‘ಭಾರತದಲ್ಲಿರುವ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳನ್ನು ರಕ್ಷಿಸಿ!’ (ಅಂತೆ) – ಪಾಕಿಸ್ತಾನ

ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿ ಬಳಿಕ ವಿಶ್ವಸಂಸ್ಥೆಗೆ ಪಾಕಿಸ್ತಾನದಿಂದ ಮನವಿ !

ನ್ಯೂಯಾರ್ಕ್ (ಅಮೇರಿಕಾ) – ಭಾರತದಲ್ಲಿರುವ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವಂತೆ ಪಾಕಿಸ್ತಾನ ವಿಶ್ವಸಂಸ್ಥೆಗೆ ಮನವಿ ಮಾಡಿದೆ. ಇಲ್ಲಿನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಜ್ಞಾನವಾಪಿ ಮಸೀದಿಯ ಸಮೀಕ್ಷಾ ವರದಿ ಬಹಿರಂಗವಾದ ನಂತರ ಪಾಕಿಸ್ತಾನ ಈ ಬೇಡಿಕೆಯನ್ನು ಮುಂದಿಟ್ಟಿದೆ. ಇದಕ್ಕೂ ಮುನ್ನ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮಲಾಲಾದ ಪ್ರಾಣಪ್ರತಿಷ್ಠಾಪನೆಯ ನಂತರ, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಘಟನೆಯನ್ನು ಖಂಡಿಸಿತ್ತು. ಡಿಸೆಂಬರ್ 6, 1992 ರಂದು ಸಮೂಹವು ಶತಮಾನಗಳಷ್ಟು ಹಳೆಯದಾದ ಮಸೀದಿಯನ್ನು ಕೆಡವಿತು ಎಂದು ಪಾಕಿಸ್ತಾನ ಹೇಳಿತ್ತು. ಭಾರತದ ಸರ್ವೋಚ್ಚ ನ್ಯಾಯಾಲಯವು ಘಟನೆಗೆ ಕಾರಣರಾದವರನ್ನು ಖುಲಾಸೆಗೊಳಿಸಿದೆ. ಅಷ್ಟೇ ಅಲ್ಲ, ಅದೇ ಸ್ಥಳದಲ್ಲಿ ದೇವಸ್ಥಾನ ಕಟ್ಟಲು ಅನುಮತಿಯನ್ನೂ ನೀಡಲಾಗಿತ್ತು. ಇದು ಖಂಡನೀಯವಾಗಿದೆ.

1. ಮುನೀರ್ ಅಕ್ರಮ್ ಅವರು ‘ಯುನೈಟೆಡ್ ನೆಶನ್ಸ್ ಅಲೈನ್ಸ್ ಆಫ್ ಸಿವಿಲೈಜೆಶನ್’ನ ಉನ್ನತ ಅಧಿಕಾರಿ ಮಿಗುಯೆಲ್ ಏಂಜೆಲ್ ಮೊರಾಟಿನೋಸ್ ಅವರನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ. ಅದರಲ್ಲಿ, ಭಾರತದ ಅಯೋಧ್ಯೆಯಲ್ಲಿ ಕೆಡವಿದ ಬಾಬ್ರಿ ಮಸೀದಿಯ ಸ್ಥಳದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮತ್ತು ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ಪಾಕಿಸ್ತಾನವು ಬಲವಾಗಿ ವಿರೋಧಿಸುತ್ತದೆ. ಇದು ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಯೋಗಕ್ಷೇಮಕ್ಕೆ ಮತ್ತು ಪ್ರದೇಶದ ಸಾಮರಸ್ಯ ಮತ್ತು ಶಾಂತಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. (ಏಷ್ಯಾ ಖಂಡದಲ್ಲಿ ಯಾರಿಂದಲಾದರೂ ಶಾಂತಿ ಕದಡುತ್ತದೆ ಎಂಬುದು ಜಗತ್ತಿಗೆ ಗೊತ್ತಿದೆ. ಹಾಗಾಗಿ ಪಾಕಿಸ್ತಾನ ಅದರ ಬಗ್ಗೆ ಮಾತನಾಡಬಾರದು ಎಂದು ಭಾರತ ಒತ್ತಾಯಿಸಬೇಕು ! – ಸಂಪಾದಕರು)

2. ಈ ಪತ್ರದಲ್ಲಿ, ಭಾರತದಲ್ಲಿರುವ ಇಸ್ಲಾಮಿಕ್ ಧಾರ್ಮಿಕ ಸ್ಥಳಗಳ ಭದ್ರತೆಗಾಗಿ ವಿಶ್ವಸಂಸ್ಥೆಯು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ ಎಂದು ತಿಳಿಸಲಾಗಿದೆ. ಇಸ್ಲಾಮಿಕ್ ಪರಂಪರೆಯ ತಾಣಗಳನ್ನು ರಕ್ಷಿಸುವಲ್ಲಿ ಮತ್ತು ಭಾರತದ ಅಲ್ಪಸಂಖ್ಯಾತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಭದ್ರಪಡಿಸುವಲ್ಲಿ ವಿಶ್ವಸಂಸ್ಥೆಯು ಪ್ರಮುಖ ಪಾತ್ರ ವಹಿಸಬೇಕು. (ಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಭಯೋತ್ಪಾದನೆಯಿಂದ ಕಳೆದ 33 ವರ್ಷಗಳಿಂದ ಕಾಶ್ಮೀರಿ ಹಿಂದೂಗಳು ಕಾಶ್ಮೀರದಲ್ಲಿ ಅನುಭವಿಸುತ್ತಿರುವ ನೋವನ್ನು ವಿಶ್ವಸಂಸ್ಥೆಯು ಮೊದಲು ಪಾಕಿಸ್ತಾನಕ್ಕೆ ತಿಳಿಸಬೇಕು ! – ಸಂಪಾದಕರು)

‘ಜ್ಞಾನವಾಪಿ ಮತ್ತು ಶಾಹಿ ಈದ್ಗಾ ಮಸೀದಿಗೆ ಅಪಾಯವಂತೆ !’

ಹಿಂದೂಗಳು ತಮ್ಮ ದೇವಾಲಯಗಳ ಮೇಲೆ ನಿರ್ಮಿಸಲಾದ ಮಸೀದಿಗಳ ಸ್ಥಳವನ್ನು ಕಾನೂನುಬದ್ಧವಾಗಿ ಹಿಂಪಡೆಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅದೇ ವಿಧಾನದಿಂದ ಶ್ರೀ ರಾಮ ಜನ್ಮಭೂಮಿಯನ್ನು ಮರುಪಡೆಯಲಾಗಿದೆ. ಹಾಗಾಗಿ ಪಾಕಿಸ್ತಾನ ಕಿಡಿ ಕಾರಿಗೆ !

ಮುನೀರ್ ಅಕ್ರಂ ಅವರು, ‘ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿರುವ ಪ್ರಾಣಪ್ರತಿಷ್ಠಾಪನೆ ಭಾರತದಲ್ಲಿನ ಮಸೀದಿಗಳನ್ನು ನಾಶಮಾಡುವ ಪ್ರಯತ್ನ ಮತ್ತು ಧಾರ್ಮಿಕ ತಾರತಮ್ಯವನ್ನು ತೋರಿಸುತ್ತದೆ. ಈ ವಿಚಾರ ಬಾಬ್ರಿ ಮಸೀದಿಯನ್ನೂ ಮೀರಿದೆ. ಭಾರತದ ಇತರ ಮಸೀದಿಗಳು ಇದೇ ರೀತಿಯ ಅಪಾಯಗಳನ್ನು ಎದುರಿಸಬಹುದು. ದುರದೃಷ್ಟವಶಾತ್ ಇದು ಒಂದು ಘಟನೆಯಲ್ಲ; ಏಕೆಂದರೆ ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿ ಸೇರಿದಂತೆ ಇತರ ಮಸೀದಿಗಳು ಸಹ ಇಂತಹ ಅಪಾಯಗಳನ್ನು ಎದುರಿಸಬಹುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ತಂತ್ರಗಾರಿಕೆಯಲ್ಲಿ ಭಾರತಕ್ಕಿಂತ ಪಾಕಿಸ್ತಾನವು ಬುದ್ಧಿವಂತವಾಗಿದೆ ಎಂದು ತೋರಿಸುತ್ತದೆ ! ಕಳೆದ 75 ವರ್ಷಗಳಲ್ಲಿ, ಪಾಕಿಸ್ತಾನದಲ್ಲಿರುವ ಹಿಂದೂಗಳು ಮತ್ತು ಸಿಖ್ಖರ ಧಾರ್ಮಿಕ ಸ್ಥಳಗಳನ್ನು ಮುಸ್ಲಿಮರು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಅಥವಾ ಅವುಗಳಲ್ಲಿ ಹೆಚ್ಚಿನವುಗಳನ್ನು ಕೆಡವಲಾಗಿದೆ. ಭಾರತವು ಪಾಕಿಸ್ತಾನಕ್ಕೆ ಅಥವಾ ವಿಶ್ವಸಂಸ್ಥೆಗೆ ಅಂತಹ ಸೂತ್ರವನ್ನು ಎಂದಿಗೂ ಎತ್ತಲಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ !

ಭಾರತವು ವಿಶ್ವಸಂಸ್ಥೆಗೆ ದೂರು ನೀಡುತ್ತಾ ಪಾಕಿಸ್ತಾನವು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸಬಾರದು ಎಂದು ಕಠಿಣ ಪದಗಳಲ್ಲಿ ಪಾಕಿಸ್ತಾನಕ್ಕೆ ಬುದ್ಧಿ ಹೇಳಬೇಕು !