ಮೂರನೇ ಮಹಾಯುದ್ಧ ಪ್ರಾರಂಭವಾದರೆ 5 ವರ್ಷ ನಡೆಯಲಿದೆ !

ಕೃತಕ ಬುದ್ಧಿಮತ್ತೆ (ಎ.ಐ) ಮಾಹಿತಿ !

ಲಂಡನ್ (ಬ್ರಿಟನ) – ಕೃತಕ ಬುದ್ಧಿಮತ್ತೆ (AI ಆರ್ಟಿಫಿಶಿಯಲ್ ಇಂಟಲಿಜೆನ್ಸ) ಮೂರನೇ ಮಹಾಯುದ್ಧದ ಬಗ್ಗೆ ಒಂದು ಮಾಹಿತಿ ನೀಡಿದೆ. ‘ಒಂದು ವೇಳೆ ಮೂರನೇ ಮಹಾಯುದ್ಧ ಆರಂಭವಾದರೆ, ಅದು ಐದು ವರ್ಷಗಳ ಕಾಲ ಮುಂದುವರಿಯಬಹುದು ಮತ್ತು ಇದರಲ್ಲಿ ಎರಡು ಕೋಟಿಗೂ ಹೆಚ್ಚು ಜನರು ಸಾಯಬಹುದು.ಈ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದರೊಂದಿಗೆ ಆರ್ಕ್ಟಿಕ್‌ನಲ್ಲಿಯೇ ಯುದ್ಧ ಸಂಭವಿಸಬಹುದು,’ ಎಂದು ಎಐ ಹೇಳಿದೆ. ವಿಶೇಷವೆಂದರೆ ಈ ಯುದ್ಧ ರಷ್ಯಾ ಮತ್ತು ಅಮೇರಿಕಾ ನಡುವಿನ ಸಂಘರ್ಷದ ಕಿಡಿಯಿಂದ ಪ್ರಾರಂಭವಾಗಬಹುದು ಎಂದು ಇದರಲ್ಲಿ ಹೇಳಲಾಗಿದೆ. ‘ದಿ ಸನ್’ ಈ ಸುದ್ದಿ ಪತ್ರಿಕೆಯು ಈ ವಿಷಯದ ಸುದ್ದಿಯನ್ನು ಪ್ರಸಾರ ಮಾಡಿದೆ.

(ಸೌಜನ್ಯ – How to Survive)

(ಸೌಜನ್ಯ – TOI)

1. AI ಮಾಹಿತಿಯನುಸಾರ, 2024 ರಲ್ಲಿ, ಅಮೇರಿಕಾ ಮತ್ತು ರಶಿಯಾ ನಡುವಿನ ಸಂಘರ್ಷದ ಕಿಡಿಯು ಪೂರ್ವ ಯುರೋಪ್ ಮತ್ತು ಆರ್ಕ್ಟಿಕ್ ಪ್ರದೇಶ ವರೆಗೆ ತಲುಪಬಹುದು ಮತ್ತು ಇದರಲ್ಲಿ ಅನೇಕ ಇತರ ದೇಶಗಳು ಭಾಗವಹಿಸುತ್ತವೆ. 2025ರಲ್ಲಿ ಹೆಚ್ಚು ವೃದ್ಧಿಯಾಗಲಿದೆ. ಇದರಲ್ಲಿ ನ್ಯಾಟೋ ಸಂಘಟನೆಯ ದೇಶಗಳು ಮತ್ತು ಮತ್ತೊಂದೆಡೆ ರಷ್ಯಾದ ಮಿತ್ರದೇಶಗಳು ಭಾಗವಹಿಸುತ್ತವೆ. ನಂತರ ಸೈಬರ್ ದಾಳಿಗಳು ನಡೆಯಲು ಪ್ರಾರಂಭವಾಗುತ್ತವೆ.

2. 2026 ರಲ್ಲಿ, ಮೂರನೇ ಮಹಾಯುದ್ಧ ನಡೆಯುತ್ತಿದೆ ಎಂದು ಘೋಷಣೆ ಪ್ರತ್ಯಕ್ಷವಾಗಿ ಮಾಡಲಾಗುವುದು; ಏಕೆಂದರೆ ಅಲ್ಲಿಯವರೆಗೆ ಜಗತ್ತಿನ ಎಲ್ಲ ದೊಡ್ಡ ದೇಶಗಳು ಇದರಲ್ಲಿ ಭಾಗವಹಿಸುವವು.

3. 2027 ರಲ್ಲಿ ಪರಮಾಣು ಬಾಂಬುಗಳನ್ನು ಬಳಸುವ ಬಗ್ಗೆ ಚರ್ಚೆ ನಡೆಯಲಿದೆ; ಆದರೆ ಯಾರೂ ಅದನ್ನು ಉಪಯೋಗಿಸುವುದಿಲ್ಲ. ಚೀನಾದಂತಹ ದೇಶವು ನೇರ ಅಥವಾ ಪರೋಕ್ಷವಾಗಿ ಇದರಲ್ಲಿ ಭಾಗವಹಿಸುತ್ತದೆ.
4. ಅಂತರಾಷ್ಟ್ರೀಯ ಸಮುದಾಯದಿಂದ ಯುದ್ಧವನ್ನು ನಿಲ್ಲಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಗುವುದು; ಯುದ್ಧವು 2027 ರ ವರೆಗೆ ಮುಂದುವರಿಯುತ್ತದೆ.