ಶರೀರದಂತೆ ಮನಸ್ಸಿಗೂ ಲಸಿಕೆಯನ್ನು ನೀಡಬೇಕು !

ವೈದ್ಯೆ (ಸೌ.) ಮುಕ್ತಾ ಲೋಟಲೀಕರ

ಮನಸ್ಸಿನ ಲಸಿಕೆ (ರೋಗ ನಿರೋಧಕ ಮದ್ದು) ಇದನ್ನು ಕೇಳಿ ನಿಮಗೆ ಸ್ವಲ್ಪ ಬೇರೆ ಅನಿಸಬಹುದು. ನಮಗೆ ರೋಗಗಳು ಬರಬಾರದೆಂದು ನಾವು ಶರೀರಕ್ಕೆ ಲಸಿಕೆಯನ್ನು (ವ್ಯಾಕ್ಸಿನೇಶನ್) ಹಾಕಿಸಿ ಕೊಳ್ಳುತ್ತೇವೆ. ಲಸಿಕೆಗಳು ರೋಗಗಳನ್ನು ತಡೆಗಟ್ಟುವ ಕೆಲಸವನ್ನು ಮಾಡುತ್ತವೆ. ಲಸಿಕೆಗಳು ರೋಗಗಳು ಪುನಃ ಬರದಂತೆ ನೋಡಿಕೊಳ್ಳುತ್ತವೆ ಅಥವಾ ಬಂದರೂ ಅವುಗಳ ಗಂಭೀರ ಪರಿಣಾಮವಾಗಲು ಬಿಡುವುದಿಲ್ಲ. ಹಾಗಾದರೆ ಈಗ ಮನಸ್ಸಿನ ಲಸಿಕೆ (ರೋಗನಿರೋಧಕ ಚುಚ್ಚು ಮದ್ದು) ಎಂದರೇನು ?

ಅದನ್ನು ಈ ಲೇಖನದಿಂದ ನಾವು ತಿಳಿದುಕೊಳ್ಳುವವರಿದ್ದೇವೆ. ಸದ್ಯ ಹೆಚ್ಚಾಗುತ್ತಿರುವ ಒತ್ತಡ (ಟೆನ್ಶನ್‌), ಕಾಳಜಿ, ಭಯ ಇತ್ಯಾದಿಗಳಿಂದಾಗಿ ಕಡಿಮೆ ವಯಸ್ಸಿನಲ್ಲಿಯೇ ಹೃದಯರೋಗ, ಉಚ್ಚ ರಕ್ತದೊತ್ತಡ (ಬಿ.ಪಿ), ಮಧುಮೇಹ (ಡೈಬಿಟಿಸ್) ಇಂತಹ ರೋಗಗಳು ಹೆಚ್ಚಾಗುತ್ತಿರುವುದು ಕಾಣಿಸುತ್ತಿದೆ. ಈ ರೋಗಗಳನ್ನು ತಡೆಯಲು ಮನಸ್ಸಿಗೆ ಲಸಿಕೆ ಕೊಡುವುದು ಆವಶ್ಯಕವಾಗಿದೆ.

ಮಹರ್ಷಿ ಸುಶ್ರುತರು ‘ಸುಶ್ರುತಸಂಹಿತೆ’ಯಲ್ಲಿ ಆರೋಗ್ಯವಂತ ವ್ಯಕ್ತಿಯ ವ್ಯಾಖ್ಯೆಯನ್ನು ಮುಂದಿನಂತೆ ಹೇಳಿದ್ದಾರೆ

ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ |
ಪ್ರಸನ್ನಾತ್ಮೆನ್ದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ ||

– ಸುಶ್ರುತಸಂಹಿತಾ, ಸೂತ್ರಸ್ಥಾನ, ಅಧ್ಯಾಯ ೧೫, ಶ್ಲೋಕ ೪೧

ಅರ್ಥ : ಶರೀರದಲ್ಲಿನ ದೋಷ, ಧಾತು, ಮಲ, ಅಗ್ನಿ ಇವುಗಳ ಕ್ರಿಯೆ ಸಾಮಾನ್ಯ ಇರುವುದು, ಹಾಗೆಯೇ ಮನಸ್ಸು, ಆತ್ಮಾ ಮತ್ತು ಇಂದ್ರಿಯಗಳು ಪ್ರಸನ್ನವಾಗಿರುವುದು, ಇದು ಆರೋಗ್ಯಕರ ಪ್ರಕೃತಿಯ ಲಕ್ಷಣವಾಗಿದೆ.

ಶರೀರದಲ್ಲಿನ ದೋಷ, ಧಾತು, ಅಗ್ನಿ ಇವು ಯಾವಾಗ ಯೋಗ್ಯ ಪ್ರಮಾಣದಲ್ಲಿ ಇರುತ್ತವೆಯೋ, ಆಗ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಅವುಗಳ ಪ್ರಮಾಣ ಕೆಟ್ಟರೆ, ನಮಗೆ ರೋಗಗಳು ಬರುತ್ತವೆ. ಸುಶ್ರುತರು ಆರೋಗ್ಯದ ದೃಷ್ಟಿಯಿಂದ ಆತ್ಮಾ, ಇಂದ್ರಿಯಗಳು ಮತ್ತು ಮನಸ್ಸು ಇವುಗಳು ಸಹ ಪ್ರಸನ್ನವಾಗಿರುವುದು ಆವಶ್ಯಕ ವಾಗಿದೆ ಎಂದು ಹೇಳಿದ್ದಾರೆ. ಕೇವಲ ಶರೀರದಲ್ಲಿನ ದೋಷಗಳು ಸಮಪ್ರಮಾಣದಲ್ಲಿದ್ದರೆ ಆರೋಗ್ಯವಂತರು ಎಂದಾಗಿರದೇ ಇದರಲ್ಲಿ ಮನಸ್ಸು ಮತ್ತು ಇಂದ್ರಿಯಗಳ ಆರೋಗ್ಯದ ಬಗ್ಗೆಯೂ ವಿಚಾರ ಮಾಡುವುದು ಆವಶ್ಯಕವಾಗಿದೆ. ಯಾವುದಾದರೊಬ್ಬ ವ್ಯಕ್ತಿಯು ಶರೀರದಿಂದ ಗಟ್ಟಿಮುಟ್ಟಾಗಿರಬಹುದು; ಆದರೆ ಮನಸ್ಸಿನಿಂದ ಮಾತ್ರ ಕುಸಿದಿದ್ದರೆ ಆಗ ನಾವು ಅವನಿಗೆ ಒಬ್ಬ ಆರೋಗ್ಯವಂತ ವ್ಯಕ್ತಿ ಎಂದು ಹೇಳಲು ಆಗುವುದಿಲ್ಲ.

೧. ಶರೀರ, ಇಂದ್ರಿಯಗಳು ಮತ್ತು ಮನಸ್ಸು ಇವುಗಳ ಸಂಬಂಧ

ಮನಸ್ಸಿನ ಪ್ರೇರಣೆಯಿಂದ ನಮ್ಮ ಶರೀರದಲ್ಲಿನ ಪಂಚ ಜ್ಞಾನೇಂದ್ರಿಯಗಳು (ಮೂಗು, ಕಿವಿ, ಕಣ್ಣು, ನಾಲಿಗೆ ಮತ್ತು ಚರ್ಮ) ಅವುಗಳ ಜ್ಞಾನವನ್ನು ಗ್ರಹಿಸುತ್ತವೆ. ಅದಕ್ಕನುಸಾರ ಆ ಜ್ಞಾನವನ್ನು ಸಂಗ್ರಹಿಸಿಡುವುದು, ಯೋಗ್ಯ-ಅಯೋಗ್ಯ ಇದರ ವಿಚಾರ ಮಾಡುವುದು, ಇಂತಹ ಕಾರ್ಯವನ್ನು ಮನಸ್ಸು ಮಾಡುತ್ತಿರುತ್ತದೆ. ಶರೀರದ ವ್ಯಾಪಾರ ಸರಿಯಾಗಿ ನಡೆಯಲು ನಮಗೆ ಇಂದ್ರಿಯಗಳ ಮತ್ತು ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಮೊದಲಿಗೆ ನಾವು ಇಂದ್ರಿಯಗಳ ಆರೋಗ್ಯವನ್ನು ಹೇಗೆ ಕಾಪಾಡಬೇಕು, ಎಂಬುದನ್ನು ತಿಳಿದುಕೊಳ್ಳೋಣ.

ನಾವು ನಮ್ಮ ಮನೆಯಲ್ಲಿನ ಕಿಟಕಿಗಳಿಂದ ಹೊರಗಿನ ಜಗತ್ತನ್ನು ನೋಡಬಹುದು, ಅದೇ ರೀತಿ ಜ್ಞಾನೇಂದ್ರಿಯಗಳು ನಮ್ಮ ಶರೀರದ ಕಿಟಕಿಗಳಾಗಿವೆ. ಕಣ್ಣುಗಳಿಂದ ನೋಡುವುದು, ಕಿವಿಗಳಿಂದ ಕೇಳುವುದು, ಮೂಗಿನಿಂದ ವಾಸನೆ ತೆಗೆದು ಕೊಳ್ಳುವುದು, ತ್ವಚೆಯಿಂದ ಸ್ಪರ್ಶಜ್ಞಾನವಾಗುವುದು ಮತ್ತು ನಾಲಿಗೆಯಿಂದ ರುಚಿಯನ್ನು ತೆಗೆದುಕೊಳ್ಳುವುದು, ಇವು ಜ್ಞಾನೇಂದ್ರಿಯ ಗಳ ಕಾರ್ಯವಾಗಿವೆ. ಜ್ಞಾನೇಂದ್ರಿಯಗಳ ಕಾರ್ಯವು ಸರಿಯಾಗಿ ನಡೆದರೆ ಮಾತ್ರ ನಮಗೆ ಯೋಗ್ಯ ಜ್ಞಾನ ಸಿಗುವುದು. ಅದಕ್ಕಾಗಿ ನಿಯಮಿತವಾಗಿ ಜ್ಞಾನೇಂದ್ರಿಯಗಳ ಕಾಳಜಿಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

೧ ಅ. ಕಣ್ಣು : ಸದ್ಯ ಚಿಕ್ಕ ಮಕ್ಕಳೂ ಕನ್ನಡಕ ಹಾಕುವುದನ್ನು ನೋಡುತ್ತೇವೆ. ಯೋಗ್ಯ ಬೆಳಕಿನಲ್ಲಿ ಓದುವುದು, ಯೋಗ್ಯ ಅಂತರದಿಂದ ಟಿ.ವಿ. ನೋಡುವುದು, ಮೈದಾನದ ಆಟಗಳಲ್ಲಿ ಆಸಕ್ತಿ ತೋರಿಸುವುದು, ನಿಯಮಿತವಾಗಿ ಕಣ್ಣುಗಳ ವ್ಯಾಯಾಮ ಮತ್ತು ತ್ರಾಟಕ ಮಾಡುವುದು. ಇವುಗಳಿಂದ ನಮ್ಮ ಕಣ್ಣುಗಳ ಆರೋಗ್ಯವು ಸುರಕ್ಷಿತವಾಗಿರುತ್ತದೆ.

೧ ಆ. ಕಿವಿ ಮತ್ತು ಮೂಗು : ಇವುಗಳ ಆರೋಗ್ಯವನ್ನು ಚೆನ್ನಾಗಿಡಲು ನಿಯಮಿತವಾಗಿ ಕಿವಿ ಮತ್ತು ಮೂಗುಗಳಲ್ಲಿ ೨-೩ ಹನಿ ಉಗುರುಬೆಚ್ಚಗಿನ ಎಣ್ಣೆಯನ್ನು ಹಾಕಬೇಕು.

೧ ಇ. ಚರ್ಮ : ಇದನ್ನು ಗಟ್ಟಿಮುಟ್ಟು ಮತ್ತು ಕಾಂತಿಯುತವಾಗಿಡಲು ಸ್ನಾನದ ಮೊದಲು ನಿಯಮಿತವಾಗಿ ಮೈಗೆ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡಬೇಕು. ಇದರಿಂದ ಚರ್ಮ ಮೃದು ಆಗಿರುತ್ತದೆ ಮತ್ತು ಅಯೋಗ್ಯ ಕಾಲದಲ್ಲಿ (ಪ್ರೌಢಾವಸ್ಥೆಯಲ್ಲಿ) ನೆರಿಗೆಗಳು (ಸುಕ್ಕು) ಬೀಳುವುದಿಲ್ಲ. ತ್ವಚೆಗೆ ಎಣ್ಣೆಯನ್ನು ಹಚ್ಚಿ ಅದು ಇಂಗಿದ ನಂತರ ಎಣ್ಣೆಜಿಡ್ಡು ಹೋಗಲು ಕಡಲೆ ಹಿಟ್ಟು, ಭದ್ರಮುಷ್ಠಿ ಮತ್ತು ನೆಲ್ಲೆಕಾಯಿ ಚೂರ್ಣವನ್ನು ತ್ವಚೆಯ ಮೇಲೆ ಉಜ್ಜಬೇಕು.

೧ ಈ. ನಾಲಿಗೆ : ಹಲ್ಲುಜ್ಜಿದ ನಂತರ ನಿಯಮಿತವಾಗಿ ನಾಲಿಗೆಯನ್ನೂ ಸ್ವಚ್ಚ ಮಾಡುವುದು ಆವಶ್ಯಕವಾಗಿದೆ. ಇದರಿಂದ ನಾಲಿಗೆಯ ಆರೋಗ್ಯ ಚೆನ್ನಾಗಿರುತ್ತದೆ. ಮೇಲಿನಂತೆ ನಮ್ಮ ಇಂದ್ರಿಯಗಳ ಕಾಳಜಿಯನ್ನು ತೆಗೆದು ಕೊಂಡರೆ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಇಂದ್ರಿಯಗಳ ಉಪಯೋಗವನ್ನು ಯೋಗ್ಯ ಸ್ಥಳಗಳಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿಯೇ ಮಾಡಬೇಕು. ಸ್ಪಲ್ಪ ಬೆಳಕಿನಲ್ಲಿ ತುಂಬಾ ಹೊತ್ತು ಓದುವುದು, ತುಂಬಾ ಸಮಯದ ವರೆಗೆ ಟಿ.ವಿ., ಸಂಚಾರವಾಣಿ, ಸಂಚಾರಿಗಣಕಯಂತ್ರ (ಲ್ಯಾಪ್‌ಟಾಪ್) ನೋಡುವುದು,

ತುಂಬಾ ಸಮಯದ ವರೆಗೆ ಕಿವಿಗಳಿಗೆ ಹೆಡ್‌ಪೋನ್‌ ಹಚ್ಚಿ ಹಾಡುಗಳನ್ನು ಕೇಳುವುದು, ಅತೀ ಕರ್ಕಶ ಧ್ವನಿಯಲ್ಲಿ ಹಾಡುಗಳನ್ನು ಕೇಳುವುದು, ಹೆಚ್ಚು ಪ್ರಮಾಣದಲ್ಲಿ ಹೆಚ್ಚು ಉಪ್ಪು-ಖಾರ ಇರುವ ಪದಾರ್ಥಗಳನ್ನು ತಿನ್ನುವುದು, ಅತೀ ಬಿಸಿಲು ಮತ್ತು ಅತೀ ತಂಪು ವಾತಾವರಣದಲ್ಲಿ ಹೊರಗೆ ಹೋಗುವುದು, ತ್ವಚೆಗೆ ಸ್ವಲ್ಪವೂ ಬಿಸಿಲು ತಾಗಿಸದಿರುವುದು, ಇವು ಇಂದ್ರಿಯಗಳ ಆರೋಗ್ಯವನ್ನು ಕೆಡಿಸುವ ಘಟಕಗಳಾಗಿವೆ. ಈಗ ಮನಸ್ಸಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ !

೨. ಮನಸ್ಸಿನ ಕಾರ್ಯ ಕೆಟ್ಟು ಹೋದರೆ ಪ್ರಜ್ಞಾಪರಾಧ (ಬುದ್ಧಿಯಿಂದ ತಪ್ಪು ನಿರ್ಣಯಗಳನ್ನು ತೆಗೆದುಕೊಳ್ಳುವುದು) ಆಗಿ ಮುಂದೆ ರೋಗಗಳು ಉತ್ಪನ್ನವಾಗುವುದು

ಆಯುರ್ವೇದದಲ್ಲಿ ಶರೀರಕ್ಕೆ ಕೊಟ್ಟಿರುವಷ್ಟೇ ಮಹತ್ವ ಮನಸ್ಸಿಗೂ ಕೊಡಲಾಗಿದೆ. ನಮ್ಮ ಸಂಪೂರ್ಣ ಶರೀರವು ಮನಸ್ಸಿನ ಸ್ಥಾನವಾಗಿದೆ. ಮನಸ್ಸಿನ ಮೇಲೆ ಯಾವುದೇ ಪರಿಣಾಮವಾದರೆ ಅದು ಶರೀರದ ಮೇಲೆಯೂ ಕಂಡುಬರುತ್ತದೆ. ಆದ್ದರಿಂದ ಆರೋಗ್ಯವನ್ನು ರಕ್ಷಿಸುವುದರಲ್ಲಿ ಶರೀರದೊಂದಿಗೆ ಮನಸ್ಸೂ ಮಹತ್ವದ್ದಾಗಿದೆ. ರೋಗಗಳು ಉತ್ಪನ್ನವಾಗಲು ‘ಇಂದ್ರಿಯಮೋಹ’ ಇದು ಒಂದು ಮಹತ್ವದ ಕಾರಣವಾಗಿದೆ. ಇಂದ್ರಿಯಮೋಹ ಎಂದರೇನು ?
ನಮ್ಮ ಜ್ಞಾನೇಂದ್ರಿಯಗಳು ಅಯೋಗ್ಯ ಅಥವಾ ತಪ್ಪು ವಿಷಯ ಗಳೊಂದಿಗೆ ಸಂಯೋಗವಾಗುವುದು. ಉದಾಹರಣೆಗಾಗಿ ಸತತವಾಗಿ ಹೊರಗಿನ ಭೇಲಪುರಿಯಂತಹ ಪದಾರ್ಥಗಳನ್ನು ತಿನ್ನುವುದು. ಇದರಲ್ಲಿ ನಾಲಿಗೆಗೆ ಸತತವಾಗಿ ಹೊರಗಿನ ಪದಾರ್ಥ ಗಳನ್ನು ತಿನ್ನುವ ಇಂದ್ರಿಯಮೋಹವಾಗುತ್ತದೆ. ಇನ್ನೊಂದು ಕಾರಣವೆಂದರೆ ಪ್ರಜ್ಞಾಪರಾಧ – ಪ್ರಜ್ಞೆ ಎಂದರೆ ಬುದ್ಧಿ. ತನ್ನ ಯೋಗ್ಯ ಮತ್ತು ಅಯೋಗ್ಯದ ನಿರ್ಣಯವನ್ನು ತೆಗೆದುಕೊಳ್ಳುವ ಕೆಲಸವನ್ನು ಬುದ್ಧಿಯು ಮಾಡುತ್ತಿರುತ್ತದೆ. ಒಂದು ವೇಳೆ ನಾವು ಯೋಗ್ಯ ಕೃತಿಯನ್ನು ಮಾಡಿದರೆ, ಇಂದ್ರಿಯಮೋಹ ಆಗಲಾರದು; ಆದರೆ ಬುದ್ಧಿಯು ತಪ್ಪು ನಿರ್ಣಯ ತೆಗೆದುಕೊಂಡರೆ ಮಾತ್ರ ಇಂದ್ರಿಯಮೋಹವಾಗಿ ಮುಂದೆ ರೋಗಗಳು ಉತ್ಪನ್ನವಾಗುತ್ತವೆ.

ಪ್ರಜ್ಞಾಪರಾಧವನ್ನು ತಡೆಗಟ್ಟಲು ಏನು ಮಾಡಬೇಕು ? ಧೀ, ಧೃತಿ ಮತ್ತು ಸ್ಮೃತಿ ಇವು ಮನಸ್ಸಿನ ಕಾರ್ಯಗಳಾಗಿವೆ.

ಅ. ಧೀ : ಯೋಗ್ಯ ಮತ್ತು ಅಯೋಗ್ಯ ಇವುಗಳ ವಿಚಾರ ಮಾಡುವುದು. ಉದಾ. ನಾನು ಯಾವುದನ್ನು ತಿನ್ನುತ್ತಿದ್ದೇನೆಯೋ, ಅದು ನನ್ನ ಶರೀರಕ್ಕೆ ಯೋಗ್ಯವಾಗಿದೆಯೋ ಅಥವಾ ಅಯೋಗ್ಯ ವಾಗಿದೆ ? ನನ್ನ ಕೃತಿಯು ನನ್ನ ಆರೋಗ್ಯದ ದೃಷ್ಟಿಯಿಂದ ಯೋಗ್ಯವಾಗಿದೆಯೋ ಅಥವಾ ಅಯೋಗ್ಯವಾಗಿದೆ ? ಇತ್ಯಾದಿ.

ಆ. ಧೃತೀ : ಮನಸ್ಸು ತೆಗೆದುಕೊಂಡ ನಿರ್ಣಯವನ್ನು ಕಾರ್ಯ ರೂಪಕ್ಕೆ ತರುವ ಸಾಮರ್ಥ್ಯವೆಂದರೆ ಧೃತೀ. ಉದಾ. ಸಿಗರೇಟ್, ಸರಾಯಿ ಇವುಗಳನ್ನು ಬಿಡುವ ನಿರ್ಧಾರವನ್ನು ಕೃತಿಯಲ್ಲಿ ತರುವುದು, ಹೊರಗಿನ ಆಹಾರ ಪದಾರ್ಥಗಳನ್ನು ತಿನ್ನದಿರುವ ನಿರ್ಧಾರವನ್ನು ಪ್ರತ್ಯಕ್ಷ ಕೃತಿಯಲ್ಲಿ ತರುವುದು, ನಿಯಮಿತವಾಗಿ ವ್ಯಾಯಾಮ ಮಾಡುವ ನಿರ್ಧಾರವನ್ನು ಕೃತಿಯಲ್ಲಿ ತರುವುದು ಇತ್ಯಾದಿ.

ಇ. ಸ್ಮೃತಿ : ನಮಗೆ ನಿರ್ದಿಷ್ಟವಾಗಿ (ನಿಖರವಾಗಿ) ಯಾವ ವಿಷಯಗಳಿಂದ ತೊಂದರೆಯಾಗುತ್ತದೆ ? ಎಂಬುದನ್ನು ನೆನಪಿನಲ್ಲಿಟ್ಟು ಕೊಂಡು ತೊಂದರೆದಾಯಕ ವಿಷಯಗಳನ್ನು ತ್ಯಜಿಸುವುದು. ಉದಾಹರಣೆಗಾಗಿ ಖಾರದ ಪದಾರ್ಥಗಳನ್ನು ತಿಂದರೆ ಹೊಟ್ಟೆ ಯಲ್ಲಿ ಉರಿಯುತ್ತದೆ, ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಖಾರದ ಪದಾರ್ಥಗಳನ್ನು ತಿನ್ನದಿರುವುದು. ಮಧುಮೇಹದ ರೋಗಿಗಳಿಗೆ ಸಿಹಿ ತಿನ್ನುವ ಮೋಹವನ್ನು ತಡೆಯಲು ಆಗುವುದಿಲ್ಲ, ಎಂಬುದನ್ನು ನಾವು ಅನೇಕ ಕಡೆಗಳಲ್ಲಿ ನೋಡಿದ್ದೇವೆ.

ಧೀ, ಧೃತಿ ಮತ್ತು ಸ್ಮೃತಿ ಇವುಗಳಲ್ಲಿನ ಯಾವುದಾದರೊಂದರ ಕಾರ್ಯ ಕೆಟ್ಟು ಹೋದರೂ, ತಪ್ಪುಗಳಾಗುತ್ತವೆ, ಪ್ರಜ್ಞಾಪರಾಧ ವಾಗುತ್ತದೆ ಮತ್ತು ಮುಂದೆ ರೋಗಗಳು ಉತ್ಪನ್ನವಾಗುತ್ತವೆ.

೩. ಷಡ್ರಿಪುಗಳ ಮೇಲೆ ನಿಯಂತ್ರಣ ಪಡೆದರೆ ಮನಸ್ಸಿನ ಪ್ರಸನ್ನತೆ ಮತ್ತು ಆರೋಗ್ಯ ಉತ್ತಮವಾಗಿರುವುದು

ಮನಸ್ಸು ಆರೋಗ್ಯಕರ ಮತ್ತು ಪ್ರಸನ್ನವಾಗಿರಲು ಆಯುರ್ವೇದದಲ್ಲಿ ಕೆಲವು ಮಾನಸಿಕ ಆವೇಗ(ರಭಸ)ಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಲಾಗಿದೆ. ಸಿಟ್ಟು, ಲೋಭ, ದ್ವೇಷ, ಮದ, ಮೋಹ, ಮತ್ಸರ ಈ ೬ ಷಡ್ರಿಪುಗಳಿವೆ. ಅವುಗಳಿಂದ ನಮ್ಮ ಮಾನಸಿಕ ಆರೋಗ್ಯ ಕೆಡುತ್ತದೆ. ಉದಾಹರಣೆ,

ಅ. ಸಿಟ್ಟು : ನಮಗೆ ಸತತವಾಗಿ ಸಿಟ್ಟು ಬರುವುದರಿಂದ ಮನೆಯಲ್ಲಿ ಕಲಹವಾಗುವುದು, ಇತರರ ಮೇಲೆ ಸಿಡಿಮಿಡಿಗೊಳ್ಳುವುದು ಇತ್ಯಾದಿ.
ಆ. ಲೋಭ : ‘ಯಾವುದಾದರೊಂದು ವಿಷಯವು ನನಗೆ ಸಿಗಲೇ ಬೇಕು’, ಎಂಬ ಅಟ್ಟಹಾಸದಿಂದ ಯಾವ ಮಟ್ಟಕ್ಕಾದರೂ ಹೋಗುವುದು.
ಇ. ದ್ವೇಷ : ಇತರರಿಗೆ ಹಾನಿಯನ್ನು ಮಾಡಲು ಪ್ರಯತ್ನಿಸುವುದು.
ಈ. ಮತ್ಸರ : ಇತರರ ದುಃಖವನ್ನು ನೋಡಿ ಒಳ್ಳೆಯದೆನಿಸುವುದು.

ಒಂದು ವೇಳೆ ನಾವು ಷಡ್ರಿಪುಗಳ ಮೇಲೆ ನಿಯಂತ್ರಣವನ್ನು ಪಡೆದರೆ, ಮನಸ್ಸಿನ ಪ್ರಸನ್ನತೆ ಸ್ಥಿರವಾಗಿದ್ದು ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ.

೪. ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆ ಎಂದರೆ ಮನಸ್ಸಿನ ಲಸಿಕೆ !

ನಾವು ಹೇಗೆ ಶರೀರದಲ್ಲಿ ವಾತ, ಪಿತ್ತ, ಕಫ ಈ ಪ್ರಕೃತಿದೋಷ ಗಳನ್ನು ನೋಡಿದೆವೋ, ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸತ್ತ್ವ, ರಜ ಮತ್ತು ತಮ ಈ ಮೂರು ಗುಣಗಳ ಪ್ರಮಾಣವು ಬೇರೆಬೇರೆಯಾಗಿರುತ್ತವೆ ಹಾಗೂ ಅವುಗಳಿಗನುಸಾರ ಅವರ ಸ್ವಭಾವವಿರುತ್ತದೆ. ನಮ್ಮ ಸ್ವಭಾವಕ್ಕನುಸಾರ ನಮ್ಮ ವಿಚಾರಪ್ರಕ್ರಿಯೆ ಆಗುತ್ತಿರುತ್ತದೆ ಮತ್ತು ಅದರ ಪರಿಣಾಮವು ನಮ್ಮ ಶರೀರದ ಮೇಲಾಗುತ್ತದೆ. ಯಾರಾದರೊಬ್ಬರು ಸಾತ್ತ್ವಿಕ ಸ್ವಭಾವದ ವ್ಯಕ್ತಿ ಇದ್ದರೆ, ಅವನು ಮನಸ್ಸಿನಿಂದ ಸ್ಥಿರ, ಶಾಂತ, ಯೋಗ್ಯ ಕೃತಿಗಳನ್ನು ಮಾಡುವವನು ಮತ್ತು ಅವನು ನಿಯಮಬದ್ಧವಾಗಿರುತ್ತಾನೆ. ಇಂತಹ ವ್ಯಕ್ತಿಯ ಆರೋಗ್ಯವು ದೀರ್ಘಕಾಲದ ವರೆಗೆ ಉತ್ತಮ ವಾಗಿರುತ್ತದೆ. ರಾಜಸಿಕ ಮತ್ತು ತಾಮಸಿಕ ಸ್ವಭಾವವಿರುವ ವ್ಯಕ್ತಿಗಳು ತಮ್ಮನ್ನು ಸಾತ್ತ್ವಿಕ ಸ್ವಭಾವದ ಕಡೆಗೆ ಒಯ್ಯಲು ಪ್ರಯತ್ನಿಸಬೇಕು. ನಾವು ಸ್ವಭಾವಕ್ಕೆ ಔಷಧಿಯೇ ಇಲ್ಲ ಎಂದು ಹೇಳುತ್ತೇವೆ; ಆದರೆ ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು) ನಮಗೆ ಹೇಳಿದ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡುವುದು ಸಾಧ್ಯವಿದೆ, ಎಂಬುದನ್ನು ಕಲಿಸಿದ್ದಾರೆ. ಚಿಂತೆ, ಕಾಳಜಿ, ಭಯ, ನಿರಾಶೆ, ಒತ್ತಡ ಇವು ಮನಸ್ಸಿನ ಮೇಲೆ ಪರಿಣಾಮವನ್ನು ಮಾಡುವ ಘಟಕಗಳು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯಿಂದ ಖಂಡಿತವಾಗಿ ಕಡಿಮೆಯಾಗುತ್ತವೆ; ಆದ್ದರಿಂದ ಈ ಪ್ರಕ್ರಿಯೆ ಎಂದರೆ ಮನಸ್ಸಿನ ಲಸಿಕೆಯಾಗಿದೆ. ಈ ಪ್ರಕ್ರಿಯೆಯಿಂದ ಮನಸ್ಸಿನ ದೋಷಗಳು ಕಡಿಮೆಯಾಗಿ ಮನಸ್ಸು ಪ್ರಸನ್ನವಾಗತೊಡಗುತ್ತದೆ ಮತ್ತು ಆರೋಗ್ಯದ ದೃಷ್ಟಿಯಿಂದ ಮನಸ್ಸು ಪ್ರಸನ್ನವಾಗಿರುವುದೂ ಅಷ್ಟೇ ಆವಶ್ಯಕವಾಗಿದೆ. ಆದ್ದರಿಂದ ಎಲ್ಲರೂ ತಮ್ಮ ಮನಸ್ಸಿಗೆ ಲಸಿಕೆಯನ್ನು ಆವಶ್ಯವಾಗಿ ಹಾಕಿಸಿಕೊಳ್ಳಬೇಕು.

ನಿಯಮಬದ್ಧವಾಗಿರುವುದು ಮತ್ತು ಧರ್ಮಾಚರಣೆಯನ್ನು ಮಾಡುವುದು, ಇದುವೇ ಆರೋಗ್ಯಮಯ ಹಾಗೂ ಯಶಸ್ವಿ ಜೀವನವನ್ನು ಜೀವಿಸುವ ಉಪಾಯವಾಗಿವೆ; ಏಕೆಂದರೆ ನಿಯಮಬದ್ಧವಾಗಿರುವುದರಿಂದ ನಮ್ಮ ಶರೀರವು ಆರೋಗ್ಯಕರ ಆಗಿರುತ್ತದೆ ಮತ್ತು ಧರ್ಮಾಚರಣೆ ಮಾಡುವುದರಿಂದ ನಮ್ಮ ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ.

– ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ. (೨೮.೫.೨೦೨೩)