್ನು ತಪಾಸಣೆ ಮಾಡಲು ಅಳವಡಿಸಲಾಗಿದೆ. ಈ ದೇವಸ್ಥಾನದ ನಿರ್ಮಾಣಕ್ಕಾಗಿ ೭೦೦ ಕೋಟಿ ರೂಪಾಯಿ ಖರ್ಚಾಗಿದೆ.
೨. ಕಾರ್ಯಕ್ರಮಕ್ಕೆ ಯಾರೆಲ್ಲ ಉಪಸ್ಥಿತರಾಗುವರು ?
ಈ ಕಾರ್ಯಕ್ರಮಕ್ಕೆ ಇಂಗ್ಲೇಂಡ್, ಜರ್ಮನಿ, ಇಸ್ರಾಯಿಲ್, ಇಟೇಲಿ, ಕೆನಡಾ, ಆಯರ್ಲೇಂಡ್, ಬಹರೀನ್, ಘಾನಾ, ಆರ್ಮೇನಿಯಾ, ಬಾಂಗ್ಲಾದೇಶ, ಚಿಲೀ, ಯುರೋಪಿಯನ್ ಯೂನಿಯನ್, ಫಿಜೀ, ಅರ್ಜೆಂಟಿನಾ, ಸಾಯಪ್ರಸ್, ಝೆಕ್ ಪ್ರಜಾರಾಜ್ಯ, ಡೋಮಿನಿಕನ್ ರಿಪಬ್ಲಿಕ್, ಈಜಿಪ್ತ್, ಮತ್ತು ಗಂಬೀಯಾದಲ್ಲಿನ ರಾಜದೂತರು ಉಪಸ್ಥಿತರಾಗುವರು.
೩. ದೇವಸ್ಥಾನದ ವೈಶಿಷ್ಟ್ಯ
ಈ ದೇವಸ್ಥಾನದ ಎಲ್ಲಕ್ಕಿಂತ ದೊಡ್ಡ ವೈಶಿಷ್ಟ್ಯವೆಂದರೆ, ದೇವಸ್ಥಾನಕ್ಕಾಗಿ ಕಬ್ಬಿಣ ಅಥವಾ ಸ್ಟೀಲ್‌ನ ಬದಲು ಕಲ್ಲುಗಳನ್ನೆ ಉಪಯೋಗಿಸಲಾಗಿದೆ. ಈ ದೇವಸ್ಥಾನವನ್ನು ಗುಲಾಬಿ ರಾಜಸ್ಥಾನಿ ಮರಳಿನ ಬಂಡೆಗಳು ಹಾಗೂ ಬಿಳಿ ಇಟೇಲಿಯನ್ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ದೇವಸ್ಥಾನದ ಒಳಗಿನ ನಿರ್ಮಾಣಕಾರ್ಯದಲ್ಲಿ ೪೦ ಸಾವಿರ ಘನ ಅಡಿಯಷ್ಟು ಅಮೃತ ಶಿಲೆಯನ್ನು ಉಪಯೋಗಿಸಲಾಗಿದೆ. ಈ ಕಲ್ಲುಗಳನ್ನು ಭಾರತದಲ್ಲಿ ಕೊರೆಯಲಾಗಿದ್ದು ಅನಂತರ ದೇವಸ್ಥಾನದ ನಿರ್ಮಾಣಕ್ಕಾಗಿ ಯುಎಇಗೆ ಸಾಗಿಸಲಾಗಿದೆ. ಮಹತ್ವದ ವಿಷಯವೆಂದರೆ, ‘ಯುಎಇ’ಯಲ್ಲಿನ ಉಷ್ಣ ವಾತಾವರಣದಿಂದ ಈ ಕಲ್ಲುಗಳಿಗೆ ಯಾವುದೇ ಪರಿಣಾಮವಾಗಲಿಕ್ಕಿಲ್ಲ.
೪. ದೇವಸ್ಥಾನ ನಿರ್ಮಾಣದ ವ್ಯವಸ್ಥಾಪಕರ ಅಭಿಪ್ರಾಯ
ದೇವಸ್ಥಾನ ನಿರ್ಮಾಣದ ವ್ಯವಸ್ಥಾಪಕರಾದ ಮಧುಸೂಧನ ಪಟೇಲರು, ”ನಿರ್ಮಾಣದ ಸಮಯದಲ್ಲಿನ ನಮ್ಮ ಅನುಭವ ಬೆರೆಯೇ ಆಗಿತ್ತು ಹಾಗೂ ನಾವು ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ನಾವು ಉಷ್ಣತಾ-ನಿರೋಧಕವಾಗಿರುವ ‘ನ್ಯನೋ ಟೈಲ್ಸ್’ ಮತ್ತು ಭಾರವಾದ ಗಾಜಿನ ಪ್ಯಾನೆಲ್‌ಗಳನ್ನು ಉಪಯೋಗಿಸಿದೆವು.” ಎಂದು ಹೇಳಿದರು.