ಮಹಾಕುಂಭ ಮೇಳದದಲ್ಲಿ 5 ಕೋಟಿ 51 ಲಕ್ಷ ರುದ್ರಾಕ್ಷಿಗಳನ್ನು ಬಳಸಿ 12 ಜ್ಯೋತಿರ್ಲಿಂಗಗಳ ನಿರ್ಮಾಣ !

ಮಹಾಕುಂಭ ಮೇಳ 2025

ಪ್ರಯಾಗರಾಜ್ – 40 ಕೆಜಿ ತೂಕದ 33 ಸಾವಿರ ರುದ್ರಾಕ್ಷಿ ಮಣಿಗಳನ್ನು ದೇಹದ ಮೇಲೆ ಧರಿಸಿರುವ ಮೌನಿ ಬಾಬಾ ಮಹಾಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಮೌನಿ ಬಾಬಾ ಕುಂಭ ಕ್ಷೇತ್ರಕ್ಕೆ ಬರುವಾಗ 51 ಕೋಟಿ 51 ಲಕ್ಷ ರುದ್ರಾಕ್ಷಿ ಮಣಿಗಳನ್ನು ತಂದಿದ್ದರು. ಅವರು ತಮ್ಮ ಸಂಕಲ್ಪವನ್ನು ಪೂರೈಸಲು ರುದ್ರಾಕ್ಷಿ ಮಣಿಗಳನ್ನು ಬಳಸಿ 12 ಜ್ಯೋತಿರ್ಲಿಂಗಗಳನ್ನು ರಚಿಸಿದ್ದಾರೆ. ಅಯೋಧ್ಯೆಯಂತೆ ಕಾಶಿ ಮತ್ತು ಮಥುರಾದಲ್ಲಿ ಭವ್ಯ ದೇವಾಲಯಗಳನ್ನು ನಿರ್ಮಿಸಬೇಕು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧ ನಿಲ್ಲಬೇಕು, ಭಯೋತ್ಪಾದನೆ ಕೊನೆಗೊಳ್ಳಬೇಕು, ಹೆಣ್ಣು ಮತ್ತು ಭ್ರೂಣ ಹತ್ಯೆ ನಿಲ್ಲಬೇಕು ಮತ್ತು ಭಾರತೀಯ ಸೇನೆಯು ಹೆಚ್ಚು ಸಮರ್ಥವಾಗಬೇಕು ಎಂಬ ಸಂಕಲ್ಪಗಳೊಂದಿಗೆ ಮೌನಿ ಬಾಬಾ 10 ಸಾವಿರ ಹಳ್ಳಿಗಳನ್ನು ಸುತ್ತಿದ ನಂತರ ಪ್ರಯಾಗರಾಜ್‌ಗೆ ಬಂದಿದ್ದಾರೆ.

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕಿದೆ !

12 ಜ್ಯೋತಿರ್ಲಿಂಗಗಳನ್ನು ನಿರ್ಮಿಸಿದ ನಂತರ, ಮೌನಿ ಬಾಬಾ ಮಾತನಾಡಿ, “ಇದೀಗ ಇಡೀ ವಿಶ್ವಕ್ಕೆ ರುದ್ರಾಕ್ಷಿಯಿಂದ ಮಾಡಿದ ಜ್ಯೋತಿರ್ಲಿಂಗಗಳ ದೈವಿಕ ದರ್ಶನವನ್ನು ನೋಡಲು ಸಾಧ್ಯವಾಗುತ್ತದೆ.” ದೇಶವನ್ನು ರಕ್ಷಿಸಬೇಕಿದ್ದರೆ ದೇಶವನ್ನು ಸುಂದರಗೊಳಿಸಲು ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕಿದೆ.” ಎಂದು ಹೇಳಿದರು.