‘ಸನಾತನ ಪ್ರಭಾತ’ ಪತ್ರಿಕೆಯ ಬಗ್ಗೆ ಸಂತರ ಹಾಗೂ ವಾಚಕರ ಗೌರವೋದ್ಗಾರ !

ಏಪ್ರಿಲ್‌ ೧೯೯೮ ರಲ್ಲಿ ಈಶ್ವರೀ ರಾಜ್ಯದ ಸ್ಥಾಪನೆಯ ವಿಚಾರವನ್ನು ಪ್ರಸಾರ ಮಾಡಲು ಪರಾತ್ಪರ ಗುರು ಡಾ. ಆಠವಲೆಯವರು ಮರಾಠಿ ಸಾಪ್ತಾಹಿಕ ‘ಸನಾತನ ಪ್ರಭಾತ’ವನ್ನು ಪ್ರಾರಂಭಿಸಿದರು. ೧೯೯೯ ರಲ್ಲಿ ಗೋವಾ ಮತ್ತು ಸಿಂಧುದುರ್ಗ ಆವೃತ್ತಿಯ ಮೂಲಕ ದೈನಿಕ ‘ಸನಾತನ ಪ್ರಭಾತ’ದ ಶುಭಾರಂಭವಾಯಿತು. ವಿವಿಧ ಭಾಷೆಗಳ ಆವೃತ್ತಿಗಳೂ ಶೀಘ್ರಗತಿಯಿಂದ ಪ್ರಾರಂಭವಾದವು. ‘ಸನಾತನ ಪ್ರಭಾತ’ದ ಜಾಲತಾಣ ಮತ್ತು ಸಂಚಾರವಾಣಿಯಲ್ಲಿಯೂ ಪ್ರಾರಂಭಿಸಲಾಯಿತು. ಇತ್ತೀಚಿಗಿನ ಢೊಂಗಿ ಜಾತ್ಯತೀತದ ಕಾಲದಲ್ಲಿ ಹಿಂದುತ್ವದ ಪರವಾಗಿ ಹೋರಾಡುವ ಪತ್ರಿಕೆಗಳ ಸಮೂಹದ ಈ ವಿಸ್ತಾರವು ಇದು ಕೇವಲ ವ್ಯವಹಾರಿಕ ಯಶಸ್ಸು ಆಗಿರದೇ ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪನೆಯ ಫಲಶೃತಿಯಾಗಿದೆ !

‘ಸನಾತನ ಪ್ರಭಾತ’ವು ವಾರ್ತೆಸಂಕಲನ ಮಾತ್ರವಲ್ಲ, ಸಮಾಜ ಪ್ರಬೋಧನಾತ್ಮಕ ಪತ್ರಿಕೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ವಿವಿಧ ವರ್ತಮಾನಪತ್ರಿಕೆಗಳಲ್ಲಿ ಸಮಾಜದಲ್ಲಿ ಪ್ರತಿದಿನ ಘಟಿಸುವ ಅನುಚಿತ ಘಟನೆಗಳ ಕೇವಲ ಸುದ್ದಿಸಂಕಲನ ಮಾಡಲಾಗುತ್ತದೆ; ಆದರೆ ‘ಆ ಸಂದರ್ಭದಲ್ಲಿ ಹೇಗೆ ದೃಷ್ಟಿಕೋನವಿರಬೇಕು ?, ಈ ರೀತಿಯ ಘಟನೆಗಳು ಪುನಃ ಘಟಿಸಬಾರದು, ಎಂದು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ?’, ಎಂಬುದರ ಜಾಗೃತಿಯನ್ನು ಯಾವುದೇ ಪತ್ರಿಕೆ ಮಾಡುವುದಿಲ್ಲ. ಇದನ್ನು ಕೇವಲ ‘ಸನಾತನ ಪ್ರಭಾತ’ದ ಪತ್ರಿಕೆಯಿಂದ ಮಂಡಿಸಲಾಗು ತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ (೩.೧೧.೨೦೨೧)

ಹಿಂದೂಹಿತಕ್ಕಾಗಿ ‘ಸನಾತನ ಪ್ರಭಾತ’ದ ಕೊಡುಗೆ !

ಕಾರ್ತಿಕ ಪಾದಯಾತ್ರೆಯ ಅವಧಿಯಲ್ಲಿ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ವಾರಕರಿಗಳ ಸಮಸ್ಯೆಗಳಿಗೆ ಪ್ರಸಿದ್ಧಿ ನೀಡಿದ್ದಕ್ಕಾಗಿ ಅನೇಕ ವಾರಕರಿಗಳು ಸಮಾಧಾನ ವ್ಯಕ್ತಪಡಿಸಿದರು. ನಮಗೆ ‘ನಮ್ಮ ಸಮಸ್ಯೆಗಳನ್ನು ಆಡಳಿತಾತ್ಮಕ ಮಟ್ಟದಲ್ಲಿ ಮಂಡಿಸಲು ಇದು ನಮ್ಮ ಹಕ್ಕಿನ ವೇದಿಕೆಯಾಗಿದೆ ಎಂದೆನಿಸುತ್ತದೆ ಎಂದು ಹ.ಭ.ಪ. ಅನಂತ ಸಾತಪುತೆಯವರು ಹೇಳಿದರು.

– ಶ್ರೀ. ಅಜಯ ಕೆಳಕರ, ಸುದ್ದಿಗಾರರು, ‘ಸನಾತನ ಪ್ರಭಾತ’, ಕೊಲ್ಹಾಪುರ.

‘ಸನಾತನ ಪ್ರಭಾತ’ವನ್ನು ನಡೆಸುವ ಸನಾತನದ ಸಾಧಕರು ದೇವರು, ದೇಶ ಮತ್ತು ಧರ್ಮಕ್ಕಾಗಿ ತಮ್ಮನ್ನು ಅರ್ಪಿಸಿ ಕೊಂಡಿದ್ದಾರೆ. ‘ಸನಾತನ ಸಂಸ್ಥೆ’ಯ ಸಂಸ್ಥಾಪಕರಾದ ಪ.ಪೂ. ಡಾ. ಆಠವಲೆಯವರು ಸರ್ವಸ್ವದ ತ್ಯಾಗ ಮಾಡಿ ಈ ಸೈನ್ಯವನ್ನು ಸಿದ್ಧಗೊಳಿಸಿದ್ದಾರೆ. ಪ.ಪೂ. ಡಾ. ಆಠವಲೆಯವರು ರೂಪಿಸಿದ ಈ ಸಾಧಕರು ‘ಸನಾತನ ಪ್ರಭಾತ’ದ ಮಾಧ್ಯಮದಿಂದ ರಾಷ್ಟ್ರ ಮತ್ತು ಧರ್ಮದ ಸೇವೆಯನ್ನು ಮಾಡುತ್ತಿದ್ದಾರೆ.’

– ಶ್ರೀ. ಶಂಕರ ಬಾಗವೆಗುರುಜಿ (ಹಿಂದೂ ಮಹಾಸಭೆಯ ಮಾಜಿ ತಾಲುಕಾಧ್ಯಕ್ಷರು) (ವರ್ಷ ೨೦೧೭)

ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ

ಸನಾತನ ಪ್ರಭಾತ ಪತ್ರಿಕೆಯು ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದೂಗಳನ್ನು ಗಾಢ ನಿದ್ರೆಯಿಂದ ಬಡಿದೆಬ್ಬಿಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಎಚ್ಚರಿಸುವ ಏಕೈಕ ಪತ್ರಿಕೆ ಎಂದರೆ ಅದು ಸನಾತನ ಪ್ರಭಾತ. ಹಿಂದೂ ರಾಷ್ಟ್ರದ ನಾಶಕ್ಕಾಗಿ ಹಲವಾರು ರೀತಿಯಲ್ಲಿ ಹುನ್ನಾರ ನಡೆಸುತ್ತಿರುವ ಎಲ್ಲರಿಗೂ ಕಾನೂನಾತ್ಮಕವಾಗಿ ಎಚ್ಚರಿಕೆ ನೀಡುವ ಕಾರ್ಯವನ್ನು ಈ ಪತ್ರಿಕೆ ಅನವರತ ಮಾಡುತ್ತಿದೆ. ಪ್ರಚಲಿತ ವಿದ್ಯಮಾನಗಳು, ಅಧ್ಯಾತ್ಮ, ಆರೋಗ್ಯ ಹಾಗೂ ಮಹಾನ ಸಂತರ ಆಧ್ಯಾತ್ಮಿಕ ಚಿಂತನೆಗಳನ್ನು ಈ ಪತ್ರಿಕೆ ನೀಡುತ್ತಾ ಬಂದಿದೆ. ಪರಮಪೂಜ್ಯ ಗುರುಗಳಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ ಧಾರೆಗಳನ್ನು ತಿಳಿದುಕೊಳ್ಳುವ ಭಾಗ್ಯ ಈ ಪತ್ರಿಕೆಯಿಂದ ನಮ್ಮೆಲ್ಲರಿಗೂ ಲಭಿಸಿದೆ. ೨೦೨೪ ರಲ್ಲಿ ರಜತ ಮಹೋತ್ಸವವನ್ನು ಆಚರಿಸುತ್ತಿರುವ ಸನಾತನ ಪ್ರಭಾತ ಪತ್ರಿಕೆಯು ಇನ್ನಷ್ಟು, ಮತ್ತಷ್ಟು, ಮಗದಷ್ಟು ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ತೊಡಗಿ ಬಲಿಷ್ಠ ಹಿಂದೂ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಸಫಲವಾಗಲಿ ಎಂದು ಮನದುಂಬಿ ಹಾರೈಸುತ್ತೇನೆ.

– ಎ. ಕಲಾವತಿ ಕಾಮತ, ಪದವಿನಂಗಡಿ, ಮಂಗಳೂರು.

ಸನಾತನ ಪ್ರಭಾತ ಓದುವಾಗ ಗುರುವಾಣಿ ಕೇಳಿಸುವುದು

ಸನಾತನ ಪ್ರಭಾತ ಪತ್ರಿಕೆಯಲ್ಲಿ ಗುರುಗಳು ಮತ್ತು ಸನಾತನ ಸಾಧಕರ ಸಂಭಾಷಣೆಯ ಬಗ್ಗೆ ಮಾರ್ಗದರ್ಶನದ ಲೇಖನ ಪ್ರಕಟಿಸಲಾಗುತ್ತದೆ. ಅದನ್ನು ಓದುವಾಗ ಸಾಧಕರ ಧ್ವನಿ ಕೇಳಿಸು ವುದು ಹಾಗೂ ಗುರುಗಳ ಸಂಭಾಷಣೆಯಲ್ಲಿ ಸಾಕ್ಷಾತ್‌ ಗುರುಗಳ ಧ್ವನಿಯೇ ಕೇಳಿಸುತ್ತದೆ. ಅವರ ರೂಪ ಕಣ್ಮುಂದೆ ಬರುತ್ತದೆ. ಇದರಿಂದ ಅಧ್ಯಾತ್ಮದ ಸಿದ್ಧಾಂತಕ್ಕನುಸಾರ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವು ಒಟ್ಟಿಗೆ ಇರುವುದು ಅರಿವಾಗುವುದು.

– ಕು. ಪ್ರಭಾವತಿ, ಮಂಗಳೂರು. (೨೪.೧.೨೦೨೪)