ಧಾರವಾಡದಲ್ಲಿ ಭಾವಪೂರ್ಣ ವಾತಾವರಣದಲ್ಲಾದ ಸನಾತನ ಪ್ರಭಾತ’ ಪತ್ರಿಕೆಯ ೨೬ ನೇ ವರ್ಧಂತ್ಯುತ್ಸವ ಆಚರಣೆ

ಸನಾತನ ಪ್ರಭಾತದ ವಾಚಕರು, ಹಿತಚಿಂತಕರು, ಜಾಹೀರಾತುದಾರರ ಉಪಸ್ಥಿತಿ

ಸನಾತನ ಪ್ರಭಾತ ನಡೆದು ಬಂದ ದಾರಿಯನ್ನು ತಿಳಿಸುತ್ತಿರುವ ಸೌ. ಮಂಜುಳಾ ಪಾಟೀಲ ಹಾಗೂ ವೇದಿಕೆಯಲ್ಲಿರುವ ಉಪಸ್ಥಿತರಿರುವ ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ

ಧಾರವಾಡ – ರಾಷ್ಟ್ರದ ಪುನರುತ್ಥಾನಕ್ಕಾಗಿ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಈ ಧ್ಯೇಯ ವಾಕ್ಯದೊಂದಿಗೆ ಹಗಲು ರಾತ್ರಿ ಕಾರ್ಯನಿರತವಾಗಿರುವ ಸಾಪ್ತಾಹಿಕ ‘ಸನಾತನ ಪ್ರಭಾತ’ಕ್ಕೆ ೨೬ ವರ್ಷಗಳು ಪೂರ್ಣಗೊಂಡಿವೆ. ಈ ನಿಮಿತ್ತ ಇಂತಹ ಧ್ಯೇಯನಿಷ್ಠ ಪತ್ರಿಕೋದ್ಯಮದ ವರ್ಧಂತ್ಯುತ್ಸವ ಸಮಾರಂಭವು ಫೆಬ್ರವರಿ ೯ ರಂದು ಇಲ್ಲಿನ ಗಾಂಧಿ ನಗರದ ಶ್ರೀ ಸಾಯಿ ಮಂದಿರದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸೌ. ಮಂಜುಳಾ ಪಾಟೀಲ ಇವರು ಸನಾತನ ಪ್ರಭಾತ ನಡೆದು ಬಂದ ದಾರಿಯನ್ನು ವಾಚಕರಿಗೆ ತಿಳಿಸಿದರೆ, ಸನಾತನ ಸಂಸ್ಥೆಯ ಸೌ. ವಿದುಲಾ ಹಳದೀಪುರ ಇವರು ಮಾರ್ಗದರ್ಶನ ಮಾಡಿದರು

ಈ ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ಕು. ಸೌಮ್ಯಾ ಉಪ್ಪಿನ ಇವರು ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸನಾತನ ಪ್ರಭಾತ ಪತ್ರಿಕೆಯ ಇಬ್ಬರು ವಿತರಕರ ಸತ್ಕಾರ ಮಾಡಲಾಯಿತು. ಓರ್ವ ವಾಚಕರು ಕಾರಣಾಂತರಗಳಿಂದ ತಮಗೆ ಕಾರ್ಯಕ್ರಮಕ್ಕೆ ಬರಲು ಅಡಚಣೆಯಿರುವುದರಿಂದ ಪತ್ರಿಕೆಯ ಬಗ್ಗೆ ತಮ್ಮ ಮನೋಗತವನ್ನು ಬರೆದು ಕಳಿಸಿದ್ದರು. ಅದನ್ನು ಓದಿ ಹೇಳಲಾಯಿತು.

ಕಾರ್ಯಕ್ರಮದಲ್ಲಿ ವಕ್ತಾರರ ಮಾರ್ಗದರ್ಶನ ಮೊದಲಿನಿಂದಲೂ ಹಿಂದೂ ರಾಷ್ಟ್ರದ ವೈಚಾರಿಕ ಬದ್ಧತೆ ! – ಸೌ. ಮಂಜುಳಾ ಪಾಟೀಲ

ಇಂದು ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಹಿಂದೂ ರಾಷ್ಟ್ರದ ಚರ್ಚೆಯಾಗುತ್ತಿದೆ. ಕುಂಭಮೇಳ ದಲ್ಲಿಯೂ ಹಿಂದೂ ರಾಷ್ಟ್ರದ ಜಯಘೋಷ ಕೇಳಿಸಿತು. ಇಂದಿನಿಂದ ೨೫ ವರ್ಷಗಳ ಮೊದಲು ‘ಹಿಂದೂ ರಾಷ್ಟ್ರ’ ಈ ಶಬ್ದವನ್ನು ಉಚ್ಚರಿಸುವುದು ಒಂದು ಅಘೋಷಿತ ಅಪರಾಧವಾಗಿತ್ತು. ಇಂತಹ ಕಾಲದಲ್ಲಿ ‘ಈಶ್ವರೀ ರಾಜ್ಯ’, ‘ಹಿಂದೂ ರಾಷ್ಟ್ರ’ ಈ ಶಬ್ದಗಳನ್ನು ಸಮಾಜದಲ್ಲಿ ನಿಜವಾದ ಅರ್ಥದಿಂದ ಯಾರಾದರೂ ರೂಢಿಯಲ್ಲಿ ತಂದಿದ್ದರೆ,  ಅದು ಆ ಸಮಯದ ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ ಹಾಗೂ ಮರಾಠಿ ಭಾಷೆಯ ದೈನಿಕ ಮತ್ತು ಸಾಪ್ತಾಹಿಕ ‘ಸನಾತನ ಪ್ರಭಾತ’. ‘ಸನಾತನ ಪ್ರಭಾತ’ವು ಮೊದಲಿನಿಂದಲೂ ಹಿಂದೂ ರಾಷ್ಟ್ರದ ವೈಚಾರಿಕ ಬದ್ಧತೆಯನ್ನು ಪೋಷಿಸಿದೆ. ‘ಸನಾತನ ಪ್ರಭಾತ’ದ ಧ್ಯೇಯವಾಕ್ಯವೇ – ‘ಹಿಂದೂ ರಾಷ್ಟ್ರಕ್ಕಾಗಿ ಕಟಿಬದ್ಧವಾಗಿರುವ ಸಾಪ್ತಾಹಿಕ ಸನಾತನ ಪ್ರಭಾತ’ ಆಗಿದೆ. ಅದಕ್ಕಾಗಿ ನಿರಂತರ ಪ್ರಯತ್ನಿಸುವುದು.

ನಿರ್ಭೀತ ವರದಿ ನೀಡುವ ಸನಾತನ ಪ್ರಭಾತ ! – ಸೌ. ವಿದುಲಾ ಹಳದೀಪುರ

‘ಸನಾತನ ಪ್ರಭಾತ’ದ ವೈಶಿಷ್ಟ್ಯವೆಂದರೆ ಸತ್ಯನಿಷ್ಠ ಮತ್ತು ನಿರ್ಭೀತ ವರದಿಗಾರಿಕೆ ! ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ, ಮತಾಂಧರು ಹಿಂದೂಗಳ ಭೀಕರ ನರ ಸಂಹಾರ ಮಾಡಿದರು. ಹಿಂದೂಗಳ ಶವಗಳಿಂದ ತುಂಬಿದ್ದ ರೈಲಿನ ಬೋಗಿಗಳು ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದವು. ಆಗಿನಿಂದ ಮತಾಂಧರು ಹಿಂದೂಗಳ ಮೇಲೆ ನಡೆಸುತ್ತಿರುವ ದಾಳಿಗಳು ಇದುವರೆಗೂ ನಿಂತಿಲ್ಲ. ಈಗಲೂ ರಾಮನವಮಿಯ ನಿಮಿತ್ತ ದೇಶದ ೭ ರಾಜ್ಯಗಳಲ್ಲಿ ನಿಯೋಜನಾಬದ್ಧವಾಗಿ ಗಲಭೆಗಳನ್ನು ನಡೆಸಲಾಯಿತು. ಈ ಅತ್ಯಾಚಾರ ಅಥವಾ ಗಲಭೆಯ ವರದಿಯಲ್ಲಿ ‘ಸನಾತನ ಪ್ರಭಾತ’ವು ಮತಾಂಧರು ನಡೆಸಿರುವ ಅತ್ಯಾಚಾರವನ್ನು ಸಮಾಜದ ಎದುರಿಗೆ ವಸ್ತುನಿಷ್ಠವಾಗಿ ತಂದಿತು.

ಗಮನಾರ್ಹ ಅಂಶಗಳು

. ನಾನು ಇಂತಹ ಕಾರ್ಯಕ್ರಮಕ್ಕಾಗಿ ತುಂಬ ಕಾಯುತ್ತಿದ್ದೆ. ನನಗೆ ಸತ್ಸಂಗ ಬೇಕಿತ್ತು, ಸಕಾಮ, ನಿಷ್ಕಾಮ ಸಾಧನೆ, ನಾಮಜಪ, ರಾಷ್ಟ್ರಧರ್ಮ, ಕೃತಿ, ಕಾರ್ಯದ  ಕುರಿತು ಹೇಳಿದ ಮಾತುಗಳು ತುಂಬಾ ಅದ್ಭುತವಾಗಿತ್ತು  ಎಂದು ಓರ್ವ ವಾಚಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

೨. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿದುಕೊಂಡು ಅವುಗಳನ್ನು ಉಳಿಸಿಕೊಂಡು ಹೋಗಲು ಅನುಕೂಲವಾಗುತ್ತದೆ, ಆಗಾಗ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಎಂದು ಹೇಳಿದರು.