ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ಥೂಲದ ಅಸ್ತಿತ್ವದ ಅಸಾಧಾರಣ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಒಮ್ಮೆ ರಾಮನಾಥಿ ಆಶ್ರಮದಲ್ಲಿ ಚಂಡಿಯಾಗ ಆಗಿತ್ತು. ನಾನು ಆಧ್ಯಾತ್ಮಿಕ ಮಟ್ಟದ ಉಪಾಯಗಳಿಗಾಗಿ ಆ ಯಾಗದಲ್ಲಿ ಕುಳಿತುಕೊಂಡಿದ್ದೆನು. ಸುಮಾರು ಒಂದೂವರೆ ಗಂಟೆಗಳವರೆಗೆ ನಾನು ನಾಮಜಪವನ್ನು ಮಾಡುತ್ತಿದ್ದೆನು. ಆಗ ನನಗೆ ಆಧ್ಯಾತ್ಮಿಕ ಲಾಭವಾಯಿತು. ಅನಂತರ ಪ್ರಾಣಶಕ್ತಿ ಕಡಿಮೆಯಿದ್ದಾಗಲೂ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಅರ್ಧ ಗಂಟೆ ಯಾಗದ ಸ್ಥಳದಲ್ಲಿ ಉಪಸ್ಥಿತರಿದ್ದರು. ಆ ಅರ್ಧ ಗಂಟೆಯಲ್ಲಿ ನನಗೆ ಮೊದಲಿನ ಒಂದೂವರೆ ಗಂಟೆಗಳ ತುಲನೆಯಲ್ಲಿ ಅತ್ಯಧಿಕ ಆಧ್ಯಾತ್ಮಿಕ ಲಾಭವಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸ್ಥೂಲದಲ್ಲಿನ ಅಸ್ತಿತ್ವದ ಮಹತ್ವವು ಪುನಃ ಒಮ್ಮೆ ಈ ಉದಾಹರಣೆಯಿಂದ ಗಮನಕ್ಕೆ ಬಂದಿತು.

(ಪೂ.) ಶ್ರೀ. ಸಂದೀಪ ಆಳಶಿ,

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸದ್ಯದ ಕಾರ್ಯವು ಶೇ. ೩೦ ರಷ್ಟು ಸ್ಥೂಲದ್ದು, ಶೇ. ೭೦ ರಷ್ಟು ಸೂಕ್ಷ್ಮದ್ದಾಗಿದೆ. ಇದರಿಂದ ಅವರ ಸ್ಥೂಲ ಅಸ್ತಿತ್ವದಿಂದ ಸೂಕ್ಷ್ಮದಲ್ಲಿ ಎಷ್ಟು ದೊಡ್ಡ ಕಾರ್ಯವಾಗುತ್ತಿರಬಹುದು, ಎಂದು ಕಲ್ಪಿಸಬಹುದು. ನಾಡಿಪಟ್ಟಿ ವಾಚನದ ಮಾಧ್ಯಮದಿಂದ ಮಹರ್ಷಿಗಳು ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸ್ಥೂಲದ ಅಸ್ತಿತ್ವದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು’, ಎಂದು ಏಕೆ ಹೇಳಿದ್ದಾರೆ, ಎಂಬುದೂ ಗಮನಕ್ಕೆ ಬಂದಿತು. ಇದೆಲ್ಲವನ್ನು ನೆನಪಿಸಿಕೊಂಡು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗ್ಗೆ ನನಗೆ ಕೃತಜ್ಞತೆ ವ್ಯಕ್ತವಾಯಿತು.

– ಪೂ. ಸಂದೀಪ ಆಳಶಿ (೧೫.೫.೨೦೨೩)