‘ಸನಾತನ ಪ್ರಭಾತ’ ನಮಗೆ ದೇವತೆಯೇ ಆಗಿದೆ. ಅದಕ್ಕೆ ನಿಯಮಿತವಾಗಿ ಶಾಬ್ದಿಕ ಹೂವುಗಳ ಅರ್ಪಣೆ ಮಾಡಿ ಅದರ ಪೂಜೆ ಮಾಡುವುದೇ ನಮ್ಮ ಸಾಧನೆಯಾಗಿದೆ ! ಕಳೆದ ೨೬ ವರ್ಷಗಳಿಂದ ದೇವರು ನಮ್ಮಿಂದ ಈ ಶಾಬ್ದಿಕ ಪೂಜೆಯನ್ನು ಅಖಂಡವಾಗಿ ಮಾಡಿಸಿಕೊಂಡಿದ್ದಾರೆ, ಇದು ನಮ್ಮ ಮೇಲಿರುವ ದೇವರ ಕೃಪೆಯೆ ಆಗಿದೆ ! ‘ಸನಾತನ ಪ್ರಭಾತ’ ಆರಂಭವಾಗಿ ೨೬ ವರ್ಷಗಳು ಪೂರ್ಣವಾಗುತ್ತಿವೆ. ‘ಸನಾತನ ಪ್ರಭಾತ’ದ ಆರಂಭದಿಂದಲೇ ಅದರ ಮಾರ್ಗಕ್ರಮಣದ ಸಾಕ್ಷಿದಾರರಾಗಿರುವ ಬಹಳಷ್ಟು ಸಾಧಕರಲ್ಲಿ ಕೆಲವರು ಪತ್ರಕರ್ತರೆಂದು, ಕೆಲವರು ಸಂಪಾದಕೀಯ ವಿಭಾಗದಲ್ಲಿ, ಕೆಲವರು ವಿತರಣೆಯ ವಿಭಾಗದಲ್ಲಿ ಸೇವೆ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಇಂದಿನ ದಿನ ವಿಶೇಷವಾಗಿದೆ. ಇಂದು ‘ಡಿಜಿಟಲ್’ ಯುಗವಾಗಿದೆ. ಅದಕ್ಕನುಸಾರ ‘ಸನಾತನ ಪ್ರಭಾತ’ವೂ ಪೊರೆ ಕಳಚುತ್ತಿದೆ. ೨೬ ವರ್ಷಗಳಲ್ಲಿ ಆಗಿರುವ ‘ಸನಾತನ ಪ್ರಭಾತ’ದ ಚಟುವಟಿಕೆಗಳು ಕೇವಲ ಬಾಹ್ಯಾಂಗದ ಪತ್ರಿಕೆಯದ್ದಲ್ಲ, ‘ಸನಾತನ ಪ್ರಭಾತ’ದಲ್ಲಿ ಕಾರ್ಯನಿರತರಾಗಿರುವ ಸಾಧಕರದ್ದೂ ಇದೆ. ೨೬ ವರ್ಷಗಳ ಈ ಪ್ರವಾಸ ಸಂಘರ್ಷಮಯವಾಗಿದ್ದರೂ ಸಾಧಕರ ಮೇಲಿರುವ ‘ಸನಾತನ ಪ್ರಭಾತ’ದ ಅಖಂಡ ಗುರುಕೃಪೆಯಿಂದ ಈ ಪ್ರವಾಸ ಆನಂದ ದಾಯಕವಾಯಿತು ! ಇಂದಿನ ದಿನ ಸಿಂಹಾವಲೋಕನದ ದಿನ ! ಮುಂದಿನ ಧ್ಯೇಯ-ಧೋರಣೆಗಳನ್ನು ನಿರ್ಧರಿಸುವ ದಿನವಾಗಿದೆ !
ಅದೇ ರೀತಿ ಇಂದಿನ ದಿನ ಪರಮಪೂಜ್ಯರ ಬಗ್ಗೆ (ಸನಾತನ ಪ್ರಭಾತ ನಿಯತಕಾಲಿಕ ಸಮೂಹದ ಸಂಸ್ಥಾಪಕ ಸಂಪಾದಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ) ಕೃತಜ್ಞತೆಯನ್ನು ಸಲ್ಲಿಸುವ ಮತ್ತು ಅವರಿಗೆ ಸನಾತನ ಪ್ರಭಾತದ ಮೇಲಿರುವ ಅಪಾರ ಪ್ರೀತಿಯನ್ನು ಅನುಭವಿಸುವುದಾಗಿದೆ. ‘ಸನಾತನ ಪ್ರಭಾತ’ದ ಮೂಲಕ ಸಮಾಜದಲ್ಲಿ ಹಿಂದೂತೇಜ ಜಾಗೃತಗೊಳಿಸುವ ಹಾಗೂ ಸಮಾಜದಲ್ಲಿನ ಜನರನ್ನು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಿದ್ಧಗೊಳಿಸುವ ಗುರುದೇವರ ಬಗ್ಗೆ ಈ ಶಬ್ದಸುಮನಾಂಜಲಿ…!

೧. ‘ಸನಾತನ ಪ್ರಭಾತ’ದ ತಯಾರಿ ಹಾಗೂ ಕಾರ್ಯ ಚಮತ್ಕಾರವೇ ಆಗಿದೆ !
ಯಾವುದೇ ವರ್ತಮಾನ ಪತ್ರಿಕೆಯನ್ನು ಆರಂಭಿಸಲು ದೊಡ್ಡ ಪ್ರಮಾಣದಲ್ಲಿ ಹಣ ಹಾಗೂ ಮನುಷ್ಯಬಲ ಬೇಕಾಗುತ್ತದೆ. ಅದರ ಜೊತೆಗೆ ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಅನುಭವವಿರುವವರ ತಂಡಬೇಕಾಗುತ್ತದೆ. ‘ಸನಾತನ ಪ್ರಭಾತ’ದಲ್ಲಿ ಇವುಗಳಲ್ಲಿ ಯಾವುದಿತ್ತು ? ಆರ್ಥಿಕ ಬಲವೂ ಇಲ್ಲ, ಮನುಷ್ಯ ಬಲವೂ ಇಲ್ಲ ! ವರದಿಗಾರರು, ವಿತರಣೆ, ಜಾಹೀರಾತು ಈ ವಿಭಾಗಗಳಲ್ಲಿ ಸೇವೆ ಮಾಡುವ ಸಾಧಕರು ಇತ್ತೀಚೆಗಷ್ಟೆ ಶಿಕ್ಷಣ ಮುಗಿಸಿ ಬಂದು ಪೂರ್ಣ ವೇಳೆ ಸಾಧಕರಾಗಿದ್ದರು. ಹೀಗಿದ್ದರೂ ಹಿಂದೂ ರಾಷ್ಟ್ರ ಸ್ಥಾಪನೆಯಂತಹ ಉಚ್ಚ ಧ್ಯೇಯದಿಂದ ಪ್ರೇರಣೆ ಪಡೆದು ‘ಸನಾತನ ಪ್ರಭಾತ’ ಆ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುವುದು ಗುರುಕೃಪೆಯಿಂದಲೇ ಸಾಧ್ಯವಾಗಿದೆ. ಧ್ಯೇಯ ನಿಶ್ಚಿತವಿದ್ದರೂ, ಧ್ಯೇಯಪೂರ್ತಿಗಾಗಿ ಬೇಕಾಗುವ ದೃಷ್ಟಿಕೋನ, ಅದಕ್ಕಾಗಿ ಆವಶ್ಯಕವಾಗಿರುವ ಶಿಸ್ತುಬದ್ಧತೆ ಹಾಗೂ ಆಧ್ಯಾತ್ಮಿಕ ಬಲಕ್ಕಾಗಿ ಗುರುಕೃಪೆಯೇ ಬೇಕಾಗುತ್ತದೆ. ಸಾಧಕರಲ್ಲಿ ಯಾವುದೇ ವ್ಯಾವಹಾರಿಕ ಅನುಭವ ಇಲ್ಲದಿರುವಾಗ ಪರಮಪೂಜ್ಯರ ಸಂಕಲ್ಪದಿಂದ ‘ಸನಾತನ ಪ್ರಭಾತ’ದ ಕಾರ್ಯ ನಡೆಯುತ್ತಿತ್ತು, ನಡೆಯುತ್ತದೆ ಹಾಗೂ ಭವಿಷ್ಯದಲ್ಲಿಯೂ ನಡೆಯುವುದು !
೧ ಅ. ಬುದ್ಧಿಪ್ರಾಮಾಣ್ಯವಾದಿಗಳಿಗೆ ಚಮತ್ಕಾರ ನೋಡಲಿಕ್ಕಿದ್ದರೆ, ಅವರು ಸನಾತನ ಪ್ರಭಾತದ ದೈವೀ ಕಾರ್ಯದ ವರದಿಯನ್ನು ತೆಗೆದುಕೊಳ್ಳಬೇಕು ! : ೯೦ ರ ದಶಕದಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆ ಅಥವಾ ಧರ್ಮಜಾಗೃತಿಯ ವಿಷಯದಲ್ಲಿ ಬಹಿರಂಗವಾಗಿ ಮಾತನಾಡುವುದೂ ಅಪರಾಧವೆಂದು ಪರಿಗಣಿಸಲಾಗುತ್ತಿತ್ತು. ಇಂದು ಹೆಚ್ಚು ಕಡಿಮೆ ಎಲ್ಲ ಪ್ರಸಾರ ಮಾಧ್ಯಮಗಳು ಹಿಂದುತ್ವದ ಪರವಾಗಿ ವಿಚಾರ ಮಂಡಿಸುವುದು ಕಾಣಿಸುತ್ತಿದೆ; ಆದರೆ ಆ ಕಾಲದ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದಾಗ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ವರ್ತಮಾನ ಪತ್ರಿಕೆ ಆರಂಭಿಸುವುದು ಹಾಗೂ ಅದನ್ನು ೨೬ ವರ್ಷ ನಿರಂತರ ನಡೆಸುವುದು, ಇದು ಚಮತ್ಕಾರವಲ್ಲವೆ ? ಈ ಚಮತ್ಕಾರ ಸಾಧ್ಯವಾಗಿರುವುದು ಸನಾತನ ಪ್ರಭಾತದಲ್ಲಿ ಸೇವೆ ಮಾಡುವ ಸಾಧಕರ ಮೇಲಿರುವ ಅಖಂಡ ಗುರುಕೃಪೆಯಿಂದ ! ‘ಚಮತ್ಕಾರ ತೋರಿಸಿರಿ ಹಾಗೂ ೫ ಲಕ್ಷ ರೂಪಾಯಿ ಗಳಿಸಿರಿ’, ಎನ್ನುವ ಮೂರ್ಖತನದ ಸವಾಲು ಬುದ್ಧಿಪ್ರಾಮಾಣ್ಯವಾದಿಗಳಿಂದ ಬರುತ್ತದೆ. ಇಂತವರ ವೈಚಾರಿಕ ಸಮಾಚಾರ ತೆಗೆದುಕೊಳ್ಳುವ ‘ಸನಾತನ ಪ್ರಭಾತ’ ವರ್ತಮಾನಪತ್ರಿಕೆ ೨೬ ವರ್ಷ ವಿವಿಧ ಸವಾಲುಗಳನ್ನು ಎದುರಿಸುತ್ತಾ ಮುಂದುವರಿಯುವುದು’, ಇದೇ ದೊಡ್ಡ ಚಮತ್ಕಾರವಾಗಿದೆ; ಎಂದು ನಾನು ನಮ್ಮ ವಿರೋಧಿಗಳಿಗೆ ಹೇಳಲು ಇಚ್ಛಿಸುತ್ತೇವೆ.
೨. ‘ಸನಾತನ ಪ್ರಭಾತ’ ಕೇವಲ ವರ್ತಮಾನ ಪತ್ರಿಕೆಯಷ್ಟೇ ಅಲ್ಲ | ಇದೊಂದು ಪಿತೃಸಮಾನ ಛತ್ರವಾಗಿದೆ ||
‘ಸನಾತನ ಪ್ರಭಾತ’ ಮತ್ತು ಆ ವಿಭಾಗದಲ್ಲಿ ಸೇವೆ ಮಾಡುವ ಸಾಧಕರ ನಡುವೇ ದೃಢವಾದ ಸಂಬಂಧವಿದೆ. ‘ಸನಾತನ ಪ್ರಭಾತ’ ನಮಗೆ ಕಲಿಸುತ್ತದೆ, ನಮ್ಮನ್ನು ಸಿದ್ಧಪಡಿಸುತ್ತದೆ, ತಪ್ಪುಗಳನ್ನು ತೋರಿಸುತ್ತದೆ ಮತ್ತು ಸಾಧನೆಯಲ್ಲಿನ ಮುಂದಿನ ಮಾರ್ಗದರ್ಶನವನ್ನೂ ನೀಡುತ್ತದೆ. ಅದು ನಮಗೆ ಕೇವಲ ೧೬ ಪುಟಗಳ ಕಾಗದದ ಸಂಚಿಕೆಯಲ್ಲ, ಅದು ಜೀವಂತ ಮಾರ್ಗದರ್ಶಕವಾಗಿದೆ ! ಅದು ಭವ್ಯ, ಚೈತನ್ಯದಾಯಕ ಹಾಗೂ ಪ್ರಕಾಶಮಾನವಾಗಿದೆ. ಅದು ನಮ್ಮ ತಂದೆಯಾಗಿದೆ ಹಾಗೂ ನಾವು ಅದರ ಮಕ್ಕಳಾಗಿದ್ದೇವೆ. ಮಗುವಿಗೆ ಸುಸಂಸ್ಕಾರ ನೀಡಿ ಅದನ್ನು ಪ್ರಬುದ್ಧ, ವಿವೇಕಿ ಹಾಗೂ ಅದರ ದೋಷಗಳನ್ನು ನಿರ್ಮೂಲನೆ ಮಾಡಿ ಅದನ್ನು ಸರ್ವಾಂಗ ಸುಂದರ ಹಾಗೂ ವಿಕಸಿತಗೊಳಿಸುವ ಹೊಣೆ ತಂದೆಯದ್ದಾಗಿರುತ್ತದೆ. ಅದೇ ರೀತಿ ‘ಸನಾತನ ಪ್ರಭಾತ’ ನಮ್ಮಂತಹ ಎಲ್ಲ ಅಜ್ಞಾನಿಗಳನ್ನು ಪ್ರಬುದ್ಧಗೊಳಿಸುತ್ತದೆ.
೩. ಸನಾತನ ಪ್ರಭಾತ ವಿಭಾಗದ ಸಾಧಕರಲ್ಲಿ ಆಗುವ ವೈಚಾರಿಕ ಶುದ್ಧಿ !
‘ದೈನಿಕದಲ್ಲಿ ರಜ-ತಮಾತ್ಮಕ ವಾರ್ತೆಗಳಿರುತ್ತವೆ. ನಿರಂತರ ಒಂದೇ ರೀತಿಯ ವಿಚಾರದಲ್ಲಿ ಚೌಕಟ್ಟು ಮಾಡಬೇಕಾಗುತ್ತದೆ. ‘ದಿನದಲ್ಲಿ ೧೦-೧೨ ಗಂಟೆ ಅದೇ ಮಾಡುವಾಗ ಸಾಧನೆಯ ಮೇಲೆ ಪರಿಣಾಮವಾಗುವುದಿಲ್ಲವೇ ?’, ಎಂದು ಅನೇಕರು ಕೇಳುತ್ತಾರೆ. ಆದರೂ ಸ್ಥೂಲದಿಂದ ರಜ-ತಮಾತ್ಮಕ ವಿಷಯ ಕಾಣಿಸುತ್ತಿದ್ದರೂ, ಅದರ ಹಿಂದಿನ ವಿಚಾರ ಶ್ರೇಷ್ಠ ಹಾಗೂ ಸಾತ್ತ್ವಿಕ ಆಗಿರುವುದರಿಂದ ಸಾಧಕರಿಗೆ ಆ ಸೇವೆ ಆನಂದದಾಯಕವಾಗು ತ್ತದೆ, ‘ಮನುಷ್ಯಬಲ ಕಡಿಮೆಯಿದ್ದರೂ ಸೇವೆ ನಿರ್ವಿಘ್ನವಾಗಿ ನೆರವೇರುವುದು, ‘ವಾರ್ತೆ ಅಥವಾ ಲೇಖನದ ವಿಷಯದಲ್ಲಿ ಹೊಸ ಹೊಸ ದೃಷ್ಟಿಕೋನ ಹೊಳೆಯುವುದು’, ಇಂತಹ ಅನುಭೂತಿಗಳು ಪ್ರತಿದಿನ ಸಾಧಕರಿಗೆ ಬರುತ್ತವೆ. ‘ಈಶ್ವರನ ಸಂಕಲ್ಪದಿಂದ ಆರಂಭವಾಗಿರುವ ಕಾರ್ಯವನ್ನು ಈಶ್ವರನೇ ಪೂರ್ಣಗೊಳಿಸುತ್ತಾನೆ’, ಎಂದು ಸನಾತನ ಪ್ರಭಾತ ವಿಭಾಗದ ಸಾಧಕರು ಪ್ರತಿದಿನ ಅನುಭವಿಸುತ್ತಾರೆ.
೩ ಅ. ಶಬ್ದಶಕ್ತಿಯ ಮೂಲಕ ಕಾರ್ಯ ಮಾಡಲು ಈಶ್ವರನೇ ನಿಯತಕಾಲಿಕೆ ವಿಭಾಗದ ಸಾಧಕರನ್ನು ಆರಿಸಿರುವುದೇ ಗುರುಕೃಪೆ ! : ಈಶ್ವರನ ಶಬ್ದಶಕ್ತಿಯ ಮೂಲಕ ‘ಸನಾತನ ಪ್ರಭಾತ’ದ ಕಾರ್ಯ ನಡೆಯುತ್ತಿದೆ. ಅದಕ್ಕೆ ಮಾಧ್ಯಮವೆಂದು ನಿಯತಕಾಲಿಕೆ ವಿಭಾಗದ ಸಾಧಕರನ್ನು ಆರಿಸಿರುವುದು ನಮ್ಮ ಮೇಲಿರುವ ಎಷ್ಟು ದೊಡ್ಡ ಗುರುಕೃಪೆಯಾಗಿದೆ ! ಈಶ್ವರನ ಶುದ್ಧ ಹಾಗೂ ದೈವೀ ವಿಚಾರವನ್ನು ಶಬ್ದಗಳ ಮೂಲಕ ಸಮಾಜದವರೆಗೆ ತಲಪಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಅದು ಸಾಧಕರಿಂದ ಸರಿಯಾಗಿ ನೆರವೇರಲು ಪರಮಪೂಜ್ಯ ಡಾಕ್ಟರರು ಸಾಧಕರನ್ನು ವೈಚಾರಿಕವಾಗಿ ಶುದ್ಧಿಗೊಳಿಸಿ ಅವರನ್ನು ಈ ಜವಾಬ್ದಾರಿಗೆ ಸಿದ್ಧಪಡಿಸುತ್ತಿದ್ದಾರೆ. ಈ ೨೬ ವರ್ಷಗಳ ಪ್ರವಾಸದಲ್ಲಿ ದೇವರು ಸಾಧಕರಾದ ನಮಗೆಲ್ಲರಿಗೆ ಕೈತುಂಬ ಕೊಟ್ಟಿದ್ದಾರೆ, ನಮ್ಮೆಲ್ಲ ಸಾಧಕರ ಜೀವನವನ್ನು ಉಜ್ವಲಗೊಳಿಸಿದ್ದಾರೆ ಹಾಗೂ ಮಾನಸಿಕ, ಬೌದ್ಧಿಕ ಮತ್ತು ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಮೃದ್ಧಗೊಳಿಸಿದ್ದಾರೆ ಎಂಬ ಕೃತಜ್ಞತಾಭಾವ ಸಾಧಕರ ಮನಸ್ಸಿನಲ್ಲಿ ನಿರಂತರ ಜಾಗೃತವಾಗಿರಲಿ’, ಎಂಬುದೇ ಈ ಶುಭಮುಹೂರ್ತದಲ್ಲಿ ಗುರುದೇವರ ಚರಣಗಳಲ್ಲಿ ಪ್ರಾರ್ಥನೆ !
– ಸೌ. ಸಮೀಕ್ಷಾ ಗಾಡೆ, ಸನಾತನ ಆಶ್ರಮ, ರಾಮನಾಥಿ ಗೋವಾ. (೧೨.೪.೨೦೨೪)
‘ಸನಾತನ ಪ್ರಭಾತ’ವು ನಮ್ಮ ಗುರುಗಳ ರೂಪವಾಗಿರುವುದರಿಂದ ‘ಸನಾತನ ಪ್ರಭಾತ’ದ ವಾರ್ಷಿಕೋತ್ಸವ ಕೂಡ ನಮಗೆ ಗುರುಪೂರ್ಣಿಮೆಯಷ್ಟೇ ಮಹತ್ವದ್ದಾಗಿದೆ. ಈ ವೇಳೆ ಸನಾತನ ಪ್ರಭಾತದ ಕಾರ್ಯಾಲಯದಲ್ಲಿ ‘ಸನಾತನ ಪ್ರಭಾತ’ದ ಸಂಚಿಕೆಗಳ ಪೂಜೆ ಮಾಡಲಾಗುತ್ತದೆ. ಜಗತ್ತಿನಾದ್ಯಂತದ ಎಲ್ಲ ವರ್ತಮಾನಪತ್ರಿಕೆಗಳು ಆ ವರ್ತಮಾನಪತ್ರಿಕೆಯ ವಾರ್ಷಿಕೋತ್ಸವದ ನಿಮಿತ್ತದಲ್ಲಿ ಪೂಜೆ ಮಾಡುತ್ತವೆಯೇ ?