ಮಂಡ್ಯ ಇಲ್ಲಿಯ ಕೆರಾಗಾಡು ಗ್ರಾಮದಲ್ಲಿನ ಘಟನೆ
ವಿರೋಧಿಸಿದ ಗ್ರಾಮಸ್ಥರ ಮೇಲೆ ಲಾಠಿಚಾರ್ಜ್ ! ಭಾಜಪದಿಂದ ಸಂಪೂರ್ಣ ರಾಜ್ಯದಲ್ಲಿ ಪ್ರತಿಭಟನೆ ! |
ಮಂಡ್ಯ – ಜಿಲ್ಲೆಯಲ್ಲಿನ ಕೆರಾಗೋಡು ಗ್ರಾಮದಲ್ಲಿ ಹಿಂದುಗಳು ಅರ್ಪಣೆ ಸಂಗ್ರಹಿಸಿ ೧೦೮ ಅಡಿಯ ಎತ್ತರದ ಕಂಬದ ಮೇಲೆ ಹಾರಿಸಿದ್ದ ಶ್ರೀ ಹನುಮಂತನ ಚಿತ್ರ ಇರುವ ಕೇಸರಿ ಧ್ವಜ ಪೊಲೀಸರು ಬಲವಂತವಾಗಿ ಇಳಿಸಿದ್ದಾರೆ. ಇದನ್ನು ಹಿಂದುಗಳು ವಿರೋಧಿಸಿದ್ದರಿಂದ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿರುವ ಘಟನೆ ಜನವರಿ ೨೭ ರಂದು ನಡೆದಿದೆ. ಈ ಗ್ರಾಮದಲ್ಲಿ ೧೪೪ ಸೆಕ್ಷನ್ ಜಾರಿಗೊಳಿಸಿದ್ದಾರೆ. ಈ ಘಟನೆಯ ಪ್ರತಿಧ್ವನಿ ಸಂಪೂರ್ಣ ಕರ್ನಾಟಕದಲ್ಲಿ ಪ್ರತಿಧನಿಸುತ್ತಿದೆ.
೧. ಗ್ರಾಮದಲ್ಲಿ ರಂಗಮಂದಿರದ ಹತ್ತಿರ ಧ್ವಜ ಇರುವ ಕಂಬ ಇತ್ತು. ಇದಕ್ಕಾಗಿ ಗ್ರಾಮ ಪಂಚಾಯತಿಯ ಅನುಮತಿ ಪಡೆಯಲಾಗಿತ್ತು ಎಂದು ಹೇಳುತ್ತಿದ್ದಾರೆ; ಆದರೆ ಗ್ರಾಮದಲ್ಲಿನ ಕೆಲವು ಜನರಿಗೆ ಇದು ಒಪ್ಪಿಗೆ ಇರಲಿಲ್ಲ ಮತ್ತು ಅವರು ಇದರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಮಂಡ್ಯ ಆಡಳಿತದಿಂದ ಜನವರಿ ೨೭ ರಾತ್ರಿ ಸಮಯದಲ್ಲಿ ಕಂಬದ ಮೇಲಿನ ಧ್ವಜ ತೆರವುಗೊಳಿಸಿದರು. ಆ ಸಮಯದಲ್ಲಿ ಸರಕಾರದಿಂದ ಬೃಹತ್ ಪ್ರಮಾಣದ ಪೊಲೀಸ್ ಬಂದೋಬಸ್ತ್ ಮಾಡಿತ್ತು. ವಿರೋಧಿಸುವ ಗ್ರಾಮಸ್ಥರ ಮೇಲೆ ಲಾಠಿಚಾರ್ಜ್ ಮಾಡಿದರು.
೨. ಜನವರಿ ೨೮ ರಂದು ಬೆಳಿಗ್ಗೆ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಧ್ವಜ ತೆರವುಗೊಳಿಸಿರುವುದರಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಕೆರಗೋಡು ಬಂದು ಮಾಡುವ ನಿರ್ಣಯ ತೆಗೆದುಕೊಂಡಿತು. ಗ್ರಾಮಸ್ಥರು ಕಾಂಗ್ರೆಸ್ಸಿನ ಸ್ಥಳೀಯ ಶಾಸಕ ರವೀಂದ್ರ ಕುಮಾರ್ ಇವರ ಫಲಕಗಳನ್ನು ಹರಿದು ಪ್ರತಿಭಟಿಸಿದರು. ಕೆಲವು ಜನರು ಈ ಸಂಪೂರ್ಣ ಪ್ರಕರಣದ ಹಿಂದೆ ರವೀಂದ್ರ ಕುಮಾರ್ ಇವರ ಕೈವಾಡ ಇರುವ ಆರೋಪ ಮಾಡಿದ್ದಾರೆ.
೩. ಇಲ್ಲಿ ಉಪಸ್ಥಿತರಿದ್ದ ಭಜರಂಗ ದಳ, ಭಾಜಕ ಮತ್ತು ಜನತಾದಳ (ಜಾತ್ಯಾತೀತ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಕೇಸರಿ ಧ್ವಜ ಮತ್ತೆ ಹಾಕಲು ಆಗ್ರಹಿಸುತ್ತಿದ್ದಾರೆ.
(ಸೌಜನ್ಯ: Tv9 Kannada)
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಲಾಗುವುದು ! – ಭಾಜಪ
ಭಾಜಪದ ನಾಯಕ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಹನುಮಂತನ ಧ್ವಜ ಇಳಿಸಿದಕ್ಕೆ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾಜಪದ ನಾಯಕ ಆರ್. ಅಶೋಕ್ ಇವರು ರಾಜ್ಯದಲ್ಲಿನ ಕಾಂಗ್ರೆಸ್ಸಿನ ಕೃತ್ಯದ ಬಗ್ಗೆ ಸವಾಲು ಕೇಳುತ್ತಾ ಹನುಮಂತನ ಧ್ವಜ ಗ್ರಾಮ ಪಂಚಾಯತಿಯ ಅನುಮತಿಯಿಂದ ಹಾರಿಸಿದ್ದರು ಎಂದು ವಾದ ಮಂಡಿಸಿದರು. ಈ ಪ್ರಕರಣದಲ್ಲಿ ನಾವು ಕರ್ನಾಟಕದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವೆವು ಎಂದು ಹೇಳಿದರು.
ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಕೇಸರಿ ಧ್ವಜ ಹಾರಿಸಿದರು ! – ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಈ ಘಟನೆಯ ಬಗ್ಗೆ, ಇಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕಿತ್ತು ಅಲ್ಲಿ ಕೇಸರಿ ಧ್ವಜ ಹಾರಿಸುವುದು ಕಾನೂನಿನ ವಿರೋಧವಾಗಿದೆ. ರಾಷ್ಟ್ರಧ್ವಜ ಹಾರಿಸಲು ಅನುಮತಿ ನೀಡಿದ್ದರು; ಆದರೆ ಅಲ್ಲಿ ಬೇರೆಯ ಧ್ವಜ ಹಾರಿಸಿದ್ದರು. ಇದರ ಹಿಂದೆ ರಾಜಕಾರಣ ಇರಬಹುದು ನನಗೆ ಅದು ತಿಳಿದಿಲ್ಲ ಇದು ಯಾರ ಕೈವಾಡವೆಂದು ? ಈ ದೇಶ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಪ್ರಕಾರ ನಡೆಯುತ್ತದೆ. ಒಂದು ಸ್ಥಳದಲ್ಲಿ ಅನುಮತಿ ನೀಡಿದರೆ ಬೇರೆ ಸ್ಥಳಗಳಲ್ಲಿ ಕೂಡ ಈ ರೀತಿ ಪರಿಸ್ಥಿತಿ ಆಗಬಹುದು. ನಾಳೆ ‘ಜಿಲ್ಲಾಧಿಕಾರಿ ಕಾರ್ಯಲಯದ ಎದುರು ಕೇಸರಿ ಧ್ವಜ ಹಾರಿಸಿರಿ’, ಎಂದು ಹೇಳಬಹುದು. ಅದಕ್ಕೆ ಅನುಮತಿ ನೀಡಲು ಸಾಧ್ಯವೇ ? ನಾವು ನಮ್ಮ ಯುವಕರಿಗೆ ನೋವು ಉಂಟು ಮಾಡಲು ಬಂದಿಲ್ಲ. ನಾನು ಅಧಿಕಾರಿ, ಪೊಲೀಸರು ಮತ್ತು ಯುವಕರ ಜೊತೆಗೆ ಮಾತನಾಡುತ್ತಿದ್ದೇನೆ. ನಾವು ಖಾಸಗಿ ಸ್ಥಳದಲ್ಲಿ ಅಥವಾ ದೇವಸ್ಥಾನದ ಹತ್ತಿರ ಹನುಮಂತನ ಧ್ವಜ ಹಾಕಲು ಸಿದ್ದರಿದ್ದೇವೆ. ನಾವು ಅದಕ್ಕೆ ಬೆಂಬಲ ನೀಡುತ್ತೇವೆ. ನಾವು ಕೂಡ ರಾಮಾಭಕ್ತರಗಿದ್ದೇವೆ ಎಂದು ಹೇಳಿದರು.