ನಮಸ್ಕಾರ, ನಾನು ‘ಸನಾತನ ಪ್ರಭಾತ’ ದಿನಪತ್ರಿಕೆ !
‘ನಾನು ನನ್ನ ೨೬ ವರ್ಷಗಳ ಕಾರ್ಯವನ್ನು ಪೂರ್ಣ ಗೊಳಿಸಿದ್ದೇನೆ. ‘ಹಿಂದೂ ರಾಷ್ಟ್ರ’ ಸ್ಥಾಪನೆಯ ಕಾರ್ಯಪೂರ್ತಿಗಾಗಿ ರೂಪಗೊಳ್ಳುವ ತ್ರಿಭುವನದಲ್ಲಿನ ಅಸಂಖ್ಯಾತ ಸ್ಥೂಲ ಮತ್ತು ಸೂಕ್ಷ್ಮ ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಇದೆಲ್ಲವೂ ವಿಷ್ಣು ಸ್ವರೂಪ ಗುರುದೇವರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆಯವರ ಕೃಪಾಶೀರ್ವಾದದಿಂದ ಸಾಧ್ಯವಾಗಿದೆ. ನನಗೆ ಗುರುಸೇವೆಯ ಈ ಸದಾವಕಾಶವನ್ನು ನೀಡಿರುವ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಮತ್ತು ನನ್ನನ್ನು ಕಾರ್ಯನಿರತರಾಗಿಸಿದ ಸಾಧಕರ ಕುರಿತು ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ. ಈ ೨೬ ವರ್ಷಗಳ ಕಾರ್ಯಕಾಲದಲ್ಲಿ ನಾನು ಅನುಭವಿಸಿರುವ ಕಥನವನ್ನು ಈ ಮನೋಗತದ ಮೂಲಕ ಗುರುದೇವರ ಚರಣಗಳಲ್ಲಿ ಸಮರ್ಪಿಸುತ್ತಿದ್ದೇನೆ.
ಅಸಂಖ್ಯಾತ ಅಡಚಣೆಗಳನ್ನು ಪಾರು ಮಾಡಿ ದೃಢವಾಗಿ ಕಾರ್ಯನಿರತನಾಗಿರುವುದು !
ಮೊದಲಬಾರಿಗೆ ನನ್ನ ಮಾಧ್ಯಮದಿಂದ ‘ಅಧ್ಯಾತ್ಮ’ ಈ ವಿಷಯವನ್ನು ಸಮಾಜದ ಮನಸ್ಸಿನಲ್ಲಿ ಬಿಂಬಿಸುವ ಕಾರ್ಯವಾಗುತ್ತಿದೆ. ಒಂದು ರೀತಿಯಲ್ಲಿ ಸಮಾಜವು ಆಧ್ಯಾತ್ಮಿಕ ದೃಷ್ಟಿಯಿಂದ ಸಾಕ್ಷರ ಆಗುತ್ತಿದೆ, ಇದು ಜಾತ್ಯತೀತರಿಗೆ ಮತ್ತು ಸನಾತನದ್ವೇಷಿಗಳಿಗೆ ಸಹಿಸಲಾಗಲಿಲ್ಲ. ಅನಂತರ ‘ಸನಾತನ ಪ್ರಭಾತ’ದ ದ್ವೇಷಿಗಳು ನನ್ನನ್ನು ಅನೇಕ ಸ್ಥಳಗಳಲ್ಲಿ ಸುಟ್ಟು ಹಾಕಿದರು. ನನ್ನಲ್ಲಿನ ಪ್ರತಿಯೊಂದು ಲೇಖನವನ್ನು ವಿರೋಧಾಭಾಸವಾಗುವಂತೆ ಅರ್ಥೈಸಿ ನನ್ನ ಮೇಲೆ ದೂರು ದಾಖಲಿಸಿದರು. ನನ್ನನ್ನು ಸಮರ್ಥಿಸುವವರಿಗೆ ಶಾಬ್ದಿಕವಾಗಿ ಛೀಮಾರಿ ಹಾಕುತ್ತಿದ್ದರು.
ಅಷ್ಟೇ ಅಲ್ಲದೆ, ನನ್ನನ್ನು ಶಾಶ್ವತವಾಗಿ ನಿಷೇಧಿಸಬೇಕು, ಎಂಬುದಕ್ಕಾಗಿ ಅನೇಕ ಧರ್ಮದ್ರೋಹಿ ಪಕ್ಷಗಳು ಮತ್ತು ಸಂಘಟನೆಗಳು ಸಕ್ರಿಯವಾದವು. ನನ್ನ ಕಾರ್ಯವನ್ನು ನಿಲ್ಲಿಸಲು ಸಂಪಾದಕರನ್ನು ಬಂಧಿಸಲಾಯಿತು. ಈ ಸಮಯದಲ್ಲಿ ನನ್ನನ್ನು ರಕ್ಷಿಸಿದ ಗುರುದೇವರು ಮತ್ತು ಸಾಧಕರಿಗೆ ಬಹಳಷ್ಟು ನೋವನ್ನು ಸಹಿಸಬೇಕಾಯಿತು. ಇಷ್ಟು ವಿರೋಧವಾದರೂ ಗುರುದೇವರು ನನ್ನನ್ನು ಎಂದಿಗೂ ಪಕ್ಕಕ್ಕೆ ಸರಿಸಲಿಲ್ಲ ಅಥವಾ ನನ್ನ ಸೇವೆಯನ್ನು ನಿಲ್ಲಿಸಲಿಲ್ಲ್ಲ. ತದ್ವಿರುದ್ಧ ಎಷ್ಟು ವಿರೋಧವಾಗುತ್ತಿತ್ತೋ, ಅಷ್ಟು ನನ್ನ ತೇಜವು ಹೆಚ್ಚಾಗುತ್ತಾ ಹೋಯಿತು. ಅಧ್ಯಾತ್ಮದ ಮಾರ್ಗದಲ್ಲಿ ಸಾಗುವವರಿಗೆ ನಾನು ಓರ್ವ ಸಂದೇಶವಾಹಕ ದೂತನಾದೆ.
ಸಮಾಜದಲ್ಲಿ ಪ್ರಾಥಮಿಕ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವ, ಹಿಂದೂಗಳ ಸಮಸ್ಯೆಗಳನ್ನು ಕಠೋರವಾಗಿ ಮಂಡಿಸುವ, ಹಿಂದೂ ದೇವತೆಗಳನ್ನು ಗೌರವಿಸುವ, ಹಿಂದೂಗಳಿಗೆ ಆತ್ಮೀಯ ಅನಿಸುವಂತಹ ಯಾವುದೇ ವಾರ್ತಾಪತ್ರಿಕೆ ಇರಲಿಲ್ಲ, ಆಗ ಗುರುದೇವರು ನನ್ನನ್ನು ರಚಿಸಿದರು. ಗುರುದೇವರ ಚೈತನ್ಯ ನನ್ನ ಮಾಧ್ಯಮದಿಂದ ಸಮಾಜದಲ್ಲಿ ಕಾರ್ಯನಿರತವಾಯಿತು. ಆದ್ದರಿಂದ ಪ್ರತಿದಿನ ಅಧ್ಯಾತ್ಮದ ಜ್ಞಾನಾಮೃತವನ್ನು ಕುಡಿಯುವ ಸಮಾಜದ ಜನರು ನನ್ನನ್ನು ‘ಗುರುದೇವರ ಸಂದೇಶ ವಾಹಕ’ನೆಂದೇ ಕರೆಯುತ್ತಾರೆ. ದ್ವಾಪರಯುಗದಲ್ಲಿ ಶ್ರೀಕೃಷ್ಣನು ಹೇಳಿರುವ ಭಗವದ್ಗೀತೆಯೇ ನನ್ನಲ್ಲಿನ ಆಧ್ಯಾತ್ಮಿಕ ಉದ್ಭೋದಕ ಲೇಖನಗಳಿಂದ ಸಮಾಜದ ಆಚರಣೆಯಲ್ಲಿ ತರಲು ಸಾಧ್ಯವಾಗು ತ್ತಿದೆ. ಆದ್ದರಿಂದ ಆರಂಭದಲ್ಲಿ ನಾನು ಕೇವಲ ೪ ಪುಟಗಳನ್ನು ಹೊಂದಿದ್ದರೂ ನನಗೆ ಲೌಕಿಕ ದೃಷ್ಟಿಯಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಗೌರವವು ಅಲ್ಪಾವಧಿಯಲ್ಲಿಯೇ ಪ್ರಾಪ್ತವಾಯಿತು.
೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂಕಲ್ಪ ಮತ್ತು ಸಾಧಕರ ಪರಿಶ್ರಮದಿಂದ ರಚಿತ ‘ಸನಾತನ ಪ್ರಭಾತ’
‘ಗುರುಕೃಪಾಯೋಗ’ವು ಶ್ರೀವಿಷ್ಣುವಿನ ನಾಭಿಯಿಂದ ಅವತರಣವಾದಂತೆ ನನ್ನನ್ನು ಶ್ರೀವಿಷ್ಣುಸ್ವರೂಪ ಗುರುದೇವರು ೨೬ ವರ್ಷಗಳ ಹಿಂದೆಯೇ ‘ಈಶ್ವರಿ ರಾಜ್ಯದ ಸ್ಥಾಪನೆ’ಯ ಧ್ಯೇಯವನ್ನಿಟ್ಟುಕೊಂಡು ರಚಿಸಿದರು. ಪ್ರಾರಂಭದಲ್ಲಿ ಸಾಪ್ತಾಹಿಕ ‘ಸನಾತನ ಪ್ರಭಾತ’ ಅನಂತರ ‘ಸನಾತನ ಪ್ರಭಾತ’ ದಿನಪತ್ರಿಕೆಯು ರಚಿಸಲ್ಪಟ್ಟಿತು. ನನ್ನ ಸ್ವರೂಪ ಚಿಕ್ಕದು ಮತ್ತು ಅದು ಕೂಡ ೪ ಪುಟಗಳದಾಗಿತ್ತು. ಪ್ರಾರಂಭದಲ್ಲಿ ೪ ಪುಟಗಳ ‘ಸನಾತನ ಪ್ರಭಾತ’ ದಿನಪತ್ರಿಕೆ ಎಂಬ ಹೆಸರಿನ ಪುಟ್ಟ ಸಸ್ಯ ಆಗಿರುವ ನನ್ನ ಸ್ವರೂಪವನ್ನು ಹೇಗೆ ಕಾಪಾಡುವುದು ? ಅದರಿಂದ ಸಮಾಜವನ್ನು ಹೇಗೆ ರೂಪಿಸುವುದು ? ಈ ರೀತಿಯ ಪ್ರಶ್ನೆಗಳಿರುವಾಗ ಕೇವಲ ಗುರುಗಳ ಸಂಕಲ್ಪದಿಂದ ನಾನು ಕಾರ್ಯನಿರತನಾದೆ. ಸಾವಿರಾರು ಸಾಧಕರು ನನ್ನನ್ನು ಸಕ್ರಿಯಗೊಳಿಸಲು ವಿವಿಧ ಸೇವೆಯ ಮಾಧ್ಯಮದಿಂದ ಕಾರ್ಯನಿರತರಾಗಿದ್ದಾರೆ. ವಾರ್ತೆ ತಯಾರಿಸುವ ಪತ್ರಕರ್ತರಿಂದ ಆರಂಭವಾಗುತ್ತಾ ಹಾಗೂ ಶುದ್ಧ ಲೇಖನವನ್ನು ಪರಿಶೀಲಿಸುವ ಸಂಕಲನಕಾರರು, ರಚನಾಕಾರರು, ಮುದ್ರಣ, ವಿತರಣೆ, ಜಾಹೀರಾತು ಸಂಗ್ರಹ ಮಾಡುವುದರ ಜೊತೆಗೆ ಅನೇಕ ಸೇವೆಗಳಿಗಾಗಿ ಬಹಳ ಸಾಧಕರು ನಿರಂತರ ಕಾರ್ಯನಿರತ ರಾಗಿದ್ದಾರೆ. ಇವರೆಲ್ಲರ ಪರಿಶ್ರಮದಿಂದ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಡಾ. ಆಠವಲೆಯವರ ಸಂಕಲ್ಪದಿಂದ ನನ್ನ ರಚನೆಯಾಗಿದೆ. ನನ್ನ ಮಾಧ್ಯಮದಿಂದ ಒಂದು ಕಡೆಗೆ ಸಮಾಜವನ್ನು ರೂಪಿಸಲು ಸಾಮಾಜಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ ಮತ್ತು ಇನ್ನೊಂದೆಡೆ ಸಾಧಕರಿಗೆ ಪೂರಕವಾಗಿರುವ ಜ್ಞಾನವನ್ನು ನೀಡಲಾಗುತ್ತದೆ. ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಮಂಡಿಸಲಾಗುತ್ತಿದೆ. ಇವೆಲ್ಲವುಗಳಿಂದಾಗಿ ಅಧ್ಯಾತ್ಮದಿಂದ ದೂರ ಸರಿದಿರುವ ಸಮಾಜವನ್ನು ಸಾಧನೆಯತ್ತ ಹೊರಳಿಸಲು ಪ್ರಯತ್ನಿಸಲಾಗುತ್ತಿದೆ ಮತ್ತು ಇದರಿಂದ ಸಮಾಜ ಸಕ್ರಿಯವಾಗಲು ಆರಂಭವಾಗಿದೆ.
೨. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ‘ಸನಾತನ ಪ್ರಭಾತ’ ದಿನಪತ್ರಿಕೆಯ ಮಾಧ್ಯಮದಿಂದ ಸಮಾಜದ ಮನಸ್ಸನ್ನು ರೂಪಿಸುವುದರೊಂದಿಗೆ ಸಾಧಕರ ಆಧ್ಯಾತ್ಮಿಕ ಉನ್ನತಿಯಾಗಬೇಕು ಎಂಬುದಕ್ಕಾಗಿ ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸುವುದು
ನನ್ನ ಮುಖಾಂತರ ಗುರುದೇವರು ಸಮಾಜಕ್ಕೆ ಆಕಾರ ನೀಡುವುದರ ಜೊತೆಗೆ ಸಾಧಕರ ಸಾಧನೆಗೂ ಆಕಾರ ನೀಡುವ ಕಾರ್ಯವನ್ನು ಆರಂಭಿಸಿದರು. ನನ್ನ ಮಾಧ್ಯಮದಿಂದ ಒಂದು ಕಡೆಗೆ ಸಮಾಜ ರೂಪಿಸುವುದಕ್ಕಾಗಿ ಸಾಮಾಜಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ ಮತ್ತು ಇನ್ನೊಂದೆಡೆ ಸಾಧನೆಗೆ ಪೂರಕವಾದಂತಹ ಜ್ಞಾನವನ್ನು ನೀಡುತ್ತಿದ್ದರು. ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ಕಠೋರವಾಗಿಯೇ ಮಂಡಿಸಲಾಗುತ್ತಿತ್ತು. ಸಮಾಜವನ್ನು ಸಾಧನೆಯ ಕಡೆಗೆ ತಿರುಗಿಸಲು ಪ್ರಯತ್ನಿಸಲಾಯಿತು ಮತ್ತು ಸಮಾಜ ಸಕ್ರಿಯವಾಗತೊಡಗಿತು. ಇನ್ನೊಂದೆಡೆ ನನ್ನನ್ನು ನೋಡಿಕೊಳ್ಳುವ ಸಾಧಕರು ಶೀಘ್ರ ಆಧ್ಯಾತ್ಮಿಕ ಪ್ರಗತಿಯ ದಿಶೆಯಲ್ಲಿ ಮಾರ್ಗಕ್ರಮಿಸಬೇಕೆಂದು ಅವರನ್ನು ರೂಪಿಸುವ ಕಾರ್ಯವು ಮುಂದುವರೆಯಿತು. ಅದರ ಒಂದು ಉದಾಹರಣೆಯೆಂದರೆ, ಸಾಧಕರಿಗೆ ಅವರ ತಪ್ಪುಗಳ ಅರಿವು ಮಾಡಿಸಿ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಅದನ್ನು ಸಮಾಜದೆದುರು ಪ್ರತಿದಿನ ಪ್ರಾಮಾಣಿಕವಾಗಿ ಮಂಡಿಸಲಾಗುತ್ತಿತ್ತು. ಸಾಧಕರ ಸಾಧನೆಯಲ್ಲಿ ಅಡಚಣೆಯಾಗಿರುವ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಗಾಗಿ ಪತ್ರಿಕೆಯಲ್ಲಿ ಪ್ರಕಟಿಸುವುದರ ಜೊತೆಗೆ ಸಾಧಕರ ಮನಸ್ಸನ್ನು ರೂಪಿಸುವ ಕಾರ್ಯವನ್ನು ಗುರುದೇವರು ಆರಂಭಿಸಿದರು.
೩. ‘ಸನಾತನ ಪ್ರಭಾತ’ವನ್ನು ಮುಂದುವರೆಸುವುದು ಇದು ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ಅಡಚಣೆಯಾಗಿದ್ದರೂ ಗುರುದೇವರು ಅದನ್ನು ನಿರಂತರ ಮುನ್ನಡೆಸಿದರು. ಒಂದೆಡೆ ನಾನು ಪ್ರಸಾರ ಮತ್ತು ಪ್ರಚಾರದ ದೃಷ್ಟಿಯಿಂದ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದೆ. ನನ್ನ ಎಂದರೆ ಸನಾತನ ಪ್ರಭಾತದ ೪ ಆವೃತ್ತಿಗಳು ಹಾಗೂ ಮರಾಠಿ ಮತ್ತು ಕನ್ನಡ ಭಾಷೆಯ ಸಾಪ್ತಾಹಿಕಗಳೂ ಆರಂಭವಾದವು.
ಹಿಂದಿ, ಆಂಗ್ಲ ಮತ್ತು ಗುಜರಾತಿ ಪಾಕ್ಷಿಕಗಳು ಆರಂಭವಾದವು. ನನ್ನನ್ನು ನೋಡಿಕೊಳ್ಳುವುದು ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಯಿಂದ ಕಷ್ಟಕರವಾಗಿರುವಾಗ ಈಶ್ವರೀ ರಾಜ್ಯದ ಸ್ಥಾಪನೆಯ ಉದ್ದೇಶ ಮತ್ತು ಅದರ ಮುಂದಿನ ನನ್ನ ಮಾರ್ಗಕ್ರಮಣ ನಿರಂತರ ಮುಂದುವರೆಯುತ್ತಿದೆ. ಮುಂದೆ ನನಗೆ ಹಿಂದೂ ರಾಷ್ಟ್ರದ ಧ್ಯೇಯ ವನ್ನು ನೀಡಲಾಗಿದೆ ಮತ್ತು ಈಗ ನಾನು ಧರ್ಮಜಾಗೃತಿ ಮತ್ತು ಹಿಂದೂ ಸಂಘಟನೆಗಾಗಿ ಕಾರ್ಯನಿರತನಾಗಿದ್ದೇನೆ.
೪. ‘ಸನಾತನ ಪ್ರಭಾತ’ ದಿನಪತ್ರಿಕೆಯ ಮಾಧ್ಯಮದಿಂದ ಗುರುದೇವರ ಚೈತನ್ಯವನ್ನು ಮನೆಮನೆಗೆ ತಲುಪಿಸುವುದು
ನನ್ನ ಮಾಧ್ಯಮದಿಂದ ಗುರುದೇವರ ಚೈತನ್ಯ ಮನೆಮನೆಗೆ ತಲುಪುತ್ತಿದೆ. ಅನೇಕರಿಗೆ ಇದರ ಅನುಭೂತಿಗಳೂ ಬಂದಿವೆ. ಗುರುದೇವರು ಈಗ ಚೈತನ್ಯದ ಸ್ವರೂಪದಲ್ಲಿ ಸನಾತನ ಪ್ರಭಾತ ಎಂದು ನನ್ನ ಪ್ರಸಿದ್ಧಿಯನ್ನು ಮಾಡಿದ್ದಾರೆ.
೫. ‘ಸನಾತನ ಪ್ರಭಾತ’ದ ಮೂಲಕ ಚಳುವಳಿಗಳನ್ನು ನಡೆಸಿ ನಿಜವಾದ ಅರ್ಥದಲ್ಲಿ ಸಮಾಜವನ್ನು ಸಕ್ರಿಯಗೊಳಿಸುವುದು
ಸಮಾಜದಲ್ಲಾಗುವ ತಪ್ಪು ಆಚರಣೆಗಳನ್ನು, ಘಟನೆಗಳನ್ನು ಮತ್ತು ಕೃತಿಗಳನ್ನು ನನ್ನ ಮಾಧ್ಯಮದಿಂದ ವಿರೋಧಿಸಿ ನೂರಾರು ಚಳುವಳಿಗಳು ನನ್ನ ಮಾಧ್ಯಮದಿಂದ ನಡೆದವು. ಇದರಿಂದ ಸಮಾಜವು ನಿಜವಾದ ಅರ್ಥದಲ್ಲಿ ಸಕ್ರಿಯವಾಯಿತು. ಗುರುದೇವರು ನನ್ನ ಮಾಧ್ಯಮದಿಂದ ಸಮಾಜಕ್ಕೆ ಯೋಗ್ಯ ಅಯೋಗ್ಯದ ಜ್ಞಾನವನ್ನು ನೀಡುವ ಕಾರ್ಯ ಮಾಡುತ್ತಾ ಸಾಮಾಜಿಕ ಸಾತ್ವಿಕತೆಯನ್ನು ಹೆಚ್ಚಿಸುವ ಕಾರ್ಯ ಮಾಡಿದರು.
೬. ‘ಸನಾತನ ಪ್ರಭಾತ’ ದಿನಪತ್ರಿಕೆಯ ರೂಪದಲ್ಲಿ ಧರ್ಮಯೋಧ ಕಾರ್ಯನಿರತವಾಗಿರುವುದು ಅಗತ್ಯ !
ಗುರುದೇವರು ಇಂದು ಈ ಚಿಕ್ಕ ಸಸಿಯನ್ನು ಹೆಮ್ಮರವಾಗಿ ರೂಪಾಂತರಿಸಿದ್ದಾರೆ. ೪ ಪುಟದಿಂದಿದ್ದ ನಾನು ಇಂದು ೧೬ ಪುಟಗಳ ವರೆಗೆ ಜಿಗಿದಿರುತ್ತೇನೆ. ನನ್ನ ವಿತರಣೆ ಹೆಚ್ಚಿಗೆ ಇಲ್ಲದಿದ್ದರೂ; ನನ್ನ ರಚನೆ ಯಾವ ಉದ್ದೇಶದಿಂದ ಆಗಿದೆಯೋ, ಅದೇ ಉದ್ದೇಶದಿಂದ ಈ ಕಾರ್ಯವು ನಿರಂತರ ಮುಂದುವರೆಯು ತ್ತಿದೆ. ಇದರಲ್ಲಿಯೇ ನನಗೆ ಆನಂದವಿದೆ. ನಾನು ಕೇವಲ ಸಮಾಜ ವನ್ನು ರೂಪಿಸುವುದಿಲ್ಲ, ಅದನ್ನು ಕೃತಿಶೀಲ ಮತ್ತು ಸತ್ತ್ವಪ್ರಧಾನ ಸಮಾಜವನ್ನಾಗಿಸುವ ಕಾರ್ಯವನ್ನು ಗುರುದೇವರು ನನ್ನ ಮೂಲಕ ಮಾಡುತ್ತಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಅನೇಕ ಗ್ರಂಥಗಳಲ್ಲಿ ಆಧ್ಯಾತ್ಮಿಕ ಜ್ಞಾನದಿಂದ ಮುಂದಿನ ನೂರಾರು ವರ್ಷಗಳು ಸಮಾಜವನ್ನು ರೂಪಿಸುವ ಕಾರ್ಯ ಮಾಡುತ್ತಿದ್ದಾರೆ. ಹಾಗೆಯೇ ನನ್ನ ಮಾಧ್ಯಮದಿಂದಲೂ ಅವರು ಪ್ರತಿದಿನ ಸಮಾಜವನ್ನು ರೂಪಿಸಿ ಸಮಾಜವನ್ನು ಕೃತಿಶೀಲ ಮಾಡುತ್ತಿದ್ದಾರೆ. ನನಗೆ ಈ ಬಗ್ಗೆ ಅಭಿಮಾನ ಅನಿಸುತ್ತದೆ. ನಾನು ಗುರುದೇವರ ಓರ್ವ ಧರ್ಮಯೋಧನಾಗಿದ್ದೇನೆ. ನಾನು ನಿರಂತರ ಕಾರ್ಯನಿರತನಾಗಿದ್ದೇನೆ ಮತ್ತು ಮುಂದೆ ಕೂಡ ಹಿಂದೂ ರಾಷ್ಟ್ರದ ರಚನೆ ಪೂರ್ಣಗೊಳ್ಳುವವರೆಗೆ ಹಾಗೂ ಗುರುದೇವರಿಗೆ ಅಪೇಕ್ಷಿತವಿರುವ ಕಾಲದ ವರೆಗೆ ಹೀಗೆಯೇ ಕಾರ್ಯನಿರತನಾಗಿರುವೆ. ನನ್ನ ಮಾಧ್ಯಮದಿಂದ ಕಾರ್ಯನಿರತ ವಾಗಿರುವ ಜ್ಯೋತಿಯನ್ನು ಗುರುದೇವರು ನಿರಂತರ ಬೆಳಗಿಸಲಿ. ಈ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ನನಗೆ ಅಳಿಲುಸೇವೆ ಮಾಡಲು ಅವಕಾಶ ನೀಡಬೇಕು, ಇದೇ ಗುರುದೇವರ ಕೋಮಲ ಚರಣಗಳಲ್ಲಿ ನನ್ನ ಪ್ರಾರ್ಥನೆ !
– ‘ಸನಾತನ ಪ್ರಭಾತ’ ನಿಯತಕಾಲಿಕೆ.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !
ಮಂತ್ರಾಲಯದ ಪ್ರವೇಶದ್ವಾರದಲ್ಲಿದ್ದ ಅಶುದ್ಧ ಭಾಷೆಯ ಫಲಕವನ್ನು ಆಡಳಿತವು ತೆರವುಗೊಳಿಸಿದೆ !
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ಮಹಾರಾಷ್ಟ್ರದಲ್ಲಿ ಗಂಭೀರ ಅಪರಾಧಗಳ ಪ್ರಕರಣಗಳ ತೀರ್ಪಿನ ಸ್ಥಿತಿ ಚಿಂತಾಜನಕ!