ಬಾಬರನ ವಂಶಜರನ್ನು ತಿಳಿಯಿರಿ !

೧. ಬಾಬರನ ವಂಶಜರನ್ನು ತಿಳಿಯಿರಿ !

ಉನ್ನಾವ (ಉತ್ತರಪ್ರದೇಶ) ಇಲ್ಲಿಯ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಅನ್ನಸಂತರ್ಪಣೆಗಾಗಿ ಚಂದಾ ಸಂಗ್ರಹಿಸುತ್ತಿದ್ದ ಹಿಂದೂಗಳ ಮೇಲೆ ಗೂಂಡಾ ಕಾಲೇ ಖಾನ್‌ ಮತ್ತು ಆತನ ಸಹಚರರು ನಡೆಸಿದ ದಾಳಿಯಲ್ಲಿ ಭಾರತೀಯ ಕಿಸಾನ್‌ ಯೂನಿಯನ್‌ನ ನಾಯಕ ವಿನೋದ ಕಶ್ಯಪ್‌ ಸಾವನ್ನಪ್ಪಿದನು.

೨. ಇಂತಹ ಹಿಂದೂದ್ವೇಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ !

ಕೇರಳದ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಇವರು ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ಸಮಾರಂಭದ ದಿನದಂದು ದೀಪ ಬೆಳಗಿಸುವಂತೆ ಮತ್ತು ಪ್ರಭು ಶ್ರೀರಾಮನ ನಾಮಜಪ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

೩. ಕಾಂಗ್ರೆಸ್ಸಿಗರ ಶ್ರೀರಾಮದ್ವೇಷವನ್ನು ತಿಳಿಯಿರಿ !

ಭಾಜಪ ಜನರಿಗೆ ಮೋಸ ಮಾಡುತ್ತಿದೆ. ಬಾಬರಿ ನಾಶವಾದಾಗ, ನಾನು ಅಯೋಧ್ಯೆಗೆ ಹೋಗಿದ್ದೆ. ನಂತರ ಭಾಜಪ ಸದಸ್ಯರು ೨ ಗೊಂಬೆಗಳನ್ನು ಡೇರೆಯಲ್ಲಿಟ್ಟು ‘ರಾಮ’ ಎಂದು ಕರೆಯಲಾರಂಭಿಸಿದರು, ಎಂದು ರಾಜ್ಯದ ಕಾಂಗ್ರೆಸ್‌ ಸರಕಾರದ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

೪. ಇಂತಹವರಿಗೆ ದೇವಸ್ಥಾನಗಳನ್ನು ಕೆಡವಿ

ಮಸೀದಿ ಕಟ್ಟಿದರೆ ಏನೂ ಅನಿಸುವುದಿಲ್ಲ ಯಾಕೆ ? ದ್ರಮುಕ ಪಕ್ಷ ಎಂದಿಗೂ ಧರ್ಮದ ವಿರುದ್ಧ ಇಲ್ಲ; ಆದರೆ ಮಸೀದಿ ಕೆಡವಿ ಮಂದಿರ ಕಟ್ಟುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ದ್ರಮುಕದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅಭಿಪ್ರಾಯಪಟ್ಟಿದ್ದಾರೆ.

೫. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ರಾಜಗಢದಲ್ಲಿ (ಮಧ್ಯಪ್ರದೇಶ) ಅಯೋಧ್ಯೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ರಾಮಭಕ್ತರನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಅಸ್ಗರ್‌ ಖಾನ್‌ ಮತ್ತು ರಾಮಭಕ್ತರನ್ನು ನಿಂದಿಸಿದ ಆತನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

೬. ಇನ್ನು ರಾಮರಾಜ್ಯ ದೂರವಿಲ್ಲ !

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ೫೦೦ ವರ್ಷ ಗಳ ನಂತರ ಭವ್ಯ ಶ್ರೀರಾಮ ಮಂದಿರವನ್ನು ಕಟ್ಟಲಾಗಿದೆ. ಇದು ಮಂದಿರವನ್ನು ಕಟ್ಟಲು ೫ ಶತಮಾನಗಳಲ್ಲಿ ಲಕ್ಷಾಂತರ ಹಿಂದೂಗಳ ಬಲಿದಾನದ ಫಲಿತಾಂಶವಾಗಿದೆ. ಹಿಂದೂಗಳು ಆಧ್ಯಾತ್ಮಿಕ ಸಾಮರ್ಥ್ಯವನ್ನು ಹೆಚ್ಚಿಸಿದರೆ ರಾಮರಾಜ್ಯ ದೂರವಿಲ್ಲ.