ಅಯೋಧ್ಯಾ (ಉತ್ತರಪ್ರದೇಶ) – ಶ್ರೀರಾಮಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಅಯೋಧ್ಯೆಗೆ ತೆರಳಿದ್ದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ೨೧ ಜನವರಿ ೨೦೨೪ ರಂದು ಅಯೋಧ್ಯೆಯ ಶ್ರೀ ಕಾಲೆರಾಮ ದೇವಸ್ಥಾನಕ್ಕೆ ತೆರಳಿ ಶ್ರೀರಾಮ ಪಂಚಾಯತನದ ದರ್ಶನವನ್ನು ಪಡೆ ದರು. ಆ ಸಮಯದಲ್ಲಿ ಅವರು ತಮಿಳುನಾಡಿನÀ ಶ್ರೀ ಚಿದಂಬರಮ್ ದೇವಸ್ಥಾನದ ವತಿಯಿಂದ ನೀಡಿದ ಲಾವಂಚದ ಮೂರು ಹಾರಗಳನ್ನು ಶ್ರೀರಾಮನಿಗೆ ಅರ್ಪಿಸಿದರು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆಯನ್ನು ಮಾಡಿದರು.
ಅಯೋಧ್ಯೆಯಲ್ಲಿನ ಕಾರ್ಯಕ್ರಮಕ್ಕೆ ತೆರಳುವ ಮೊದಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ತಮಿಳುನಾಡಿನ ಶ್ರೀ ಚಿದಂಬರಮ್ ದೇವಸ್ಥಾನದಲ್ಲಿನ ಶ್ರೀ ನಟರಾಜನ ದರ್ಶನಕ್ಕಾಗಿ ತೆರಳಿದ್ದರು. ಆಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಅಲ್ಲಿನ ಅರ್ಚಕರಿಗೆ ನಾವು ಅಯೋಧ್ಯೆಯಲ್ಲಿನ ಶ್ರೀರಾಮಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗಾಗಿ ಹೋಗುವವರಿದ್ದೇವೆ ಎಂದು ಹೇಳಿದರು. ಇದನ್ನು ಕೇಳಿ ಅಲ್ಲಿನ ಅರ್ಚಕರು ನಟರಾಜನ ಕೊರಳಿನಲ್ಲಿನ ಲಾವಂಚದ ೩ ಹಾರಗಳನ್ನು ತೆಗೆದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಕೊಟ್ಟು, ”ನೀವು ಆಯೋಧ್ಯೆಗೆ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಗಾಗಿ ಹೋಗುತ್ತಿದ್ದೀರಿ, ಅವನಿಗೆ ಈ ೩ ಹಾರಗಳನ್ನು ಅರ್ಪಿಸಿರಿ ಎಂದು ಹೇಳಿದರು. (ಈ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಗೆ ಅರ್ಚಕರು ನೀಡಿದ ೩ ಹಾರಗಳೆಂದರೆ ಸನಾತನ ಸಂಸ್ಥೆಯ ೩ ಗುರುಗಳಾಗಿದ್ದಾರೆ, ಎಂದು ಅರಿವಾಯಿತು. – ಸಂಕಲನಕಾರರು) ಈ ಹಾರಗಳು ಶಿವನಿಂದ (ನಟರಾಜನು ಶಿವನ ರೂಪ) ಶ್ರೀರಾಮನಿಗೆ ಉಡುಗೊರೆಯಾಗಿವೆ. ಶಿವನು ನಿಮ್ಮ ಮಾಧ್ಯಮದಿಂದ ಇವುಗಳನ್ನು ಕೊಡುತ್ತಿದ್ದಾನೆ’’ ಎಂದು ಹೇಳಿದರು.
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ತಂದಿರುವ ೩ ಹಾರಗಳನ್ನು ಶ್ರೀ ಕಾಲೆರಾಮ ದೇವಸ್ಥಾನದಲ್ಲಿನ ಅರ್ಚಕರಿಗೆ ನೀಡಿದರು. ಆ ಸಮಯದಲ್ಲಿ ದೇವಸ್ಥಾನದಲ್ಲಿನ ಅರ್ಚಕರು ‘ಈ ಮೂರು ಹಾರಗಳು ಚೈತನ್ಯಮಯವಾಗಿದ್ದು ನಾನು ಇವುಗಳನ್ನು ನಾಳೆ (೨೨ ಜನವರಿಯಂದು) ಶ್ರೀರಾಮನಿಗೆ ಅರ್ಪಿಸುತ್ತೇವೆ’, ಎಂದು ಹೇಳಿದರು. ಆಗ ಆ ಅರ್ಚಕರು, ”ರಾಮನು ಶಿವನ ಜಪ ಮಾಡುತ್ತಾನೆ ಮತ್ತು ಶಿವನು ರಾಮನ ಜಪ ಮಾಡುತ್ತಾನೆ’’ ಎಂದು ಹೇಳಿದರು.
ಶ್ರೀ ಕಾಲೆರಾಮ ದೇವಸ್ಥಾನವು ಚಕ್ರವರ್ತಿ ವಿಕ್ರಮಾದಿತ್ಯನು ಪ್ರಾಚೀನ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯನ್ನು ಮಾಡಿ ಸ್ಥಾಪಿಸಿದ ದೇವಸ್ಥಾನವಾಗಿದೆ ಎಂದು ಸಹ ಅವರು ಹೇಳಿದರು.
ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಜನವರಿ ೨೧ ರಂದು ಅಯೋಧ್ಯೆಯಲ್ಲಿನ ಪ್ರಭು ಶ್ರೀರಾಮನ ಚರಣ ಸ್ಪರ್ಶದಿಂದ ಪಾವನವಾಗಿರುವ ಶರಯೂ ನದಿಯ ಭಾವಪೂರ್ಣ ದರ್ಶನವನ್ನು ಪಡೆದರು ! ಆಗ ಅವರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾರ್ಥಿಸಿದರು.
ಶ್ರೀರಾಮಜನ್ಮಭೂಮಿಯ ಮೊಕದ್ದಮೆಯನ್ನು ಜಿಲ್ಲಾ ನ್ಯಾಯಾಲಯದಿಂದ ಸವೋಚ್ಚ ನ್ಯಾಯಾಲಯದ ವರೆಗೆ ಹೋರಾಡಿದ ಪೂ. (ನ್ಯಾಯವಾದಿ) ಹರಿ ಶಂಕರ ಜೈನ್ ಇವರನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ೨೧ ಜನವರಿ ೨೦೨೪ ರಂದು ಭೇಟಿಯಾದರು.
ಅಯೋಧ್ಯೆಯಲ್ಲಿನ ಕಾಲೆರಾಮ ಮಂದಿರದಲ್ಲಿನ ಶ್ರೀರಾಮ, ಸೀತಾ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ಇವರ ಮೂರ್ತಿಗಳು ತಮಿಳುನಾಡಿನ ಶ್ರೀ ಚಿದಂಬರಮ್ ದೇವಸ್ಥಾನದ ವತಿಯಿಂದ ನೀಡಿದ ಲಾವಂಚದ ಹಾರಗಳನ್ನು ಅಯೋಧ್ಯೆಯಲ್ಲಿನ ಶ್ರೀ ಕಾಲೆರಾಮ ದೇವಸ್ಥಾನದ ಅರ್ಚಕರಲ್ಲಿ ಕೊಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ