ಸ್ಯಾಕ್ರಾಮೆಂಟೊ (ಕ್ಯಾಲಿಫೋರ್ನಿಯಾ) – ಹಿಂದೂ ಧರ್ಮದ ಅಪಕೀರ್ತಿ ಮಾಡುವ ಸಂಚು ಅಮೇರಿಕೆಯಲ್ಲಿ ವಿಫಲ. ಕ್ಯಾಲಿಫೋರ್ನಿಯಾ ಸರಕಾರದ ನಾಗರಿಕ ಹಕ್ಕುಗಳ ಇಲಾಖೆಯು ಜಾತಿ ಆಧಾರಿತ ಭೇದಭಾವವು ಹಿಂದೂ ಧರ್ಮದ ಮತ್ತು ಅವರ ಕಲಿಕೆಯ ಭಾಗವಲ್ಲ ಎಂದು ಹೇಳಿದೆ. ಇದರೊಂದಿಗೆ ಈ ಇಲಾಖೆಯು 2020 ರಲ್ಲಿ, ‘ಸಿಸ್ಕೋ ಸಿಸ್ಟಮ್ಸ್’ ಈ ಕ್ಯಾಲಿಫೋರ್ನಿಯಾದಲ್ಲಿರುವ ಕಂಪನಿಯ ವಿರುದ್ಧ ಜಾತಿ ತಾರತಮ್ಯದ ವಿಷಯದ ದೂರನ್ನು ಸಂಶೋಧನೆಯ ಕೊನೆಯಲ್ಲಿ ತಿರಸ್ಕರಿಸಿದೆ. ಕ್ಯಾಲಿಫೋರ್ನಿಯಾದ ನಾಗರಿಕ ಹಕ್ಕುಗಳ ಇಲಾಖೆಯು ಕಳೆದ ವರ್ಷ ಈ ಪ್ರಕರಣದಿಂದ ಸ್ವಯಂಪ್ರೇರಣೆಯಿಂದ ಹಿಂದಕ್ಕೆ ಸರಿದಿತ್ತು.
ಹಿಂದೂ ಅಮೇರಿಕನ್ನರಿಗೆ ದೊಡ್ಡ ಗೆಲುವು ! – ಹಿಂದೂ ಸಂಘಟನೆ
‘ಹಿಂದೂ ಅಮೇರಿಕನ್ ಫೌಂಡೇಶನ್’ ಈ ಅಮೇರಿಕೆಯಲ್ಲಿರುವ ಹಿಂದೂಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಘಟನೆಯು ಮನವಿಯನ್ನು ಪ್ರಕಟಿಸಿ ಇದು ಹಿಂದೂ ಅಮೇರಿಕನ್ನರಿಗೆ ದೊರೆತ ದೊಡ್ಡ ಗೆಲುವು ಎಂದು ಹೇಳಿದೆ.
ಏನಿದು ಪ್ರಕರಣ ?
2020 ರಲ್ಲಿ, ಸಿಲಿಕಾನ್ ವ್ಯಾಲಿಯಲ್ಲಿರುವ ಸಿಸ್ಕೊ ಸಿಸ್ಟಮ್ಸ್‌ನಲ್ಲಿ ಭಾರತೀಯ ಮೂಲದ ಅಮೇರಿಕನ್ ಇಂಜಿನಿಯರ್ ಅವರು ‘ನನ್ನ ಭಾರತೀಯ’ ಸಹೋದ್ಯೋಗಿ ನನ್ನೊಂದಿಗೆ ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಿದನು; ಏಕೆಂದರೆ ನಾನು ದಲಿತ ಸಮುದಾಯಕ್ಕೆ ಸೇರಿದವನಾಗಿದ್ದೇನೆ ಮತ್ತು ನನ್ನ ಗುಂಪಿನಲ್ಲಿರುವ ಇತರ ನೌಕರರು ಮೇಲ್ಜಾತಿಯವರಾಗಿದ್ದಾರೆ’ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ, ಕ್ಯಾಲಿಫೋರ್ನಿಯಾ ಸರಕಾರವು ‘ಸಿಸ್ಕೋ ಸಿಸ್ಟಮ್ಸ್’ ವಿರುದ್ಧ ನಾಗರಿಕ ಹಕ್ಕುಗಳ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಈ ಪ್ರಕರಣದ ಬಗ್ಗೆ ಅಮೇರಿಕಾ ಮತ್ತು ಭಾರತದ ನಡುವೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಮೇರಿಕದಲ್ಲಿ ದಲಿತರ ಹಕ್ಕುಗಳಿಗಾಗಿ ಹೋರಾಡುವ ಕೆಲವು ಸಂಘಟನೆಗಳು ಈ ಪ್ರಕರಣದಲ್ಲಿ ಭಾಗವಹಿಸಿದ್ದವು.
#California gov dept says #caste not essential part of #Hinduism, amends 2020 complainthttps://t.co/9QvY7MyA7Y
— Economic Times (@EconomicTimes) February 7, 2024
ಸಂಪಾದಕರ ನಿಲುವು*’ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆಯಿದೆ’, ಎಂದು ಹೇಳುತ್ತಾ, ಭಾರತದಲ್ಲಿರುವ ಪ್ರಗತಿ(ಅಧೋ)ಪರರ ಗುಂಪಿನವರು ಹಿಂದೂ ಧರ್ಮವನ್ನು ಟೀಕಿಸುತ್ತಾರೆ. ಅವರ ಬಾಯಿ ಮುಚ್ಚಿಸಲು ಭಾರತ ಸರಕಾರವೂ ಪ್ರಯತ್ನಿಸಬೇಕು. |