ಪ್ಯಾಲೇಸ್ಟಿನ್ಅನ್ನು ಸ್ವತಂತ್ರ ರಾಷ್ಟ್ರವೆಂದು ಅಂಗಿಕರಿಸುವತನಕ ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಸಾಧ್ಯವಿಲ್ಲ !

ಸೌದಿ ಅರೇಬಿಯಾ ಅಮೇರಿಕಾಗೆ ಸ್ಪಷ್ಟ ಸಂದೇಶ !

ರಿಯಾದ್ (ಸೌದಿ ಅರೇಬಿಯಾ) – ನಾವು ಅಮೇರಿಕಾಗೆ, ಗಾಜಾದಲ್ಲಿ ದಾಳಿ ನಿಲ್ಲಿಸುವವರೆಗೆ ಮತ್ತು ಪ್ಯಾಲೇಸ್ಟಿನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಅಂಗಿಕರಿಸುವವರೆಗೆ ನಾವು ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸುವುದಿಲ್ಲ, ಎಂದು ನಾವು ಎಂದು ಸೌದಿ ಅರೇಬಿಯಾ ಹೇಳಿದೆ. ಇಸ್ರೇಲ್-ಸೌದಿ ಅರೇಬಿಯಾ ಸಂಬಂಧಗಳನ್ನು ಸುಧಾರಿಸಲು ಅಮೇರಿಕಾ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

1. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಫೆಬ್ರವರಿ 5 ರಂದು ಸೌದಿ ರಾಜಧಾನಿ ರಿಯಾದ್‌ಗೆ ತಲುಪಿದ ನಂತರ ಅವರು ಇಸ್ರೇಲ್-ಹಮಾಸ್ ಯುದ್ಧದ ಕುರಿತು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಚರ್ಚಿಸಿದರು. ಆನಂತರ ಮರುದಿನ, ಅಮೆರಿಕವೂ ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಲು ಸಿದ್ಧ ಎಂದು ಹೇಳಿದ್ದರು.

2. ಅಮೇರಿಕಾದ ಈ ಹೇಳಿಕೆಯ ನಂತರ ಸೌದಿ ಅರೇಬಿಯಾ ಇಸ್ರೇಲ್ ಜೊತೆ ಯಾವುದೇ ರೀತಿಯ ಸಂಬಂಧವನ್ನು ಸ್ಥಾಪಿಸಲು ನಿರಾಕರಿಸಿದೆ. ವಿಶೇಷವೆಂದರೆ ಸೌದಿ ಅರೇಬಿಯಾ ಇನ್ನೂ ಇಸ್ರೇಲ್ ಅನ್ನು ಒಂದು ದೇಶವಾಗಿ ಅಂಗಿಕರಿಸಿಲ್ಲ. ಆದ್ದರಿಂದ ಎರಡು ದೇಶದ ನಡುವೆ ರಾಜತಾಂತ್ರಿಕ ಸಂಬಂಧವಿಲ್ಲ.

3. ಸೌದಿ ಪ್ರಕಾರ, ಇಸ್ರೇಲ್‌ನೊಂದಿಗೆ ಸಂಬಂಧವನ್ನು ಸಾಮಾನ್ಯಗೊಳಿಸಬಹುದು; ಆದರೆ ಇದಕ್ಕಾಗಿ ಅವರು 2002 ರ ಅರಬ್ ಶಾಂತಿ ಪ್ರಸ್ತಾಪದ ನಿಯಮಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಸ್ರೇಲ್ 1967 ರ ಯುದ್ಧದಲ್ಲಿ ಹಕ್ಕು ಸಾಧಿಸಿದ ಎಲ್ಲಾ ಪ್ರದೇಶಗಳ ಮೇಲಿನ ತನ್ನ ನಿಯಂತ್ರಣವನ್ನು ಬಿಟ್ಟುಕೊಡಬೇಕೆಂದು ನಿರ್ಧರಿಸಲಾಯಿತು. ಪ್ಯಾಲೆಸ್ಟಿನ್ ಸ್ವತಂತ್ರ ರಾಷ್ಟ್ರವೆಂದು ಪರಿಗಣಿಸಬೇಕು. ಪೂರ್ವ ಜೆರುಸಲೆಮ್ ಅನ್ನು ಅದರ ರಾಜಧಾನಿ ಎಂದು ಪರಿಗಣಿಸಬೇಕು. ಎಲ್ಲಾ ಅರಬ್ ದೇಶಗಳು ಈ ಷರತ್ತುಗಳನ್ನು ಒಪ್ಪಿಕೊಂಡಿವೆ ಎಂದು ಹೇಳಿದೆ.