ಭಾರತೀಯ ನೌಕಾಪಡೆಯಿಂದ ಸಹಾಯ ಹಸ್ತ !
ನವ ದೆಹಲಿ – ಶ್ರೀಲಂಕಾದ ಒಂದು ಮೀನುಗಾರಿಕೆ ನೌಕೆಯನ್ನು ಸೋಮಾಲಿಯಾದಲ್ಲಿ ಸಮುದ್ರ ದರೋಡೆಕೋರರು ಅಪಹರಿಸಿದ್ದಾರೆ. ಭಾರತವು ಈ ನೌಕೆಯ ಬಿಡುಗಡೆಗಾಗಿ ಭಾರತೀಯ ನೌಕಾಪಡೆ ಸಹಾಯ ಮಾಡುವುದು ಎಂದು ಆಶ್ವಾಸನೆ ನೀಡಿದೆ. ‘ಲೋರೆಂಝೋ ಪುಥ-೪’ ಈ ನೌಕೆ ಜನವರಿ ೧೬ ರಂದು ಶ್ರೀಲಂಕಾದಲ್ಲಿನ ಡಿಕೋವಿಟಾ ಬಂದರದಿಂದ ಅನೇಕ ದಿನದ ಮೀನುಗಾರಿಕೆ ಪ್ರವಾಸಕ್ಕಾಗಿ ಹೊರಟಿದ್ದು, ಅದರಲ್ಲಿ ೬ ಮೀನುಗಾರರು ಇದ್ದಾರೆ.
Sri Lanka seeks CMF assistance over fishing trawler hijacked by Somali pirates pic.twitter.com/yvE0tHWIjc
— Ada Derana (@adaderana) January 28, 2024
ಸಂಪಾದಕರ ನಿಲುವು* ಶ್ರೀಲಂಕಾದ ನೌಕಾಪಡೆ ಭಾರತೀಯ ಮೀನುಗಾರರಿಗೆ ಅವರ ಇಲ್ಲಸಲ್ಲದ ಸಮುದ್ರ ಗಡಿ ಪ್ರವೇಶದಿಂದ ಬಂದಿಸುತ್ತಾರೆ; ಆದರೆ ತಮ್ಮ ಅಪಹರಣ ಆಗಿರುವ ನೌಕೆಯ ಬಿಡುಗಡೆಯಲ್ಲಿ ನಿಷ್ಕ್ರಿಯವಾಗುತ್ತದೆ ಮತ್ತು ಭಾರತವು ಅದಕ್ಕೆ ಸಹಾಯ ಮಾಡಬೇಕಾಗುತ್ತದೆ. ಇದನ್ನು ನೋಡಿದರೆ ಭಾರತ ಶ್ರೀಲಂಕಾದ ಮೇಲೆ ಭಾರತೀಯ ಮೀನುಗಾರರ ಮೇಲೆ ಆಗುವ ಕ್ರಮವನ್ನು ನಿಲ್ಲಿಸಲು ಒತ್ತಡ ಹೇರಬೇಕು ! |