ಭಾರತೀಯ ಪುರಾತತ್ವ ಸಮೀಕ್ಷೆ ನಡೆಸಿದ ಜ್ಞಾನವಾಪಿಯ ಸಮೀಕ್ಷೆ
ವಾರಣಾಸಿ (ಉತ್ತರ ಪ್ರದೇಶ) – ಭಾರತೀಯ ಪುರಾತತ್ವ ಇಲಾಖೆಯು ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ನಡೆಸಿತು. ಅದರ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಪಕ್ಷಗಳಿಗೆ ನೀಡಲಾಯಿತು. ಹಿಂದೂ ಪರ ವಕೀಲರಾದ ವಿಷ್ಣು ಶಂಕರ ಜೈನ್ ಇವರು ಜನವರಿ 25 ರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವರದಿಯ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದರು. ಈ ಸಮೀಕ್ಷೆಯ ವರದಿಯಲ್ಲಿ ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ಮೊದಲು ದೊಡ್ಡ ಮಂದಿರ ಅಸ್ತಿತ್ವದಲ್ಲಿತ್ತು. ಈ ಮಂದಿರವನ್ನು ಕೆಡವಿ ಅದರ ಅವಶೇಷಗಳನ್ನು ಉಪಯೋಗಿಸಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆಯೆಂದು ಸ್ಪಷ್ಟವಾಗಿ ತಿಳಿಸಲಾಗಿದೆ. 839 ಪುಟಗಳ ಈ ವರದಿಯಲ್ಲಿ ಈ ಸ್ಥಳದಲ್ಲಿ ಮಂದಿರವಿರುವ ಬಗ್ಗೆ 32 ಪುರಾವೆಗಳು ಸಿಕ್ಕಿರುವ ಮಾಹಿತಿಯನ್ನು ನೀಡಲಾಗಿದೆ.
ಈ ಸಮೀಕ್ಷೆಯನ್ನು ಯಾವಾಗ ನಡೆಸಲಾಗಿತ್ತು?
ಮೇ 2022 ರಲ್ಲಿ, ಜ್ಞಾನವಾಪಿಯಲ್ಲಿ ನ್ಯಾಯಾಲಯದ ಆಯುಕ್ತರು ಸಮೀಕ್ಷೆಯನ್ನು ನಡೆಸಿದರು. ಅದರ ನಂತರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಮೀಕ್ಷೆಗಳನ್ನು ನಡೆಸಿತು. 84 ದಿನಗಳ ಸಮೀಕ್ಷೆಯಲ್ಲಿ ಜ್ಞಾನವಾಪಿಯಲ್ಲಿ ಜಿ.ಪಿ.ಆರ್. ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್), ಛಾಯಾಚಿತ್ರಗಳು, ಚಿತ್ರೀಕರಣ ಮುಂತಾದವುಗಳ ಮಾಧ್ಯಮಗಳನ್ನು ಉಪಯೋಗಿಸಲಾಗಿದೆ. 36 ದಿನಗಳಲ್ಲಿ ಇದರ ವರದಿಯನ್ನು ಸಿದ್ಧಪಡಿಸಲಾಗಿದೆ. ಜಿ.ಪಿ.ಆರ್. ವರದಿಯನ್ನು ತಯಾರಿಸಲು 30 ದಿನಗಳು ತಗುಲಿತು. ಈ ವರದಿಯು ಅಮೇರಿಕೆಯ ಜಿಪಿಆರ್ ಸರ್ವೇಕ್ಷಣೆಯ ತಜ್ಞರು ಸಿದ್ಧಪಡಿಸಿದ್ದಾರೆ.
ಮಂದಿರ ಇತ್ತು ಎಂದು ವರದಿಯಲ್ಲಿ ನಮೂದಿಸಲಾಗಿರುವ ಪುರಾವೆ.
1. ಭಗವಾನ ಶಿವನ ಜನಾರ್ದನ, ರುದ್ರ ಮತ್ತು ಓಮೇಶ್ವರ ಹೀಗೆ 3 ಹೆಸರುಗಳು ಸಿಕ್ಕಿದೆ.
2. ಮಂದಿರವನ್ನು ಕೆಡವಿ ಅದರ ಕಂಬಗಳನ್ನು ಮಸೀದಿಯನ್ನು ಕಟ್ಟಲು ಬಳಸಲಾಗಿದೆ.
3. ಮಸೀದಿಯ ಪಶ್ಚಿಮ ಗೋಡೆಯಿಂದ ಅದು ಮಂದಿರದ ಗೋಡೆಯಾಗಿತ್ತೆಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಗೋಡೆ 5 ಸಾವಿರ ವರ್ಷಗಳ ಹಿಂದೆ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿತ್ತು.
5. ಮಸೀದಿಯ ಗುಮ್ಮಟ ಕೇವಲ 350 ವರ್ಷಗಳಷ್ಟು ಹಳೆಯದಾಗಿದೆ.
6. ಶ್ರೀ ಹನುಮಾನ್ ಮತ್ತು ಶ್ರೀ ಗಣೇಶನ ಭಗ್ನಗೊಂಡ ಮೂರ್ತಿಗಳು ಸಿಕ್ಕಿವೆ.
7. ಗೋಡೆಯ ಮೇಲೆ ತ್ರಿಶೂಲದ ಆಕಾರವಿದೆ.
8. ಮಸೀದಿಯಲ್ಲಿ ಔರಂಗಜೇಬನ ಕಾಲದ ಒಂದು ಕಲ್ಲಿನ ಚಪ್ಪಡಿಯೂ ಕಂಡುಬಂದಿದೆ.
9. ನೆಲಮಾಳಿಗೆ ‘ಎಸ್-2’ ನಲ್ಲಿ ಹಿಂದೂ ದೇವರುಗಳ ವಿಗ್ರಹಗಳು ಕಂಡುಬಂದಿವೆ. 10. ಸೆಪ್ಟೆಂಬರ್ 2, 1669 ರಂದು ದೇವಾಲಯವನ್ನು ಕೆಡವಲಾಗಿದೆಯೆಂದು, ಇತಿಹಾಸಕಾರ ಜದುನಾಥ ಸರಕಾರ ಅವರ ಫಲಿತಾಂಶದ (ತೀರ್ಮಾನ?) ಮೇಲೆ ಪುರಾತತ್ವ ಇಲಾಖೆಯು ವಿಶ್ವಾಸ ವ್ಯಕ್ತಪಡಿಸಿದೆ.
11. ಸಿಕ್ಕಿರುವ ಕಂಬಗಳ ಮೇಲೆ ‘ಸಂವತ 1669’ ಬರೆದಿರುವ ಮತ್ತು ‘ಔರಂಗಜೇಬನು ಮಸೀದಿಯನ್ನು 1676-77 ರಲ್ಲಿ ಕಟ್ಟಿದನು’, ಎಂದು ಬರೆಯಲಾಗಿದೆ.
12. ಗೋಡೆಗಳ ಮೇಲೆ ಕನ್ನಡ, ತೆಲುಗು ಮತ್ತು ದೇವನಾಗರಿ ಭಾಷೆಯ ಬರಹಗಳು ಕಂಡುಬಂದಿವೆ.
13. ಜ್ಞಾನವಾಪಿ ಮಸೀದಿಯ ಕೊಠಡಿಗಳಲ್ಲಿ ಹೂವಿನ ಕುಸುರಿ ಕೆತ್ತನೆಗಳಿವೆ.
14. ಒಂದು ಕಂಬದ ಮೇಲೆ ಹಲವು ಗಂಟೆಗಳು, ನಾಲ್ಕು ಕಡೆಗಳಲ್ಲಿ ದೀಪಗಳನ್ನು ಕೆತ್ತಲಾಗಿದೆ. ಅದರ ಮೇಲೆ ಸಂವತ 1669 (ಅಂದರೆ 1 ಜನವರಿ 1613) ಎಂದು ಬರೆಯಲಾಗಿದೆ.
15. ಒಂದು ಕೋಣೆಯಲ್ಲಿ ಅರೇಬಿಕ್-ಪರ್ಷಿಯನ್ ಭಾಷೆಯಲ್ಲಿ ಬರೆದ ಕಲ್ಲು ಕಂಡುಬಂದಿದೆ. ಅದರ ಮೇಲೆ ಮಸೀದಿಯ ನಿರ್ಮಾಣವನ್ನು ಮೊಘಲ್ ದೊರೆ ಔರಂಗಜೇಬನ ಆಳ್ವಿಕೆಯ (1676-77) ಕಾಲಾವಧಿಯಲ್ಲಿ ನಿರ್ಮಿಸಲಾಗಿರುವ ಉಲ್ಲೇಖವಿದೆ. 16. ಇದೇ ಕಲ್ಲಿನ ಮೇಲೆ 1792-93 ರಲ್ಲಿ ಮಸೀದಿಯ ಮೇಲ್ವಿಚಾರಣೆ- ದುರಸ್ತಿ ಮಾಡಲಾಗಿದೆಯೆಂದು ನಮೂದಿಸಲಾಗಿದೆ. ಈ ಕಲ್ಲಿನ ಛಾಯಾಚಿತ್ರಗಳು ಪುರಾತತ್ವ ಇಲಾಖೆಯ ಬಳಿಯೂ ಲಭ್ಯವಿವೆ. ಹೊಸದಾಗಿ ಪರಿಶೀಲನೆಯಲ್ಲಿ ಈ ಕಲ್ಲು ಮಸೀದಿಯ ಒಂದು ಮಸೀದಿಯ ಒಂದು ಕೋಣೆಯಲ್ಲಿ ಕಂಡು ಬಂದಿತು; ಆದರೆ ಮಸೀದಿಯ ನಿರ್ಮಾಣ ಮತ್ತು ವಿಸ್ತರಣೆಗೆ ಸಂಬಂಧಿಸಿದ ಕಲ್ಲಿನ ಮೇಲಿನ ಗೆರೆಗಳನ್ನು ತಿಕ್ಕಿ ಅಳಿಸಲಾಗಿದೆ.
17. ಪರಿಸರದಲ್ಲಿರುವ ಎಲ್ಲಾ ಶಾಲೆಗಳು ಮತ್ತು ಮಂದಿರಗಳನ್ನು ಕೆಡವಲು ಆದೇಶಿಸಿದ ಔರಂಗಜೇಬನ ಚರಿತ್ರವನ್ನು ‘ಮಾಸಿರ-ಎ-ಆಲಮಗಿರಿ’ ಯಲ್ಲಿ ಉಲ್ಲೇಖಿಸಲಾಗಿದೆ. ಆ ನಂತರ ಕಾಶಿಯ ವಿಶ್ವನಾಥ ದೇವಾಲಯವನ್ನು ಕೆಡವಲಾಗಿತ್ತು.
18. ಬಾಗಿಲುಗಳ ಮೇಲೆ ಪ್ರಾಣಿಗಳು ಮತ್ತು ಪಕ್ಷಿಗಳ ಚಿತ್ರಗಳನ್ನು ಕೆತ್ತಲಾಗಿದೆ.ಈ ಪ್ರದೇಶದಲ್ಲಿ ಬಾವಿ ಕೂಡ ಕಂಡು ಬಂದಿತು. 19. ‘ಮಹಾಮುಕ್ತಿ ಮಂಟಪ’ ಎಂದು ಬರೆದಿರುವ ಶಿಲಾಶಾಸನವೊಂದು ಆವರಣದಲ್ಲಿ ಕಂಡುಬಂದಿದೆ.
#BreakingNews | Hindu side gets the copy of ASI survey of #GyanvapiMosque, “Pillars were studied systematically, parts of pre existing Temple were reused”, says Hindu side lawyer Vishnu Jain@anany_b shares more details#BrassTacks | @Zakka_Jacob pic.twitter.com/WjZjmvZ7iI
— News18 (@CNNnews18) January 25, 2024
ಮುಸಲ್ಮಾನರು ಸ್ವತಃ ತಾವಾಗಿಯೇ ತಮ್ಮ ಜ್ಞಾನವಾಪಿಯನ್ನು ಹಿಂದೂಗಳಿಗೆ ಒಪ್ಪಿಸಬೇಕು ! – ವಕೀಲ ವಿಷ್ಣು ಶಂಕರ ಜೈನನವದೆಹಲಿ – ಹಿಂದೂ ಪಕ್ಷದವರು ಇನ್ನು ಮುಂದೆ ಮುಸಲ್ಮಾನ ಪಕ್ಷದವರೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಮುಸಲ್ಮಾನ ಪಕ್ಷದವರೇ ಜ್ಞಾನವಾಪಿ ಹಿಂದೂಗಳಿಗೆ ಒಪ್ಪಿಸಬೇಕು ಎಂದು ಹಿಂದೂ ಪಕ್ಷದ ನ್ಯಾಯವಾದಿ ವಿಷ್ಣು ಶಂಕರ್ ಜೈನ ಅವರು ‘ಆಜ ತಕ’ ಈ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮನವಿಯನ್ನು ಮಾಡಿದರು. ‘ಮಂದಿರ ಕೆಡವಿದ ಬಳಿಕ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆಯೆಂದು ಭಾರತೀಯ ಪುರಾತತ್ವ ಇಲಾಖೆ ವರದಿಯಲ್ಲಿ ಸ್ಪಷ್ಟವಾಗಿದೆ. ವಜೂಖಾನಾ (ನಮಾಜ್‌ಗೆ ಮೊದಲು ಕೈಕಾಲು ತೊಳೆಯುವ ಸ್ಥಳ) ಭಾರತೀಯ ಪುರಾತತ್ವ ಇಲಾಖೆಯವರು ವಜುಖಾನ್ಯಾಚೆ ಸಮೀಕ್ಷೆ ನಡೆಸಲು ಬೇಡಿಕೆ ಸಲ್ಲಿಸಲಿದ್ದಾರೆ. ನಾವು ನಮ್ಮ ಮಂದಿರವನ್ನು ನ್ಯಾಯಾಲಯದ ಮೂಲಕ ಪಡೆದು ಕೊಳ್ಳುತ್ತೇವೆ. ‘ಶೀಘ್ರದಲ್ಲಿಯೇ ಜ್ಞಾನವಾಪಿ ಪರಿಸರ ನಮ್ಮದಾಗಲಿದೆ’ ಎಂದು ನ್ಯಾಯವಾದಿ ಜೈನ ಇವರು ವಿಶ್ವಾಸವನ್ನು ವ್ಯಕ್ತಪಡಿಸಿದರು. ಜೈನ ಇವರು ತಮ್ಮ ಮಾತನ್ನು ಮುಂದುವರಿಸಿ, ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆಯ ವರದಿಯಲ್ಲಿ ಇಲ್ಲಿ ಮಸೀದಿಯನ್ನು ಈ ಮೊದಲೇ ಅಸ್ತಿತ್ವದಲ್ಲಿದ್ದ ಹಳೆಯ ಮಂದಿರದ ಅವಶೇಷಗಳನ್ನು ಉಪಯೋಗಿಸಿ ನಿರ್ಮಿಸಲಾಗಿದೆ ಎಂದು ಸೂಚಿಸಲಾಗಿದೆ.. ಯಾವ ಮಂದಿರದ ಮೇಲೆ ಮಸೀದಿಯನ್ನು ನಿರ್ಮಾಣ ಮಾಡಲಾಗಿತ್ತೋ ಆ ಮಂದಿರದ ಅಸ್ತಿತ್ವದ ಬಗ್ಗೆ ಸಾಕಷ್ಟು ಪುರಾವೆಗಳು ದೊರಕಿದೆ ಎಂದು ಹೇಳಿದರು. |
ದೇಶದಲ್ಲಿ ಎಷ್ಟು ಮಂದಿರಗಳನ್ನು ಕೆಡವಿ ಮಸೀದಿ ಕಟ್ಟಲಾಗಿದೆಯೋ, ಅವುಗಳನ್ನೆಲ್ಲವನ್ನೂ ನಾವು ಮರಳಿ ಪಡೆಯುತ್ತೇವೆ ! ಎಲ್ಲಿಯವರೆಗೆ ನಾವು ದೇಶದ ಎಲ್ಲಾ ಮಂದಿರಗಳನ್ನು ಮರಳಿ ಪಡೆಯುವುದಿಲ್ಲವೋ, ಅಲ್ಲಿಯವರೆಗೆ ವಶಪಡಿಸಿಕೊಳ್ಳುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ದೇಶದಲ್ಲಿ ಎಷ್ಟು ಮಂದಿರಗಳನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆಯೋ, ಅವೆಲ್ಲವನ್ನೂ ನಾವು ಮರಳಿ ಪಡೆಯಲಿದ್ದೇವೆ. ಕಾಶಿ, ಮಥುರಾ, ಟಿಲೇವಾಲಿ ಮಸೀದಿ, ತಾಜ ಮಹಲ, ಕುತುಬ್ ಮಿನಾರ ನಾವು ಮರಳಿ ಪಡೆಯಲಿದ್ದೇವೆ ಎಂದು ಸ್ಪಷ್ಟವಾಗಿ ನ್ಯಾಯವಾದಿ ವಿಷ್ಣು ಶಂಕರ ಜೈನ ಇವರು ಹೇಳಿದರು. |
ಸಂಪಾದಕರ ನಿಲುವುಶ್ರೀರಾಮ ಜನ್ಮಭೂಮಿಯ ಸಮೀಕ್ಷೆಯಲ್ಲಿಯೂ ಮೊದಲು ದೇವಾಲಯವಿತ್ತು ಎಂದು ಕಂಡು ಬಂದಿರುವುದರಿಂದ, ಸರ್ವೋಚ್ಚ ನ್ಯಾಯಾಲಯವು ಆ ಭೂಮಿಯನ್ನು ಹಿಂದೂಗಳಿಗೆ ನೀಡಿತ್ತು. ಈಗ ನ್ಯಾಯಾಲಯದ ತೀರ್ಪಿಗೆ ಕಾಯದೇ, ಮುಸಲ್ಮಾನರು ತಾವಾಗಿಯೇ ಜ್ಞಾನವಾಪಿ ಮಸೀದಿಯನ್ನು ಹಿಂದೂಗಳಿಗೆ ಒಪ್ಪಿಸಬೇಕು ಮತ್ತು ಜಾತ್ಯಾತೀತ, ನಿಧರ್ಮಿವಾದ, ಸರ್ವಧರ್ಮ ಸಮಾನತೆಯನ್ನು ತೋರಿಸಲಾಗುತ್ತದೆ. ಇದಕ್ಕಾಗಿ ಇಂತಹ ವಿಚಾರ ಸರಣಿಯನ್ನು ಹೊಂದಿರುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ನ್ಯಾಶನಲಿಸ್ಟ್ ಕಾಂಗ್ರೆಸ್, ಸಮಾಜವಾದಿ ಪಕ್ಷ ಮುಂತಾದ ಪಕ್ಷದವರು ಮುಂದಾಗಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. |