ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮಹಾಯಜ್ಞದ ಆಯೋಜನೆ !
ಶ್ರೀ. ಯಜ್ಞೇಶ ಸಾವಂತ ಮತ್ತು ಶ್ರೀ. ಗಿರೀಶ ಪೂಜಾರಿ, ವಿಶೇಷ ಪ್ರತಿನಿಧಿ, ಪ್ರಯಾಗರಾಜ
ಪ್ರಯಾಗರಾಜ – ಭಾರತದಲ್ಲಿ ಇದೇ ಮೊದಲ ಬಾರಿಗೆ ರುದ್ರಾಕ್ಷಿಗಳಿಂದ 11 ಅಡಿ ಎತ್ತರ ಮತ್ತು 9 ಅಡಿ ಅಗಲದ ಶಿವಲಿಂಗವನ್ನು ತಯಾರಿಸಲಾಗಿದೆ. ಇದಕ್ಕಾಗಿ 55 ಲಕ್ಷ ರುದ್ರಾಕ್ಷಿಗಳನ್ನು ಬಳಸಲಾಗಿದೆ. ವಿವಿಧ ಬಣ್ಣಗಳ 11 ಸಾವಿರ 108 ತ್ರಿಶೂಲಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಕಪ್ಪು ತ್ರಿಶೂಲಗಳು ಭಯೋತ್ಪಾದನೆಯನ್ನು ನಾಶಮಾಡಲು, ಬಿಳಿ ತ್ರಿಶೂಲಗಳು ಜ್ಞಾನ, ವಿದ್ಯೆ ಮತ್ತು ಬುದ್ಧಿಗಾಗಿ, ಹಳದಿ ತ್ರಿಶೂಲಗಳು ಅರ್ಥವ್ಯವಸ್ಥೆಯನ್ನು ಬಲಪಡಿಸಲು ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹಚ್ಚಲಾಗಿದೆ. ಇದರೊಂದಿಗೆ ಸ್ತಂಭ ಮತ್ತು ನಂದಿಯನ್ನು ಸ್ಥಾಪಿಸಲಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಶ್ರೀ ಮಹಾಯಜ್ಞವನ್ನು ಆಯೋಜಿಸಲಾಗಿದೆ ಎಂದು ಸ್ವಾಮಿ ಅಭಯ ಚೈತನ್ಯ ಫಲಾಹಾರಿ ಮೌನಿ ಮಹಾರಾಜರು ‘ಸನಾತನ ಪ್ರಭಾತ’ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಸ್ವಾಮಿ ಮೌನಿ ಮಹಾರಾಜರು ಇವರು ‘ಅಖಿಲ ಭಾರತ ಹಿಂದೂ ರಕ್ಷಣಾ ಸಮಿತಿ’ಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುವಾಗ ಸ್ವಾಮಿ ಅಭಯ ಚೈತನ್ಯ ಫಲಾಹಾರಿ ಮೌನಿ ಮಹಾರಾಜರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಭೀಕರ ಹತ್ಯೆಗಳು ನಡೆಯುತ್ತಿವೆ. ಅಲ್ಲಿನ ತಾಯಂದಿರು ಮತ್ತು ಸಹೋದರಿಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಲಿನ ಹಿಂದೂಗಳು ಭಯಭೀತರಾಗಿದ್ದಾರೆ. ಅಂತಹ ಸಮಯದಲ್ಲಿ, ಸುರಕ್ಷಿತ ಮತ್ತು ಒಳ್ಳೆಯ ವ್ಯವಸ್ಥೆ ಭಾರತದಲ್ಲಿರುವುದು ಆವಶ್ಯಕವಾಗಿದೆ. ಇದಕ್ಕೆ ಹಿಂದೂ ರಾಷ್ಟ್ರದ ಆವಶ್ಯಕತೆಯಿದೆ. ಹಿಂದೂ ರಾಷ್ಟ್ರ ನಿರ್ಮಾಣವಾಗದಿದ್ದರೆ, ಇಸ್ಲಾಮಿಕ್ ಭಯೋತ್ಪಾದನೆ ಹೆಚ್ಚಾಗುತ್ತದೆ, ಖಲಿಸ್ತಾನಿ ಭಯೋತ್ಪಾದನೆ ಹೆಚ್ಚಾಗುತ್ತದೆ ಮತ್ತು ಪ್ರಪಂಚದಾದ್ಯಂತ ಅಭದ್ರತೆ ತಲೆದೋರುತ್ತದೆ. ಎಲ್ಲರೂ ಹಿಂದೂ ರಾಷ್ಟ್ರದ ಸಂಕಲ್ಪದೊಂದಿಗೆ ಕಾರ್ಯ ಮಾಡಬೇಕು ಎಂದು ಹೇಳಿದರು.
ಹಿಂದೂಗಳನ್ನು ಜಾತಿಜಾತಿಯಲ್ಲಿ ವಿಭಜಿಸಬಾರದು. ಜಾತಿಗಳಿಗಿಂತ ಹಿಂದೂಗಳು ಹಿಂದೂ ರಾಷ್ಟ್ರಕ್ಕಾಗಿ ಒಂದಾಗಬೇಕು. ಹಿಂದೂಗಳು ಬುಡಕಟ್ಟು ಜನಾಂಗದವರು, ಅರಣ್ಯವಾಸಿಗಳು ಮತ್ತು ಬಡವರಿಗಾಗಿ ಕೆಲಸ ಮಾಡಬೇಕು. ಹಿಂದೂಗಳು ಜಾತಿಗಳಾಗಿ ವಿಭಜನೆಯಾದರೆ, ದೇಶವು ಅಭಿವೃದ್ಧಿ ಹೊಂದುವುದಿಲ್ಲ.
🛕 Swami Abhaya Chaitaya Phalahari Mouni ji Maharaj’s one of a kind pandal at Mahakumbh, where one sees Rudrakshas 📿everywhere.
📿12 Jyotirlings, Nandi, pillars 📿all crafted from Rudrakshas. Swamiji has brought 51 crore 51 lakh Rudrakshas to the Kumbh Kshetra, 33000 out of… pic.twitter.com/SOBbKMJe6u
— Sanatan Prabhat (@SanatanPrabhat) January 18, 2025
ರುದ್ರಾಕ್ಷದ ಮಹತ್ವವೇನು?
ರುದ್ರಾಕ್ಷಿಯು ಒಂದು ಶಕ್ತಿಯಾಗಿದ್ದು, ಅದರ ಮೂಲಕ ನಾವು ಲಕ್ಷ್ಮಿ, ಪುತ್ರರು, ಸಂಪತ್ತು, ಗೆಲುವು, ತೇಜಸ್ಸು, ಬಲ, ಪರಾಕ್ರಮ, ಆರೋಗ್ಯ ಇತ್ಯಾದಿ ಅನೇಕ ವಿಷಯಗಳನ್ನು ಪಡೆಯಬಹುದು. ರುದ್ರಾಕ್ಷಿಯು ಒಂದು ಗುರಾಣಿ ಮತ್ತು ವರದಾನವಾಗಿದೆ. ಅದರಿಂದ ನಾವು ಏನು ಬೇಕಾದರೂ ಪಡೆಯಬಹುದು. ಇದಕ್ಕಾಗಿ ರುದ್ರಾಕ್ಷ ಧರಿಸಿರಿ, ರುದ್ರಾಕ್ಷವನ್ನು ಪಡೆದು, ಅದನ್ನು ಸಿದ್ಧಪಡಿಸಿರಿ ಎಂದು ಸ್ವಾಮಿ ಅಭಯ ಚೈತನ್ಯ ಫಲಾಹಾರಿ ಮೌನಿ ಮಹಾರಾಜರು ಕರೆ ನೀಡಿದರು.